ಮೊಬೈಲ್ ನಲ್ಲಿ ಸಾಕಷ್ಟು ಆಪ್ ಗಳನ್ನು ನೋಡುತ್ತೇವೆ ಯಾವ ಸಮಸ್ಯೆ ಇದ್ದರೂ ಅದಕ್ಕೆ ಉತ್ತರವಾಗಿ ಮೊಬೈಲ್ ಆಪ್ ಬಳಸಬಹುದು. ಬಹಳಷ್ಟು ಜನರಿಗೆ ಮೊಬೈಲ್ ನಲ್ಲಿ ಕನ್ನಡ ಟೈಪಿಂಗ್ ಮಾಡುವುದು ಕಷ್ಟ ಆದರೆ ಅವರಿಗೆ ಕನ್ನಡದಲ್ಲಿ ಮೆಸೇಜ್ ಮಾಡಬೇಕು ಎಂದು ಇರುತ್ತದೆ ಅಥವಾ ಯಾವುದಾದರೂ ಕೆಲಸಕ್ಕೆ ಕನ್ನಡ ಅಕ್ಷರಗಳು ಬೇಕಾಗುತ್ತದೆ. ಮೊಬೈಲ್ ನಲ್ಲಿ ಒಂದು ಆಪ್‌ ಮೂಲಕ ಇಂಗ್ಲೀಷ್ ಅಕ್ಷರಗಳಲ್ಲಿ ಏನಾದರೂ ಬರೆದು ಸ್ಪೇಸ್ ಕೊಟ್ಟರೆ ಅದು ಕನ್ನಡದಲ್ಲಿ ಟೈಪ್ ಆಗುತ್ತದೆ ಈ ಆಪ್ ನ್ನು ಹೇಗೆ ಡೌನ್ಲೋಡ್ ಮಾಡುವುದು ಎಂಬ ಮಾಹಿತಿಯನ್ನು ಈ ಲೇಖನದ ಮೂಲಕ ತಿಳಿಯೋಣ.

ಕನ್ನಡ ಟೈಪಿಂಗ್ ಮಾಡಲು ಸುಲಭವಾಗುವ ಆಪ್ ಇದೆ. ಈ ಅಪ್ಲಿಕೇಷನ್ ನಲ್ಲಿ ಇಂಗ್ಲೀಷ್ ನಲ್ಲಿ ಟೈಪ್ ಮಾಡಿದರೆ ಕನ್ನಡ ಭಾಷೆಗೆ ಅನುವಾದ ಮಾಡುತ್ತದೆ. ನಮ್ಮ ಮೊಬೈಲ್ ನಲ್ಲಿ ಗೂಗಲ್ ಪ್ಲೇಸ್ಟೋರ್ ನಲ್ಲಿ ಕನ್ನಡ ಟ್ರಾನ್ಸಲೇಟರ್ ಎಂದು ಟೈಪ್ ಮಾಡಿ ಸರ್ಚ್ ಮಾಡಬೇಕು ಆಗ ಹಲವು ಅಪ್ಲಿಕೇಶನ್ ಬರುತ್ತದೆ ಅದರಲ್ಲಿ ಆ ಎಂಬ ಸಿಂಬಾಲ್ ಇರುವ ಅಪ್ಲಿಕೇಷನ್ ಅನ್ನು ಡೌನ್ಲೋಡ್ ಮಾಡಬೇಕು ನಂತರ ಇನ್ಸಟಾಲ್ ಮಾಡಬೇಕು ಅದನ್ನು ಓಪನ್ ಮಾಡಿದಾಗ ವಿಂಡೋ ಓಪನ್ ಆಗುತ್ತದೆ ಅಲ್ಲಿ ಟೈಪ್ ಹಿಯರ್ ಎಂದು ಇರುತ್ತದೆ ಅಲ್ಲಿ ಏನೇ ಟೈಪ್ ಮಾಡಿ ಸ್ಪೇಸ್ ಕೊಟ್ಟರೆ ಅದು ಕನ್ನಡ ಅಕ್ಷರಗಳಲ್ಲಿ ಟೈಪ್ ಆಗುತ್ತದೆ.

ಸ್ಪೆಲ್ಲಿಂಗ್ ಮಿಸ್ಟೇಕ್ ಆದರೆ ಬ್ಯಾಕ್ ಬಂದರೆ ಸರಿಯಾದ ವರ್ಡ್ ಇರುತ್ತದೆ ಅದನ್ನು ಸೆಲೆಕ್ಟ್ ಮಾಡಬೇಕು. ಇದರಲ್ಲಿ ಟೈಪ್ ಮಾಡಿ ಸೆಲೆಕ್ಟ್ ಮಾಡಿ ಮೇಲ್ಗಡೆ ಕಾಪಿ ಎಂದು ಇರುತ್ತದೆ ಅದನ್ನು ಕ್ಲಿಕ್ ಮಾಡಿದರೆ ಎಲ್ಲಿ ಬೇಕಾದರೂ ಕಾಪಿ ಪೇಸ್ಟ್ ಮಾಡಬಹುದು. ಈ ಅಪ್ಲಿಕೇಷನ್ ಇಂದ ಬಹಳ ಉಪಯೋಗವಾಗುತ್ತದೆ. ಕನ್ನಡ ಟೈಪಿಂಗ್ ಬರದೆ ಇದ್ದವರು ತಮ್ಮ ಮೆಸೇಜ್ ಗಳನ್ನು ಕನ್ನಡದಲ್ಲಿ ಟೈಪ್ ಮಾಡಲು ಸಾಧ್ಯ. ಕಥೆ, ಕವನ ಬರೆಯುವ ಹವ್ಯಾಸ ಇದ್ದವರು ಕನ್ನಡ ಟೈಪಿಂಗ್ ಬರದೆ ಇದ್ದರೂ ಇಂಗ್ಲೀಷ್ ನಲ್ಲಿ ಟೈಪ್ ಮಾಡಿ ಸ್ಪೇಸ್ ಕೊಟ್ಟರೆ ಸಾಕು ಕನ್ನಡಕ್ಕೆ ಅನುವಾದವಾಗಿ ಬರುತ್ತದೆ. ಹೀಗೆ ಯಾವ ಕೆಲಸವಾದರೂ ಮೊಬೈಲ್ ಆಪ್ ಬಳಸಿ ಮಾಡಬಹುದು. ಈ ಆಪ್ ಡೌನ್ಲೋಡ್ ಮಾಡಿಕೊಂಡು ಕನ್ನಡದಲ್ಲಿ ನೀವೆ ಟೈಪ್ ಮಾಡಿಕೊಳ್ಳಬಹುದು. ಈ ಮಾಹಿತಿಯನ್ನು ತಪ್ಪದೆ ಎಲ್ಲರಿಗೂ ತಿಳಿಸಿ.

WhatsApp Group Join Now
Telegram Group Join Now

Leave a Reply

Your email address will not be published. Required fields are marked *

error: Content is protected !!