ಬೆಳಗ್ಗಿನ ಉಪಹಾರಕ್ಕೆ ಇಂತಹ ಆಹಾರಗಳು ಒಳಿತಲ್ಲ

0 0

ಉತ್ತಮ ಆರೋಗ್ಯಕ್ಕೆ ಒಳ್ಳೆಯ ಆಹಾರ ಮುಖ್ಯವಾಗಿದೆ.ಅದರಲ್ಲೂ ಬೆಳಗಿನ ಉಪಹಾರ ನಮ್ಮ ಆರೋಗ್ಯವನ್ನು ನಿರ್ಧರಿಸುತ್ತದೆ. ಮೊದಲ ಉಪಹಾರ ಚೆನ್ನಾಗಿದ್ದರೆ ಮಾತ್ರ  ಈಡೀ ದಿನ ಚೆನ್ನಾಗಿರುತ್ತದೆ. ಹಾಗಾಗಿ ನಾವು ಇಲ್ಲಿ ಬೆಳಗಿನ ಉಪಹಾರ ಹೇಗಿರಬೇಕು ಎನ್ನುವುದರ ಬಗ್ಗೆ ಹೆಚ್ಚಿನ ಮಾಹಿತಿಯನ್ನು ತಿಳಿಯೋಣ.

ಬೆಳಗಿನ ಉಪಹಾರಕ್ಕೆ ಕೆಲವರು ಬ್ರೆಡ್ ಮತ್ತು ಜಾಮ್ ಸೇವಿಸುತ್ತಾರೆ. ಅದರಲ್ಲೂ ಮಕ್ಕಳಿಗೂ ಕೂಡ ನೀಡುತ್ತಾರೆ. ಇದು ಆರೋಗ್ಯ ದೃಷ್ಟಿಯಿಂದ ನೋಡಿದರೆ ಒಳ್ಳೆಯದಲ್ಲ. ಏಕೆಂದರೆ ಜಾಮ್ ತಯಾರಿಸಲು ಸಾಕಷ್ಟು ರಾಸಾಯನಿಕಗಳನ್ನು ಬಳಸಲಾಗುತ್ತದೆ. ಅಷ್ಟೇ ಅಲ್ಲದೆ ಸಕ್ಕರೆಯನ್ನು ಹೆಚ್ಚಾಗಿ ಹಾಕಿರುತ್ತಾರೆ. ಇದರಿಂದ ದೇಹದಲ್ಲಿ ಸಕ್ಕರೆಯ ಪ್ರಮಾಣ ಹೆಚ್ಚುತ್ತದೆ. ಹಾಗೆಯೇ ಬೆಳಗಿನ ಹೊತ್ತು ಮೈದಾಹಿಟ್ಟಿನಿಂದ ತಯಾರಿಸಿದ ಯಾವುದೇ ರೀತಿಯ ಆಹಾರಗಳನ್ನು ಸೇವಿಸಬಾರದು. ಇದರಿಂದ ಜೀರ್ಣಕ್ರಿಯೆಗೆ ಸಂಬಂಧಿಸಿದ ಖಾಯಿಲೆ, ಮಲಬದ್ಧತೆ, ಡಯಾಬಿಟಿಸ್ ಉಂಟಾಗುವ ಸಾಧ್ಯತೆ ಇದೆ.

