ಮೇಷ ರಾಶಿಯವರಿಗೆ ಫೆಬ್ರವರಿ ತಿಂಗಳಲ್ಲಿ ಯಾವೆಲ್ಲ ಶುಭಫಲಗಳಿವೆ ತಿಳಿಯಿರಿ

0 5

ನಾವಿಂದು ಎರಡು ಸಾವಿರದ ಇಪ್ಪತ್ತೆರಡನೇ ಇಸವಿಯಲ್ಲಿ ಫೆಬ್ರುವರಿ ತಿಂಗಳಲ್ಲಿ ದ್ವಾದಶ ರಾಶಿಯಲ್ಲಿ ಒಂದಾದ ಮೇಷ ರಾಶಿಗೆ ಯಾವ ರೀತಿಯ ಫಲಾಫಲಗಳು ಇದೆ ಎಂಬುದರ ಕುರಿತಾದ ಸಂಪೂರ್ಣ ಮಾಹಿತಿಯನ್ನು ತಿಳಿಸಿ ಕೊಡುತ್ತೇವೆ. ಮೇಷ ರಾಶಿಯವರು ಫೆಬ್ರವರಿ ತಿಂಗಳಿನಲ್ಲಿ ಯಾವ ಕೆಲಸವನ್ನು ಮಾಡಬಹುದು ಯಾವ ಕೆಲಸವನ್ನು ಮಾಡಬಾರದು ಯಾವ ವಿಷಯದಲ್ಲಿ ಕೆಡುಕಿದೆ ಯಾವ ವಿಷಯದಲ್ಲಿ ಒಳ್ಳೆಯದಾಗುತ್ತದೆ ಯಾವ ಕೆಲಸವನ್ನು ಮಾಡಿದರೆ ಸರಿಹೋಗುತ್ತದೆ ಎಂಬುವಂತೆ ವಿಚಾರವನ್ನು ತಿಳಿಸಿಕೊಡುತ್ತೇವೆ.

ಅಶ್ವಿನಿ ನಕ್ಷತ್ರದಲ್ಲಿ ಬರುವಂತಹ ನಾಲ್ಕು ಚರಣಗಳು, ಭರಣಿ ನಕ್ಷತ್ರ ದಲ್ಲಿ ಬರುವಂತಹ ನಾಲ್ಕು ಚರಣಗಳು ಮತ್ತು ಕೃತಿಕಾ ನಕ್ಷತ್ರದ ಮೊದಲನೇ ಚರಣ ಸೇರಿರುವಂತಹ ರಾಶಿ ಮೇಷ ರಾಶಿ. ಮೇಷ ರಾಶಿಯ ಅದೃಷ್ಟ ಬಣ್ಣ ಯಾವುದು ಎಂದರೆ ಬಿಳಿ ಮತ್ತು ಕೆಂಪು ಆಗಿದ್ದರೆ ಅದೃಷ್ಟ ದೇವತೆ ಮಹಾಶಿವ ಮತ್ತು ಆಂಜನೇಯ. ಈ ರಾಶಿಯವರ ವಿಶೇಷಗುಣ ಇವರು ಬಹಳ ಧೈರ್ಯಶಾಲಿಯಾಗಿ ಇರುತ್ತಾರೆ ಮತ್ತು ಬಹಳ ಬೇಗ ಕೋಪ ಮಾಡಿಕೊಳ್ಳುತ್ತಾರೆ. ಮೇಷ ರಾಶಿಯ ಮಿತ್ರ ರಾಶಿಗಳು ಸಿಂಹ ಧನಸ್ಸು ತುಲಾ ರಾಶಿ ಮತ್ತು ಶತ್ರು ರಾಶಿಗಳು ಮಿಥುನ ಮತ್ತು ಕನ್ಯಾ ರಾಶಿ. ಮೇಷ ರಾಶಿಯವರಿಗೆ ಫೆಬ್ರವರಿ ತಿಂಗಳಲ್ಲಿ ಯಾವ ದಿನ ಶುಭಕಾರಕ ವಾಗಿದೆ ಎಂಬುದನ್ನು ನೋಡುವುದಾದರೆ ಫೆಬ್ರವರಿ ನಾಲ್ಕನೇ ತಾರೀಕು ಆರನೇ ತಾರೀಕು ಹತ್ತು-ಹನ್ನೊಂದು ಹದಿನೆಂಟು ಮತ್ತು ಇಪತ್ನಾಲ್ಕನೇ ತಾರೀಕು ಶುಭ ದಿನಗಳಾಗಿವೆ.

