ಮನುಷ್ಯನ ನಿತ್ಯ ಜೀವನದಲ್ಲಿ ಕನ್ನಡಿಯು ಒಂದು ಅವಿಭಾಜ್ಯ ಅಂಶವಾಗಿದೆ ಯಾಕಂದ್ರೆ ಕನ್ನಡಿ ಮನುಷ್ಯನಿಗೆ ತೀರ ಹತ್ತಿರವಾದ ಒಂದು ವಸ್ತುವಾಗಿದೆ, ಕನ್ನಡಿಯು ಇಲ್ಲದ ಜಗತ್ತನ್ನು ಇಂದು ಊಹಿಸಿಕೊಳ್ಳಲು ಸಾಧ್ಯವೇ ಇಲ್ಲ. ಕನ್ನಡಿ ಇಲ್ಲದ ಮನೆಯೇ ಇಲ್ಲ ಯಾಕಂದ್ರೆ ಕನ್ನಡಿಗೆ ನಮ್ಮಲ್ಲಿ ಅಷ್ಟು ಪ್ರಾಮುಖ್ಯತೆ ಇದೆ ಆದ್ದರಿಂದಲೇ ಇಂದಿಗೂ ಎಲ್ಲರ ಮನೆಗಳಲ್ಲಿ ತುಂಬಾ ದೊಡ್ಡದಾದ ಅಥವಾ ಚಿಕ್ಕದಾದ ಕನ್ನಡಿಗಳನ್ನು ಇಟ್ಟಿರುತ್ತಾರೆ. ಕನ್ನಡಿಯು ತಮ್ಮನ್ನು ತಾವು ಅಂದರೆ ತಮ್ಮ ಪ್ರತಿ ಬಿಂಬವನ್ನು ತಾವೇ ನೋಡಿಕೊಳ್ಳುವ ಸಾಧನವಾಗಿದೆ ಅದರಲ್ಲಿಯೂ ಹೆಣ್ಣು ಮಕ್ಕಳು ತಮ್ಮ ಶ್ರುಂಗಾರಕ್ಕಾಗಿ ಗಂಟೆಗಟ್ಟಲೆ ತಾವು ಕನ್ನಡಿಯ ಮುಂದೆ ನಿಲ್ಲುವುದರಲ್ಲಿ ಆಶ್ಚರ್ಯವೇನಿಲ್ಲ. ಗಾಜಿನಿಂದಾದ ಈ ಕನ್ನಡಿಯು ಮನೆಯಲ್ಲಿ ಒಡೆಯಬಾರದು ಅದೊಂದು ಅಪಶಕುನ ಅಂತಹ ಒಡೆದ ಕನ್ನಡಿಯನ್ನು ಮನೆಯಲ್ಲಿ ಇಡಬಾರದು ಎಂಬಿತ್ಯಾದಿ ಮಾತುಗಳು ನಮ್ಮಲ್ಲಿ ಹಾಸುಹೊಕ್ಕಾಗಿವೆ, ಕನ್ನಡಿಯು ಲಕ್ಷ್ಮಿ ಸ್ವರೂಪ ಯಾರ ಮನೆಯಲ್ಲಿ ಕನ್ನಡಿ ಚೆನ್ನಾಗಿರುತ್ತದೆಯೋ ಅವರ ಮನೆ ಅಭಿವೃದ್ದಿಯ ಪಥದಲ್ಲಿ ಸಾಗುತ್ತದೆ. ಹಾಗಾಗಿ ಕನ್ನಡಿಯನ್ನು ಸ್ವಚ್ಚಂದವಾಗಿ ಇಟ್ಟುಕೊಳ್ಳುವುದು ನಮ್ಮ ಧರ್ಮ ಹಾಗೆಯೇ ವಾಸ್ತು ಶಾಸ್ತ್ರದ ಪ್ರಕಾರ ಕನ್ನಡಿಯನ್ನು ಈ ದಿಕ್ಕಿನಲ್ಲೇ ಇಡಬೇಕು ಈ ದಿಕ್ಕಿನಲ್ಲಿ ಇಡಬಾರದು ಯಾವ ದಿಕ್ಕಿನಲ್ಲಿ ಇಡುವುದರಿಂದ ಒಳ್ಳೆಯದು ಯಾವ ದಿಕ್ಕಿನಲ್ಲಿ ಇರಿಸುವುದು ಕೆಟ್ಟದ್ದು ಎಂಬುದರ ಬಗ್ಗೆ ತಿಳಿಯೋಣ.
