ಸಾಮಾನ್ಯವಾಗಿ ಸಮಾಜದ ಪ್ರಾಭಾವ ಕುಟುಂಬದ ವಾತಾವರಣ ನೀವು ಪಡೆದುರುವಂತ ವಿದ್ಯೆ ಗಳಿಸಿರುವ ಸಂಸ್ಕೃತಿ ಹಾಗೂ ಎಲ್ಲಕ್ಕಿಂತ ಮಿಗಿಲಾಗಿ ತಾಯಿಯ ರಕ್ತದಿಂದಾಗಿ ಮಾನವನ ಸ್ವಾಭಾವ ಮತ್ತು ಅವನ ನಡತೆಗಳ ನಿರ್ಮಾಣವಾಗುತ್ತದೆ. ಜ್ಯೋತಿಷ್ಯ ಶಾಸ್ತ್ರದ ಪ್ರಾಕಾರ ವ್ಯಕ್ತಿಯು ಜನಿಸಿರುವ ನಕ್ಷತ್ರ ಮತ್ತು ವಾರಗಳ ಪ್ರಭಾವವೂ ಕೂಡ ಅವನ ಗುಣಗಳ ಮೇಲೆ ಇರುತ್ತದೆ, ಅವನ ನಡವಳಿಕೆಯಲ್ಲಿ ಕಾಣುತ್ತದೆ ಹಾಗೆಯೇ ಯಾವ ಯಾವ ವಾರಗಳಲ್ಲಿ ಹುಟ್ಟಿದವರ ಗುಣಗಳು ನಡತೆ ಸ್ವಭಾವಗಳು ಹೇಗಿರುತ್ತದೆ ಎಂಬುದರ ಬಗ್ಗೆ ನಾವು ಕಲೆಹಾಕಿದ ಮಾಹಿತಿಯನ್ನು ನಿಮ್ಮ ಮುಂದೆ ಇಡುತ್ತೇವೆ ಬನ್ನಿ.

ಭಾನುವಾರ ನೀವು ಜನಿಸಿದವರಾಗಿದ್ದಾರೆ ನೀವು ಅತ್ಯಂತ ಸುಖದಿಂದ ನಿಮ್ಮ ಜೀವನವನ್ನು ನಿಬಾಯಿಸುತ್ತಿರಿ, ನೀವು ಅತ್ಯಂತ ಉತ್ಸಾಹ ಹೊಂದಿದ ವ್ಯಕ್ತಿಗಳಾಗಿರುತ್ತೀರಿ ನೀವು ಒಂದು ರೀತಿಯ ಉತ್ಸಾಹದ ಬುಗ್ಗೆ ಎಂದೇ ಹೇಳಬಹುದು ನಿಮ್ಮ ಮನಸ್ಸು ಯಾವಾಗಲೂ ಸರಳವಾಗಿ ನ್ಯಾಯಶೀಲ ಹಾಗೂ ಧರ್ಮ ಮಾರ್ಗದಲ್ಲಿ ನಿಮ್ಮನ್ನು ನಡೆಯುವಂತೆ ಪ್ರೇರೇಪಿಸುತ್ತದೆ. ನೀವು ಮನಸ್ಸಿನಲ್ಲಿ ಯಾವ ಕಳಂಕವೂ ಇಲ್ಲದ ನಿಷ್ಕಳಂಕದಿಂದ ಕೂಡಿದ ವ್ಯಕ್ತಿಗಳಾಗಿರುತ್ತೀರಿ ಜೀವನದಲ್ಲಿ ನೀವು ಉತ್ತಮವಾದ ಆರೋಗ್ಯವನ್ನು ಹೊಂದಿರುತ್ತೀರಿ.

ಇನ್ನು ಸೋಮವಾರ ದಿನದಂದು ನೀವು ಜನಿಸಿದವರಾಗಿದ್ದಲ್ಲಿ ನೀವು ಶಾಂತ ಸ್ವಭಾವದವರು ಕಳಂಕರಹಿತರು ಆಗಿರುತ್ತೀರಿ, ನಿಮಗೆ ಇಂದು ಬೇಕಾಗಿದ್ದುದ್ದು ನಾಳೆ ಬೇಡವಾಗಬಹುದು ನೀವು ಮಕ್ಕಳ ಪ್ರೇಮಿಗಳಾಗಿರುತ್ತಿರಿ ಜೀವನದಲ್ಲಿ ಗಳಿಸುವ ಹಂಬಲ ತುಂಬಿದ ವ್ಯಕ್ತಿಗಳಾಗಿರುತ್ತಿರಿ. ನೀವು ದಾನ ಧರ್ಮ ಮಾಡುವ ಮನಸ್ಸುಳ್ಳವರಾಗಿರುತ್ತಿರಲ್ಲದೆ ಚಂಚಲ ಸ್ವಭಾವದವರೂ ಆಗಿರುತ್ತೀರಿ.

