ಅಕ್ಟೋಬರ್ ತಿಂಗಳು ಮೇಷ ರಾಶಿಯವರಿಗೆ ಯಾವ ಫಲ ಪ್ರಾಪ್ತಿಯಾಗುತ್ತೆ..

0 4,803

ಈಗಾಗಲೇ ಅಕ್ಟೋಬರ್ ತಿಂಗಳು ಪ್ರಾರಂಭವಾಗಿದ್ದು ಪ್ರತಿಯೊಬ್ಬರಿಗೂ ಅಕ್ಟೋಬರ್ ತಿಂಗಳಿನಲ್ಲಿ ತಮ್ಮರಾಶಿ ಭವಿಷ್ಯ ಹೇಗಿದೆ ಎಂಬುದನ್ನು ತಿಳಿದುಕೊಳ್ಳುವ ಕುತೂಹಲ ಇರುತ್ತದೆ. ನಾವಿಂದು ನಿಮಗೆ ಅಕ್ಟೋಬರ್ ತಿಂಗಳಿನಲ್ಲಿ ಮೇಷ ರಾಶಿಯವರ ರಾಶಿ ಫಲ ಯಾವ ರೀತಿಯಾಗಿದೆ ಈ ತಿಂಗಳು ಮೇಷ ರಾಶಿಯವರಿಗೆ ಯಾವ ರೀತಿಯ ಫಲಾಫಲಗಳು ಇವೆ ಎಂಬುದರ ಬಗ್ಗೆ ಸಂಪೂರ್ಣವಾದ ಮಾಹಿತಿಯನ್ನು ನಿಮಗೆ ತಿಳಿಸಿಕೊಡುತ್ತವೆ.

ಮೊದಲಿಗೆ ಮೇಷ ರಾಶಿಯವರ ಜನ್ಮ ನಕ್ಷತ್ರವನ್ನು ನೋಡುವುದಾದರೆ ಅಶ್ವಿನಿ ನಕ್ಷತ್ರದ ನಾಲ್ಕೂ ಚರಣಗಳು ಭರಣಿ ನಕ್ಷತ್ರದ ನಾಲ್ಕೂ ಚರಣಗಳು ಹಾಗೂ ಕೃತಿಕಾ ನಕ್ಷತ್ರದ ಮೊದಲ ಚರಣ ಸೇರಿರುವಂತಹದ್ದು ಮೇಷ ರಾಶಿ. ಮೇಷ ರಾಶಿಯ ಮಿತ್ರರು ಸಿಂಹ ತುಲಾ ಮತ್ತು ಧನಸ್ಸು ರಾಶಿ ಆಗಿದೆ ಮೇಷ ರಾಶಿಯ ಶತ್ರು ಯಾವುದು ಎಂಬುದನ್ನು ತಿಳಿಯುವುದಾದರೆ ಮಿಥುನ ಮತ್ತು ಕನ್ಯಾ ರಾಶಿ ಆಗಿದೆ. ಮೇಷ ರಾಶಿಯವರ ರಾಶಿಯವರ ವಿಶೇಷವಾದ ಗುಣ ಯಾವುದು ಎಂದರೆ ಇವರು ಧೈರ್ಯಶಾಲಿಗಳಾಗಿರುತ್ತಾರೆ ಮತ್ತು ಕೋಪಿಷ್ಟರಾಗಿರುತ್ತಾರೆ.

