ಕಟಕ ರಾಶಿ: ನಿಷ್ಠೆ ಇವರ ಹುಟ್ಟುಗುಣ ಆದ್ರೆ ಇವರ ಗುಣಸ್ವಭಾವ ಹೇಗಿರತ್ತೆ ನೋಡಿ

0 10,393

ಕಟಕ ರಾಶಿ ಹಾಗೂ ಕಟಕ ಲಗ್ನದವರ ಗುಣ ಸ್ವಭಾವ ತಿಳಿಯಬೇಕಾದರೆ ಆ ರಾಶಿಯ ರಾಶ್ಯಾಧಿಪತಿಯ ಬಗ್ಗೆ ತಿಳಿದುಕೊಳ್ಳಬೇಕಾಗುತ್ತದೆ. ಒಂದೊಂದು ರಾಶಿಯಲ್ಲಿ ಜನಿಸಿದವರು ತಮ್ಮದೆ ಆದ ವಿಭಿನ್ನ ಗುಣಸ್ವಭಾವ ಭವಿಷ್ಯವನ್ನು ಹೊಂದಿರುತ್ತಾರೆ ಅದರಂತೆ ಕಟಕ ರಾಶಿಯವರ ಗುಣ ಸ್ವಭಾವ, ಅವರ ಸ್ಟ್ರೆಂತ್ ಹಾಗೂ ವೀಕ್ನೆಸ್ ಬಗ್ಗೆ ಈ ಲೇಖನದಲ್ಲಿ ನೋಡೋಣ.

ಕಟಕ ರಾಶಿ ಜಲತತ್ವರಾಶಿಯಾಗಿದ್ದು, ಈ ರಾಶಿಯ ರಾಶ್ಯಾಧಿಪತಿ ಚಂದ್ರ ಗ್ರಹವಾಗಿರುತ್ತದೆ. ಈ ರಾಶಿಯವರು ನೋಡಲು ಸುಂದರವಾಗಿ ಹಾಗೂ ಆಕರ್ಷಕರಾಗಿರುತ್ತಾರೆ. ಇವರು ಯಾವಾಗಲೂ ಸ್ಟೈಲಿಶ್ ಆಗಿರಲು ಇಷ್ಟಪಡುತ್ತಾರೆ. ಇವರ ಮನಸ್ಸು ಚಂಚಲವಾಗಿರುತ್ತದೆ, ಸ್ವಲ್ಪ ಸಂಕೋಚ ಸ್ವಭಾವವೂ ಇರುತ್ತದೆ. ಇವರು ಮಕ್ಕಳಂತೆ ಮುಗ್ದರಾಗಿ ಕಾಣಿಸುತ್ತಾರೆ ಸೌಮ್ಯ ಸ್ವಭಾವವನ್ನು, ಪ್ರಾಮಾಣಿಕವಾಗಿ ಇರುತ್ತಾರೆ. ಇವರಿಗೆ ಸಹಾನುಭೂತಿಯೂ ಇರುತ್ತದೆ, ಬಹಳ ಸಹಾಯ ಮಾಡುವ ಗುಣ ಹೊಂದಿರುತ್ತಾರೆ. ಇವರು ತಮ್ಮ ಕುಟುಂಬದವರ, ಸ್ನೇಹಿತರ ಕಷ್ಟ ಸುಖದಲ್ಲಿ ಭಾಗಿಯಾಗುತ್ತಾರೆ. ಇವರು ನೋಡಲು ಕಠೋರವಾಗಿ ಕಾಣಿಸುತ್ತಾರೆ ಆದರೆ ಇವರ ಮನಸ್ಸು ಮೃದುವಾಗಿರುತ್ತದೆ. ಈ ರಾಶಿಯವರು ಬಹಳ ಭಾವನಾಜೀವಿಗಳಾಗಿರುತ್ತಾರೆ ಹಾಗೂ ಸೂಕ್ಷ್ಮ ಸ್ವಭಾವವನ್ನು ಹೊಂದಿರುತ್ತಾರೆ. ಬೇರೆಯವರ ಕಠೋರವಾದ ಮಾತು ಇವರನ್ನು ಘಾಸಿಗೊಳಿಸುತ್ತದೆ.

