morarji desai application 2023: ಕರ್ನಾಟಕ ವಸತಿ ಶಿಕ್ಷಣ ಸಂಸ್ಥೆಗಳ ಸಂಘ ವ್ಯಾಪ್ತಿಗೆ ಬರುವ ವಸತಿ ಶಾಲೆಗಳಿಗೆ 2024-25ನೇ ಶೈಕ್ಷಣಿಕ ವರ್ಷಕ್ಕೆ 6ನೇ ತರಗತಿ ವಿದ್ಯಾರ್ಥಿಗಳಿಗೆ ಅಡ್ಮಿಷನ್ ಗಾಗಿ ಅರ್ಜಿ ಆಹ್ವಾನ ಮಾಡಲಾಗಿದೆ. ವಿದ್ಯಾರ್ಥಿಗಳಿವೆ ಪ್ರವೇಶಾತಿ ಪರೀಕ್ಷೆ, ಆನ್ಲೈನ್ ಕೌನ್ಸೆಲಿಂಗ್ ನಡೆಸಿ ಅಡ್ಮಿಷನ್ ಮಾಡಿಕೊಳ್ಳಲಾಗುತ್ತದೆ. ಮೊರಾರ್ಜಿ ವಸತಿ ಶಾಲೆ ಹಾಗೂ ಇನ್ನಿತರ 10 ವಸತಿ ಶಾಲೆಗಳಲ್ಲಿ 2024-25ನೇ ಸಾಲಿನಲ್ಲಿ ಪ್ರವೇಶಾತಿಗೆ ಕರ್ನಾಟಕ ವಸತಿ ಶಿಕ್ಷಣ ಇಲಾಖೆ, ಈಗ ಅಧಿಸೂಚನೆ ಬಿಡುಗಡೆ ಮಾಡಿದೆ.

6ನೇ ತರಗತಿಗೆ ಪರೀಕ್ಷೆ ನಡೆಸಿ, ಆನ್ಲೈನ್ ಕೌನ್ಸೆಲಿಂಗ್ ನಡೆಸಿ, ಪ್ರವೇಶಾತಿ ಕೊಡಲಾಗುತ್ತದೆ. ಇದಕ್ಕೆ ಅರ್ಜಿ ಸಲ್ಲಿಸುವುದು ಹೇಗೆ? ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ ಯಾವುದು? ಈ ಎಲ್ಲದರ ಮಾಹಿತಿಯನ್ನು ತಿಳಿಸಿಕೊಡುತ್ತೇವೆ ನೋಡಿ..

ಮೂರಾರ್ಜಿ ದೇಸಾಯಿ, ಕಿತ್ತೂರ ರಾಣಿ ಚೆನ್ನಮ್ಮ, ಏಕಲವ್ಯ ಮಾದರಿ ವಸತಿ ಶಾಲೆ, ಡಾ. ಬಿ.ಆರ್. ಅಂಬೇಡ್ಕರ್ ವಸತಿ ಶಾಲೆ, ಸಂಗೊಳ್ಳಿ ರಾಯಣ್ಣ ವಸತಿ ಶಾಲೆ, ಮಾಸ್ತಿ ವೆಂಕಟೇಶ್ ಅಯ್ಯಂಗಾರ್ ವಸತಿ ಶಾಲೆ, ಕವಿರನ್ನ ವಸತಿ ಶಾಲೆ, ಗಾಂಧಿ ತತ್ವ ವಸತಿ ಶಾಲೆ, ಶ್ರೀ ನಾರಾಯಣ ಗುರು ವಸತಿ ಶಾಲೆ, ಮತ್ತು ಶ್ರೀಮತಿ ಇಂದಿರಾಗಾಂಧಿ ವಸತಿ ಶಾಲೆಗೆ 6ನೇ ತರಗತಿಗೆ ಅರ್ಜಿ ಸಲ್ಲಿಸುವುದಕ್ಕೆ ಅಧಿಸೂಚನೆ ಬಿಡುಗಡೆ ಮಾಡಲಾಗಿದೆ.