ಈ ರಾಶಿಯ ಅದೃಷ್ಟ ದೇವತೆ ಮಹಾಶಿವ ಮತ್ತು ಹನುಮಂತ. ಇವರ ಅದೃಷ್ಟದ ಬಣ್ಣ ಬಿಳಿ ಮತ್ತು ಕೆಂಪು. ನಾವು ನಿಮಗೆ ಅಕ್ಟೋಬರ್ ತಿಂಗಳಿನ ರಾಶಿ ಫಲವನ್ನು ತಿಳಿಸುತ್ತಿರುವುದರಿಂದ ಅಕ್ಟೋಬರ್ ತಿಂಗಳಿನಲ್ಲಿ ಯಾವ ದಿನ ನಿಮಗೆ ಶುಭದಾಯಕವಾಗಿದೆ ಯಾವ ದಿನ ಅದೃಷ್ಟದಿಂದ ಕೂಡಿದೆ ಎಂಬುದನ್ನು ನೋಡುವುದಾದರೆ, ಎರಡನೇ ತಾರೀಕು ಆರನೇ ತಾರೀಕು ಒಬ್ಬತ್ತನೇ ತಾರೀಕು ಹತ್ತನೇ ತಾರೀಕು ಹನ್ನೆರಡು ಹದಿಮೂರು ಹಾಗೂ ಇಪ್ಪತ್ತೆರಡನೇ ತಾರೀಕು ನಿಮಗೆ ಬಹಳ ಉತ್ತಮವಾದ ಶುಭಕಾರಕ ದಿನಗಳು ಎಂದು ಹೇಳಬಹುದು.

ಇನ್ನು ಈ ರಾಶಿಯವರು ಯಾವ ವಿಷಯದಲ್ಲಿ ಹೆಚ್ಚು ಎಚ್ಚರಿಕೆಯನ್ನು ವಹಿಸಬೇಕು ಯಾವ ವಿಷಯದಲ್ಲಿ ನಿಮಗೆ ಕೆಲಸ ಮಾಡಿದಾಗ ಯಶಸ್ಸನ್ನು ಸಾಧಿಸುವುದಕ್ಕೆ ಸಾಧ್ಯವಾಗುತ್ತದೆ ಎಂಬುದನ್ನು ತಿಳಿದುಕೊಳ್ಳೋಣ. ಈ ರಾಶಿಯವರು ಬಹಳ ಕಷ್ಟ ಪಟ್ಟು ಮುಂದೆ ಬಂದಿರುವುದರಿಂದ ನೀವು ಮಾಡುವ ಉದ್ಯಮದಲ್ಲಿ ಉದ್ಯೋಗದಲ್ಲಿ ಯಶಸ್ಸು ಸಿಗುತ್ತದೆ. ಜೀವನದ ಸಂಪೂರ್ಣ ಅನುಭವ ನಿಮಗೆ ಆಗಿರುವುದರಿಂದ ಸದಾ ಮುಂಚೂಣಿಯಲ್ಲಿರುವಂತಹ ಕೆಲಸಗಳನ್ನು ಮಾಡುತ್ತಿರಿ. ನೀವು ಮಾಡುವ ಕೆಲಸದಲ್ಲಿ ಅವಶ್ಯಕತೆ ಇದ್ದಾಗ ಅಥವಾ ಕೆಲಸಕ್ಕಾಗಿ ಕಷ್ಟಪಟ್ಟು ಶ್ರಮವಹಿಸಿ ಕೆಲಸ ಮಾಡಿದಾಗ ಹೆಚ್ಚಿನ ಆದಾಯ ಗಳಿಸುವ ಸಂಭವ ಇರುತ್ತದೆ.

ಬೇರೆಯವರ ಮನಸ್ಸನ್ನು ಅರಿತು ಮಾತನಾಡುವಂತಹ ಬುದ್ಧಿವಂತಿಕೆ ಚಾಣಾಕ್ಷತನವನ್ನು ನೀವು ರೂಡಿಸಿ ಕೊಳ್ಳಬೇಕಾಗುತ್ತದೆ. ಯಾಕೆಂದರೆ ನೀವು ನಿಮ್ಮ ಮನಸ್ಸಿಗೆ ಕಂಡದ್ದನ್ನು ನೇರವಾಗಿ ಮಾತನಾಡುವಂತದ್ದನ್ನು ರೂಢಿಸಕೊಂಡಿರುತ್ತಿರಿ. ನೀವು ಹಾಗೆ ಮಾತನಾಡುವುದರಿಂದ ಬೇರೆಯವರ ಮನಸ್ಸಿನ ಮೇಲೆ ಬೇರೆ ರೀತಿಯ ಪರಿಣಾಮ ಉಂಟಾಗುವ ಸಾಧ್ಯತೆ ಇರುತ್ತದೆ. ಹಾಗಾಗಿ ಆ ಪರಿಸ್ಥಿತಿ ಸನ್ನಿವೇಶವನ್ನು ಅರ್ಥಮಾಡಿಕೊಂಡು ಮಾತನಾಡುವುದು ನಿಮಗೆ ಒಳ್ಳೆಯ ಫಲವನ್ನು ಕೊಡುತ್ತದೆ.