ಕಟಕ ರಾಶಿಯವರು ಹೃದಯದಿಂದ ಯೋಚಿಸುತ್ತಾರೆ. ಈ ರಾಶಿಯವರು ಎಲ್ಲರೊಂದಿಗೆ ಫ್ರೆಂಡ್ಲಿಯಾಗಿರುತ್ತಾರೆ. ಇವರಿಗೆ ಸ್ನೇಹಿತರು ಹೆಚ್ಚಿರುತ್ತಾರೆ. ಇವರು ತಮ್ಮ ಕುಟುಂಬದವರು ಹಾಗೂ ಸ್ನೇಹಿತರಿಗೆ ಪ್ರಾಮುಖ್ಯತೆ ಕೊಡುತ್ತಾರೆ. ಇವರು ತಮ್ಮ ಇಷ್ಟದಂತೆ ಜೀವನವನ್ನು ನಡೆಸಲು ಇಷ್ಟ ಪಡುತ್ತಾರೆ. ಇವರು ಬೇರೆಯವರ ಮಾತನ್ನು ಕೇಳುವುದು ಕಷ್ಟ. ಇವರಿಗೆ ಪ್ರೀತಿಯ ವಿಷಯದಲ್ಲಿ ಯಶಸ್ಸು ಸಿಗುವುದು ಕಡಿಮೆ. ಇವರಿಗೆ ಪ್ರೀತಿಯ ವಿಷಯದಲ್ಲಿ ಬಹಳ ಅಟ್ಯಾಚ್ಮೆಂಟ್ ಇರುತ್ತದೆ. ಇವರು ತಮ್ಮ ಸಂಗಾತಿಯನ್ನು ಬಹಳ ಪ್ರೀತಿಸುತ್ತಾರೆ. ಈ ರಾಶಿಯವರು ಪರಿವರ್ತನೆಯನ್ನು ಇಷ್ಟಪಡುತ್ತಾರೆ. ಇವರು ತಮ್ಮ ಜೀವನದಲ್ಲಿ ದೊಡ್ಡ ದೊಡ್ಡ ಕನಸನ್ನು ಕಾಣುತ್ತಾರೆ ಹಾಗೂ ಶ್ರಮವಹಿಸಿ ಎತ್ತರದ ಸ್ಥಾನಕ್ಕೆ ಹೋಗುತ್ತಾರೆ. ಈ ರಾಶಿಯವರು ತನ್ನ ತಾಯಿಯ ಆಲೋಚನೆಯನ್ನು ಹೆಚ್ಚಾಗಿ ಒಪ್ಪುವುದಿಲ್ಲ. ಈ ರಾಶಿಯ ರಾಶ್ಯಾಧಿಪತಿ ಚಂದ್ರನಾಗಿರುವುದರಿಂದ ಇವರ ಮನಸ್ಸು ಚಂಚಲವಾಗಿರುತ್ತದೆ.

