Ultimate magazine theme for WordPress.

ಯಾರಿಗೆ ಮುಂಜಾನೆ 3 ರಿಂದ 5 ಗಂಟೆಗೆ ಎಚ್ಚರವಾಗುತ್ತೋ ಅವರೊಮ್ಮೆ ನೋಡಿ

0 2

ಹಿಂದೂ ಧರ್ಮಕ್ಕೆ ಸಂಬಂಧಿಸಿದ ವೇದ ಪುರಾಣಗಳು ಮತ್ತು ಶಾಸ್ತ್ರಗಳಲ್ಲಿ ಬ್ರಹ್ಮ ಮುಹೂರ್ತ ಅಥವಾ ಬ್ರಾಹ್ಮಿ ಮುಹೂರ್ತವನ್ನು ಬಹಳ ವಿಶೇಷ ಮತ್ತು ಶುಭವೆಂದು ಪರಿಗಣಿಸಲಾಗಿದೆ. ರಾತ್ರಿಯು ಕಳೆದ ನಂತರ ಮತ್ತು ಸೂರ್ಯೋದಯಕ್ಕೆ ಸ್ವಲ್ಪ ಮೊದಲು ಸಂಭವಿಸುವ ಸಮಯವನ್ನು ಬ್ರಾಹ್ಮಿಮುಹೂರ್ತ ಎಂದು ಕರೆಯಲಾಗುತ್ತದೆ. ಅಂದರೆ ಬೆಳಗ್ಗೆ 3 ರಿಂದ ಬೆಳಗ್ಗೆ 5 ರವರೆಗಿನ ಸಮಯವನ್ನು ಬ್ರಾಹ್ಮಿಮುಹೂರ್ತ ಎಂದು ಕರೆಯಲಾಗುತ್ತದೆ. ಗಾಢನಿದ್ರೆಯಲ್ಲಿ ಸಹ ಇಂಥಹ ಸಮಯಕ್ಕೆ ಎಚ್ಚರವಾಗುತ್ತದೆ ಇದಕ್ಕೊಂದು ವಿಶೇಷ ಸಂದೇಶವಿದೆ. ಅದರ ಬಗ್ಗೆ ನಾವು ಇಲ್ಲಿ ಹೆಚ್ಚಿನ ಮಾಹಿತಿಯನ್ನು ತಿಳಿದುಕೊಳ್ಳೋಣ.

ಈ ಮುಹೂರ್ತಕ್ಕೆ ನಮ್ಮ ಋಷಿ ಮುನಿಗಳು ವಿಶೇಷ ಮಹತ್ವ ನೀಡಿದ್ದಾರೆ. ಅವರ ಪ್ರಕಾರ ಈ ಸಮಯ ಮಲಗಲು ಉತ್ತಮವಾಗಿರುವುದಿಲ್ಲ. ಬದಲಾಗಿ ಬ್ರಾಹ್ಮಿಮುಹೂರ್ತದಲ್ಲಿ ಎದ್ದೇಳುವುದು ಸೌಂದರ್ಯ, ಶಕ್ತಿ, ಜ್ಞಾನ, ಬುದ್ಧಿವಂತಿಕೆ ಮತ್ತು ಆರೋಗ್ಯವನ್ನು ತರುತ್ತದೆ. ಸೂರ್ಯೋದಯಕ್ಕೂ ಒಂದೂವರೆ ಗಂಟೆ ಮೊದಲು ಬ್ರಹ್ಮ ಮುಹೂರ್ತದಲ್ಲಿ ಎಚ್ಚರಗೊಳ್ಳಬೇಕು. ಕೆಲವೊಬ್ಬರಿಗೆ ಗಾಡವಾದ ನಿದ್ರೆಯಲ್ಲಿದ್ದು ಸಹ ಇಂತಹ ಸಮಯದಲ್ಲಿ ಎಚ್ಚರವಾಗುತ್ತದೆ. ಸಾಮಾನ್ಯವಾಗಿ ಕೆಲವು ಜನರು ಇದನ್ನು ಸಹಜವೆಂದು ಮತ್ತೆ ನಿದ್ರಿಸುತ್ತಾರೆ.

