ಹಾಲಿನಲ್ಲಿ ಮಾತ್ರ ಕ್ಯಾಲ್ಷಿಯಂ ಇದೆ ಎಂದು ನಂಬಿಕೊಂಡೇ ಜನರು ಬೆಳೆದಿರುತ್ತಾರೆ. ನಿಮಗೆ ಹಾಲು ಸೇವಿಸಲು ಇಷ್ಟವಿದ್ದರೆ ಏನೂ ಸಮಸ್ಯೆ ಇಲ್ಲ. ಆದರೆ ಕೆಲವರಿಗೆ ಹಾಲು ಇಷ್ಟವಾಗಲ್ಲ. ಅವರಿಗೇ ತೊಂದರೆ ಉಂಟಾಗುವುದು. ನಿಮ್ಮ ದೇಹಕ್ಕೆ ಕ್ಯಾಲ್ಷಿಯಂ ಸಿಗಬೇಕಾದರೆ ಡೈರಿ ಉತ್ಪನ್ನಗಳಿಗೆ ಮಾತ್ರ ಅವಲಂಬಿಸಬೇಕಾಗಿಲ್ಲ. ಪೋಷಕಾಂಶ ಭರಿತ ಕ್ಯಾಲ್ಷಿಯಂ ಅನ್ನು ಒಳಗೊಂಡ ಆಹಾರವು ಇವೆ.
ಹುರಿದ ಎಳ್ಳು: ಒಂದು ಔನ್ಸ್ ಹುರಿದ ಎಳ್ಳಿನಲ್ಲಿ 277 ಎಂಜಿ ಕ್ಯಾಲ್ಷಿಯಂ ಇದೆ. ಮೊಳಕೆಬರಿಸಿದ ಸೊಯಾಬಿನ್: ಅರ್ಧ ಕಪ್ ಇದನ್ನು ಸೇವಿಸಿದರೆ 230 ಎಂಜಿ ಕ್ಯಾಲ್ಷಿಯಂ ಸಿಗುತ್ತದೆ.
ಸಾಲ್ಮನ್ (ಒಂದು ಜಾತಿಯ ಮೀನು): ಹಳೆಯ ಸಾಲ್ಮನ್ ಮೂಳೆಗಳಲ್ಲಿ 212 ಎಂಜಿ ಕ್ಯಾಲ್ಷಿಯಂ ಇದೆ.
ಸೋಯಾ ಮೊಸರು: ದಿನಕ್ಕೆ ಅರ್ಧ ಕಪ್ ಸೋಯಾ ಹಾಲು ಸೇವಿಸಿದರೆ ದೇಹಕ್ಕೆ 253 ಎಂಜಿ ಕ್ಯಾಲ್ಷಿಯಂ ಸಿಗುತ್ತದೆ.
ಕೇಲ್ (ಕೋಸು ಗಡ್ಡೆ ಜಾತಿಯ ಸಸ್ಯ): ಎರಡು ಕಪ್ ಇದನ್ನು ಸೇವಿಸಿದರೆ 188 ಎಂಜಿ ಕ್ಯಾಲ್ಷಿಯಂ ಸಿಗುತ್ತದೆ. ಬಾದಾಮಿ: ಈ ಮೇಲಿನ ಪದಾರ್ಥಗಳಿಗೆ ಹೋಲಿಸಿದರೆ ಬಾದಾಮಿಯಲ್ಲಿ ಅಧಿಕ ಪ್ರಮಾಣದಲ್ಲಿ ಕ್ಯಾಲ್ಷಿಯಂ ಸಿಗುವುದಿಲ್ಲ. ಆದರೆ ಒಂದು ಹಿಡಿ ಬಾದಾಮಿ ಸೇವಿಸಿದರೆ 72 ಎಂಜಿ ಕ್ಯಾಲ್ಷಿಯಂ ಸಿಗುತ್ತದೆ.
