ಕನ್ನಡ ಚಿತ್ರರಂಗದಲ್ಲಿ ಇತ್ತೀಚೆಗೆ ಹಲವಾರು ಕಲಾವಿದರನ್ನು ಕಳೆದುಕೊಳ್ಳುತ್ತಿರುವ ಬಗ್ಗೆ ಎಲ್ಲರಿಗೂ ತಿಳಿದಿರುವ ವಿಚಾರ ಇನ್ನೂ ಮೊನ್ನೆ ಮೊನ್ನೆ ಹಾಸ್ಯ ನಟ ಆಗಿ ಅಭಿನಯಿಸಿ ತನ್ನ ಅಭಿಮಾನಿಗಳಲ್ಲಿ ತಮ್ಮ ನಟನೆಯನ್ನು ಛಾಪು ಮೂಡಿಸಿರುವ ನಟ ಮೋಹನ್ ಜುನೇಜ ಇವರು ಇತ್ತೀಚೆಗೆ ಆರೋಗ್ಯದಲ್ಲಿ ಏರುಪೇರು ಆದ ಪರಿಣಾಮ ಹೆಸರುಘಟ್ಟ ಹತ್ತಿರ ಇರುವ ಸಪ್ತಗಿರಿ ಆಸ್ಪತ್ರೆಗೆ ದಾಖಲು ಆಗಿದ್ದು ಚಿಕಿತ್ಸೆ ಫಲಕಾರಿಯಾಗದೆ ತಮ್ಮ ಕೊನೆಯುಸಿರು ಎಳೆದಿದ್ದಾರೆ ಇವರ ಆತ್ಮಕ್ಕೆ ಚಿರಶಾಂತಿ ಸಿಗಲಿ ಎಂದು ಸಿನಿ ರಂಗದಲ್ಲಿ ಪ್ರಾರ್ಥಿಸಿದ್ದಾರೆ.
ಮೋಹನ್ ಅವರು ಒಬ್ಬ ಪ್ರತಿಭಾವಂತ ನಟ ಎನ್ನುವುದರಲ್ಲಿ ಎರಡು ಮಾತಿಲ್ಲ ಎಂತಹ ಸ್ಕ್ರಿಪ್ಟ್ ಇದ್ದರೂ ಅದನ್ನು ಅರೆದು ಕುಡಿದು ಅಭಿನಯ ಮಾಡಿ ತಮ್ಮ ಪಾತ್ರ ಎರಡು ನಿಮಿಷ ಇದ್ದರೂ ಜನರ ಮನದಲ್ಲಿ ಅವರ ಪಾತ್ರವನ್ನು ಅಚ್ಚೋತ್ತುವಂತೆ ಮಾಡಿದ್ದಾರೆ ಇನ್ನೂ ಕೆಜಿಎಫ್ ಒಂದರಲ್ಲಿ ಗ್ಯಾಂಗ್ ಕಟ್ಕೊಂಡು ಬರೋನು ಗ್ಯಾಂಗ್ ಸ್ಟಾರ್ ಆದರೆ ಒಬ್ಬನೇ ಬರೊನು ಮ್ಯಾನ್ ಸ್ಟಾರ್ ಎಂಬ ಇವರ ಡೈಲಾಗ್ ಇಂದಿಗೂ ಪ್ರಸಿದ್ದಿ ಪಡೆದಿದೆ ಇನ್ನೂ ಹಲವಾರು ಸಿನಿಮಾದಲ್ಲಿ ನಟಿಸಿದ್ದಾರೆ
ಇವರ ಬೆಂಗಳೂರು ಉತ್ತರ ಭಾಗದಲ್ಲಿ ತಮ್ಮೇನಹಳ್ಳಿ ಅಲ್ಲಿ ತಮ್ಮ ನಿವಾಸದಲ್ಲಿ ಅವರ ಪಾರ್ಥಿವ ಶರೀರವನ್ನು ಜನರ ಅಂತಿಮ ದರ್ಶನ ಇಟ್ಟಿದ್ದು ಅವರ ಮನೆಯವರ ಆಕ್ರಂದನ ಮುಗಿಲು ಮುಟ್ಟಿತ್ತು ಅವರ ಇಬ್ಬರು ಗಂಡು ಮಕ್ಕಳು ಹಾಗೂ ಪತ್ನಿ ಮತ್ತು ತನ್ನ ತಾಯಿಯ ಜೊತೆ ವಾಸವಾಗಿದ್ದರು ಇನ್ನು ಮಗ ಅಶ್ವಿನ್ ಹಾಗೂ ಅಕ್ಷಯ ಇಬ್ಬರು ಗಂಡು ಮಕ್ಕಳು ಅಕ್ಷಯ ಒಬ್ಬ ಛಾಯಾಗ್ರಾಹಕ ಆಗಿದ್ದಾರೆ ಅಶ್ವಿನ್ ಕೂಡ ಒಂದು ಪ್ರೈವೇಟ್ ಕಂಪನಿ ಅಲ್ಲಿ ಕೆಲಸ ಮಾಡುತ್ತಾ ಇದ್ದಾರೆ
