Ultimate magazine theme for WordPress.

ವಿದ್ಯಾರ್ಥಿಗಳಿಗೆ 50 ಸಾವಿರ ವಿದ್ಯಾರ್ಥಿ ವೇತನ ಸಿಗಲಿದೆ ಆಸಕ್ತರು ಅರ್ಜಿಹಾಕಿ, ಇಲ್ಲಿದೆ ಸಂಪೂರ್ಣ ಮಾಹಿತಿ

0 4,531

Z scholarship program Application Open: ವಿದ್ಯಾರ್ಥಿಗಳಿಗೆ ಇರುವ ಒಂದು ವಿದ್ಯಾರ್ಥಿ ವೇತನದ ಬಗ್ಗೆ ಸಂಪೂರ್ಣ ಮಾಹಿತಿಯನ್ನು ಈ ಲೇಖನದ ಮೂಲಕ ತಿಳಿಯೋಣ. ಝೆಡ್ ಸ್ಕಾಲರ್ ಪ್ರೋಗ್ರಾಂ 2023-24 ಝೆಡ್ ಅಸೋಸಿಯೇಟ್ ಇಂಡಿಯಾ ಪ್ರೈವೇಟ್ ಲಿಮಿಟೆಡ್ ನೀಡುವ ಸ್ಕಾಲರ್ ಶಿಪ್ ಪ್ರೋಗ್ರಾಂ ಇದಾಗಿದೆ. ಕಡಿಮೆ ಆದಾಯದ ಕುಟುಂಬಗಳ ಪ್ರತಿಭಾವಂತ ವಿದ್ಯಾರ್ಥಿಗಳಿಗೆ ಅವರಿಗೆ ಉನ್ನತ ಶಿಕ್ಷಣವನ್ನು ಪಡೆಯಲು ಹಣದ ಸಹಾಯ ಮಾಡಲು ಈ ವಿದ್ಯಾರ್ಥಿ ವೇತನದ ಅಡಿಯಲ್ಲಿ ದೆಹಲಿ, ಪುಣೆ, ಬೆಂಗಳೂರು ಅಥವಾ ಚೆನ್ನೈನಲ್ಲಿರುವ ಸಂಸ್ಥೆಗಳಲ್ಲಿ ಸಾಮಾನ್ಯ ಅಥವಾ ವೃತ್ತಿಪರ ಪದವಿ ಪೂರ್ವ ಕೋರ್ಸ್ ಗಳನ್ನು ಕಲಿಯುತ್ತಿರುವ ವಿದ್ಯಾರ್ಥಿಗಳು ಒಂದು ವರ್ಷಕ್ಕೆ 50000 ರೂಪಾಯಿವರೆಗೆ ವಿದ್ಯಾರ್ಥಿ ವೇತನವನ್ನು ಪಡೆಯಬಹುದು.

ಝೆಡ್ ಸ್ಕಾಲರ್ ಪ್ರೋಗ್ರಾಂ 2023-2024 ರ ಅರ್ಜಿ ಸಲ್ಲಿಸಲು ಪ್ರಾರಂಭವಾಗಿದೆ. ವಿದ್ಯಾರ್ಥಿಗಳು ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ ಇದೆ ಡಿಸೆಂಬರ್ 15. ಈ ವಿದ್ಯಾರ್ಥಿ ವೇತನಕ್ಕೆ ಅರ್ಜಿ ಸಲ್ಲಿಸುವ ವಿದ್ಯಾರ್ಥಿಗಳು ದೆಹಲಿ, ಪುಣೆ, ಬೆಂಗಳೂರು ಅಥವಾ ಚೆನ್ನೈನಲ್ಲಿರುವ ಸಂಸ್ಥೆಗಳಲ್ಲಿ ಬಿಕಾಂ, ಬಿಎ, ಬಿಎಸ್ಸಿ ಮತ್ತು ಇತರ ಕೋರ್ಸ್ ಗಳನ್ನು ಒಳಗೊಂಡಂತೆ ತಮ್ಮ ಮೊದಲ ವರ್ಷದ ಪದವಿಪೂರ್ವ ಕೋರ್ಸ್ ಗಳ ವಿದ್ಯಾರ್ಥಿಗಳು ಅರ್ಜಿ ಸಲ್ಲಿಸಲು ಅರ್ಹರಾಗಿರುತ್ತಾರೆ. ಅರ್ಜಿದಾರರು 12 ನೆ ತರಗತಿ ಬೋರ್ಡ್ ಪರೀಕ್ಷೆಯಲ್ಲಿ ಕನಿಷ್ಠ 60% ಅಂಕಗಳನ್ನು ಪಡೆದಿರಬೇಕು. ಅರ್ಜಿ ಸಲ್ಲಿಸುವ ವಿದ್ಯಾರ್ಥಿಯ ಕುಟುಂಬದ ಆದಾಯ 8 ಲಕ್ಷ ರೂಪಾಯಿಗಿಂತ ಕಡಿಮೆ ಇರಬಾರದು.

