ನಮ್ಮ ಆರೋಗ್ಯಕರ ದಿನಚರಿ ಹೇಗಿರಬೇಕು ಬೆಳಗ್ಗೆ ಎದ್ದಾಗಿನಿಂದ ಮಲಗುವವರೆಗೆ ಯಾವ ಕೆಲಸವನ್ನು ಯಾವ ಸಮಯದಲ್ಲಿ ಮಾಡಬೇಕು ಎನ್ನುವುದನ್ನು ಆಯುರ್ವೇದದಲ್ಲಿ ಉಲ್ಲೇಖವಾಗಿದೆ. ಆಯುರ್ವೇದ ಪ್ರಕಾರದ ದಿನಚರಿಯನ್ನು ಈ ಲೇಖನದ ಮೂಲಕ ತಿಳಿಯೋಣ.
ಆಯುರ್ವೇದದ ಪ್ರಕಾರ ಬ್ರಾಹ್ಮಿ ಮುಹೂರ್ತದಲ್ಲಿ ಏಳಬೇಕು ಬೆಳಗಿನ 4 ಗಂಟೆಯ ಸಮಯವನ್ನು ಬ್ರಾಹ್ಮಿ ಮುಹೂರ್ತ ಎನ್ನುವರು. ಪೌರಾಣಿಕವಾಗಿ ಬ್ರಹ್ಮನನ್ನು ಸೃಷ್ಟಿಕರ್ತ ಎನ್ನುವರು ದಿನದ ಸೃಷ್ಟಿಯನ್ನು ಮಾಡುವ ಬ್ರಾಹ್ಮಿ ಮೂಹೂರ್ತ ಏಳಲು ಒಳ್ಳೆಯ ಸಮಯವಾಗಿದೆ. ಮೊದಲಿನ ಕಾಲದಲ್ಲಿ ಬ್ರಾಹ್ಮಿ ಮುಹೂರ್ತದಲ್ಲಿ ಏಳುತಿದ್ದರು ಆದ್ದರಿಂದ ಅವರಿಗೆ ಖಾಯಿಲೆಗಳು ಕಡಿಮೆ. ಎದ್ದ ನಂತರ ಬಿಸಿ ನೀರನ್ನು ಎಷ್ಟು ಕುಡಿಯಲು ಸಾಧ್ಯವಿದೆಯೋ ಅಷ್ಟು ಕುಡಿಯಬೇಕು ಇದರಿಂದ ತೇಗು, ಗಡರೀಕೆ ಬರುತ್ತದೆ ಇದು ಶುದ್ಧವಾಗಿರಬೇಕು ಯಾವುದೇ ಸ್ಮೆಲ್ ಇರಬಾರದು.
ಒಂದುವೇಳೆ ನೀರು ಕುಡಿದ ತಕ್ಷಣ ಬರುವ ತೇಗಿನಲ್ಲಿ ಹಿಂದಿನ ದಿನ ತಿಂದಿರುವ ಆಹಾರದ ಸ್ಮೆಲ್ ಬಂದರೆ ಹಿಂದಿನ ದಿನ ತಿಂದಿರುವ ಆಹಾರ ಜೀರ್ಣವಾಗಿಲ್ಲ ಎಂದು ತಿಳಿದುಕೊಳ್ಳಬೇಕು. ತೇಗು ಶುದ್ಧವಾಗಿದ್ದರೆ ಹಿಂದಿನ ದಿನದ ಆಹಾರ ಜೀರ್ಣವಾಗಿದೆ ಈ ದಿನದ ಆಹಾರಕ್ರಮವನ್ನು ಪ್ರಾರಂಭಿಸಲು ಡೈಜೇಷನ್ ಸಿಸ್ಟಮ್ ಸಿದ್ಧವಾಗಿದೆ ಎಂದರ್ಥ. ನಂತರ ಮಲವಿಸರ್ಜನೆ ನೀರನ್ನು ಕುಡಿದ ನಂತರ ಕರುಳು ಚಲನೆಯಾಗಿ ಮಲ ವಿಸರ್ಜನೆ ಸರಾಗವಾಗಿ ಆಗುತ್ತದೆ. ಮಲವಿಸರ್ಜನೆ ಸರಿಯಾಗಿ ಆಗದಿದ್ದಾಗ ಜಡತ್ವ ಉಂಟಾಗುತ್ತದೆ, ದಿನವಿಡೀ ಆಯಾಸವಾಗಿ ಯಾವುದೇ ಕೆಲಸದಲ್ಲಿ ಆಸಕ್ತಿ ಇರುವುದಿಲ್ಲ. ಇತ್ತೀಚಿನ ದಿನಗಳಲ್ಲಿ ಒಂದು ಗಂಟೆ ಟಾಯ್ಲೆಟ್ ನಲ್ಲಿ ಕಳೆಯುತ್ತಾರೆ ಇದರಿಂದ ಮೂಲವ್ಯಾಧಿ ಮತ್ತಿತರ ಸಮಸ್ಯೆ ಉಂಟಾಗುತ್ತದೆ. ನಮ್ಮ ದಿನಚರಿ ಈ ರೀತಿ ಇದ್ದಾಗ ಮಾತ್ರ ದಿನವಿಡೀ ಉತ್ಸಾಹದಿಂದ ಇರಲು ಸಾಧ್ಯ. ಈ ಮಾಹಿತಿಯನ್ನು ಪ್ರತಿಯೊಬ್ಬರೂ ಪಾಲಿಸಬೇಕು ಹೀಗಾಗಿ ಎಲ್ಲರಿಗೂ ತಿಳಿಸಿ.