ಮಕ್ಕಳು ಚುರುಕಾಗಿ, ಬುದ್ಧಿವಂತರಾಗಿ ಬೆಳೆಯಬೇಕು ಎಂದು ಎಲ್ಲಾ ತಂದೆ ತಾಯಿಗಳಿಗೆ ಆಸೆ ಇರುತ್ತದೆ. ತಮ್ಮ ಮಕ್ಕಳು ಚೆನ್ನಾಗಿ ಓದಬೇಕು ಚೆನ್ನಾಗಿ ಬೆಳೆಯಬೇಕು ಎಂದು ಎಷ್ಟೆಲ್ಲ ಕಷ್ಟ ಪಡುತ್ತಾರೆ. ಕೆಲವೊಮ್ಮೆ ಮಕ್ಕಳು ಊಟ ಮಾಡದೇ ಇದ್ದಾಗ ಒತ್ತಾಯ ಮಾಡಿ ಊಟ ಮಾಡಿಸುತ್ತೇವೆ. ಆದರೆ ಮಕ್ಕಳಿಗೆ ಬರೀ ಊಟ ಮಾಡಿಸಿದರೆ ಸಾಲದು ಅವರಿಗೆ ನ್ಯೂಟ್ರಶಿಯನ್ ಫುಡ್ ಗಳನ್ನು ಕೊಡಬೇಕು. ಮಕ್ಕಳಿಗೆ ಬುದ್ಧಿ ಶಕ್ತಿ , ನೆನಪಿನ ಶಕ್ತಿ ಹೆಚ್ಚಿಸುವಂತಹ ಒಂದು ಪೌಡರ್ ಬಗ್ಗೆ ನಾವು ಈ ಲೇಖನದ ಮೂಲಕ ತಿಳಿದುಕೊಳ್ಳೋಣ.

ಈ ಪೌಡರ್ ತೆಗೆದುಕೊಳ್ಳುವುದರಿಂದ ಮಕ್ಕಳು ಬುದ್ಧಿವಂತರಾಗಿರುತ್ತಾರೆ ಹಾಗೂ ಮಾನಸಿಕವಾಗಿ , ದೈಹಿಕವಾಗಿ ಸಬಲಾರಾಗಿಯೂ ಇರುತ್ತಾರೆ. ಇವೆಲ್ಲದರ ಜೊತೆಗೆ ಮಕ್ಕಳಲ್ಲಿ ರೋಗ ನಿರೋಧಕ ಶಕ್ತಿ ಕೂಡಾ ಬೇಕು. ಹಾಗಾಗಿ ಪೋಷಕಾಂಶಗಳು ಇರುವ ಈ ಪೌಡರ್ ಅನ್ನು ಮಕ್ಕಳಿಗೆ ಕೊಡುವುದರಿಂದ ಮಕ್ಕಳಿಗೆ ಎನರ್ಜಿ ಬರುತ್ತದೆ ಹಾಗೂ ರೋಗ ನಿರೋಧಕ ಶಕ್ತಿ ಮತ್ತು ನೆನಪಿನ ಶಕ್ತಿ ಕೂಡಾ ಹೆಚ್ಚುತ್ತದೆ. ಹಾಗಿದ್ದರೆ ಈ ಹೆಚ್ಚು ಪೋಷಕಾಂಶಗಳು ಇರುವ ಈ ಪೌಡರ್ ಅನ್ನು ಹೇಗೆ ತಯಾರಿಸುವುದು? ಇದನ್ನು ತೆಗೆದುಕೊಳ್ಳುವುದು ಹೇಗೆ ಎನ್ನುವುದನ್ನು ನೋಡೋಣ. ಈ ಪೌಡರ್ ಮಾಡಲು ಬೇಕಾದ ಸಾಮಗ್ರಿಗಳು ಎನು ಅಂತಾ ನೋಡುವುದಾದರೆ , ಒಂದು ಬೌಲ್ ಬಾದಾಮಿ ಒಂದು ಬೌಲ್ ಮಕ್ಕಾನ ಸೀಡ್ಸ್ ಲೋಟಸ್ ಸೀಡ್ಸ್ , ಗೋಡಂಬಿ 15 – 20 , ಆಕ್ರೊಟ್ 15 – 20. ಈ ನಾಲ್ಕು ಪಾದಾರ್ಥಗಳಿಂದ ನಾವು ಪೌಡರ್ ತಯಾರಿಸಿಕೊಳ್ಳಬೇಕು. ಇನ್ನು ಈ ಪೌಡರ್ ಹೇಗೆ ಮಾಡುವುದು ಅಂತಾ ನೋಡೋಣ.

