ಬೆಳಿಗ್ಗೆ ಖಾಲಿ ಹೊಟ್ಟೆಯಲ್ಲಿ ಟೀ ಕುಡಿಯುವುದು ನಮ್ಮ ಸಮಾಜದಲ್ಲಿ ಮೊದಲಿನಿಂದಲೂ ಹಾಸುಹೊಕ್ಕಾಗಿದೆ ಮತ್ತು ಇದು ಎಲ್ಲೆಡೆ ಸರ್ವೇಸಾಮಾನ್ಯವಾಗಿದೆ ಕೂಡಾ. ಹೀಗೆ ಬೆಳಿಗ್ಗೆ ಖಾಲಿ ಹೊಟ್ಟೆಯಲ್ಲಿ ಟೀ ಕುಡಿಯುವುದು ನಮ್ಮ ಜನರಗೆ ಅಭ್ಯಾಸದ ಜೊತೆಗೆ ಹವ್ಯಾಸವೂ ಆಗಿದೆ, ಕೆಲವರಂತೂ ಬೆಳಿಗ್ಗೆ ಎದ್ದು ಖಾಲಿ ಹೊಟ್ಟೆಯಲ್ಲಿ ಈ ಬೆಡ್ ಟೀ ಕುಡಿಯದೇ ತಮ್ಮ ನಿತ್ಯ ಕರ್ಮಗಳನ್ನೂ ಸಹ ಮಾಡುವುದಿಲ್ಲ. ಇನ್ನೂ ಕೆಲವರಿಗಂತೂ ಟೀ ಒಂದು ಶಕ್ತಿ ವರ್ಧಕವೂ ಕೂಡ ಹೌದು ಹೀಗೆ ಖಾಲಿ ಹೊಟ್ಟೆಯಲ್ಲಿ ಟೀ ಕುಡಿಯುವುದು ಮನುಷ್ಯನ ದೇಹಕ್ಕೆ ಆರೋಗ್ಯಕರವಲ್ಲ ಎಂಬುದು ನಮ್ಮ ವೈದ್ಯಕೀಯ ವಿಜ್ಞಾನದ ಸಂಶೋಧನೆಗಳ ಹಾಗೂ ಹಲವಾರು ಸಂಶೋಧಕರ ಅಭಿಪ್ರಾಯ ಹೀಗೆ ಖಾಲಿ ಹೊಟ್ಟೆಯಲ್ಲಿ ಟೀ ಕುಡಿಯುವುದರಿಂದ ಆಗುವ ಅನಾನುಕೂಲಗಳ ಬಗ್ಗೆ ತಿಳಿದುಕೊಳ್ಳೋಣ ಬನ್ನಿ.
ಬೆಳಿಗ್ಗೆ ಎದ್ದ ಕೂಡಲೇ ಖಾಲಿ ಹೊಟ್ಟೆಯಲ್ಲಿ ಟೀ ಸೇವಿಸುವುದರಿಂದ ದೇಹದಲ್ಲಿನ ಜೀವ ರಾಸಾಯನಿಕ ಕ್ರಿಯೆಯಲ್ಲಿ ಏರುಪೇರುವುಂಟಾಗುತ್ತದೆ, ಜಠರ ರಸದ ಆಮ್ಲೀಯತೆ ಸಮತೋಲನ ತಪ್ಪುವ ಕಾರಣದಿಂದ ಸರಾಗವಾಗಿ ಜರುಗುವ ಜೀವ ರಾಸಾಯನಿಕ ಕ್ರಿಯೆಯಲ್ಲಿ ಏರುಪೇರು ಉಂಟಾಗಿ ಹಲವಾರು ಸಮಸ್ಯೆಗಳು ತಲೆದೂರುತ್ತವೆ. ಮುಂಜಾನೆ ಖಾಲಿ ಹೊಟ್ಟೆಯಲ್ಲಿ ಟೀ ಸೇವನೆ ಮಾಡುವುದರಿಂದ ಹಲ್ಲುಗಳ ಹೊರಕವಚ ಸವಕಳಿಯಾಗುತ್ತದೆ, ಯಾಕಂದ್ರೆ ರಾತ್ರಿ ಸಮಯದಲ್ಲಿ ಬಾಯಿಯಲ್ಲಿ ಹೆಚ್ಚು ಬ್ಯಾಕ್ಟೀರಿಯಾಗಳು ಸಂಗ್ರಹವಾಗಿದ್ದು ಸಕ್ಕರೆ ಅಂಶವನ್ನು ಒಡೆದು ಚಿಕ್ಕದಾಗಿಸುತ್ತದೆ. ಪರಿಣಾಮವಾಗಿ ಬಾಯಿಯಲ್ಲಿ ಆಮ್ಲೀಯತೆ ಹೆಚ್ಚಾಗುತ್ತದೆ ಈ ಸಮಯದಲ್ಲಿ ಬಿಸಿ ಟೀ ಕುಡಿಯುವುದರಿಂದ ಆಮ್ಲೀಯತೆಯಿಂದ ಸಡಿಲವಾದ ಹಲ್ಲುಗಳ ಹೊರಪದರದ ಕಣಗಳು ಸುಲಭವಾಗಿ ಸವೆಯುತ್ತದೆ.