ಮೇಷ ರಾಶಿಯವರಿಗೆ ಫೆಬ್ರುವರಿ ತಿಂಗಳಿನಲ್ಲಿ ಕೆಲವೊಂದು ವಿಷಯಗಳಲ್ಲಿ ಸಾಮರಸ್ಯ ಕಂಡುಬರುತ್ತದೆ. ಎಲ್ಲರೊಂದಿಗೆ ಬೆರೆಯುವಂತಹ ಗುಣ ಇರುವುದು ಬಹಳ ಒಳ್ಳೆಯದು. ಯಾವುದೇ ಕಾರಣಕ್ಕೂ ನಿಮಗೆ ಹಣದ ಸಮಸ್ಯೆ ಬರುವುದಿಲ್ಲ ಸಮಸ್ಯೆ ಇರುತ್ತದೆ ಆದರೆ ನೀವು ದುಡಿದ ಹಣಕ್ಕೆ ತೊಂದರೆ ಇರುವುದಿಲ್ಲ. ನಿಮಗೆ ಬರಬೇಕಾದಂತಹ ದುಡ್ಡು ಖಂಡಿತವಾಗಿ ನಿಮಗೆ ಬರುತ್ತದೆ ನೀವು ಯಾರಿಂದಲಾದರೂ ಸಾಲ ಪಡೆದುಕೊಂಡಿದ್ದರೆ ಅದನ್ನು ತೀರಿಸುವುದಕ್ಕೆ ಇದು ಒಳ್ಳೆಯ ಸಮಯವಾಗಿದೆ ಅದು ನಿಮ್ಮಿಂದ ಸಾಧ್ಯವಾಗುತ್ತದೆ.

ಉದ್ಯೋಗ ಕ್ಷೇತ್ರದಲ್ಲಿ ಮೇಲೆ ಬರುವುದಕ್ಕೆ ನೀವು ಬಹಳಷ್ಟು ಪ್ರಯತ್ನವನ್ನು ಮಾಡುತ್ತೀರಿ ನೀವು ಮಾಡುವ ಕೆಲಸವನ್ನು ಬಹಳ ಶ್ರದ್ಧೆಯಿಂದ ಅದನ್ನು ಉನ್ನತ ಮಟ್ಟಕ್ಕೆ ತೆಗೆದುಕೊಂಡು ಹೋಗುವ ರೀತಿಯಲ್ಲಿ ಕೆಲಸಮಾಡುತ್ತಿರಿ. ನೀವು ಮಾಡುವ ಕೆಲಸದಿಂದ ಆದಾಯ ಬರುತ್ತದೆ ಆದರೆ ಅಷ್ಟೇ ಕರ್ಚು ಬರುತ್ತದೆ ಹಾಗಾಗಿ ಅನಗತ್ಯ ಖರ್ಚಿನ ಮೇಲೆ ಕಡಿವಾಣವನ್ನು ಹಾಕಬೇಕು. ಮೇಷ ರಾಶಿಯ ಕೆಲವರಿಗೆ ವಾಹನವನ್ನು ಕೊಂಡು ಕೊಳ್ಳುವಂತಹ ಸಂಭವವಿದೆ ವಾಹನದ ಅವಶ್ಯಕತೆ ನಿಮಗೆ ಎಷ್ಟಿದೆ ಎಂಬುದನ್ನು ಯೋಚನೆ ಮಾಡಿ ವಾಹನವನ್ನು ಖರೀದಿಸುವುದು ಒಳ್ಳೆಯದು.

