ಒಂದು ಕಾಲದಲ್ಲಿ ಹುಡುಗಿಯರ ಹಾಟ್ ಫೇವರಿಟ್ ಆಗಿದ್ದ ಸ್ಪುರದ್ರೂಪಿ ನಟ ರಾಮ್ ಕುಮಾರ್ ನಿಮಗೆಲ್ಲಾ ಗೊತ್ತೇ ಇದೆ. ಅದೇ ರಾಮ್ ಕುಮಾರ್ ಮಗಳು ಧನ್ಯಾ ರಾಮ್ ಕುಮಾರ್ ಈಗ ನಾಯಕಿಯಾಗಿ ಸ್ಯಾಂಡಲ್ ವುಡ್ ಗೆ ಕಾಲಿಡುತ್ತಿದ್ದಾರೆ. ಇದರ ಕುರಿತಾಗಿ ಮತ್ತಷ್ಟು ಮಾಹಿತಿಯನ್ನು ನಾವು ಈ ಲೇಖನದ ಮೂಲಕ ತಿಳಿದುಕೊಳ್ಳೋಣ.

ಕನ್ನಡ ಚಿತ್ರರಂಗದ ನಟ ರಾಮ್ ಕುಮಾರ್ ಎಂದ ತಕ್ಷಣ ಸಿನಿ ರಸಿಕರಿಗೆ ತಟ್ಟನೆ ನೆನಪಿಗೆ ಬರುವುದು ಅವರ ಸುಂದರ ಮುಖ, ನಿಷ್ಕಲ್ಮಶ ನಗು ಹಾಗು ಪ್ರೀತಿ ತುಂಬಿದ ನೋಟ ಅಂತಾನೇ ಹೇಳಬಹುದು. ಇನ್ನು ರಾಮ್ ಕುಮಾರ್ ರವರು ಕೇವಲ ನಟ ಮಾತ್ರವಾಗಿರದೆ ಅದೇಷ್ಟೋ ಹುಡುಗಿಯರ ಡ್ರೀಮ್ ಬಾಯ್ ಕೂಡ ಆಗಿದ್ದರು ಎಂದರೇ ನೀವು ನಂಬಲೇ ಬೇಕು. ನಟ ರಾಮ್ ಕುಮಾರ್ ಅವರ ಗೆಜ್ಜೆನಾದ, ಕಾವ್ಯ, ತವರಿನ ತೊಟ್ಟಿಲು ಸೇರಿದಂತೆ ಹಲವು ಚಿತ್ರಗಳನ್ನು ಈಗಲೂ ನೋಡುತ್ತಾ ಇರೋಣ ಅಂತ ಅನಿಸುವುದಂತು ಸತ್ಯ.

ಡಾ. ರಾಜ್ ಕುಮಾರ್ ಮೊಮ್ಮಗಳೂ ಆಗಿರುವ ಧನ್ಯಾ ರಾಮ್ ಕುಮಾರ್ ಇನ್ನೂ ಟೈಟಲ್ ಇಡದ ಹೊಸ ಸಿನಿಮಾದಲ್ಲಿ ನಟಿಸುವುದು ಪಕ್ಕಾ ಆಗಿದೆ. ಸುಮನ್ ಜಾದೂಗಾರ್ ಅವರು ಈ ಸಿನಿಮಾ ಮಾಡುತ್ತಿದ್ದು, ಇದರಲ್ಲಿ ಸೂರಜ್ ಗೌಡ ನಾಯಕರಾಗಿ ನಟಿಸಲಿದ್ದಾರೆ. ಸಿನಿಮಾ ರಂಗಕ್ಕೆ ಎಂಟ್ರಿ ಇಡುತ್ತಿರುವ ಬಗ್ಗೆ ಮಾತನಾಡಿರುವ ಧನ್ಯಾ ಸಿನಿಮಾ ಕತೆಯೇ ನನಗೆ ಇಷ್ಟವಾಯಿತು. ಅದಕ್ಕೇ ಒಪ್ಪಿಕೊಂಡೆ ಎಂದಿದ್ದಾರೆ.