ಅಚಾನಕ್ಕಾಗಿ ನಿದ್ರೆಯಿಂದ ಈ ಸಮಯದಲ್ಲಿ ಹೆಚ್ಚಳವಾಗುತ್ತಿದೆ ವಾಸ್ತವದಲ್ಲಿ ಇದೊಂದು ಸಾಮಾನ್ಯ ವಿಷಯವಲ್ಲ. ಯಾವುದೇ ಕಾರಣಕ್ಕೂ ಇದನ್ನು ಸುಮ್ಮನೆ ಬಿಟ್ಟು ಬಿಡಬಾರದು. ಇದರ ಹಿಂದೆ ಅನೇಕ ಸಂಕೇತಗಳು ಅಡಗಿರುತ್ತದೆ. ಈ ಜಗತ್ತಿನಲ್ಲಿ ವ್ಯಕ್ತಿಯ ಜೀವನದ ಯಾವುದೇ ಒಂದು ವಿಷಯಗಳು ಅರ್ಥವಿಲ್ಲದೆ ಇರುವುದಿಲ್ಲ. ಯಾವುದೇ ವ್ಯಕ್ತಿಯು ನಿದ್ದೆಯಲ್ಲಿ ಕನಸನ್ನು ಕಾಣುತ್ತಿದ್ದಾರೆ ಎಂದರೆ ಅದಕ್ಕೊಂದು ಅರ್ಥ ಇದ್ದೇ ಇರುತ್ತದೆ. ಅದೇ ರೀತಿ 3 ರಿಂದ 5 ಗಂಟೆಗಲ್ಲಿ ಎಚ್ಚರವಾಗಲು ಕಾರಣವಿದೆ.

ಈ ಸಮಯದಲ್ಲಿ ಅನೇಕ ಅಲೌಕಿಕ ಶಕ್ತಿಗಳು ಮನುಷ್ಯನ ಮೇಲೆ ಪ್ರಭಾವ ಬೀರುತ್ತದೆ. ಅಲೌಕಿಕ ಶಕ್ತಿಗಳು ಕೆಲವೊಂದು ವ್ಯಕ್ತಿಗಳನ್ನು ಮಾತ್ರ ಇಂತಹ ಸಮಯದಲ್ಲಿ ಎಚ್ಚರಿಸುತ್ತದೆ. ಆ ಶಕ್ತಿಗಳು ಅವರನ್ನು ಖುಷಿಯಾಗಿರಲು ಬಿಡುತ್ತವೆ. 3 ರಿಂದ 5 ಗಂಟೆಯ ಸಮಯದಲ್ಲಿ ಕಣ್ಣು ತೆರೆಯುವುದರ ಅರ್ಥವೇನೆಂದರೆ ಮನೆಯಲ್ಲಿ ಧನ ಮತ್ತು ಧಾನ್ಯ ಗಳು ವೃದ್ಧಿ ಆಗಲಿದೆ ಎಂಬ ಅರ್ಥವಾಗಿದೆ ಮತ್ತು ಅಂಥವರ ಮನೆಯಲ್ಲಿ ಸುಖ ಶಾಂತಿ ನೆಮ್ಮದಿ ಗಳು ನೆಲೆಸುತ್ತದೆ. ಇಂಥ ಸಮಯದಲ್ಲಿ ಹೇಳುವುದರಿಂದ ಮಾನಸಿಕವಾಗಿ ಮತ್ತು ದೈಹಿಕವಾಗಿ ಆರೋಗ್ಯವನ್ನು ಹೆಚ್ಚಿಸುತ್ತದೆ. ಹಲವಾರು ಧಾರ್ಮಿಕ ಉಪಯೋಗಗಳು ಕೂಡ ದೊರೆಯುತ್ತದೆ.

Leave A Reply

Your email address will not be published.