ಕ್ಯಾಲ್ಸಿಯಂ ಬಲವಾದ ಮೂಳೆಗಳನ್ನು ಮತ್ತು ಹಲ್ಲುಗಳನ್ನು ನಿರ್ಮಿಸಲು ಸಹಾಯವಾಗುವ ಪ್ರಮುಖವಾದ ಪೌಷ್ಠಿಕಾಂಶ ಹಾಗು ಮಾನವನ ದೇಹ ಕ್ರಿಯೆಗಳಲ್ಲೂ ಪ್ರಮುಖವಾದ ಅಂಶ. ಶಿಶುಗಳಿಗೆ ಕ್ಯಾಲ್ಸಿಯಂ ಮೂಳೆಯ ದ್ರವ್ಯರಾಶಿಯನ್ನು ನಿರ್ಮಿಸುವುದಕ್ಕೆ ಬಹಳ ಮುಖ್ಯ ಮತ್ತು ದೀರ್ಘಕಾಲದ ರೋಗಗಳ ವಿರುದ್ಧ ರಕ್ಷಣೆ ನೀಡುತ್ತದೆ.
ಪ್ರತಿ ಮಗುವಿನ ಕ್ಯಾಲ್ಸಿಯಂ ಅವಶ್ಯಕತೆ ಬೇರೆ ಬೇರೆಯಾಗಿರುತ್ತದೆ. ಅಕಾಲಿಕವಾಗಿ ಜನಿಸಿರುವ ಶಿಶುಗಳಿಗೆ ಶಿಶು ರೋಗ ತಜ್ಞರ ಮಾರ್ಗದರ್ಶನದಲ್ಲಿ ಪೂರಕವಾಗಿ ನೀಡಲಾಗುತ್ತದೆ. ಸೂತ್ರದ ಹಾಲಿಗೆ ಹೋಲಿಸಿದರೆ ತಾಯಿಯ ಹಾಲಿನಲ್ಲಿ ಹೆಚ್ಚಿನ ಕ್ಯಾಲ್ಸಿಯಂ ಅಂಶವಿರುತ್ತದೆ ಎಂದು ಅಧ್ಯಯನಗಳಿಂದ ತಿಳಿದಿದೆ. ಶಿಶುವಿಗೆ ಫಾರ್ಮುಲ ಹಾಲನ್ನು ನೀಡುವಾಗ ಸರಿಯಾಗಿ ಕ್ಯಾಲ್ಸಿಯಂ ಯುಕ್ತವಾದ ಫಾರ್ಮುಲ ಹಾಲನ್ನು ಆಯ್ಕೆ ಮಾಡುವುದು ಒಳ್ಳೆಯದು. ಜೀವಸತ್ವ D ಇಲ್ಲದೆ ದೇಹ ಕ್ಯಾಲ್ಸಿಯಂ ಹೀರಿಕೊಳ್ಳಲು ಸಾಧ್ಯವಿಲ್ಲ. ಸೂರ್ಯನ ಬೆಳಕಿನ ಮೂಲಕ ಶಿಶುಗಳಿಗೆ ಇದು ಲಭ್ಯವಾಗುವುದು. ಇದು ಅತಿ ಸುಲಭವಾದ ಮಾರ್ಗ, ಏಕೆಂದರೆ ಸೂರ್ಯನ ತೀವ್ರವಾದ ಅಲ್ಟ್ರಾ ಕಿರಣಗಳು ವಿಟಮಿನ್ D ಉತ್ಪಾದಿಸುತ್ತವೆ.ಮೊಸರು, ಪನೀರ್, ಚೀಸ್ ಮತ್ತು ತುಪ್ಪ ಕ್ಯಾಲ್ಸಿಯಂನ ಉತ್ತಮ ಮೂಲ. ಶಿಶುಗಳಿಗೆ 6 ತಿಂಗಳ ನಂತರ ಮೊಸರು ಮತ್ತು ತುಪ್ಪವನ್ನು ಪ್ರಾರಂಭಿಸಬಹುದು. 8 ತಿಂಗಳ ಪೂರ್ಣಗೊಂಡ ನಂತರ ಪನೀರ್ ಮತ್ತು ಚೀಸ್ ನೀಡಬಹುದು.