ದೆಹಲಿ, ಪುಣೆ, ಬೆಂಗಳೂರು ಚೆನ್ನೈನಲ್ಲಿರುವ ಸಂಸ್ಥೆಗಳಲ್ಲಿ ಬಿಇ, ಬಿಟೆಕ್, ಎಲ್ ಎಲ್ ಬಿ ಹಾಗೂ ಇತರ ಕೋರ್ಸ್ ಗಳನ್ನು ಒಳಗೊಂಡಂತೆ ತಮ್ಮ ಮೊದಲ ವರ್ಷದ ವೃತ್ತಿಪರ ಪದವಿಪೂರ್ವ ವಿದ್ಯಾರ್ಥಿಗಳು ಅರ್ಜಿ ಸಲ್ಲಿಸಬಹುದು. ಅರ್ಜಿದಾರರು 12 ನೇ ತರಗತಿ ಬೋರ್ಡ್ ಪರೀಕ್ಷೆಯಲ್ಲಿ ಕನಿಷ್ಠ 60% ಅಂಕಗಳನ್ನು ಪಡೆದಿರಬೇಕು. ಅರ್ಜಿ ಸಲ್ಲಿಸುವ ವಿದ್ಯಾರ್ಥಿಯ ಕುಟುಂಬದ ಆದಾಯ 8 ಲಕ್ಷ ರೂಪಾಯಿಗಿಂತ ಕಡಿಮೆ ಇರಬೇಕು. ಝೆಡ್ ಸ್ಕಾಲರ್ಸ್ ಪ್ರೋಗ್ರಾಂ 2023-24 ರ ಸಾಮಾನ್ಯ ಪದವಿ ಪೂರ್ವ ವಿದ್ಯಾರ್ಥಿಗಳಿಗೆ ಒಂದು ವರ್ಷಕ್ಕೆ 20000ರೂ ಸ್ಕಾಲರ್ ಶಿಪ್ ಅನ್ನು ನೀಡುತ್ತದೆ. ವೃತ್ತಿಪರ ಪದವಿಪೂರ್ವ ವಿದ್ಯಾರ್ಥಿಗಳಿಗೆ ಒಂದು ವರ್ಷಕ್ಕೆ 50000ರೂ ಸ್ಕಾಲರ್ ಶಿಪ್ ನೀಡುತ್ತದೆ.

