ನಾವು ಸಾಧನೆ ಮಾಡಬೇಕು ಎಂದಾದರೆ ಹಲವು ಕಷ್ಟಗಳು ಬರುತ್ತವೆ, ಸಾಕಷ್ಟು ಅವಮಾನಗಳನ್ನು ಎದುರಿಸಬೇಕಾಗುತ್ತದೆ. ಅಂತವರಲ್ಲಿ ಶಿವಮೊಗ್ಗ ಜಿಲ್ಲೆಯ ರೈತನೊಬ್ಬ ಅವಮಾನಗಳನ್ನು ಎದುರಿಸಿ ಮೀನು ಸಾಕಾಣಿಕೆ ಮಾಡಿ ಹೆಚ್ಚಿನ ಆದಾಯ ಗಳಿಸುತ್ತಿದ್ದಾರೆ ಅದರ ಬಗ್ಗೆ ಮಾಹಿತಿಯನ್ನು ಈ ಲೇಖನದಲ್ಲಿ ನೋಡೋಣ.

ಶಿವಮೊಗ್ಗ ಜಿಲ್ಲೆಯ ತೀರ್ಥಹಳ್ಳಿ ತಾಲೂಕಿನ ಪುಟ್ಟ ಗ್ರಾಮದ ತಿಮ್ಮಪ್ಪ ಎನ್ನುವವರು ಮೀನು ಸಾಕಾಣಿಕೆ ಬಗ್ಗೆ ತರಭೇತಿ ಪಡೆದು ತಮ್ಮ ಜಮೀನಿನಲ್ಲಿ 4 ಕೃಷಿ ಹೊಂಡವನ್ನು ನಿರ್ಮಿಸಿ, ಕೆರೆಯು 100 ಅಡಿ ಉದ್ದ, 50 ಅಡಿ ಅಗಲ, 5ಅಡಿ ಆಳವಿದೆ ಮೀನು ಸಾಕಾಣಿಕೆ ಮಾಡಿದ್ದಾರೆ. ಮೀನು ಸಾಕಾಣಿಕೆಯನ್ನು ಪ್ರಾರಂಭಿಸುತ್ತಿರುವ ಇವರಿಗೆ ಸಪೋರ್ಟ್ ಮಾಡಿದವರಿಗಿಂತ ಟೀಕೆ ಮಾಡಿದವರೇ ಹೆಚ್ಚು. ರಾಜ್ಯಾದ್ಯಂತ ಇವರ ಬಳಿ ಮೀನು ಮರಿಗಳನ್ನು ಪಡೆಯಲು ಬರುತ್ತಾರೆ. ತಿಮ್ಮಪ್ಪ ಅವರು ಒಳ್ಳೆಯ ಮೀನುಗಳನ್ನು ಕೊಡುತ್ತಾರೆ. ಮೀನು ಮರಿಗಳನ್ನು ಬಿತ್ತನೆ ಮಾಡಲು ಜೂನ್ ಮೊದಲ ವಾರ ಸೂಕ್ತ ಸಮಯ. ಅವರು ಸ್ಪಾನ್ ಎಂದು ಸಿಗುತ್ತದೆ ಸ್ಪಾನ್ ಎಂದರೆ ಮೊಟ್ಟೆ ಒಡೆದು ಹೊರಬಂದ ಮೀನು ಮರಿಗಳನ್ನು ಖರೀದಿಸಿ ಜಮೀನಿನಲ್ಲಿರುವ ಕೃಷಿ ಹೊಂಡಗಳಿಗೆ ಹಾಕಿ 30-40 ದಿವಸಗಳ ಕಾಲ ಪಾಲನೆ ಮಾಡುತ್ತಾರೆ.

ಈ ಗುಂಡಿಗೆ ಸುಮಾರು 4 ಲಕ್ಷ ಮೀನು ಬಿತ್ತನೆ ಮಾಡುತ್ತಾರೆ. 4 ಲಕ್ಷ ಮರಿಗಳನ್ನು ಬಿತ್ತನೆ ಮಾಡಿದರೆ 1 ಕಾಲು ಲಕ್ಷ ಮರಿಗಳು ಹುಟ್ಟುತ್ತವೆ 1 ಲಕ್ಷ ಮರಿಗಳಿಗೆ 30 – 40,000 ರೂಪಾಯಿ ಬೆಲೆ ಇದೆ. ನಂತರ ಅವು ಮರಿ ಹಾಕುತ್ತವೆ ಅವುಗಳನ್ನು ರೈತರಿಗೆ ಸಾಕಲು ಕೊಡುತ್ತಾರೆ. ಸ್ಪಾನ್ ಮರಿಗಳನ್ನು ಬಿತ್ತನೆ ಮಾಡುವ 5 ದಿನಗಳ ಮೊದಲು 20-25 ಬುಟ್ಟಿ ಹಸಿ ಸಗಣಿಯನ್ನು ನೀರಿಗೆ ಹಾಕಿ ಕಲಸಿ ರಾಡಿ ಮಾಡಿ ಹೊಂಡಕ್ಕೆ ಹಾಕಬೇಕು. ನೀರಿಗೆ ಹಾಕಿದ ಮೀನುಗಳಿಗೆ ಪ್ರಾರಂಭಿಕ ಹಂತದ ಆಹಾರವು ಸಗಣಿ ಹಾಕುವುದರಿಂದ ಅವುಗಳಿಗೆ ಸಿಗುತ್ತದೆ. ಇದರಿಂದ ಮರಿಗಳು ಸಾಯುವುದಿಲ್ಲ ಬಿತ್ತನೆ ಮಾಡಿದ ಎಲ್ಲಾ ಮರಿಗಳು ಬೆಳೆಯುತ್ತವೆ. ಮಳೆಗಾಲದಲ್ಲಿ ಸಗಣಿಯನ್ನು ಹಾಕಲು ಕಷ್ಟವಾಗುತ್ತಿದ್ದರೆ ಇನ್ನೊಂದು ಹೊಂಡವನ್ನು ಮಾಡಿಕೊಂಡು ಅದರಲ್ಲಿ ಸ್ಲರಿಯನ್ನು ಉತ್ಪಾದಿಸಿ ಬೇರೆಬೇರೆ ಹೊಂಡಗಳಿಗೆ ಹಾಕುವ ವ್ಯವಸ್ಥೆಯನ್ನು ಮಾಡಿಕೊಳ್ಳಬಹುದು.

