Ultimate magazine theme for WordPress.

ಮೇಷ ರಾಶಿಯವರ ಲಕ್ಕಿ ನಂಬರ್ ಹಾಗೂ ಅದೃಷ್ಟ ತಂದುಕೊಡುವ ಕಲರ್ ಯಾವುದು?

0 81

ದ್ವಾದಶ ರಾಶಿಚಕ್ರಗಳಲ್ಲಿ ಮೊದಲ ರಾಶಿಯೇ ಮೇಷ ರಾಶಿ. ಉತ್ಸಾಹ, ಭಾವೋದ್ರೇಕ ಮತ್ತು ಹುಮ್ಮಸ್ಸು ಈ ರಾಶಿಯನ್ನು ಪ್ರತಿನಿಧಿಸುತ್ತದೆ. ಬೆಂಕಿಯ ಚಿಹ್ನೆಯನ್ನು ಹೊಂದಿರುವ ಈ ರಾಶಿಯನ್ನು ಮಂಗಳನು ಆಳುವನು. ಈ ರಾಶಿಯಡಿಯಲ್ಲಿ ಜನಿಸಿದವರು ಜೀವನದ ಎಲ್ಲಾ ಆಯಾಮದಲ್ಲೂ ತಾವೇ ಮೊದಲ ಸ್ಥಾನದಲ್ಲಿ ಇರುತ್ತೇವೆ ಎಂದು ಭಾವಿಸುತ್ತಾರೆ. ಎಂತಹ ಸಂಗತಿಗಳಲ್ಲಾದರೂ ತಮ್ಮದೊಂದು ಸ್ಥಾನವನ್ನು ಮಾಡಿಕೊಳ್ಳಲು ಸಾಕಷ್ಟು ಉತ್ಸಾಹವನ್ನು ತೋರುವರು.

ಅಶ್ವಿನಿ ನಕ್ಷತ್ರ ನಾಲ್ಕು ಪಾದ, ಭರಣಿ ನಕ್ಷತ್ರದ ನಾಲ್ಕು ಪಾದ ಹಾಗೂ ಕೃತ್ತಿಕಾ ನಕ್ಷತ್ರದ ಒಂದು ಪಾದ ಸೇರಿ ಮೇಷ ರಾಶಿ ಆಗುತ್ತದೆ. ಈ ರಾಶಿಯ ಅಧಿಪತಿ ಕುಜ. ಯಾವ ರಾಶಿಗೆ ಕುಜ ಅಧಿಪತಿಯೋ ಅವರಿಗೆ ಹಠ ಜಾಸ್ತಿ ಇರುತ್ತದೆ. ಈಗ ನಕ್ಷತ್ರಗಳಿಗೆ ಯಾವ ಗ್ರಹ ಅಧಿಪತಿ ಅಂತ ನೋಡುವುದಾದರೆ, ಅಶ್ವಿನಿಗೆ ಕೇತು ಅಧಿಪತಿ. ಭರಣಿಗೆ ಶುಕ್ರ ಅಧಿಪತಿ ಹಾಗೂ ಕೃತ್ತಿಕಾಗೆ ರವಿ ಅಧಿಪತಿಯಾಗಿರುತ್ತಾರೆ. ಮೇಷ ರಾಶಿಗೆ ಕುಜ ಗ್ರಹ ಅಧಿಪತಿಯೇನೋ ಸರಿ. ಆದರೆ ಶತ್ರು ಗ್ರಹಗಳು ಯಾವುವು ಅಂದರೆ, ಬುಧ-ಶುಕ್ರ-ಶನಿ ಶತ್ರುಗಳಾಗುತ್ತವೆ.