ಕುಟುಂಬದಲ್ಲಿ ಸ್ವಲ್ಪ ಸಣ್ಣಪುಟ್ಟ ವಿಷಯಗಳಲ್ಲಿ ಗೊಂದಲಗಳಿರುತ್ತವೆ ಅನ್ಯೋನ್ಯತೆ ಸ್ವಲ್ಪ ಕಡಿಮೆ ಇರುತ್ತದೆ. ನೀವು ಸಂತೋಷವಾಗಿರಬೇಕು ಅನ್ಯೋನ್ಯವಾಗಿ ಇರಬೇಕು ಎಂದು ಪ್ರಯತ್ನಿಸುತ್ತೀರಿ ಆದರೆ ಅದು ಸಾಧ್ಯವಾಗುವುದಿಲ್ಲ ಯಾವುದಾದರೂ ರೂಪದಲ್ಲಿ ಮನೆಯಲ್ಲಿ ಸಣ್ಣಪುಟ್ಟ ವಿಚಾರಗಳ ಬಗ್ಗೆ ಸ್ವಲ್ಪ ಗೊಂದಲ ಇರುತ್ತದೆ. ಅದನ್ನು ಸರಿಯಾದ ಸಮಯದಲ್ಲಿ ನೀವು ಸರಿ ಮಾಡುವ ಪ್ರಯತ್ನವನ್ನು ಪಟ್ಟರೆ ಒಳ್ಳೆಯ ಫಲಿತಾಂಶವನ್ನು ಕಾಣಬಹುದು. ಇನ್ನು ಸ್ತ್ರೀಯರು ಉದ್ಯೋಗದಲ್ಲಿ ಸಣ್ಣಪುಟ್ಟ ತೊಂದರೆಗಳನ್ನು ಅನುಭವಿಸುವಂತದ್ದು ಜನರಿಂದ ಕಿರಿಕಿರಿಗಳನ್ನು ಅನುಭವಿಸುವಂತದ್ದು.

ಮಾನಸಿಕವಾಗಿ ಭಾವನಾತ್ಮಕವಾಗಿ ಯಾವುದೇ ಒಂದು ಕೆಲಸ ಮಾಡಿದರೂ ಜನರಿಂದ ಕಿರಿಕಿರಿ ಆಗುವಂಥದ್ದು ತೊಂದರೆ ತಾಪತ್ರಯಗಳು ಆಗುವ ಸಾಧ್ಯತೆ ಕಂಡು ಬರುತ್ತದೆ. ಈ ತಿಂಗಳಲ್ಲಿ ಮೇಷ ರಾಶಿಯವರು ಈಗಾಗಲೇ ಇರುವ ಉದ್ಯೋಗವನ್ನು ಬದಲಿಸದೇ ಇರುವುದು ಒಳ್ಳೆಯದು. ಇನ್ನು ಮಹಿಳಾ ಪಿಜಿಯನ್ನು ನಡೆಸುವವರಿಗೆ ಉತ್ತಮವಾದ ಆದಾಯ ಬರುವ ಸಾದ್ಯತೆ ಇದೆ. ಶಾಲಾ-ಕಾಲೇಜುಗಳು ಅಥವಾ ಬೋಧನ ಸಂಸ್ಥೆಗಳನ್ನು ನಡೆಸುವಂತವರಿಗೆ ಸ್ವಲ್ಪ ಆತಂಕದ ಸ್ಥಿತಿ ಎದುರಾಗಬಹುದು.

