ಪ್ರತಿದಿನ ನಾವುಗಳು ಸೇವಿಸುವಂತ ಆಹಾರ ನಮ್ಮ ಆರೋಗ್ಯವನ್ನು ವೃದ್ಧಿಸುತ್ತದೆ, ಅಷ್ಟೇ ಅಲ್ಲದೆ ಪ್ರತಿ ದವಸ ದಾನ್ಯಗಳು ಕೂಡ ಒಳ್ಳೆಯ ಆರೋಗ್ಯವನ್ನು ದೊರಕಿಸುತ್ತದೆ, ಬನ್ನಿ ಈ ಮೂಲಕ ಮೊಳಕೆಕಟ್ಟಿದ ಕಾಳುಗಳನ್ನು ಪ್ರತಿದಿನ ಸೇವನೆ ಮಾಡುವುದರಿಂದ ಏನಾಗುತ್ತೆ ಅನ್ನೋದನ್ನ ಇಲ್ಲಿ ತಿಳಿಯೋಣ.ಮೊಳಕೆ ಕಾಳುಗಳಲ್ಲಿ ಹಲವು ರೋಗ ನಿರೋಧಕ ಶಕ್ತಿ ಇರುತ್ತದೆ. ಮೊಳಕೆ ಕಾಳಿನಲ್ಲಿ ಬಹಳಷ್ಟು ಆರೋಗ್ಯವರ್ಧಕ ಅಂಶಗಳು ಕೂಡ ಇರುತ್ತದೆ. ಜೀರ್ಣಕ್ರಿಯೆ ಸಮಸ್ಯೆ ಇದ್ದರೆ ಮೊಳಕೆ ಕಾಳು ಸೇವನೆ ತುಂಬಾ ಒಳ್ಳೆಯದು. ಅಸಿಡಿಟಿ ಸಮಸ್ಯೆಯಿಂದ ಬಳಲುತ್ತಿರುವವರು ಪ್ರತಿದಿನ ಮೊಳಕೆ ಕಾಳುಗಳನ್ನು ತಿನ್ನುವುದು ಒಳ್ಳೆಯದು. ಇದರಲ್ಲಿ ಇರುವ ಪೋಷಕಾಂಶಗಳು ಆಹಾರವನ್ನು ಸರಿಯಾಗಿ ಜೀರ್ಣವಾಗಲು ಸಹಕರಿಸುತ್ತದೆ.ಹುರುಳಿ, ಅವರೇ, ಹೆಸರು ಕಾಳು, ಕಡಲೆಕಾಳು, ಸೋಯಾ, ರಾಗಿ, ವಿನೋವ, ಕಪ್ಪು ಬಿನ್, ಶೇಂಗಾಗಳನ್ನು ಮೊಳಕೆ ಬರಿಸಿ ತಿನ್ನಬೇಕು.
ಈ ಎಲ್ಲಾ ಧಾನ್ಯಗಳನ್ನು ನೀರಿನಲ್ಲಿ ಅಥವಾ ಮೋಸರಿನಲ್ಲಿ ನೆನೆಸಿ ಮೊಳಕೆ ಬಂದ ಮೇಲೆ ಅವುಗಳನ್ನು ಸೇವಿಸಬೇಕು. ಮೊಳಕೆ ಒಡೆದ ಧಾನ್ಯಗಳಲ್ಲಿ ಲೈಂಗಿಕ ಸಾಮರ್ಥ್ಯ ವೃದ್ಧಿಸಲು ಸಹಕಾರಿಯಾಗುತ್ತದೆ. ಮೊಳಕೆ ಒಡೆದ ಕಾಳಿನಲ್ಲಿ ಪೋಷಕಾಂಶ ಸಮೃದ್ಧವಾಗಿರುತ್ತದೆ ಹಾಗೂ ತೂಕ ಕಡಿಮೆ ಮಾಡಿಕೊಳ್ಳುವುದು ಉತ್ತಮ.ಇನ್ನು ಕಾಳುಗಳು ರಕ್ತ ಸಂಚಾರವನ್ನು ಸರಾಗವಾಗಿ ಮಾಡಲು ನೆರವಾಗುತ್ತದೆ.ರಕ್ತದಲ್ಲಿ ಕೆಂಪು ಕಣಗಳನ್ನು ಹೆಚ್ಚಿಸುವುದಕ್ಕೆ ಸಹಾಯ ಮಾಡುತ್ತದೆ. ಇದರಲ್ಲಿ ವಿಟಮಿನ್ ಎ ಸಮೃದ್ಧವಾಗಿರುವುದರಿಂದ ಕಣ್ಣಿನ ಆರೋಗ್ಯಕ್ಕೆ, ದೃಷ್ಟಿ ಸುಧಾರಿಸಲು ನೆರವಾಗುತ್ತದೆ.
ಮೊಳಕೆ ಒಡೆದ ಕಾಳುಗಳ ಸೇವನೆಯಿಂದ ಹೊಸ ನರಗಳು ಬೇಗ ಬೆಳವಣಿಗೆಯನ್ನು ಪಡೆದುಕೊಳ್ಳುತ್ತವೆ.ಇವು ಹೆಚ್ಚು ಆಮ್ಲಜನಕವನ್ನು ರಕ್ತದ ಮೂಲಕ ದೇಹದ ವಿವಿಧ ಅಂಗಗಳಿಗೆ, ಜೀವಕೋಶಗಳಿಗೆ ತಲುಪಿಸಲು ನೆರವಾಗುತ್ತದೆ. ಇದರಲ್ಲಿ ವಿಟಮಿನ್ ಸಿ ಅಂಶ ಹೆಚ್ಚಾಗಿರುವುದರಿಂದ ರೋಗನಿರೋಧಕ ಶಕ್ತಿಯನ್ನು ಹೆಚ್ಚಿಸುತ್ತದೆ. ಕಾಲುಗಳನ್ನು ನೆನೆಸಿ ಬೇಯಿಸಿ ತಿನ್ನುವುದರಿಂದ ಕಿಣ್ವ ಪ್ರತಿರೋಧಕ ಚಟುವಟಿಕೆಗಳನ್ನು ನಿಯಂತ್ರಿಸುತ್ತದೆ.ಮುಖ್ಯವಾಗಿ ಯಾವುದೇ ಆಹಾರವನ್ನು ನಿಯಮಿತವಾಗಿ ಸೇವಿಸಿ ಆರೋಗ್ಯವನ್ನು ಕಾಪಾಡಿಕೊಳ್ಳಬೇಕು.