ಮಂಗಳವಾರ ನಿಮ್ಮ ಜನ್ಮ ದಿನವಾಗಿದ್ದಾರೆ ನೀವು ಸೋಮಾರಿಗಳಂತೆ ಕೈ ಕಟ್ಟಿ ಕೂರುವವರಲ್ಲ ಹಿಡಿದ ಕೆಲವನ್ನು ಮುಗಿಸಿಯೇ ತೀರುತ್ತೇನೆಂಬ ಹಂಬಲ ನಿಮ್ಮಲ್ಲಿರುತ್ತದೆ, ಯಾವ ಕೆಲಸವೇ ಆಗಲಿ ಕೆಟ್ಟದ್ದಾಗಲಿ ಅಥವಾ ಒಳ್ಳೆಯದೇ ಆಗಲಿ ಒಮ್ಮೆ ನಿಮ್ಮ ಮನಸ್ಸಿನಲ್ಲಿ ಅದು ಬಂತೆಂದರೆ ನೀವು ಅದನ್ನು ಮುಗಿಸದೆ ಬಿಡುವವರಲ್ಲ. ನೀವು ಹಟಮಾರಿಗಳಾಗಿರುತ್ತೀರಾದರು ಬುದ್ಧಿವಂತಿಕೆಯಿಂದ ಸಮಸ್ಯೆಗಳಿಗೆ ಪರಿಹಾರ ಕಂಡುಕೊಳ್ಳುವಲ್ಲಿ ನೀವು ನಿಸ್ಸೀಮರು.

ಇನ್ನೂ ಬುಧವಾರ ಜನಿಸಿದವರು ಆಟ ನೋಟ ಸಿನಿಮಾ ನಾಟಕ ಸಂಗೀತ ಮನರಂಜನೆ ಚರ್ಚೆ ಹರಟೆ ಇವುಗಳೆ ಮೊದಲಾದ ನಿಮ್ಮ ಗುಣಗಳಾಗಿರುತ್ತವೆ ನೀವು ಎಲ್ಲಿಗೇ ಹೋದರೂ ಯಾವ ಕೆಲಸದಲ್ಲದರೂ ಸರಿಯೇ ಅಲ್ಲಿ ನಿಮ್ಮ ಪ್ರೌಡಿಮೆಯ ಪ್ರಾಭವ ಇರುತ್ತದೆ ನೀವು ನೈಸರ್ಗಿಕವಾಗಿ ರಸಿಕರೂ ಸುಖಭೋಗಿಗಳು ಆಗಿರುವುದರಿಂದ, ನಿಮ್ಮ ದೇಹದ ಸುಸ್ಥಿತ್ಜಿಯನ್ನು ಕಾಯ್ದುಕೊಳ್ಳುವುದು ಬಹುಶಃ ಕಷ್ಟವಾಗಬಹುದು. ಚಂಚಲತೆ ನಿಮ್ಮ ಹುಟ್ಟುಗುಣವಾಗಿರುತ್ತದೆ ಅನಾರೋಗ್ಯ ನಿಮ್ಮನ್ನು ಜೀವನದುದ್ದಕ್ಕೂ ಬಾದಿಸಲ್ಪಡುವುದು.

ಇನ್ನೂ ಗುರುವಾರ ಹುಟ್ಟಿದವರ ಬುದ್ಧಿ ಬಹಳ ಸ್ಥಿರವಾಗಿರುತ್ತದೆ ನೀವು ತುಂಬಾ ಸಂಕೋಚದಿಂದಿರುವ ವ್ಯಕ್ತಿಗಳಾಗಿರುತ್ತೀರಿ, ಆದರಿಂದ ನೀವು ಸಂಕಷ್ಟಗಳಿಗೆ ಸಿಲುಕುತ್ತೀರಿ ನೀವು ಯಾವಾಗಲೂ ಗಂಭೀರ ಮುಖವನ್ನು ಹಾಗೂ ಗಂಭೀರದಿಂದ ಕೂಡಿದ ಸ್ವಭಾವವನ್ನು ಹೊಂದಿರುತ್ತೀರಿ. ಇತರರಿಗೆ ಸಹಾಯ ಮಾಡುವ ಗುಣ ನಿಮ್ಮಲ್ಲಿರುತ್ತದೆ ನಿಮಗೆ ಅತಿ ಆಸೆ ಎಂಬುದೇ ಇರುವುದಿಲ್ಲ ಮತ್ತು ನೀವು ಭೋಜನಪ್ರಿಯರಾಗಿರುತ್ತೀರಿ ಬಂಡವಾಳ ಹೂಡಿಕೆಯ ಉದ್ಯಮ ನಿಮಗೆ ಬಹು ಇಷ್ಟವಾದ ಕೆಲಸವಾಗಿರುತ್ತದೆ.