ನಿಮ್ಮ ಮನೆಯಲ್ಲಿ ಯಾವುದೇ ಕಾರಣಕ್ಕೂ ದಕ್ಷಿಣ ದಿಕ್ಕಿನ ಗೋಡೆಗೆ ಕನ್ನಡಿಯನ್ನು ಹಾಕುವುದು ಉಚಿತವಲ್ಲ ನಿಮ್ಮ ಮನೆಯಲ್ಲೇನಾದರೂ ಕನ್ನಡಿಯನ್ನು ಧಕ್ಷಿಣ ದಿಕ್ಕಿನ ಗೋಡೆಗೆ ಹಾಕಲಾಗಿದ್ದಲ್ಲಿ ಅದನ್ನು ಬದಲಾಯಿಸುವುದು ಉತ್ತಮ ಹೀಗೆ ದಕ್ಷಿಣ ದಿಕ್ಕಿಗೆ ಕನ್ನಡಿಯನ್ನು ಹಾಕುವುದರಿಂದ ಮನೆಯಲ್ಲಿ ಕಲಹಗಳು ಹೆಚ್ಚಾಗುತ್ತವೆ, ಮತ್ತು ಮನೆಯಲಿ ಆರ್ಥಿಕ ಸಮಸ್ಯೆ ತಾಂಡವವಾಡಲು ಶುರು ಮಾಡುತ್ತದೆ. ಮನೆಯಲ್ಲಿ ಅಥವಾ ಹೊರಗೆ ನಿಮ್ಮ ಏಳಿಗೆ ಕುಂಟಿತವಾಗುವುದಂತು ಖಂಡಿತ ಅದೇ ರೀತಿ ಕನ್ನಡಿಯನ್ನು ತಾವು ಮಲಗುವ ಕೊಣೆಯಲ್ಲಿ ಇಡುವುದೂ ಸಹ ಸೂಕ್ತವಲ್ಲ, ಇದರಿಂದ ದಂಪತಿಗಳ ನಡುವಣ ಕಲಹಗಳು ಹೆಚ್ಚಾಗುತ್ತವೆ ಮತ್ತು ಕನ್ನಡಿಯ ಮೇಲೆ ನೀವು ಇಟ್ಟುಕೊಂಡಿರುವ ಹಣೆ ಬೊಟ್ಟನ್ನು ಕೂಡ ಇಡಬಾರದು ಹೀಗೆ ಮಾಡುವುದರಿಂದ ಮಹಾಲಕ್ಷ್ಮೀ ಕೋಪಗೊಳ್ಳುತ್ತಾಳೆ ಅಲ್ಲದೇ ಮನೆಯ ಅಭಿವೃದ್ಧಿ ಕುಂಟಿತವಾಗುತ್ತದೆ.
ಆದರೆ ವಾಸ್ತುಶಾಸ್ತ್ರದ ಪ್ರಾಕಾರ ನಿಮ್ಮ ಮನೆಗಳಲ್ಲಿ ಕನ್ನಡಿಯನ್ನು ಈಶಾನ್ಯ ದಿಕ್ಕಿನಲ್ಲಿ ಇರಿಸುವುದು ಬಹಳ ಸೂಕ್ತ ಆದರೆ ಯಾವುದೇ ಕಾರಣಕ್ಕೂ ಮಂಗಳವಾರ ಮತ್ತು ಶುಕ್ರವಾರ ಕನ್ನಡಿಯನ್ನು ಅದರ ಜಾಗವನ್ನು ಬದಲಾಯಿಸಬೇಕು ಈ ಎರಡು ವಾರಗಳನ್ನು ಹೊರತುಪಡಿಸಿ ಬೇರೆಯ ದಿನಗಳಲ್ಲಿ ನೀವು ಕನ್ನಡಿಯ ಜಾಗವನ್ನು ಬದಲಿಸಬಹುದು ಹೀಗೆ ಮಾಡುವುದರಿಂದ ನಿಮ್ಮ ಮನೆಯಲ್ಲಿ ಉಂಟಾಗುವ ಬದಲಾವಣೆಗಳನ್ನು ನೀವೇ ನೋಡಬಹುದು.