ಈ ವಿದ್ಯಾರ್ಥಿ ವೇತನಕ್ಕೆ ಅರ್ಜಿ ಸಲ್ಲಿಸಲು ಕೆಲವು ದಾಖಲಾತಿಗಳು ಬೇಕಾಗುತ್ತವೆ. 12 ನೇ ತರಗತಿಯ ಅಂಕಪಟ್ಟಿ, ಉತ್ತೀರ್ಣ ಪ್ರಮಾಣ ಪತ್ರಗಳು, ಆಧಾರ್ ಕಾರ್ಡ್, ಮತದಾರರ ಗುರುತಿನ ಚೀಟಿ, ಚಾಲನಾ ಪರವಾನಗಿ, ಪ್ಯಾನ್ ಕಾರ್ಡ್, ಪ್ರಸ್ತುತ ವರ್ಷದ ಪ್ರವೇಶ ಪತ್ರ ಅಥವಾ ಸಂಸ್ಥೆಯ ಗುರುತಿನ ಚೀಟಿ. ಆದಾಯ ಪುರಾವೆ ಅರ್ಜಿದಾರರ ಬ್ಯಾಂಕ್ ಪುರಾವೆ, ಇತ್ತೀಚಿನ ಪಾಸ್ ಪೋರ್ಟ್ ಸೈಜ್ ಫೋಟೋ, ಇಮೇಲ್ ವಿಳಾಸ, ಪೋನ್ ನಂಬರ್.

https://www.buddy4study.com/page/zscholars-program ಆರ್ಜಿ ಸಲ್ಲಿಸಲು ವಿದ್ಯಾರ್ಥಿಗಳು ಈ ಲಿಂಕ್ ಮೇಲೆ ಕ್ಲಿಕ್ ಮಾಡಿ ಕೆಳಗೆ ಅಪ್ಲೈ ನೌ ಬಟನ್ ಕ್ಲಿಕ್ ಮಾಡಿ. ಡ್ಯಾಶ್ ಬೋರ್ಡ್ ನ ಬಲಭಾಗದಲ್ಲಿರುವ ರಿಜಿಸ್ಟರ್ ಬಟನ್ ಅನ್ನು ಕ್ಲಿಕ್ ಮಾಡಿ ಮತ್ತು ರಿಜಿಸ್ಟರ್ ಮಾಡಲು ಅಗತ್ಯವಿರುವ ವಿವರಗಳನ್ನು ಭರ್ತಿ ಮಾಡಿ. ಡ್ಯಾಶ್ ಬೋರ್ಡ್ ನ ಮೇಲ್ಭಾಗದಲ್ಲಿ ನೀಡಿರುವ ಅಧಿಕೃತ ಲಾಗಿನ್ ಆಯ್ಕೆಯ ಅಡಿಯಲ್ಲಿ ಸ್ಕೂಲ್ ಅಥಾರಿಟಿ ಆಯ್ಕೆಗೆ ನ್ಯಾವಿಗೇಟ್ ಮಾಡಿ ಹೊಸ ನೋಂದಣಿಗಾಗಿ ಇಲ್ಲಿ ಕ್ಲಿಕ್ ಮಾಡಿ ಆಯ್ಕೆಗೆ ನ್ಯಾವಿಗೇಟ್ ಮಾಡಿ ಮತ್ತು ಅದನ್ನು ಕ್ಲಿಕ್ ಮಾಡಿ ನೋಂದಣಿ ಪ್ರಕ್ರಿಯೆಯನ್ನು ಪೂರ್ಣಗೊಳಿಸಲು ಅಗತ್ಯವಿರುವ ವಿವರಗಳನ್ನು ಭರ್ತಿ ಮಾಡಿ ನೋಂದಣಿಯ ನಂತರ ಅಪ್ಲೈ ನೌ ಆಯ್ಕೆ ಮಾಡಿ. ವಿದ್ಯಾರ್ಥಿಯ ಛಾಯಾಚಿತ್ರವನ್ನು ಅಪ್ಲೋಡ್ ಮಾಡಿ ಸ್ವಿಕೃತಿಯನ್ನು ಪಡೆಯಲು ಅರ್ಜಿಯನ್ನು ಸಬ್ಮಿಟ್ ಮಾಡಬೇಕು. ಈ ಮಾಹಿತಿಯನ್ನು ತಪ್ಪದೆ ಎಲ್ಲರಿಗೂ ತಿಳಿಸಿ, ವಿದ್ಯಾರ್ಥಿಗಳು ಈ ಯೋಜನೆಯ ಪ್ರಯೋಜನವನ್ನು ಪಡೆದುಕೊಳ್ಳಿ.

Leave A Reply

Your email address will not be published.