Ultimate magazine theme for WordPress.

ಈ ಮಹಿಳೆಯರಿಗೂ ಗೃಹಲಕ್ಷ್ಮಿ ಯೋಜನೆ ಕಟ್ ಆಗಿದೆ, ಇನ್ನು ಇವರಿಗಂತೂ ಹಣ ಬರೋದಿಲ್ಲ ಯಾಕೆಂದರೆ..

0 42,316

Gruhalakshmi Schemes New Updates: ಕಾಂಗ್ರೆಸ್ ಸರ್ಕಾರ ಚುನಾವಣೆಯಲ್ಲಿ ಗೆದ್ದು ಆಡಳಿತಕ್ಕೆ ಬಂದ ನಂತರ ತಮ್ಮ ಮಾತಿನಂತೆ ಪ್ರತಿ ತಿಂಗಳು ಮಹಿಳೆಯರ ಖಾತೆಗೆ 2000 ಹಣ ವರ್ಗಾವಣೆ ಮಾಡುವ ಗ್ರಹಲಕ್ಷ್ಮಿ ಯೋಜನೆಯನ್ನು ಜಾರಿಗೆ ತರುತ್ತಾರೆ ಆದರೆ ಈ ಯೋಜನೆ ಮಹಿಳೆಯರಿಗೆ ಎಷ್ಟರಮಟ್ಟಿಗೆ ತಲುಪಿದೆ ಹಾಗೆಯೆ ಈ ಯೋಜನೆಯ ಮೂಲಕ ರೇಷನ್ ಕಾರ್ಡ್ ದುರುಪಯೋಗ ಕೂಡ ತಿಳಿದುಬಂದಿದೆ. ಗ್ರಹಲಕ್ಷ್ಮಿ ಯೋಜನೆಯ ಇನ್ನಷ್ಟು ಮಾಹಿತಿಯನ್ನು ಈ ಲೇಖನದಲ್ಲಿ ನೋಡೋಣ

ಸರ್ಕಾರ ಮಹಿಳೆಯರಿಗೆ ಗೃಹಲಕ್ಷ್ಮಿ ಯೋಜನೆಯ ಮೂಲಕ 2000 ಹಣವನ್ನು ನೀಡುವ ನಿರ್ಧಾರ ಮಾಡಿತ್ತು ಆದರೆ ಈ ವಿಷಯದ ಬಗ್ಗೆ ಹಲವು ಚರ್ಚೆಗಳು ಈಗಾಗಲೆ ನಡೆದಿದೆ. ಕೆಲವರಿಗೆ ದಾಖಲಾತಿ ಸರಿಯಿಲ್ಲದ ಕಾರಣ ಹಣ ಬಂದಿಲ್ಲ ಇನ್ನೂ ಕೆಲವರಿಗೆ ಒಂದು ತಿಂಗಳ ಹಣ ಮಾತ್ರ ಬಂದಿದೆ ಇನ್ನು ಕೆಲವರಿಗೆ ಎರಡು ತಿಂಗಳ ಹಣ ಮಾತ್ರ ಬಂದಿದೆ. ಈ ಯೋಜನೆಗೆ ಒಂದು ಕೋಟಿ ಹತ್ತು ಲಕ್ಷ ಜನರು ಅರ್ಜಿಯನ್ನು ಸಲ್ಲಿಸಿದ್ದಾರೆ. ಕೆಲವು ಮಹಿಳೆಯರಿಗೆ ಈ ಯೋಜನೆಯಿಂದ ಹಣ ಬರುವುದಿಲ್ಲ ಸರ್ಕಾರಿ ಹುದ್ದೆಯಲ್ಲಿ ಕೆಲಸ ಮಾಡುತ್ತಿರುವವರು ಈ ಯೋಜನೆಗೆ ಅರ್ಜಿ ಸಲ್ಲಿಸುವಂತಿಲ್ಲ ಹಾಗೆಯೆ ಇಂತಹ ಹುದ್ದೆಯಲ್ಲಿ ಕೆಲಸ ಮಾಡುತ್ತಿರುವವರ ಪತ್ನಿ ಈ ಯೋಜನೆಗೆ ಅರ್ಜಿ ಸಲ್ಲಿಸುವಂತಿಲ್ಲ.