ಹಾಗೆಯೇ ಶುಕ್ರವಾರ ಜನಿಸಿದವರು ಕಲಾವಿದರು ಕೀರ್ತಿಶಾಲಿಗಳು ಮತ್ತು ಸ್ಥಿರ ಮನಸ್ಸುಳ್ಳವರೂ ಆಗಿರುತ್ತೀರಿ ಪ್ರತಿಯೊಂದು ಪ್ರಾಣಿಯನ್ನು ನೀವು ಪ್ರೀತಿಯಿಂದ ಕಾಣಿತ್ತಿರಿ, ನಿಮ್ಮ ಸ್ನೇಹಿತರು ಮಡದಿ ಮಕ್ಕಳು ನಿಮ್ಮನ್ನು ಬಹಳ ಪ್ರೀತಿಯಿಂದ ಕಂಡು ಆಧರಿಸುತ್ತಾರೆ. ಎಲ್ಲರ ಹೃದಯದ ಅಂತರಾಳವನ್ನು ಬಹು ಬೇಗ ಅರ್ಥ ಮಾಡುಕೊಳ್ಳಬಲ್ಲ ವಿಶೇಷ ಗುಣ ನಿಮ್ಮಲ್ಲಿರುತ್ತದೆ ನಿಮ್ಮ ಕರ್ತವ್ಯ ತಾತ್ಪರತೆ ತುಂಬಾ ಶ್ಲಾಗನೀಯವಾದದ್ದು ನಿಮ್ಮ ಸಿಟ್ಟು ಅರೆ ಗಳಿಗೆಯದ್ದು ಎಷ್ಟೇ ಕೆಡುಕು ಮಾಡಿದವರನ್ನು ಬಹುಬೇಗ ಕ್ಷಮಿಸಿಬಿಡುವಂತಹ ವ್ಯಕ್ತಿತ್ವ ನಿಮ್ಮದು ಮತ್ತು ನಿಮ್ಮ ಕಷ್ಟವನ್ನು ಯಾರೊಂದಿಗೂ ಹಂಚಿಕೊಳ್ಳದ ಭಾವನಾಜೀವಿಗಳಾಗಿರುತ್ತೀರಿ.

ಇನ್ನೂ ಶನಿವಾರದಂದು ನಿಮ್ಮ ಜನನವಾಗಿದ್ದರೆ ಯಾವುದರಲ್ಲೂ ಹಿಂಜರಿಯುವ ಅಂಜುವ ಸಂಶಯಯುತ ಸ್ವಭಾವ ನಿಮ್ಮದಾಗಿರುತ್ತದೆ, ಆಟ ಕಲೆ ವಿಜ್ಞಾನ ನಿಮಗೆ ಸೇರಲಾರದ ವಿಷಯಗಳು ಒಪ್ಪಿಕೊಂಡ ಮಾತನ್ನು ಚಾಚು ತಪ್ಪದೆ ನಿರ್ವಹಿಸುವ ಗುಣ ನಿಮ್ಮಲ್ಲಿರುತ್ತದೆ. ನಿಮ್ಮ ಕಾರ್ಯವನ್ನು ನೀವು ತಪ್ಪದೇ ಮಾಡುತ್ತೀರಾದರು ನೀವು ಪರರ ಕಾರ್ಯಗಳನ್ನು ನಿರ್ಲಕ್ಷಿಸುತ್ತೀರಿ ನಿಮ್ಮ ಶಕ್ತಿ ಮೀರಿದ ಕೆಲಸಕ್ಕೆ ನೀವು ಕೈ ಹಾಕುವುದಿಲ್ಲ ಆದರೆ ಒಪ್ಪಿಗೆಯಾಗಿ ಕೈ ಇಟ್ಟ ಕೆಲ್ಸವನ್ನು ಪೂರ್ತಿ ಮಾಡದೆ ವಿಶ್ರಮಿಸುವ ವ್ಯಕ್ತಿತ್ವ ನಿಮ್ಮದಲ್ಲ ನೀವು ಹೃದಯ ನಡೆ ನುಡಿಗಳಿಂದ ಸರಳರು ಮತ್ತೆ ನಿಮ್ಮ ಸಮೀಪದವರು ಹಾಗೆಯೇ ಇರಬೇಕೆಂದು ನೀವು ಆಶಿಸುತ್ತೀರಿ.

Leave a Reply

Your email address will not be published. Required fields are marked *