ಈಗ ಆದಾಯ ಚೆನ್ನಾಗಿ ಬರುತ್ತಿದೆ ಎಂದು ನೀವು ಅದನ್ನು ಖರೀದಿಸಬೇಕು ಇದನ್ನು ತೆಗೆದುಕೊಳ್ಳಬೇಕು ಎಂದು ಬಹಳ ಮುಂದಾಲೋಚನೆಯನ್ನು ಮಾಡುವುದು ಅಷ್ಟು ಒಳ್ಳೆಯದಲ್ಲ. ಇನ್ನು ಫೆಬ್ರವರಿ ತಿಂಗಳು ವಿದ್ಯಾರ್ಥಿಗಳ ಪಾಲಿಗೆ ಒಳ್ಳೆಯ ದಿನಗಳಾಗಿವೆ ಓದಿನ ಕಡೆ ಆಸಕ್ತಿ ಹೆಚ್ಚಾಗುತ್ತದೆ ಮನೆಯಲ್ಲಿ ಕುಳಿತು ಅಭ್ಯಾಸವನ್ನು ಮಾಡುತ್ತಾರೆ. ಆಟ ಪಾಠದ ಜೊತೆಗೆ ಅಭ್ಯಾಸದ ಕಡೆಯೂ ಕೂಡ ಗಮನವನ್ನು ಹರಿಸುತ್ತಾರೆ ಕೆಲವು ವಿದ್ಯಾರ್ಥಿಗಳಿಗೆ ವಿದೇಶಕ್ಕೆ ಹೋಗುವಂತಹ ಅವಕಾಶ ದೊರೆಯಬಹುದು. ಇನ್ನು ಕೆಲವರು ಪೂಜೆ-ಪುನಸ್ಕಾರ ದೇವತಾಕಾರ್ಯಗಳು ಹಿರಿಯರಿಂದ ಆಚರಣೆಯಲ್ಲಿ ಬಂದಿರುವಂತಹ ಕೆಲವು ಪೂಜಾ ಪರಿಹಾರಗಳಲ್ಲಿ ತಮ್ಮನ್ನು ತೊಡಗಿಸಿಕೊಳ್ಳುತ್ತಾರೆ. ನೀವು ಮಾಡುವ ಕೆಲಸದಲ್ಲಿ ಇರುವಂತಹ ಕಿರಿಕಿರಿಗಳು ಹಂತಹಂತವಾಗಿ ಕಡಿಮೆಯಾಗುವ ಸಾಧ್ಯತೆ ಇದೆ. ಕೆಲವು ಜನರಿಗೆ ಮದುವೆ ವಿಷಯಗಳು ಪ್ರಸ್ತಾಪವಾಗುತ್ತದೆ ಮದುವೆಗೆ ಸಂಬಂಧಪಟ್ಟಂತಹ ಪ್ರಕ್ರಿಯೆಗಳು ನಡೆಯುತ್ತಿರುತ್ತದೆ.

ಹಣಕಾಸು ಸಂಸ್ಥೆಯಲ್ಲಿ ಕೆಲಸ ಮಾಡುತ್ತಿರುವವರು ಹೆಚ್ಚಿನ ಆದಾಯವನ್ನು ನಿರೀಕ್ಷೆ ಮಾಡಬಹುದು. ಕೆಲವರಿಗೆ ಪ್ರತಿಷ್ಠಿತವಾದ ಸ್ಥಾನಮಾನ ದೊರೆಯುವ ಸಾಧ್ಯತೆ ಇದೆ ಪೊಲೀಸ್ ಇಲಾಖೆಯಲ್ಲಿ ರಕ್ಷಣಾ ಇಲಾಖೆಯಲ್ಲಿ ಕೆಲಸಕ್ಕೆ ಸಿಗುವಂತಹ ಸಾಧ್ಯತೆಗಳಿವೆ ಜೊತೆಗೆ ಸರ್ಕಾರಿ ಕೆಲಸಗಳು ದೊರೆಯುವ ಸಾಧ್ಯತೆ ಇರುತ್ತದೆ. ಅದರ ಜೊತೆಜೊತೆಗೆ ಒತ್ತಡದ ಜೀವನ ಇರುತ್ತದೆ. ಇನ್ನು ಆರೋಗ್ಯದ ವಿಷಯದ ಕುರಿತು ನೋಡುವುದಾದರೆ ಆರೋಗ್ಯದಲ್ಲಿ ಸ್ವಲ್ಪ ಏರಿಳಿತಗಳು ಕಂಡುಬರುತ್ತವೆ ಕೆಮ್ಮು ಶೀತ ಕೆಲವರಿಗೆ ಹಿಮ್ಮಡಿ ಅಥವಾ ಮೊಣಕಾಲು ನೋವು ಕಾಣಿಸಿಕೊಳ್ಳಬಹುದು ಹಾಗಾಗಿ ಆರೋಗ್ಯದ ಕಡೆ ಬಹಳಷ್ಟು ಗಮನ ಕೊಡುವುದು ಒಳ್ಳೆಯದು. ಮೇಷ ರಾಶಿಯವರಿಗೆ ಫೆಬ್ರವರಿ ತಿಂಗಳ ಮೊದಲ ಹದಿನೈದು ದಿನಗಳಲ್ಲಿ ಧನಲಾಭ ಚೆನ್ನಾಗಿರುತ್ತದೆ ಸಂಬಂಧಿಕರಿಂದಲೇ ಹಣದ ಸಹಾಯ ಒದಗುತ್ತದೆ ಜೊತೆಗೆ ಹೊಸ ವಸ್ತುಗಳ ಖರೀದಿ ವಾಹನ ಖರೀದಿ ಜೊತೆಜೊತೆಗೆ ನಿಮ್ಮಿಂದ ಇತರರಿಗೂ ಧನಸಹಾಯ ಮಾಡುವಂತಹ ಕೆಲಸಗಳು ಆಗುತ್ತವೆ.