ವಕೀಲರಿಗೆ ಹಣದೊಂದಿಗೆ ಕೀರ್ತಿ ಪ್ರತಿಷ್ಠೆಗಳು ಬರುವಂತಹ ಸಾಧ್ಯತೆ ಇದೆ. ಸರಕಾರಿ ಇಲಾಖೆಯಲ್ಲಿ ಕಾರ್ಯ ನಿರ್ವಹಿಸುತ್ತಿರುವವರು ಅಂದರೆ ವಿಶೇಷವಾಗಿ ಪೊಲೀಸ್ ಇಲಾಖೆಯಲ್ಲಿ ಕಾರ್ಯ ನಿರ್ವಹಿಸುತ್ತಿರುವವರು ಅನಾವಶ್ಯಕ ವಿವಾದದಲ್ಲಿ ಸಿಲುಕಿಕೊಳ್ಳುವಂತಹ ಮತ್ತು ಅಪವಾದಕ್ಕೆ ಗುರಿಯಾಗುವ ಸಾಧ್ಯತೆ ಇದೆ. ಹಾಗಾಗಿ ಪೊಲೀಸ್ ಇಲಾಖೆಯಲ್ಲಿ ಕೆಲಸ ಮಾಡುತ್ತಿರುವವರು ಬಹಳ ಎಚ್ಚರಿಕೆಯಿಂದ ಕೆಲಸ ಮಾಡುವುದು ಒಳ್ಳೆಯದು.

ಇನ್ನು ಸಿದ್ದ ಉಡುಪಿನ ಮಾರಾಟದಲ್ಲಿ ನಿರೀಕ್ಷೆಗೂ ಮೀರಿದ ಆದಾಯವನ್ನು ಗಳಿಸಬಹುದಾದ ಸಾಧ್ಯತೆಯಿದೆ. ಹೋಟೆಲ್ ಸಂಬಂಧಿತ ವ್ಯವಹಾರಗಳು ಅಷ್ಟಕಷ್ಟೇ ಇರುತ್ತದೆ ಆರಕ್ಕೆ ಎರುವುದಿಲ್ಲ ಮೂರಕ್ಕೆ ಇಳಿವುದಿಲ್ಲ ಎನ್ನುವ ಮಟ್ಟದಲ್ಲಿ ನಡೆಯುತ್ತಿರುತ್ತದೆ ಇರುವುದನ್ನು ಸ್ವಲ್ಪ ಬೆಳವಣಿಗೆ ಮಾಡುವುದು ಒಳ್ಳೆಯದು. ದೊಡ್ಡ ದೊಡ್ಡ ಕಾರ್ಖಾನೆಗಳನ್ನು ನಡೆಸುವವರಿಗೆ ಸಹಾಯಕರಿಂದ ಉಪಕಸುಬುಗಳಿಗೆ ತೊಂದರೆಗಳಾಗಬಹುದು.

ಇನ್ನು ಆರೋಗ್ಯದ ವಿಚಾರಕ್ಕೆ ಸಂಬಂಧಪಟ್ಟ ಮಾಹಿತಿಯನ್ನು ನೋಡುವುದಾದರೆ ನಿಮಗೆ ಅಜೀರ್ಣ ಮತ್ತು ವಾಯು ದೋಷಗಳು ಬಹುವಾಗಿ ಕಾಡುವಂತಹದ್ದು ಜೊತೆಗೆ ನಿಮ್ಮ ತಾಯಿಗೆ ಶೀತದ ತೊಂದರೆ ಇರುವುದು ಕಂಡುಬರುತ್ತಿದೆ. ನೀವು ಆರೋಗ್ಯದ ವಿಚಾರದಲ್ಲಿ ತುಂಬಾ ಎಚ್ಚರಿಕೆಯಿಂದ ಇರುವುದು ಒಳ್ಳೆಯದು. ಅಕ್ಟೋಬರ್ ತಿಂಗಳಿನಲ್ಲಿ ಮೇಷ ರಾಶಿಯವರ ಮೊದಲಾರ್ಧ ಯಾವ ರೀತಿಯಾಗಿದೆ ಎಂಬುದನ್ನು ನೋಡೋಣ.

