ಕನ್ನಡ ಬಿಗ್ ಬಾಸ್ ಸೀಸನ್ 8 ಪೂರ್ಣಗೊಂಡಿತು ಎಂದು ಬೇಸರ ಮಾಡಿಕೊಂಡವರಿಗೆ ಕಲರ್ಸ್ ಕನ್ನಡ ವಾಹಿನಿ ಸಿಹಿ ಸುದ್ದಿ ನೀಡಿದೆ. ಕಿರುತೆರೆಯ ತಾರೆಗಳನ್ನೇ ಇಟ್ಟುಕೊಂಡು ಒಂದು ವಾರಗಳ ಕಾಲ ಮಿನಿ ಬಿಗ್ ಬಾಸ್ ನಡೆಸಲಾಗುತ್ತಿದೆ. ಕಳೆದ ಭಾನುವಾರ (ಆಗಸ್ಟ್ 8) ‘ಬಿಗ್ ಬಾಸ್ ಸೀಸನ್ 8’ ಪೂರ್ಣಗೊಂಡಿತ್ತು. ಮಂಜು ಪಾವಗಡ ವಿನ್ನರ್ ಹಾಗೂ ಅರವಿಂದ್ ಕೆ.ಪಿ. ರನ್ನರ್ ಅಪ್ ಎಂದು ಘೋಷಣೆ ಮಾಡಲಾಗಿತ್ತು.
ನಿತ್ಯ ಒಂದೂವರೆ ಗಂಟೆ ಮನರಂಜನೆ ನೀಡುತ್ತಿದ್ದ ಶೋ ಪೂರ್ಣಗೊಂಡಿತಲ್ಲ ಎಂದು ಅನೇಕರು ಬೇಸರ ಮಾಡಿಕೊಂಡಿದ್ದರು. ಹೀಗಿರುವಾಗಲೇ ಕಲರ್ಸ್ ಕನ್ನಡ ವಾಹಿನಿ ಖುಷಿ ಸುದ್ದಿ ನೀಡಿದೆ.ಅದುವೇ ಕಿರುತೆರೆ ತಾರೆಗಳನ್ನೇ ಈ ಶೋ ಗೆ ಆಹ್ವಾನಿಸಲಾಗಿದೆ ಹಾಗೂ ಅವರುಗಳಿಂದ ಒಂದು ವಾರ ಮನೋರಂಜನೆ ಕೊಡಿಸುವ ನಿಟ್ಟಿನಲ್ಲಿ ಈ ಶೋ ನಡೆಸುತ್ತಿದ್ದಾರೆ.
ಒಂದು ವಾರಗಳ ಕಾಲ ಬಿಗ್ ಬಾಸ್ ಮನೆ ತುಂಬಲಿದೆ. ಕಲರ್ಸ್ ಕನ್ನಡ ವಾಹಿನಿಯ ಧಾರಾವಾಹಿ ಕಲಾವಿದರೇ ಈ ಬಾರಿಯ ಬಿಗ್ ಬಾಸ್ ಸ್ಪರ್ಧಿಗಳು. ಕಿರಣ್ ರಾಜ್, ಅಕುಲ್ ಸೇರಿ ಸಾಕಷ್ಟು ಜನರು ಮನೆ ಒಳಗೆ ಸೇರಿದ್ದಾರೆ. ಎಲ್ಲರಿಗೂ ನಾನಾ ರೀತಿಯ ಟಾಸ್ಕ್ ನೀಡಲಾಗುತ್ತಿದೆ. ತಮ್ಮಿಷ್ಟದ ನಟ-ನಟಿಯರನ್ನು ಧಾರಾವಾಹಿಗಳಲ್ಲಿ ಕೇವಲ ಕಲಾವಿದರಾಗಿ ನೋಡುತ್ತಾರೆ ವೀಕ್ಷಕರು. ಆದರೆ, ಈಗ ಎಲ್ಲಾ ಕಲಾವಿದರು ಬಿಗ್ ಬಾಸ್ ಮನೆ ಸೇರಿರುವುದರಿಂದ ಅವರ ನಿಜವಾದ ವ್ಯಕ್ತಿತ್ವ ಅನಾವರಣಗೊಳ್ಳಲಿದೆ.