ಜ್ಯೋತಿಷ್ಯದ ತುಲನೆಯ ಪ್ರಕಾರ ಮಾರ್ಚ್ 21 ರಿಂದ ಏಪ್ರಿಲ್ 20ರ ಒಳಗೆ ಜನಿಸಿದವರು ಮೇಷರಾಶಿಯ ಚಿಹ್ನೆಯನ್ನು ಹೊಂದಿರುತ್ತಾರೆ. ಈ ಚಿಹ್ನೆಯವರ ಹೆಸರಿನ ಮೊದಲ ಅಕ್ಷರ ಅ, ಲ ಮತ್ತು ಇ ಅಕ್ಷರಗಳಾಗಿರಬೇಕು ಎನ್ನಲಾಗುವುದು. ಮೇಷ ರಾಶಿಯ ವ್ಯಕ್ತಿಗಳು ವಿಶೇಷ ಗುಣ ಹಾಗೂ ಜೀವನದಲ್ಲಿ ಸಾಕಷ್ಟು ಬದಲಾವಣೆಯನ್ನು ಕಾಣುವರು. ನೀವು ಈ ರಾಶಿಚಕ್ರದವರಾಗಿದ್ದರೆ ಅಥವಾ ನಿಮ್ಮವರು ಮೇಷ ರಾಶಿಯವರಾಗಿದ್ದರೆ ಅವರ ಜೀವನಕ್ಕೆ ಸಂಬಂಧಿಸಿದ ಮಹತ್ತರ ಸಂಗತಿಗಳನ್ನು ತಿಳಿಯಿರಿ.

ದ್ವಾದಶ ರಾಶಿಚಕ್ರಗಳಲ್ಲಿ ಮೊದಲ ರಾಶಿಯೇ ಮೇಷ ರಾಶಿ. ಉತ್ಸಾಹ, ಭಾವೋದ್ರೇಕ ಮತ್ತು ಹುಮ್ಮಸ್ಸು ಈ ರಾಶಿಯನ್ನು ಪ್ರತಿನಿಧಿಸುತ್ತದೆ. ಬೆಂಕಿಯ ಚಿಹ್ನೆಯನ್ನು ಹೊಂದಿರುವ ಈ ರಾಶಿಯನ್ನು ಮಂಗಳನು ಆಳುವನು. ಈ ರಾಶಿಯಡಿಯಲ್ಲಿ ಜನಿಸಿದವರು ಜೀವನದ ಎಲ್ಲಾ ಆಯಾಮದಲ್ಲೂ ತಾವೇ ಮೊದಲ ಸ್ಥಾನದಲ್ಲಿ ಇರುತ್ತೇವೆ ಎಂದು ಭಾವಿಸುತ್ತಾರೆ. ಎಂತಹ ಸಂಗತಿಗಳಲ್ಲಾದರೂ ತಮ್ಮದೊಂದು ಸ್ಥಾನವನ್ನು ಮಾಡಿಕೊಳ್ಳಲು ಸಾಕಷ್ಟು ಉತ್ಸಾಹವನ್ನು ತೋರುವರು.

ಮೇಷ ರಾಶಿಗೆ ಸೇರಿದ ಜನರು ಮಹತ್ವಾಕಾಂಕ್ಷೆಯವರು, ದೃಢಸಂಕಲ್ಪದವರು ಮತ್ತು ಚತುರರು. ಇವರು ವಿಷಯಗಳನ್ನು ಹಗುರವಾಗಿ ತೆಗೆದುಕೊಳ್ಳುವುದಿಲ್ಲ. ಮತ್ತು ಅವರ ಕನಸುಗಳನ್ನು ಈಡೇರಿಸುವ, ತಮ್ಮ ಗುರಿಗಳನ್ನು ಸಾಧಿಸುವ ಸಂದರ್ಭದಲ್ಲಿ ಯಾರೂ ಅವರನ್ನು ತಡೆಯಲಾಗದು. ಇವರು ರಿಸ್ಕ್ ತೆಗೆದುಕೊಳ್ಳುವವರು ಮತ್ತು ಸುರಕ್ಷಿತವಾಗಿ ಆಟವಾಡುವುದನ್ನು ನಂಬುವುದಿಲ್ಲ. ಮೇಷರಾಶಿಯಲ್ಲಿ ಜನಿಸಿದವರು ಯಾವುದಕ್ಕೂ ಹೆದರುವುದಿಲ್ಲ, ಧೈರ್ಯಶಾಲಿಗಳು.