ಅಂದರೆ ಅಕ್ಟೋಬರ್ ಒಂದನೇ ತಾರೀಖಿನಿಂದ ಹದಿನೈದನೇ ತಾರೀಖಿನವರೆಗೆ ಯಾವ ರೀತಿಯ ಫಲವಿದೆ ಎಂಬುದನ್ನು ನೋಡುವುದಾದರೆ ಉದ್ಯೋಗಸ್ಥರಿಗೆ ಉತ್ತಮವಾದ ಅವಕಾಶಗಳು ಸಿಗುವ ಸಾಧ್ಯತೆ ಇದೆ. ಧನಾತ್ಮಕವಾದಂತಹ ಫಲಿತಾಂಶಗಳು ಖಂಡಿತವಾಗಿ ನಿಮಗೆ ಸಿಗುತ್ತದೆ ಖರ್ಚುಗಳಿಗಿಂತ ಹೆಚ್ಚಿನದಾದ ಆದಾಯ ನಿಮಗೆ ಸಂತೋಷವನ್ನು ತಂದುಕೊಡುತ್ತದೆ. ಇನ್ನು ಪಿತೃ ಸಂಬಂಧಿ ಸಂತಾನ ಸಮಸ್ಯೆಗಳಿಗೆ ಪರಿಹಾರ ಸಿಗಬಹುದು ಅಂದರೆ ಕೆಲವರಿಗೆ ಮಕ್ಕಳಾಗುವಂತ ಭಾಗ್ಯ ಸಿಗುತ್ತದೆ. ದೇವಸ್ಥಾನಗಳಿಗೆ ಭೇಟಿ ನೀಡುವುದರಿಂದ ಮಾನಸಿಕ ನೆಮ್ಮದಿ ಸಿಗುವ ಸಾಧ್ಯತೆ ಇದೆ.

ನೀವು ಗಳಿಸಿರುವ ಜನಪ್ರಿಯತೆಯಿಂದಾಗಿ ಬಹಳಷ್ಟು ಜನ ಅತಿಥಿಗಳು ನಿಮ್ಮನ್ನು ಭೇಟಿಯಾಗುವ ಸಾಧ್ಯತೆ ಇದೆ. ನಿಮ್ಮನ್ನ ಅವಲಂಬಿಸಿರುವಂತಹ ಸ್ನೇಹಿತರು ಅತಿಥಿಗಳು ಸಂಬಂಧಿಕರು ಆಗಾಗ ಭೇಟಿಯಾಗುವ ಸಾಧ್ಯತೆ ಇದೆ. ಹಿರಿಯರ ಆರೋಗ್ಯದತ್ತ ನೀವು ಗಮನವನ್ನು ಹರಿಸಬೇಕಾಗುತ್ತದೆ ಶೀತಬಾಧೆ ಸಮಸ್ಯೆಗಳಿಂದ ನೀವು ಎಚ್ಚರವಾಗಿರಬೇಕು. ಇನ್ನು ಕೆಲವರಿಗೆ ಆಸ್ತಿ ವಿಚಾರದಲ್ಲಿ ಸಮಸ್ಯೆಗಳು ತಲೆದೋರುವ ಸಂಭವ ಇದೆ. ಅಣ್ಣತಮ್ಮಂದಿರು ದಾಯಾದಿಗಳ ವಿಚಾರದಲ್ಲಿ ಗೊಂದಲ ಕಿರಿ ಕಿರಿ ಉಂಟಾಗಬಹುದು. ಅಥವಾ ನೆರೆಹೊರೆಯಲ್ಲಿರುವ ಆಸ್ತಿಯ ವಿಚಾರದಿಂದ ಕಿರಿಕಿರಿ ಉಂಟಾಗಬಹುದು. ಇದಕ್ಕೆ ನೀವು ಮಾಡಿಕೊಳ್ಳಬೇಕಾದ ಪರಿಹಾರವೆಂದರೆ ಶ್ರೀ ವೆಂಕಟೇಶ್ವರನ ದರ್ಶನದಿಂದ ಉತ್ತಮವಾದ ಫಲ ಸಿಗುತ್ತದೆ.