ಹಾಗೆಯೇ ಮೈದಾದಲ್ಲಿ ದೇಹಕ್ಕೆ ಅಗತ್ಯವಾದ ಯಾವುದೇ ಪೋಷಕಾಂಶಗಳು ಇರುವುದಿಲ್ಲ. ಹಾಗಾಗಿ ಇದರಿಂದ ಬೆಳಗಿನ ಸಮಯ ದೂರ ಇದ್ದರೆ ಉತ್ತಮ. ಬ್ರೇಕ್ ಫಾಸ್ಟ್ ಸೀರಿಯಲ್ಸ್ ಇವುಗಳಲ್ಲಿ ಎಲ್ಲಾ ರೀತಿಯ ಪೋಷಕಾಂಶಗಳು ಇರುತ್ತವೆ ಎಂದು ಜಾಹೀರಾತಿನಲ್ಲಿ ಹೇಳುತ್ತಾರೆ. ಆದರೆ ಇದು ಸುಳ್ಳು. ಇದರಲ್ಲಿ ಸ್ವಲ್ಪ ಮಟ್ಟಿಗೆ ಧಾನ್ಯಗಳನ್ನು ಮತ್ತು ಅದರ ಜೊತೆ ರಾಸಾಯನಿಕಗಳನ್ನು ಹಾಕಿರುತ್ತಾರೆ. ಇದರಲ್ಲಿ ಸಕ್ಕರೆಯ ಅಂಶ ಹೆಚ್ಚಾಗಿರುತ್ತದೆ. ಪ್ರೊಟೀನ್ ಅಂಶ ಕಡಿಮೆ ಇರುತ್ತದೆ. ಇದರಿಂದ ಹೊಟ್ಟೆ ತುಂಬುವುದಿಲ್ಲ. ಇದರಿಂದ ಆರೋಗ್ಯ ಹಾಳಾಗುವುದು ಖಂಡಿತವಾಗಿದೆ.

ಬೆಳಗಿನ ಸಮಯದಲ್ಲಿ ಮಾಂಸ ಸೇವನೆ ಮಾಡಬಾರದು. ಕೆಲವರಿಗೆ ಚಪಾತಿ ಮತ್ತು ದೋಸೆ ಜೊತೆ ಮಾಂಸದಿಂದ ತಯಾರಿಸಿದ ಖಾದ್ಯ ಸೇವಿಸುವ ಅಭ್ಯಾಸ ಇರುತ್ತದೆ. ಇದು ಕೂಡ ಒಳ್ಳೆಯ ಅಭ್ಯಾಸವಲ್ಲ. ಇದರಲ್ಲಿ ನ್ಯೆಟ್ರೇಟ್ ಪ್ರಮಾಣ ಹೆಚ್ಚಿರುತ್ತದೆ. ಇದು ಚರ್ಮದ ಸಮಸ್ಯೆ ಮತ್ತು ಕ್ಯಾನ್ಸರ್ ನಂತಹ ಸಮಸ್ಯೆಗಳಿಗೆ ಕಾರಣವಾಗುತ್ತದೆ. ಹಾಗೆಯೇ ಕೆಲವರು ಬೆಳಗಿನ ಜಾವ ಎದ್ದ ಕೂಡಲೇ ಪ್ಯಾಕೆಟ್ ನಲ್ಲಿ ದೊರೆಯುವ ಜ್ಯೂಸ್ ಸೇವಿಸುವ ಅಭ್ಯಾಸವಿರುತ್ತದೆ. ಈ ರೀತಿಯ ಅಭ್ಯಾಸ ಇದ್ದರೆ ನಿಲ್ಲಿಸುವುದು ಒಳ್ಳೆಯದು. ಏಕೆಂದರೆ ಇದರಲ್ಲಿ ಸಕ್ಕರೆ, ರಾಸಾಯನಿಕಗಳು ಮತ್ತು ಬಣ್ಣ ಇರುತ್ತದೆ. ಇದರಿಂದ ದೇಹಕ್ಕೆ ಹಾನಿ ಉಂಟಾಗುತ್ತದೆ ಹೊರತು ಯಾವುದೇ ಒಳ್ಳೆಯ ಪರಿಣಾಮ ಬೀರುವುದಿಲ್ಲ. ಮನೆಯಲ್ಲಿ ತಾಜಾ ಹಣ್ಣಿನ ಜ್ಯೂಸ್ ಮಾಡಿ ಕುಡಿದರೆ ಒಳ್ಳೆಯದು.

Leave A Reply

Your email address will not be published.