ಡಾ ರಾಜ್ ಕುಮಾರ್ ಅವರ ಕುಟುಂಬದಿಂದ ಒಬ್ಬೊಬ್ಬರೇ ಸಿನಿಮಾ ಇಂಡಸ್ಟ್ರಿ ಕಡೆ ಮುಖ ಮಾಡ್ತಿದ್ದಾರೆ. ರಾಜ್ ಪುತ್ರರ ನಂತರ ರಾಜ್ ಮೊಮ್ಮಕ್ಕಳ ಜಮಾನ ಅರಂಭವಾಗಿದೆ. ಈಗಾಗಲೇ ರಾಘವೇಂದ್ರ ರಾಜ್ ಕುಮಾರ್ ಅವರ ಪುತ್ರ ವಿನಯ್ ರಾಜ್ ಕುಮಾರ್ ನಾಯಕನಾಗಿ ನಟಿಸುತ್ತಿದ್ದಾರೆ. ಮತ್ತೊಬ್ಬ ಪುತ್ರ ಗುರು ರಾಜ್ ಕುಮಾರ್ ನಿರ್ಮಾಪಕನಾಗಿ ಕಾರ್ಯ ನರ್ವಹಿಸುತ್ತಿದ್ದಾರೆ.

ಈ ಮಧ್ಯೆ ರಾಜ್ ಪುತ್ರಿ ಪೂರ್ಣಿಮಾ ಮತ್ತು ರಾಮ್ ಕುಮಾರ್ ದಂಪತಿಯ ಮಗ ಧೀರೇನ್ ರಾಮ್ ಕುಮಾರ್ ಚೊಚ್ಚಲ ಚಿತ್ರಕ್ಕೆ ಸಿದ್ದವಾಗಿದ್ದಾರೆ. ಇದರ ಬೆನ್ನಲ್ಲೇ ಪಾರ್ವತಮ್ಮ ರಾಜ್ ಕುಮಾರ್ ಅವರ ಸಹೋದರನ ಮಗ ಸೂರಜ್ ಕೂಡ ಇಂಡಸ್ಟ್ರಿಯಲ್ಲಿ ಗುರುತಿಸಿಕೊಂಡಿದ್ದಾರೆ. ಹೀಗೆ, ಅಣ್ಣಾವ್ರ ಮೊಮ್ಮಕ್ಕಳೆಲ್ಲ ಬಣ್ಣದ ಪರದೆಯಲ್ಲಿ ಮಿಂಚಲು ಸಿದ್ದವಾಗಿರುವಾಗಲೇ, ಮೊಮ್ಮಗಳು ಧನ್ಯ ಕೂಡ ಚಂದನವನಕ್ಕೆ ಹಾರುವ ಸೂಚನೆ ಕೊಟ್ಟಿದ್ದಾಳೆ.

ಕನ್ನಡ ಚಿತ್ರರಂಗದ ಖ್ಯಾತ ನಟ ಹಾಗೂ ನಿರ್ಮಾಪಕ ಶೃಂಗಾರ ರಾಜ ಅವರ ಪುತ್ರರಾದ ರಾಮ್ ಕುಮಾರ್ ರವರು ಚಿಕ್ಕಂದಿನಿಂದಲೂ ಕೂಡ ಚಿತ್ರರಂಗದ ಬಗ್ಗೆ ಅತಿಯಾದ ಆಸಕ್ತಿ ಬೆಳೆಸಿಕೊಂಡಿದ್ದರು. ನಂತರ ಆವೇಶ ಎಂಬ ಚಿತ್ರದ ಮೂಲಕ ಚಿತ್ರರಂಗಕ್ಕೆ ಪಾದಾರ್ಪಣೆ ಮಾಡಿದ ರಾಮ್ ಕುಮಾರ್ ರವರು ನಂತರ ಹಲವಾರು ಉತ್ತಮ ಚಿತ್ರಗಳನ್ನು ನೀಡಿ ಉತ್ತಮ ನಟರಾಗಿ ಬೆಳೆಯುತ್ತಾರೆ.

ಇನ್ನು ರಾಮ್ ಕುಮಾರ್ ರವರು ಯಶಸ್ಸಿನ ಉತ್ತಂಗದಲ್ಲಿದ್ದ ಸಮಯದಲ್ಲೇ ಕನ್ನಡ ಚಿತ್ರರಂಗದ ಖ್ಯಾತ ನಟ ಡಾಕ್ಟರ್ ರಾಜಕುಮಾರ್ ಅವರ ಮಗಳು ಪೂರ್ಣಿಮಾ ಅವರನ್ನು ಪ್ರೀತಿಸಿ ವಿವಾಹವಾಗುತ್ತಾರೆ. ರಾಮ್ ಕುಮಾರ್ ಅವರಿಗೆ ಒಬ್ಬ ಮಗ ಮತ್ತು ಒಬ್ಬ ಮಗಳಿದ್ದು, ಇಲ್ಲಿ ವಿಶೇಷ ಎಂದರೆ ರಾಮ್ ಕುಮಾರ್ ಅವರ ಮಗ ಹಾಗೂ ಮಗಳು ಇಬ್ಬರು ಸಹ ಈಗಾಗಲೇ ಚಿತ್ರರಂಗಕ್ಕೆ ಪಾದಾರ್ಪಣೆ ಮಾಡಿದ್ದಾರೆ.