ಇನ್ನು ಹದಿನಾರನೇ ತಾರೀಖಿನಿಂದ ಮುವತ್ತೊಂದನೇ ತಾರೀಖಿನವರೆಗೆ ಯಾವ ರೀತಿಯ ಫಲ ಇದೆ ಎಂಬುದನ್ನು ನೋಡುವುದಾದರೆ, ಜೀವನದಲ್ಲಿ ಅಭಿವೃದ್ಧಿಯನ್ನು ಹೊಂದುವುದಕ್ಕೆ ಉತ್ತಮವಾದ ಸಮಯ ಎಂದು ಹೇಳಬಹುದು. ವಿದ್ಯಾರ್ಥಿಗಳಿಗೆ ಶ್ರಮದಿಂದ ಉತ್ತಮವಾದ ಫಲಿತಾಂಶ ಸಿಗಲಿದೆ ಯಾವುದೇ ಕಾರಣಕ್ಕೂ ಮೈಮರೆಯುವಂತಹ ಪ್ರಯತ್ನವನ್ನು ಮಾಡಬೇಡಿ ನಿರಂತರವಾಗಿ ಪ್ರಯತ್ನವನ್ನ ಮಾಡಿ ಅದರಿಂದ ಒಳ್ಳೆಯ ಫಲಿತಾಂಶ ಸಿಕ್ಕೇ ಸಿಗುತ್ತದೆ ಅದು ಜೀವನಕ್ಕೆ ಒಳ್ಳೆಯ ದಿಕ್ಸೂಚಿ ಆಗುತ್ತದೆ.

ಸಂಪತ್ತಿನಲ್ಲಿ ಕ್ರೋಡಿಕರಣ ಆಗುವಂತದ್ದು ಆದಾಯದಲ್ಲಿ ಉಳಿತಾಯವಾಗುವುದರಿಂದ ಜೀವನದಲ್ಲಿ ಹೊಸ ಆಸೆಗಳು ಹೊಸ ಯೋಜನೆಗಳು ಹೊಸ ಯೋಚನೆಗಳು ಕಂಡುಬರುವ ಲಕ್ಷಣ ಇದೆ. ನಿಮ್ಮ ಆರ್ಥಿಕ ಸ್ಥಿತಿ ಉತ್ತಮವಾಗಿದ್ದರೆ ಹಿರಿಯ ಅಧಿಕಾರಿಗಳಿಂದ ನಿಮಗೆ ತಿಂಗಳ ಅಂತ್ಯದಲ್ಲಿ ಶುಭಸುದ್ದಿ ಸಿಗುವ ಸಂಭವವಿದೆ. ನೀವು ನಿರೀಕ್ಷೆ ಮಾಡುವುದು ನಿಮಗೆ ಸಿಗುವ ಸಾಧ್ಯತೆ ಇದೆ ಇದರಿಂದ ನಿಮ್ಮ ಮನಸ್ಸಿಗೆ ಸಂತೋಷವಾಗುತ್ತದೆ.

ಇನ್ನು ಹಣಕಾಸಿಗೆ ಸಂಬಂಧಪಟ್ಟ ವಿವಾದಗಳು ಕಂಡು ಬಂದರೆ ನೀವು ಅದರಲ್ಲಿ ಭಾಗವಹಿಸಬಾರದು. ಬೇರೆಯವರಿಗೆ ದುಡ್ಡಿನ ಸಂಕಷ್ಟ ಇದೆ ನಾನು ಅವರಿಗೆ ಸಹಾಯ ಮಾಡುತ್ತೇನೆ ಎಂದು ತೊಂದರೆ ತೆಗೆದುಕೊಳ್ಳುವುದಕ್ಕೆ ಹೋಗಬೇಡಿ ಅದು ನಿಮಗೆ ಮಾರಕವಾಗುತ್ತದೆ. ಒಂದು ವೇಳೆ ನೀವು ಸಹಾಯ ಮಾಡುವುದಿದ್ದರೆ ಅವರು ಎಷ್ಟು ಒಳ್ಳೆಯವರು ಅದು ನಿಮಗೆ ಎಷ್ಟು ಸುರಕ್ಷಿತ ಎಂಬುದರ ಬಗ್ಗೆ ವಿಚಾರ ಮಾಡಿ ಸಹಾಯ ಮಾಡಿ. ನೀವೇನಾದ್ರೂ ಯಾಮಾರಿದರೆ ಮೋಸ ನಡೆಯಬಹುದು ನಿಮ್ಮ ಆರ್ಥಿಕ ಸ್ಥಿತಿ ದುರ್ಬಲವಾಗಬಹುದು.