ಮೀನುಗಳಿಗೆ ಎರಡು ಹೊತ್ತು ಶೇಂಗಾ ಹಿಂಡಿ, ಹಾಲು ಆಹಾರವಾಗಿ ಕೊಡಲಾಗುತ್ತದೆ. ತಿಮ್ಮಪ್ಪ ಅವರು ತಿಂಗಳಿಗೆ ಲಕ್ಷ ದುಡಿಯುತ್ತಾರೆ. ಬಿತ್ತನೆ ಮರಿಗಳಲ್ಲಿ ಹಲವು ತಳಿಗಳಿವೆ ಕಾಟ್ಲಾ, ಗೌರಿ, ರೋವ್. ಕಾಟ್ಲಾ ಮೀನುಗಳ ಜೀವಿತಾವಧಿ ಕಡಿಮೆ ಇರುವುದರಿಂದ 1,000 ಮರಿಗಳನ್ನು ಕೊಡಲು 350ರೂ ರೇಟನ್ನು ಇಡಲಾಗಿದೆ. ಗೌರಿ ಮತ್ತು ರೋವ್ ತಳಿಯ ಮರಿಗಳಿಗೆ 250ರೂ ತೆಗೆದುಕೊಳ್ಳುತ್ತಾರೆ. ಆಯಾ ತಳಿಯ ಮರಿಗಳಿಗೆ ಬೇಡಿಕೆ ಇದ್ದ ಹಾಗೆ ಸಾಕಾಣಿಕೆ ಮಾಡಲಾಗುತ್ತದೆ. ಮೀನು ಸಾಕಾಣಿಕೆ ಮಾಡುವ ಹೊಂಡದ ನೀರು ಗುಣಮಟ್ಟದ್ದಾಗಿರಬೇಕು. ಮೀನುಗಳಿಗೆ ರೋಗದ ಕಾಟ ಹೆಚ್ಚಿಗೆ ಇಲ್ಲ ಆದರೆ ನೀರಕ್ಕಿ ನೀರಿಗೆ ಬಿದ್ದರೆ ಐದುನೂರರವರೆಗೆ ಮೀನುಗಳನ್ನು ತಿನ್ನುತ್ತದೆ ಆದ್ದರಿಂದ ನೀರಕ್ಕಿ ಬರದಂತೆ ವ್ಯವಸ್ಥೆ ಮಾಡಲಾಗುತ್ತದೆ.

ತಿಮ್ಮಪ್ಪ ಅವರು ಮೀನು ಮರಿಗಳನ್ನು ಮಾರಾಟ ಮಾಡುವಾಗ ಯಾವುದೇ ಮೋಸ ಮಾಡುವುದಿಲ್ಲ ಅಲ್ಲದೆ ಮೀನು ಸಾಕಾಣಿಕೆ ಬಗ್ಗೆ ಮಾಹಿತಿಯನ್ನು ಕೂಡ ಉಚಿತವಾಗಿ ನೀಡುತ್ತಾರೆ. ತಿಮ್ಮಪ್ಪ ಅವರು 8- 10 ಲಕ್ಷ ಮೀನು ಮರಿಗಳನ್ನು ಉತ್ಪಾದನೆ ಮಾಡುತ್ತಾರೆ. ತಿಮ್ಮಪ್ಪ ಅವರು ಒಂದು ಕೆಜಿ ಮೀನಿಗೆ 250 ರೂಪಾಯಿಯಂತೆ ಮಾರಾಟ ಮಾಡುತ್ತಾರೆ. ಅವರು ಮೀನು ಮಾರಾಟ ಮಾಡಲು ಮಾರ್ಕೆಟಿಗೆ ಹೋಗುವುದಿಲ್ಲ, ಫೋನ್ ಮಾಡಿ ತಿಳಿಸಿ ಮನೆಗೆ ಹೋಗಿ ಉತ್ತಮ ಜಾತಿಯ ಮೀನುಗಳನ್ನು ಪಡೆಯಬಹುದು.

Leave a Reply

Your email address will not be published. Required fields are marked *