ಮೇಷ ರಾಶಿಯವರಿಗೆ ಹನುಮಂತ ಹಾಗೂ ಸುಬ್ರಹ್ಮಣ್ಯ ಅದೃಷ್ಟ ತರುವ ದೇವತೆಗಳು. 6 ಹಾಗೂ 9ನೇ ಸಂಖ್ಯೆ ಇವರ ಪಾಲಿನ ಅದೃಷ್ಟ ಸಂಖ್ಯೆಗಳು. 9, 18, 27 ಈ ದಿನಾಂಕಗಳು ಕುಜ ಗ್ರಹ ಪಾಲಿಗೆ ಅದೃಷ್ಟ ತರುತ್ತವೆ. ಸಿಂಹ, ತುಲಾ, ಧನು ರಾಶಿಯವರ ಜತೆಗಿನ ವಿವಾಹ ಇವರಿಗೆ ಅದೃಷ್ಟ ತರುತ್ತದೆ. ಮಿಥುನ ಹಾಗೂ ಕನ್ಯಾ ರಾಶಿಯವರ ಜತೆಗೆ ವಿವಾಹ ಮಾಡಿಕೊಂಡರೆ ಶತ್ರುತ್ವ ಬೆಳೆಯುತ್ತದೆ. ಅದೃಷ್ಟ ಕಡಿಮೆ ಆಗುತ್ತದೆ.

ಮೇಷ ರಾಶಿಯವರು ಎದುರಿನವರ ನಕಾರಾತ್ಮಕ ಸ್ವಭಾವವನ್ನು ಮುಖಕ್ಕೆ ಹೊಡೆದಂತೆ ಹೇಳುತ್ತಾರೆ. ಅದು ಇವರ ಪಾಲಿಗೆ ನೆಗೆಟಿವ್ ಆಗಿ ಪರಿಣಮಿಸುತ್ತದೆ. ರಾಜಕಾರಣದಲ್ಲಿ ಇವರಿಗೆ ಉತ್ತಮ ಪ್ರಗತಿ ದೊರೆಯುತ್ತಿದೆ. ತುಂಬ ಸರಳ ವ್ಯಕ್ತಿತ್ವದವರಾಗಿರುವ ಇವರು, ಸತ್ಯವನ್ನು ಹೇಳುವಂಥವರಾಗಿರುತ್ತಾರೆ, ಕಠಿಣ ಪರಿಶ್ರಮದ ಮೂಲಕ ತಮ್ಮ ಜೀವನದಲ್ಲಿ ಯಶಸ್ಸು ಪಡೆಯುತ್ತಾರೆ. ಇವರು ಇತರರ ಸಹಾಯ ಕೇಳುವುದಿಲ್ಲ. ಅತ್ಯಂತ ವಿರಳ ಅಥವಾ ಸಂದಿಗ್ಧ ವೇಳೆಯಲ್ಲಿ ಮಾತ್ರ ನೆರವು ಕೇಳಬಹುದು.

ಮೇಷ ರಾಶಿಯವರಿಗೆ ಕೆಂಪು ಅಥವಾ ಕೇಸರಿ ಬಣ್ಣ ಶುಭ ಸೂಚಕ. ಈ ಬಣ್ಣಗಳ ಬಟ್ಟೆ ಧರಿಸುವುದರಿಂದ ಅವರು ಮಾನಸಿಕವಾಗಿ ಸಮಾಧಾನವಾಗಿ ಇರುತ್ತಾರೆ. ನಿಮ್ಮ ಕೈಯಲ್ಲಿ ಕೆಂಪು ಬಣ್ಣದ ಕರವಸ್ತ್ರ ಇಟ್ಟುಕೊಳ್ಳುವುದು ಒಳ್ಳೆಯದು. ಮೇಷ ರಾಶಿಯವರಿಗೆ ಗೋಮೇಧಿಕ ರತ್ನ ಶುಭದಾಯಕವಾಗಿರುತ್ತದೆ. ಇವರು ಇದನ್ನು ಬಳಸಿಕೊಳ್ಳುವುದರಿಂದ ಮಾನಸಿಕ ಸಂತುಲನ ಕಾಯ್ದುಕೊಳ್ಳಬಹುದು. ಮಂಗಳವಾರ ಉಪವಾಸ ವ್ರತ ಮಾಡಬೇಕು. ಮೇಷ ರಾಶಿಯವರಿಗೆ ಮಂಗಳವಾರ ಶುಭ ದಿನವಾಗಿದ್ದು ಶುಕ್ರವಾರ ಆಶುಭವಾಗಿದೆ. ಗುರುವಾರ ಹಾಗೂ ರವಿವಾರದ ದಿನಗಳು ಸಹ ಶುಭವಾಗಿದೆ.

Leave A Reply

Your email address will not be published.