ವಸತಿ ಶಾಲೆಗೆ ಸೇರಬೇಕು ಎಂದುಕೊಂಡಿರುವ 5ನೇ ತರಗತಿ ಓದುತ್ತಿರುವ ಮಕ್ಕಳ ತಂದೆ ತಾಯಿ, ಆನ್ಲೈನ್ ಮೂಲಕ ಕರ್ನಾಟಕ ವಸತಿ ಶಿಕ್ಷಣದ ಅಡಿಯಲ್ಲಿ ಕಾರ್ಯ ನಿರ್ವಹಿಸುತ್ತಿರುವ ಶಾಲೆಗಳಿಗೆ ಆನ್ಲೈನ್ ಮೂಲಕ ಅರ್ಜಿ ಸಲ್ಲಿಸಬಹುದು. ಇದಕ್ಕಾಗಿ ಕೆಲವು ಅರ್ಹತೆಗಳು ಮಾನದಂಡಗಳು ಸಹ ಇದ್ದು, ಎಸ್ಸಿ ಎಸ್ಟಿ ಮತ್ತು ಪ್ರವರ್ಗ 1ಕ್ಕೆ ಸೇರುವ ಅಭ್ಯರ್ಥಿಗಳ ಕುಟುಂಬದ ವಾರ್ಷಿಕ ಆದಾಯ 2.50 ಲಕ್ಷದ ಒಳಗಿರಬೇಕು. 2ಎ, 2ಬಿ, 3ಎ, 3ಬಿ ವರ್ಗಕ್ಕೆ ಸೇರಿದ ಕುಟುಂಬದ ವಾರ್ಷಿಕ ಆದಾಯ 1 ಲಕ್ಷದ ಒಳಗಿರಬೇಕು.

ಕೆಲವು ದಾಖಲೆಗಳು ಬೇಕಾಗಲಿದ್ದು, 5ನೇ ತರಗತಿ ಓದುತ್ತಿರುವ ಮಕ್ಕಳ ಶಾಲೆಯಿಂದ SATS ನಂಬರ್, ಇತ್ತೀಚಿನ ಪಾಸ್ ಪೋರ್ಟ್ ಸೈಜ್ ಫೋಟೋ, ರಿಸರ್ವೇಷನ್ ಗೆ ಸಂಬಂಧಪಟ್ಟ ದಾಖಲೆಗಳು ಇದೆಲ್ಲದರ ಜೊತೆಗೆ ಶಾಲೆಯ ಮುಖ್ಯಸ್ಥರನ್ನು ಭೇಟಿ ಮಾಡಬೇಕು. ಆನ್ಲೈನ್ ನಲ್ಲಿ ಅಪ್ಲಿಕೇಶನ್ ಹಾಕುವಾಗ, ಶಾಲೆಗಳನ್ನು ನಿಮ್ಮ ಆದ್ಯತೆಯ ಮಿತಿಯಲ್ಲಿ ಕ್ರಮವಾಗಿ ಆಯ್ಕೆ ಮಾಡಬೇಕು. ನಿಮಗೆ ಹೆಚ್ಚಿನ ಆಯ್ಕೆ ಬೇಕು ಎಂದರೆ ನಿಮ್ಮ ಜಿಲ್ಲೆಯ ಎಲ್ಲಾ ವಸತಿ ಶಾಲೆಗಳನ್ನು ಆರ್ಡರ್ ನಲ್ಲೋ ಆಯ್ಕೆ ಮಾಡಬಹುದು.

ಇಲ್ಲಿ ನೀವು ಪ್ರವೇಶಾತಿ ಪರೀಕ್ಷೆಯಲ್ಲಿ ಗಳಿಸುವ ಮಾರ್ಕ್ಸ್, ಮೀಸಲಾತಿ, ನೀವು ಆಯ್ಕೆ ಮಾಡಿರುವ ಶಾಲೆ ಇವುಗಳ ಆಧಾರದ ಮೇಲೆ Computerized Auto Selection ನಲ್ಲಿ ಸೀಟ್ ಸೆಲೆಕ್ಷನ್ ನಡೆಯುತ್ತದೆ. ಇದಕ್ಕಾಗಿ ನೀವು ಡಿಸೆಂಬರ್ 31ರ ಒಳಗೆ ಅರ್ಜಿ ಸಲ್ಲಿಸಬೇಕು. 2024ರ ಫೆಬ್ರವರಿ 18ರಂದು ಬೆಳಗ್ಗೆ 11 ಗಂಟೆಯಿಂದ 1 ಗಂಟೆಯವರೆಗು ಪರೀಕ್ಷೆ ನಡೆಯುತ್ತದೆ. ಇದು 100 ಮಾರ್ಕ್ಸ್ ಪರೀಕ್ಷೆ ಆಗಿರುತ್ತದೆ.

https://cetonline.karnataka.gov.in/kea/ ಈ ವೆಬ್ಸೈಟ್ ಗೆ ಭೇಟಿ ನೀಡುವ ಮೂಲಕ ಅರ್ಜಿ ಸಲ್ಲಿಸಬಹುದು.

WhatsApp Group Join Now
Telegram Group Join Now

Leave a Reply

Your email address will not be published. Required fields are marked *

error: Content is protected !!