ಟೀ ಒಂದು ಮೂತ್ರವರ್ಧಕವಾಗಿರುತ್ತದೆ ಇದರಿಂದ ದೇಹದಿಂದ ನೀರನ್ನು ಹೆಚ್ಚು ಹೊರಹಾಕುತ್ತದೆ. ರಾತ್ರಿ ಪೂರಾ ಮಲಗಿದ ಸಮಯದಲ್ಲಿ ನೀರು ಕುಡಿಯದೇ ಇರುವುದರಿಂದ ಬೆಳಿಗ್ಗೆ ಎದ್ದು ಬಿಸಿ ಟೀ ಕುಡಿಯುವುದರಿಂದ ದೇಹದಿಂದ ಹೆಚ್ಚಿನ ನೀರು ಹೊರಹೋಗಲು ಪ್ರೇರಣೆಯಾಗುತ್ತದೆ, ಆದ್ದರಿಂದ ದೇಹದ ಸ್ನಾಯುಗಳಿಗೆ ತೊಂದರೆಯಾಗುತ್ತದೆ. ಒಂದುವೇಳೆ ಖಾಲಿ ಹೊಟ್ಟೆಯಲ್ಲಿ ಹಾಲಿರುವ ಟೀ ಕುಡಿದರೆ ಹೊಟ್ಟೆ ಉಬ್ಬರ ಉಂಟಾಗುತ್ತದೆ ಯಾಕಂದ್ರೆ ಹಾಲಿನಲ್ಲಿರುವ ಹೇರಳವಾದ ಲ್ಯಾಕ್ಟೊಸ್ ಖಾಲಿ ಹೊಟ್ಟೆಯಲ್ಲಿನ ಜೀರ್ಣ ರಸದೊಂದಿಗೆ ಬೆರೆತು ವಾಯು ಉಂಟಾಗಿ ಹೊಟ್ಟೆ ಉಬ್ಬರವಾಗುತ್ತದೆ ಹಾಗೂ ಮಲಬದ್ಧತೆಗೆ ಇದು ಕಾರಣವಾಗುತ್ತದೆ.
ಬೆಳಿಗ್ಗೆ ಖಾಲಿ ಹೊಟ್ಟೆಯಲ್ಲಿ ಟೀ ಕುಡಿಯುವುದರಿಂದ ಪಿತ್ತ ರಸದಲ್ಲಿ ಏರುಪೇರುಂಟಾಗುತ್ತದೆ ಇದು ವಾಕರಿಕೆಗೆ ಕಾರಣವಾಗುತ್ತದೆ, ಹೀಗೆ ಖಾಲಿ ಹೊಟ್ಟೆಯಲ್ಲಿ ಟೀ ಕುಡಿಯುವುದರಿಂದ ವಾಕರಿಕೆ ಹೊಟ್ಟೆ ಉಬ್ಬರಿಸುವಿಕೆ ಹಾಗೆಯೇ ಅಹಿತಕರ ಸಂವೇದನೆಗಳು ನಮ್ಮ ದೇಹದಲ್ಲಿ ಉಂಟಾಗುತ್ತವೆ ಆದ್ದರಿಂದ ಖಾಲಿ ಹೊಟ್ಟೆಯಲ್ಲಿ ಟೀ ಕುಡಿಯುವುದು ಆರೋಗ್ಯಕ್ಕೆ ಹಾನಿಕಾರಕವಾಗಿದೆಯೇ ಹೊರತು ಆರೋಗ್ಯದ ದೃಷ್ಟಿಯಲ್ಲಿ ಯಾವ ಪ್ರಯೋಜನಗಳೂ ನಮ್ಮ ದೇಹಕ್ಕೆ ಆಗುವುದಿಲ್ಲ ಹೀಗಾಗಿ ಬೆಳಿಗ್ಗೆ ಖಾಲಿ ಹೊಟ್ಟೆಯಲ್ಲಿ ಟೀ ಕುಡಿಯುವುದನ್ನು ಆದಷ್ಟು ಕಡಿಮೆ ಮಾಡುವುದು ಉತ್ತಮ ಎಂಬುದಷ್ಟೇ ನಮ್ಮ ಆರೋಗ್ಯಕರ ಸಲಹೆಯಾಗಿದೆ.