ದ್ವಿತೀಯಾರ್ಧದಲ್ಲಿ ನಿಮಗೆ ಅಪರಿಚಿತ ವ್ಯಕ್ತಿಗಳ ಭೇಟಿಯಾಗುವಂತದ್ದು ಗಣ್ಯವ್ಯಕ್ತಿಗಳ ಭೇಟಿಯಾಗುವಂತದ್ದು ಜೊತೆಗೆ ಕೆಲಸದಲ್ಲಿಯೂ ನೀವು ಬಹಳಷ್ಟು ಯಶಸ್ಸನ್ನು ಸಾಧಿಸಬಹುದು ಜೊತೆಗೆ ಚಿನ್ನಾಭರಣಗಳನ್ನು ಖರೀದಿಸಬಹುದು. ಇನ್ನು ಮೇಷ ರಾಶಿಯವರು ಶ್ರೀ ಆಂಜನೇಯ ಸ್ವಾಮಿಯ ಆರಾಧನೆಯನ್ನು ಮಾಡುವುದು ಶುಭವನ್ನು ತಂದುಕೊಡುತ್ತದೆ ಜೊತೆಗೆ ಮನೆದೇವರ ಮೂಲ ಮಂತ್ರವನ್ನು ಜಪಿಸುವುದು ಒಳ್ಳೆಯದು ಬ್ರಹ್ಮಚಾರಿಗಳಿಗೆ ಸಿಹಿತಿಂಡಿಯನ್ನು ದಾನವಾಗಿ ನೀಡುವುದು ಕಷ್ಟದಲ್ಲಿರುವವರಿಗೆ ಕೆಲಸವನ್ನು ನೀಡುವುದು ಸಹಾಯ ಮಾಡುವುದು ಈ ರೀತಿ ಮಾಡುವುದರಿಂದ ನಿಮಗೆ ಉತ್ತಮವಾದ ಫಲಗಳು ಲಭಿಸಲಿದೆ.

ಇದಿಷ್ಟು ಫೆಬ್ರುವರಿ ತಿಂಗಳಿನಲ್ಲಿ ಮೇಷ ರಾಶಿಯವರ ಫಲಾಫಲಗಳು ಮೇಲೆ ತಿಳಿಸಿರುವ ಪರಿಹಾರಗಳನ್ನು ಮಾಡಿಕೊಳ್ಳುವ ಮೂಲಕ ನೀವು ಉತ್ತಮ ಫಲವನ್ನು ಪಡೆಯಬಹುದಾಗಿದೆ ಈ ಮಾಹಿತಿಯನ್ನು ನೀವು ತಿಳಿದುಕೊಳ್ಳುವುದರೊಂದಿಗೆ ನಿಮ್ಮ ಪರಿಚಿತರು ಹಾಗೂ ಸ್ನೇಹಿತರೊಂದಿಗೆ ಹಂಚಿಕೊಳ್ಳಿ.

Leave A Reply

Your email address will not be published.