ಕೆಲವರು ನಿಮ್ಮ ರಹಸ್ಯವನ್ನು ಬಹಿರಂಗ ಮಾಡುವಂತಹ ಪ್ರಯತ್ನ ಮಾಡಬಹುದು ಹಾಗಾಗಿ ನಿಮ್ಮ ರಹಸ್ಯವನ್ನು ಯಾರಿಗೂ ಬಿಟ್ಟು ಕೊಡಲು ಹೋಗಬೇಡಿ ಅದು ನಿಮ್ಮ ಮನಸ್ಸಿನಲ್ಲಿ ಇರಲಿ. ಈ ಕಷ್ಟಗಳಿಂದ ಪಾರಾಗಲು ನೀವು ಯೋಜನೆಯನ್ನು ರೂಪಿಸುವುದು ಒಳ್ಳೆಯದು ನಿಮ್ಮಲ್ಲಿ ಕಷ್ಟಗಳನ್ನ ದಾಟುವಂತಹ ಶಕ್ತಿಯಿದೆ. ಆಕಸ್ಮಿಕ ಮೂಲಗಳಿಂದ ನಿಮಗೆ ಧನ ಲಾಭವಾಗುವಂತಹ ಸಾಧ್ಯತೆ ಇದೆ ಹಣಕಾಸಿನ ಹರಿವು ತುಂಬಾ ಉತ್ತಮವಾಗಿದೆ. ನೀವು ಶ್ರೀ ಲಕ್ಷ್ಮೀನಾರಾಯಣ ಸ್ತೋತ್ರ ಪಠಣ ಮಾಡುವುದರಿಂದ ಶುಭಫಲಗಳು ಸಿಗುವ ಸಾಧ್ಯತೆ ಇದೆ.

ಅಕ್ಟೋಬರ್ ತಿಂಗಳಿನಲ್ಲಿ ಯಾವ ರೀತಿಯಾಗಿ ದೇವರ ವಿಧಿವಿಧಾನಗಳನ್ನು ಮಾಡಬೇಕು ಎಂಬುದನ್ನು ನೋಡೋಣ ಮೊದಲನೆಯದಾಗಿ ನೀವು ನಿಮ್ಮ ಮನೆ ದೇವರ ಮೂಲ ಮಂತ್ರವನ್ನು ಪಠಣ ಮಾಡುವುದು ಉತ್ತಮ. ಕೇಸರಿ ಬಟ್ಟೆ ಮತ್ತು ಹಸಿ ಕಡಲೆ ದಾನ ನೀಡಬೇಕು. ಇನ್ನು ದೇವಾಲಯಕ್ಕೆ ರುದ್ರಾಕ್ಷಿಯನ್ನು ದಾನವಾಗಿ ನೀಡುವುದರಿಂದ ನಿಮಗೆ ತುಂಬಾ ಒಳ್ಳೆಯ ಫಲ ಸಿಗುತ್ತದೆ.

ಶ್ರೀಗುರುಗಳ ಪೂಜೆಯನ್ನು ಮಾಡಿ ರವೆಯಿಂದ ಮಾಡಿರುವ ಸಿಹಿಯನ್ನು ಸೇವಿಸುವುದು ಅಥವಾ ಗುರುಗಳಿಗೆ ನೀಡುವುದರಿಂದ ನಿಮಗೆ ತುಂಬಾ ಸಹಾಯವಾಗುತ್ತದೆ. ಈ ರೀತಿಯಾಗಿ ಅಕ್ಟೋಬರ್ ತಿಂಗಳಿನಲ್ಲಿ ಮೇಷ ರಾಶಿಯವರಿಗೆ ಮಿಶ್ರಿತ ಫಲಗಳಿದ್ದು ನಾವು ಸೂಚಿಸುವ ಪರಿಹಾರಗಳನ್ನು ಮೇಷ ರಾಶಿಯವರು ಮಾಡಿಕೊಳ್ಳುವುದರಿಂದ ಸಂತೋಷದಿಂದ ನಿಮ್ಮ ಜೀವನವನ್ನು ಸಾಧಿಸಬಹುದಾಗಿದೆ.

Leave A Reply

Your email address will not be published.