ಕಟಕ ರಾಶಿಯವರಿಗೆ ಸ್ವಾರ್ಥ ಹಾಗೂ ಕ್ರೋಧ ಇರುತ್ತದೆ. ಇವರು ಯಾವಾಗಲೂ ಐಶಾರಾಮಿ ಜೀವನದ ಬಗ್ಗೆ ಯೋಚಿಸುತ್ತಾರೆ. ಇವರಿಗೆ ಧೈರ್ಯ ಹೆಚ್ಚಾಗಿರುತ್ತದೆ. ಇವರಿಗೆ ಜ್ಞಾಪಕ ಶಕ್ತಿ ಹೆಚ್ಚಿರುತ್ತದೆ. ಇವರು ಎಲ್ಲವನ್ನು ನೆನಪಿನಲ್ಲಿ ಇಟ್ಟುಕೊಂಡಿರುತ್ತಾರೆ. ಇವರಿಗೆ ಹಳೆಯ ನೆನಪುಗಳು ಕಾಡುತ್ತಿರುತ್ತದೆ. ಇವರು ಪ್ರಕೃತಿಯ ಪ್ರೇಮಿಗಳಾಗಿರುತ್ತಾರೆ. ಇವರು ಜನ್ಮಸ್ಥಳದಿಂದ ದೂರ ಇರುತ್ತಾರೆ. ಇವರಿಗೆ ಕಲೆಯಲ್ಲಿ ಹೆಚ್ಚು ಆಸಕ್ತಿ ಇರುತ್ತದೆ. ಧಾರ್ಮಿಕ ವಿಷಯದಲ್ಲಿ ಇವರಿಗೆ ಆಸಕ್ತಿ ಇರುತ್ತದೆ. ದೇಶಸೇವೆ ಹಾಗೂ ಸಮಾಜಸೇವೆಗಳಲ್ಲಿ ಇವರಿಗೆ ಹೆಚ್ಚಿನ ಆಸಕ್ತಿ ಇರುತ್ತದೆ. ಈ ರಾಶಿಯವರಿಗೆ ರಾಜನೀತಿ ಹಾಗೂ ಸರ್ಕಾರಿ ಸೇವೆಯಲ್ಲಿ ಪ್ರತಿಷ್ಠೆ ಹಾಗೂ ಸನ್ಮಾನ ಸಿಗುತ್ತದೆ. ಇವರು ಬೇರೆಯವರ ಭಾವನೆಗಳನ್ನು ಬೇಗ ಅರ್ಥಮಾಡಿಕೊಳ್ಳುತ್ತಾರೆ. ಇವರು ಬುದ್ಧಿವಂತರಾಗಿರುತ್ತಾರೆ, ಯಾವುದೆ ಕೆಲಸ ಕೊಟ್ಟರು ಅದನ್ನು ಕಲಿತು ಮಾಡಿ ಮುಗಿಸುತ್ತಾರೆ.

ಈ ರಾಶಿಯವರಿಗೆ ಸಿಂಗಿಂಗ್, ಡ್ಯಾನ್ಸಿಂಗ್, ನಟನೆ, ಕುಕ್, ಮೆಡಿಕಲ್, ಸರ್ಕಾರಿ ಕೆಲಸ, ಡಾಕ್ಟರ್, ವಿದೇಶದಲ್ಲಿ ಇಂಪೋರ್ಟ್ ಎಕ್ಸ್ಪೋರ್ಟ್ ಬಿಸಿನೆಸ್, ನೀರಿಗೆ ಸಂಬಂಧಿಸಿದ ಕೆಲಸ ಹಾಗೂ ಜಲಮಾರ್ಗದಲ್ಲಿ ಮಾಡುವ ವ್ಯಾಪಾರದಲ್ಲಿ ಆಸಕ್ತಿ ಇರುತ್ತದೆ. ಇವರಿಗೆ ಶೀತ, ಕಫ, ಹೊಟ್ಟೆನೋವು, ಖಿನ್ನತೆಯಂತಹ ಖಾಯಿಲೆಗಳು ಬರಬಹುದು. ಈ ರಾಶಿಯವರು ಚಂಚಲ ಸ್ವಭಾವವನ್ನು ಹೊಂದಿರುವುದರಿಂದ ಮನಸನ್ನು ಸ್ಥಿರವಾಗಿ ಇಟ್ಟುಕೊಳ್ಳುವುದು ಒಳ್ಳೆಯದು. ತಾಯಿಯ ಮಾತನ್ನು ಕೇಳಬೇಕು. ಸಮುದ್ರ, ನದಿ ಹೀಗೆ ನೀರಿನ ಹತ್ತಿರ ನಿಲ್ಲುವುದು ಈ ರಾಶಿಯವರಿಗೆ ಒಳ್ಳೆಯದಲ್ಲ. ಈ ಮಾಹಿತಿಯನ್ನು ತಪ್ಪದೆ ಎಲ್ಲಾ ಕಟಕ ರಾಶಿಯವರಿಗೆ ತಿಳಿಸಿ.

Leave A Reply

Your email address will not be published.