ಲಕ್ಷ ಕೋಟಿ ರೂಪಾಯಿ ಸಂಪಾದನೆ ಮಾಡುತ್ತಿರುವವರು ಸಹ ಗ್ರಹಲಕ್ಷ್ಮಿ ಯೋಜನೆಗೆ ಅರ್ಜಿ ಸಲ್ಲಿಸಿರುವುದು ಆಶ್ಚರ್ಯ ತರುತ್ತದೆ. ಈ ಯೋಜನೆಗೆ ಅರ್ಜಿ ಸಲ್ಲಿಸುವಾಗ ಆಧಾರ್ ಕಾರ್ಡ್, ಪಾನ್ ಕಾರ್ಡ್, ರೇಷನ್ ಕಾರ್ಡ್ ಮೂರನ್ನು ಕೊಡಲಾಗಿರುತ್ತದೆ ಆಧಾರ್ ಕಾರ್ಡ್ ಪಾನ್ ಕಾರ್ಡ್ ಲಿಂಕ್ ಇರುವುದರಿಂದ ಜೊತೆಗೆ ಬ್ಯಾಂಕ್ ಅಕೌಂಟ್ ಲಿಂಕ್ ಇರುವುದರಿಂದ ಸುಲಭವಾಗಿ ಟ್ಯಾಕ್ಸ್ ಪೆ ಮಾಡುತ್ತಿರುವವರನ್ನು ಕಂಡುಹಿಡಿಯಬಹುದು ಅಂತಹ ಮಹಿಳೆಯರು ಈ ಯೋಜನೆಗೆ ಅರ್ಹರಾಗಿರುವುದಿಲ್ಲ.

ಕೆಲವರಿಗೆ ಈ ಯೋಜನೆಗೆ ಅರ್ಜಿ ಸಲ್ಲಿಸುವ ಅರ್ಹತೆ ಇದ್ದು ಅರ್ಜಿ ಸಲ್ಲಿಸಿದರು ಹಣ ಬರುತ್ತಿಲ್ಲ ಅಂತಹವರಿಗೆ ಸರ್ಕಾರ ಗ್ರಹಲಕ್ಷ್ಮಿ ಅದಾಲತ್ ಎಂಬ ಕಾರ್ಯಕ್ರಮವನ್ನು ಜಾರಿಗೆ ತರುತ್ತಿದೆ ಹಳ್ಳಿಗಳಲ್ಲಿ ಗ್ರಾಮ ಸಭೆ ಮಟ್ಟದಲ್ಲಿ ಸಭೆಯನ್ನು ಮಾಡಿ ಅಲ್ಲಿ ಮಹಿಳೆಯರ ದಾಖಲಾತಿಗಳನ್ನು ಪರಿಶೀಲಿಸಲಾಗುತ್ತದೆ. ಗ್ರಹಲಕ್ಷ್ಮಿ ಯೋಜನೆಗೆ ಅರ್ಜಿ ಸಲ್ಲಿಸಲು ಅರ್ಹತೆ ಇದ್ದರೂ ಅರ್ಜಿ ಹಾಕದೆ ಇರುವವರು ಗ್ರಹಲಕ್ಷ್ಮಿ ಅದಾಲತ್ ಮೂಲಕ ಅರ್ಜಿ ಸಲ್ಲಿಸಿ ಹಣ ಪಡೆಯಬಹುದು.

ಡಿಸೆಂಬರ್ ತಿಂಗಳಿನಲ್ಲಿ ಅರ್ಹತೆ ಇದ್ದು ಹಣ ವರ್ಗಾವಣೆ ಆಗದೆ ಇರುವ ಮಹಿಳೆಯರಿಗೆ ಮೂರು ತಿಂಗಳಿನ ಹಣವನ್ನು ವರ್ಗಾಯಿಸಲಾಗುತ್ತದೆ ಎಂದು ಸರ್ಕಾರ ತಿಳಿಸಿದೆ ಮುಂದಿನ ದಿನಗಳಲ್ಲಿ ಕಾದು ನೋಡಬೇಕಿದೆ ಯಾರಿಗೆ ಎಷ್ಟು ಹಣ ವರ್ಗಾವಣೆ ಆಗುತ್ತದೆ ಎಂದು ಈ ಮಾಹಿತಿ ಉಪಯುಕ್ತಕರವಾಗಿದ್ದು ಎಲ್ಲ ಮಹಿಳೆಯರಿಗೂ ತಿಳಿಸಿ, ಗ್ರಹಲಕ್ಷ್ಮಿ ಹಣ ನಿಮ್ಮ ಖಾತೆಗೆ ವರ್ಗಾವಣೆ ಆಗಿದೆಯೆ ಇಲ್ಲವೆ ಎಂಬುದನ್ನು ನಮಗೆ ತಿಳಿಸಿ.

Leave A Reply

Your email address will not be published.