ಇತ್ತೀಚಿನ ದಿನಗಳಲ್ಲಿ ಮೊಬೈಲ್ ಎಂಬುದು ಎಲ್ಲರ ಜೀವನದ ಬಹಳ ಪ್ರಮುಖವಾದ ವಸ್ತುವಾಗಿದೆ. ಮೊದಲೆಲ್ಲ ಕೇವಲ ಶ್ರೀಮಂತರ ಕೈಗಳಲ್ಲಿ ಮಾತ್ರ ನಾವು ಮೊಬೈಲ್ ಗಳನ್ನ ಕಾಣಬಹುದಾಗಿತ್ತು ಆದರೆ ಈಗ ಕಾಲ ಬದಲಾಗಿದೆ ಇಂದಿನ ದಿನಗಳಲ್ಲಿ ಆಳಿನಿಂದ ಅರಸನವರೆಗೆ ಎಲ್ಲರ ಬಳಿಯೂ ನಾವು ಮೊಬೈಲ್ ಫೋನ್ ಅನ್ನು ಕಾಣಬಹುದು. ಈ ಒಂದು ಮೊಬೈಲ್ ಫೋನ್ ಅನ್ನು ನಾವು ಕೊಂಡುಕೊಳಲು ಹೆಚ್ಚು ಹಣವನ್ನ ನೀಡಿರುತ್ತೇವೆ, ಇಂತಹ ಸಮಯದಲ್ಲಿ ಆಕಸ್ಮಿಕವಾಗಿ ನಮ್ಮ ಮೊಬೈಲ್ ಫೋನ್ ಕಳೆದು ಹೋದರೆ ಮನಸಿಗೆ ತುಂಬಾ ಬೇಸರವಾಗುತ್ತದೆ ಆದರೆ ಇನ್ನು ಮುಂದೆ ಬೇಸರ ಪಡುವ ಅಗತ್ಯವಿಲ್ಲ.
ನೀವು ಕಳೆದುಕೊಂಡಿರುವ ಮೊಬೈಲ್ ಫೋನ್ ಅನ್ನು ಕೇವಲ ಐದು ನಿಮಿಷದಲ್ಲಿಯೇ ಅದು ಎಲ್ಲಿದೆ ಎಂಬುದನ್ನ ಕಂಡುಹಿಡಿಯುವಷ್ಟು ನಮ್ಮ ತಂತ್ರಜ್ಞಾನ ಮುಂದುವರೆದಿದೆ. ಬನ್ನಿ ಹಾಗಾದರೆ ಕಳೆದು ಹೋದ ಮೊಬೈಲ್ ಫೋನ್ ಅನ್ನು ಹೇಗೆ ಕಂಡುಹಿಡಿಯುವುದು ಎಂಬುದನ್ನ ತಿಳಿಯೋಣ
ಮೊದಲು ನಿಮ್ಮ ಮೊಬೈಲ್ ಫೋನ್ ನಲ್ಲಿ ಪ್ಲೇ ಸ್ಟೋರ್ ಗೆ ಹೋಗಿ ಅಲ್ಲಿ ಲಾಕ್ ವಾಚ್ ಎಂಬ ಅಪ್ಲಿಕೇಶನ್ ಅನ್ನು ಡೌನ್ಲೋಡ್ ಮಾಡಿಕೊಳ್ಳಿ. ನೀವು ಡೌನ್ಲೋಡ್ ಮಾಡಿದ ಅಪ್ಲಿಕೇಶನ್ ಅನ್ನು ಓಪನ್ ಮಾಡಿದ ಕೂಡಲೇ ನಿಮಗೆ ಜನರಲ್ ಮತ್ತು ಪ್ರೀಮಿಯಂ ಎಂಬ ಎರಡು ಆಪ್ಷನ್ ಕಾಣುತ್ತೆ. ನೀವು ಅದರಲ್ಲಿ ಜನರಲ್ ಗೆ ಬಂದರೆ ಅದರಲ್ಲಿ ನಿಮಗೆ ಸೆಂಡ್ ಅಲರ್ಟ್ ಈ ಮೇಲ್ ಎಂಬ ಒಪ್ಶನ್ ಕಾಣತ್ತೆ ಅದು ಆಫ್ ಆಗಿರತ್ತೆ ಅದನ್ನ ನೀವು ಆನ್ ಮಾಡಿಕೊಳ್ಳಬೇಕು.