ಬಣ್ಣ ಬಣ್ಣದ ಯೋಗರ್ಟ್ ಮೆಲ್ಟ್
ಮೊಸರು & ಓಟ್ಸ್ ಖಿಚಡಿ
ತರಕಾರಿ ಮತ್ತು ಪನ್ನೀರ್ ರಸ
ಗೋಧಿನುಚ್ಚು ಪನೀರ್ ಖಿಚಡಿ
ಪಾಲಕ್ ಪನ್ನೀರ್ ರೈಸ್
ಪನೀರ್ ಆಮ್ಲೆಟ್ ವಿವಿಧ ರುಚಿಗಳಲ್ಲಿ ಲಭ್ಯವಿದೆ, ಮೊಸರು ಡೈರಿ ಉತ್ಪನ್ನವಾಗಿದ್ದು ಅದು ನಿಮ್ಮ ಕರುಳಿಗೆ ಆರೋಗ್ಯಕರ ಬ್ಯಾಕ್ಟೀರಿಯಾವನ್ನು ಹೊಂದಿರುತ್ತದೆ. ಒಂದೇ ಸೇವೆಯಲ್ಲಿ 400 ಮಿಗ್ರಾಂ ಕ್ಯಾಲ್ಸಿಯಂ ಹೊಂದಿರುವ ಈ ಪ್ರೋಟೀನ್ ಭರಿತ ಆಹಾರವು ಹಾಲಿಗೆ ಅದ್ಭುತ ಬದಲಿಯಾಗಿದೆ.
ಸೂರ್ಯನ ಎಳೆಬಿಸಿಲಿನಲ್ಲಿ ಬೆಳಗ್ಗೆ ಮತ್ತು ಸಂಜೆ ವಾಕಿಂಗ್ ಮಾಡುವ ಮೂಲಕ ವಿಟಮಿನ್ ಡಿ ಅಂಶವನ್ನು ನಾವು ಪಡೆದುಕೊಳ್ಳಬಹುದು ಎಂದು ಹಲವರು ಹೇಳುತ್ತಾರೆ. ಈ ಕೆಳಗೆ ತಿಳಿಸಿರುವ ಕೆಲವು ಆಹಾರ ಪದಾರ್ಥಗಳು ನಮಗೆ ದಿನನಿತ್ಯ ನಮ್ಮ ದೇಹಕ್ಕೆ ಅಗತ್ಯವಾಗಿ ಬೇಕಾದಂತಹ ಪ್ರಮಾಣದ ವಿಟಮಿನ್ ಡಿ ಮತ್ತು ಕ್ಯಾಲ್ಸಿಯಂ ಅಂಶವನ್ನು ಒದಗಿಸಿಕೊಡುತ್ತವೆ.
ನಮಗೆಲ್ಲ ತಿಳಿದಿರುವ ಹಾಗೆ ನಾವು ಬಳಸುವ ಅಚ್ಚ ಹಸಿರಾದ ಯಾವುದೇ ತರಕಾರಿಗಳು ನಮಗೆ ತಿನ್ನಲು ಆರೋಗ್ಯಕರ ಮಾತ್ರವಲ್ಲದೆ ಅಗತ್ಯಕ್ಕಿಂತ ಹೆಚ್ಚಿನ ಪ್ರಮಾಣದ ಪೌಷ್ಟಿಕಾಂಶಗಳನ್ನು ಹೊಂದಿರುತ್ತವೆ. ಅದರಲ್ಲೂ ಹೂಕೋಸು, ಎಲೆಕೋಸು, ಪಾಲಕ್ ಸೊಪ್ಪು, ದಂಟಿನ ಸೊಪ್ಪು ಇತ್ಯಾದಿಗಳು ಡೈರಿ ಪದಾರ್ಥಗಳ ಹೊರತಾಗಿ ಸಾಕಷ್ಟು ಕ್ಯಾಲ್ಸಿಯಂ ಅಂಶವನ್ನು ಹೊಂದಿರುವ ಏಕೈಕ ಪದಾರ್ಥಗಳಾಗಿವೆ.
ಹಸಿರೆಲೆ ತರಕಾರಿಗಳಲ್ಲಿ ಆಕ್ಸಾಲಿಕ್ ಆಮ್ಲ ಹೆಚ್ಚಾಗಿರುವ ಕಾರಣ ನಮ್ಮ ದೇಹದಲ್ಲಿ ನಾವು ಸೇವನೆ ಮಾಡುವ ಆಹಾರ ಪದಾರ್ಥಗಳಲ್ಲಿ ಕಂಡುಬರುವ ಕ್ಯಾಲ್ಶಿಯಂ ಅಂಶವನ್ನು ಸರಿಯಾಗಿ ಹೀರಿಕೊಳ್ಳಲು ಸಹಾಯವಾಗುತ್ತದೆ.