ಅವರು ಇತ್ತೀಚೆಗೆ ಅಷ್ಟೆ ತಮ್ಮ ಹೊಸ ಮನೆಯನ್ನು ಕಟ್ಟಿಸಿ ಗೃಹ ಪ್ರವೇಶ ಮಾಡಿದ್ದಾರೆ . ಇನ್ನು ಅವರ ಜಾತಿಯ ಪ್ರಕಾರ ಅವರ ಅಂತಿಮ ಕಾರ್ಯಗಳು ನಡೆಯಲಿದ್ದು ಅವರ ಮಗ ಅಕ್ಷಯ ಅವರು ತಮ್ಮ ತಂದೆಯ ಅಗಲಿಕೆಯ ನೋವನ್ನು ತಮಟೆಯ ಸದ್ದಿನ ಕುಣಿತಕ್ಕೆ ಕುಣಿದು ಕುಪ್ಪಳಿಸಿ ತಮ್ಮ ನೋವನ್ನು ಆಚೆ ಹಾಕಿದ್ದಾರೆ ಈ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ಸಕತ್ತು ಸುದ್ದಿ ಮಾಡಿದೆ ನಿಜ ಅಲ್ವಾ ಹೆಣ್ಣು ಮಕ್ಕಳು ಸಾಮಾನ್ಯವಾಗಿ ಕಣ್ಣೀರಿನ ಮೂಲಕ ತಮ್ಮ ನೋವನ್ನು ಕಡಿಮೆ ಮಾಡಿಕೊಳ್ಳುತ್ತಾರೆ ಆದರೆ ಗಂಡು ಮಕ್ಕಳು ಎಲ್ಲಿ ತನ್ನ ನೋವನ್ನು ಕಣ್ಣೀರಿನ ಮೂಲಕ ಆಚೆ ಹಾಕುವುದು ಅಪರೂಪ ಅಲ್ವಾ ಈ ವಿಡಿಯೋ ಅನ್ನು ನೋಡಿದವರು ಹೀಗಾದ್ರೂ ಕುಣಿತ ಮಾಡಿ ತನ್ನ ನೋವನ್ನು ಆಚೆ ಹಾಕಿ ಮತ್ತು ತನ್ನ ತಂದೆ ಇಲ್ಲ ಎನ್ನುವ ದುಃಖವನ್ನು ಕಡಿಮೆ ಆಗಲಿ ಆ ದೇವರು ಅವರ ಕುಟುಂಬಕ್ಕೆ ಶಾಂತಿ ಕರುಣಿಸಲಿ ಎಂದು ಹೇಳಿದ್ದಾರೆ
ಸಹಜವಾಗಿ ಈ ದೃಶ್ಯವನ್ನು ನೋಡಿದ ಕೂಡಲೇ ಜೋಗಿ ಸಿನಿಮಾದಲ್ಲಿ ಮಾಡಿದ ಶಿವರಾಜ್ ಕುಮಾರ ಅವರ ನಟನೆ ಕಣ್ಣೆದುರಲ್ಲಿ ಬರುವುದು ಅದರಲ್ಲೂ ಇದೆ ತರಹ ದೃಶ್ಯ ಇದ್ದು ಇಲ್ಲಿ ಅಕ್ಷಯ್ ಅವರು ಕೂಡ ಅವರ ತಂದೆಯನ್ನು ಖುಷಿ ಖುಷಿಯಾಗಿ ಕಳುಹಿಸಿ ಕೊಡುತ್ತಿದ್ದಾರೆ ಎಂದು ಅಂದಾಜಿಸಲಾಗಿದೆ ಇನ್ನು ತಮ್ಮ ಸಾವಿನ ಕೊನೆಯ ಕ್ಷಣದಲ್ಲಿ ಕೂಡ ನೇತ್ರದಾನ ಮಾಡಿ ಬೇರೆಯವರ ಬಾಳಿಗೆ ಬೆಳಕು ಆಗಿದ್ದಾರೆ ಇವರ ಈ ಕಾರ್ಯಕ್ಕೆ ನಮ್ಮೆಲ್ಲರ ಕಡೆಯಿಂದ ದೊಡ್ಡ ಸಲಾಂ.