ಅದಾದ ನಂತರ ಆಕ್ಟಿವೇಟ್ ದಿಸ್ ಡಿವೈಸ್ ಅಡ್ಮಿನ್ ಆಪ್ ಎಂದು ಕೇಳುತ್ತದೆ ಅದನ್ನ ಆಕ್ಟಿವೇಟ್ ಮಾಡಿಕೊಳ್ಳಿ, ನಂತರ ಇಂಪಾರ್ಟೆಂಟ್ ವಾರ್ನಿಂಗ್ ಎಂದು ಕೇಳುತ್ತದೆ ಅದರಲ್ಲಿ ನೆಕ್ಸ್ಟ್ ಎಂದು ಕ್ಲಿಕ್ ಮಾಡಿ, ಆಗ ನಿಮ್ಮ ಜಿ ಮೇಲ್ ಅಕೌಂಟ್ ಕಾಣತ್ತೆ ಅದನ್ನ ಸೆಲೆಕ್ಟ್ ಮಾಡಿ ಓಕೆ ಮೇಲೆ ಕ್ಲಿಕ್ ಮಾಡಿದರೆ ಮುಗಿತು, ನೀವು ನಿಮ್ಮ ಮೊಬೈನಲ್ಲಿ ಯಾವಾಗಲು ಈ ಅಪ್ಲಿಕೇಶನ್ ಅನ್ನ ಇಟ್ಟುಕೊಂಡಿರಿ, ಏಕೆಂದರೆ ನಿಮ್ಮ ಮೊಬೈಲ್ ಫೋನ್ ಯಾವಾಗ ಕಳೆದು ಹೋಗತ್ತೆ ಎಂಬುದು ಯಾರಿಗೂ ಸಹ ತಿಳಿದಿರುವುದಿಲ್ಲ.
ಈಗ ನಿಮ್ಮ ಮೊಬೈಲ್ ಫೋನ್ ಕಳೆದು ಹೋದ ಕೂಡಲೇ ನೀವು ನಿಮ್ಮ ಬಳಿಇರುವ ಇನ್ನೊಂದು ಮೊಬೈಲ್ ಫೋನ್ ಅಥವಾ ನಿಮಗೆ ಗೊತ್ತಿರುವವರ ಮೊಬೈಲ್ ಫೋನ್ ಬಳಸಿಕೊಳ್ಳಿ ಅವರ ಮೊಬೈಲ್ ಫೋನ್ ಅಲ್ಲಿ ನೀವು ನಿಮ್ಮ ಜಿ ಮೇಲ್ ಅಕೌಂಟ್ ಅನ್ನು ಲಾಗಿನ್ ಮಾಡಿ ಆಗ ನಿಮ್ಮ ಮೇಲ್ ಗೆ ಒಂದು ಮೇಲ್ ಬಂದಿರತ್ತೆ ಲಾಕ್ ವಾಚ್ ಎಂದು, ಅದನ್ನ ಓಪನ್ ಮಾಡಿ ಅದರಲ್ಲಿ ನಿಮ್ಮ ಫೋನ್ ಎಲ್ಲಿದೆ ಹಾಗೂ ಯಾರ ಬಳಿ ಇದೆ ಎಂಬುದರ ಫೋಟೋ ಸಹ ತೋರಿಸುತ್ತದೆ. ನಿಮ್ಮ ಆತ್ಮೀಯ ಸ್ನೇಹಿತರಿಗೂ ತಿಳಿಸಿ ಇದರ ಉಪಯೋಗವನ್ನು ಪಡೆದುಕೊಳ್ಳಲಿ.