2010 ರ ನಂತರ ನಟ ರಾಮ್ ಕುಮಾರ್ ಅವರ ಚಿತ್ರಗಳು ಅಷ್ಟೊಂದು ಗೆಲುವನ್ನು ಸಾಧಿಸುವುದಿಲ್ಲ ಎನ್ನುವುದು ಬೇಸರದ ಸಂಗತಿಯಾಗಿದ್ದು, 2013ರಲ್ಲಿ ಬಂದ ಶ್ರೀ ಕ್ಷೇತ್ರ ಆದಿಚುಂಚನಗಿರಿ ಚಿತ್ರದ ನಂತರ ಮತ್ಯಾವ ಚಿತ್ರಗಳಲ್ಲಿಯೂ ಕೂಡ ರಾಮ್ ಕುಮಾರ್ ಅವರು ನಟಿಸಲಿಲ್ಲ. ಉತ್ತಮ ವ್ಯಕ್ತಿತ್ವ ಹಾಗೂ ಅದ್ಭುತ ನಟನಾ ಕಲೆಯನ್ನು ಹೊಂದಿರುವ ರಾಮಕುಮಾರ್ ಅವರಂತಹ ಉತ್ತಮ ನಟರು ಕನ್ನಡ ಚಿತ್ರರಂಗಕ್ಕೆ ಇನ್ನು ಬೇಕಾಗಿದ್ದಾರೆ.

ವಿಭಿನ್ನ ಪಾತ್ರ ಹಾಗೂ ಒಳ್ಳೆಯ ಕಥಾ ಹಂದರವನ್ನು ಹೊಂದಿರುವ ಸಿನಿಮಾ ಪಾತ್ರಗಳ ಮೂಲಕ ರಾಮ್ ಕುಮಾರ್ ಅವರು ಚಿತ್ರರಂಗಕ್ಕೆ ಪುನಃ ಪಾದಾರ್ಪಣೆ ಮಾಡಲೀ ಎನ್ನುವುದು ಅವರ ಅಭಿಮಾನಿಗಳ ಆಶಯವಾಗಿದೆ.ಇನ್ನು ರಾಮ್ ಕುಮಾರ್ ಅವರ ಮಕ್ಕಳ ಹೆಸರು ಧೀರೆನ್ ರಾಮ್ ಕುಮಾರ್ ಮತ್ತು ಧನ್ಯ ರಾಮ್ ಕುಮಾರ್ ಎಂಬುದಾಗಿದ್ದು, ಇಬ್ಬರು ಮಕ್ಕಳು ಈಗ ಸ್ಯಾಂಡಲ್ ವುಡ್ ಗೆ ಎಂಟ್ರಿ ಕೊಡಲು ಸಜ್ಜಾಗಿದ್ದಾರೆ. ಧೀರೆನ್ ರಾಮ್ ಕುಮಾರ್ ಅಭಿನಯದ ಮೊದಲ ಸಿನಿಮಾದ ಚಿತ್ರೀಕರಣ ಭರದಿಂದ ಸಾಗುತ್ತಿದ್ದು, ಈ ಸಿನಿಮಾ ಹೆಸರು ಶಿವ ಐ ಲವ್ ಯೂ.

ಇನ್ನು ಧನ್ಯ ರಾಮ್ ಕುಮಾರ್ ಅಭಿನಯದ ಮೊದಲ ಸಿನಿಮಾ ನಿನ್ನ ಸನಿಹಕೆ ಎಂಬುದಾಗಿದ್ದು, ಈ ಸಿನಿಮಾದ ಬಹುತೇಕ ಕೆಲಸಗಳು ಮುಗಿದಿದ್ದು, ಬಿಡುಗಡೆ ಆಗುವ ಹಾದಿಯಲ್ಲಿದೆ. ಇನ್ನು ಧನ್ಯ ಕುಮಾರ್ ರವರು ನೋಡಲು ಯಾವ ನಟಿಗಿಂತ ಕಡಿಮೆ ಇಲ್ಲ ಎಂದೇ ಹೇಳಬಹುದು. ಡಿಸೆಂಬರ್ 23, 1997 ರಂದು ಜನಿಸಿದ ಧನ್ಯಾ ಅವರಿಗೆ ಇದೀಗ ಕೇವಲ 22 ವರುಷ ವಯ್ಯಸ್ಸಾಗಿದೆ. ಧನ್ಯಾ ನೋಡಲು ಎಷ್ಟು ಸುಂದರವಾಗಿದ್ದಾರೆ ನೋಡಿ.

Leave a Reply

Your email address will not be published. Required fields are marked *