ಮೊದಲು ಒಂದೊಂದೇ ಪದಾರ್ಥಗಳನ್ನು ಬಿಸಿ ಮಾಡಿಕೊಳ್ಳಬೇಕು. ಆಕ್ರೋಟ್ ನಲ್ಲಿ ಆಂಟಿ ಆಕ್ಸಿಡೆಂಟ್ ಮತ್ತು ಒಮೆಗಾ3 ಹೆಚ್ಚಾಗಿ ಇರುತ್ತದೆ. ಹಾಗಾಗಿ ಇದು ಮೆದುಳಿನ ಕಾರ್ಯಕ್ಷಮತೆಯನ್ನು ಹೆಚ್ಚಿಸುತ್ತದೆ. ಇದನ್ನು ಮಕ್ಕಳು ತಿನ್ನುವುದರಿಂದ ಬುದ್ಧಿ ಚುರುಕು ಆಗುವುದು. ಇನ್ನು ಮಾಕ್ಕಾನ ಸೀಡ್ಸ್. ಇದನ್ನು ಕೂಡಾ ಸಣ್ಣ ಉರಿಯಲ್ಲಿ ಬಿಸಿ ಮಾಡಿಕೊಳ್ಳಬೇಕು. ಇದರಲ್ಲಿ ಮ್ಯಾಗ್ನಿಷಿಯಂ , ಪೊಟ್ಯಾಶಿಯಂ , ಪ್ರಾಸ್ಪರಸ್ ಹೆಚ್ಚಾಗಿರುವುದರಿಂದ ಮಕ್ಕಳ ಬುದ್ಧಿ ಶಕ್ತಿ ಹೆಚ್ಚಿಸುತ್ತದೆ. ಇನ್ನು ಬಾದಾಮಿ. ಇದನ್ನು ಸ್ವಲ್ಪ ಹೆಚ್ಚಾಗಿಯೇ ಗರಿ ಆಗುವ ಹಾಗೇ ಹುರಿದುಕೊಳ್ಳಬೇಕು. ಇದರಲ್ಲಿ ಹೆಚ್ಚಾಗಿ ಪ್ರೊಟೀನ್ , ವಿಟಮಿನ್ ಈ. ಫೈಬರ್ , ಕ್ಯಾಲ್ಶಿಯಂ , ಮೆಗ್ನೀಷಿಯಂ ಹೆಚ್ಚಾಗಿ ಇರುತ್ತವೆ. ಇವು ಮಕ್ಕಳಲ್ಲಿ ಬುದ್ಧಿಶಕ್ತಿ ಹೆಚ್ಚಿಸುವುದು ಮಾತ್ರವಲ್ಲದೆ ಮಕ್ಕಳ ಮೂಳೆಗಳು ಬಲವಾಗಲು ಹಾಗೂ ರಕ್ತ ಹೀನತೆಯನ್ನು ಕಡಿಮೆ ಮಾಡಲು ಸಹಾಯಕಾರಿ ಆಗಿದೆ. ಗೋಡಂಬಿ ಕೂಡಾ ಸರಿಯಾಗಿ ಹುರಿದುಕೊಳ್ಳಬೇಕು. ಇದರಲ್ಲಿ ಕಾರ್ಬೋಹೈಡ್ರೇಟ್ ತುಂಬಾ ಇರುವುದರಿಂದ ಇದು ಮಕ್ಕಳ ಬೆಳವಣಿಗೆಗೆ ಸಹಾಯಕಾರಿ ಆಗಿರುತ್ತದೆ. ಈ ನಾಲ್ಕು ಪದಾರ್ಥಗಳನ್ನು ಸರಿಯಾಗಿ ಬೇರೆ ಬೇರೆ ಹುರಿದುಕೊಂಡು ನಂತರ ಮಿಕ್ಸಿ ಜಾರಿಗೆ ಹಾಕಿ ನುಣ್ಣಗೆ ಪುಡಿ ಮಾಡಿಕೊಳ್ಳಬೇಕು. ಪುಡಿ ಮಾಡಿಕೊಂಡ ನಂತರ ಇದನ್ನು ಸಾಣಿಸಿ ಮತ್ತಷ್ಟು ನೈಸ್ ಪೌಡರ್ ತೆಗೆದುಕೊಳ್ಳಬೇಕು. ನಂತರ ಇದನ್ನು ಎರಡು ಬೌಲ್ ಗೆ ತೆಗೆದುಕೊಂಡು ಎರಡು ಭಾಗ ಮಾಡಿ ನಿಮ್ಮ ಮಕ್ಕಳಿಗೆ ಇಷ್ಟ ಆಗುವ ಫ್ಲೇವರ್ ಸೇರಿಸಿಕೊಡಬಹುದು. ಒಂದಕ್ಕೆ ಏಲಕ್ಕಿ ಪುಡಿ ಮತ್ತು ಇನ್ನೊಂದಕ್ಕೆ ಕೋಕೋ ಪೌಡರ್ ಸೇರಿಸಿ ಚಾಕಲೇಟ್ ಫ್ಲೇವರ್ ಮಾಡಿಯೂ ಕೊಡಬಹುದು. ನಂತರ ಈ ಎರಡೂ ಫ್ಲೇವರ್ ಪೌಡರ್ ಗಳನ್ನು ಮಕ್ಕಳಿಗೆ ಹಾಲಿನಲ್ಲಿ ಸೇರಿಸಿ ಕುಡಿಯಲು ಕೊಡುವುದರಿಂದ ಮಕ್ಕಳ ಸರ್ವತೋಮುಖ ಅಭಿವೃದ್ಧಿ ಉಂಟಾಗುವುದರಲ್ಲಿ ಯಾವುದೇ ಅನುಮಾನವಿಲ್ಲ.

Leave a Reply

Your email address will not be published. Required fields are marked *