ಹೀಗಾಗಿ, ಇಂದು ಹಂಚಿಕೊಂಡಿರುವ ಪ್ರೋಮೋಗೆ ನೆಚ್ಚಿನ ಟೆಲಿವಿಶನ್ ಪಾತ್ರಗಳ ರಿಯಲ್ ಲೈಫ್’ ಎನ್ನುವ ಕ್ಯಾಪ್ಶನ್ ನೀಡಲಾಗಿದೆ. ಆದರೆ ಈ ಬಾರಿ ಇದರ ಲಾಂಚ್ ಸುದೀಪ್ ನಡೆಸುತ್ತಿಲ್ಲ ಎಂಬುದೇ ದುಃಖಕರ ಸಂಗತಿ.ಆದರೂ ಈ ಬಾರಿ ಈ ಶೋಲಿ ಯಾವುದೇ ರೀತಿಯ ಒಬ್ಬ ವೀಜೇತ ಇರುವುದಿಲ್ಲ, ಇದು ಕೇವಲ ಒಂದು ವಾರ ನಡೆಯುವುದು ಹಾಗೂ ಇದರಲ್ಲಿ ಕೇವಲ ಮನೋರಂಜನೆ ಮಾತ್ರ ಇರುತ್ತದೆ ಎಂದು ಕಲ್ಲರ್ಸ್ ವಾಹಿನಿಯ ಸಂಪಾದಕ ಪರಮೇಶ್ವರ್ ಗುಂಡ್ಕಲ್ ಅವರು ಹೇಳಿದ್ದಾರೆ.
ಬಿಗ್ ಬಾಸ್ ಮಿನಿ ಸೀಸನ್ ಪ್ರಸಾರ ಆಗಲಿದ್ದು 14 ಟಿವಿ ತಾರೆಯರು ಭಾಗವಹಿಸುತ್ತಿದ್ದಾರೆ. ಅವರೆಲ್ಲರೂ ಕಲರ್ಸ್ ಕನ್ನಡದ ಧಾರಾವಾಹಿ ನಟರು ಎಂಬುದು ವಿಶೇಷ. ಅಕುಲ್ ಬಾಲಾಜಿ, ನಿರಂಜನ್ ದೇಶಪಾಂಡೆ ಕೂಡ ಈ ಶೋನ ಸಾರಥ್ಯ ವಹಿಸಲಿದ್ದಾರೆ.ಜನ-ಮನ ಮೆಚ್ಚಿದ ನಟ-ನಟಿಯರನ್ನು ಒಳಗೊಂಡ ‘ಬಿಗ್ ಬಾಸ್ ಫ್ಯಾಮಿಲಿ ಅವಾರ್ಡ್ಸ್’ ಮಿನಿ ಸೀಸನ್ ಶೋ ಆಗಸ್ಟ್ 14ರಿಂದ ಪ್ರಸಾರ ಆಗ್ತಿದೆ. ಈ ಶೋ ‘ಬಿಗ್ ಬಾಸ್ ಮಿನಿ ಸೀಸನ್’ ಆಗಿದ್ದು ಕಲರ್ಸ್ ಕನ್ನಡದ ಧಾರಾವಾಹಿ ನಟ-ನಟಿಯರು ಈ ಶೋನಲ್ಲಿ ಭಾಗವಹಿಸುತ್ತಿದ್ದಾರೆ.
ಇಷ್ಟುದಿನಗಳ ಕಾಲ ನೆಚ್ಚಿನ ಧಾರಾವಾಹಿ ನಟ-ನಟಿಯರು ವೀಕ್ಷಕರಿಗೆ ಪಾತ್ರಗಳ ಮೂಲಕ ಪರಿಚಯ ಆಗಿದ್ದರು. ಆದರೆ ‘ಬಿಗ್ ಬಾಸ್ ಅವಾರ್ಡ್ಸ್’ ಮೂಲಕ ನಟ-ನಟಿಯರು ಅವರ ನಿಜವಾದ ಹೆಸರು, ವ್ಯಕ್ತಿತ್ವದ ಮೂಲಕ ಆಟ ಆಡಲಿದ್ದಾರೆ. ಇದು ಇನ್ನಷ್ಟು ರೋಚಕವಾಗಿರಲಿದೆ, ಬಿಗ್ ಬಾಸ್ ಪ್ರಿಯರಿಗೊಂದೇ ಅಲ್ಲದೆ ಧಾರಾವಾಹಿ ಪ್ರಿಯರಿಗೂ ಇಷ್ಟ ಆಗಲಿದೆ.