ಈ ರಾಶಿಯವರಿಗೆ ಫೆಬ್ರವರಿ ತಿಂಗಳಲ್ಲಿ ಎಲ್ಲಿ ಕಾಲಿಟ್ಟರು ಅಲ್ಲಿ ಆರ್ಥಿಕ ಲಾಭ ಖಚಿತ

0 1

ನಾವಿಂದು ನಿಮಗೆ ಫೆಬ್ರವರಿ ತಿಂಗಳಿನಲ್ಲಿ ಮೀನರಾಶಿಯವರ ಮಾಸ ಭವಿಷ್ಯದ ಕುರಿತಾದ ಮಾಹಿತಿಯನ್ನು ತಿಳಿಸಿಕೊಡುತ್ತೇವೆ. ಮೀನ ರಾಶಿ ಮೀನ ಲಗ್ನ 3.12 21 30 ಈ ರಾಶಿ ಈ ಸಂಖ್ಯೆಗಳ ಅಧಿಪತಿ ಗುರುಗ್ರಹ. ಗುರು ಗ್ರಹ ದೊಡ್ಡ ದೊಡ್ಡ ವಿಷಯಗಳನ್ನು ಅರಿತಂತಹ ಗ್ರಹ. ಫೆಬ್ರವರಿ ತಿಂಗಳಿನಲ್ಲಿ ಮೀನ ರಾಶಿಯವರಿಗೆ ಶೇಕಡ ಎಪ್ಪತ್ತರಷ್ಟು ಒಳ್ಳೆಯ ಹಾಗೂ ಶೇಕಡ ಮುವತ್ತರಷ್ಟು ನಕಾರಾತ್ಮಕ ಫಲಗಳು ಕಂಡುಬರುತ್ತವೆ. ಈ ರಾಶಿಯವರಿಗೆ ಫೆಬ್ರವರಿ ಒಂದನೇ ತಾರೀಕಿನಂದು ಸೂರ್ಯ ಮಕರ ರಾಶಿಯಲ್ಲಿ ಶನಿ ಮಕರ ರಾಶಿಯಲ್ಲಿ ಚಂದ್ರ ಮಕರ ರಾಶಿಯಲ್ಲಿ ಬುಧ ಗ್ರಹ ಮಕರ ರಾಶಿಯಲ್ಲಿರುತ್ತಾರೆ.

ಹನ್ನೊಂದನೇ ಮನೆಯಲ್ಲಿ ಸೂರ್ಯ-ಚಂದ್ರ ಇರುವುದರಿಂದ ತುಂಬಾ ಒಳ್ಳೆಯ ಫಲಗಳು ಕಂಡುಬರುತ್ತವೆ. ವಿದ್ಯಾರ್ಥಿಗಳಿಗೆ ಒಳ್ಳೆಯ ಸ್ಥಾನಗಳು ದೊರೆಯುತ್ತವೆ ಉನ್ನತ ಶಿಕ್ಷಣದಲ್ಲಿ ಗೌರ್ನಮೆಂಟ್ ಸೀಟಿಗಾಗಿ ಎದುರು ನೋಡುತ್ತಿರುವವರಿಗೆ ಮೆಡಿಕಲ್ ಸೀಟ್ ಗಾಗಿ ಎದುರು ನೋಡುತ್ತಿರುವವರಿಗೆ ನೀಟ್ ಪರೀಕ್ಷೆ ಬರೆಯುವವರಿಗೆ ಹೊರದೇಶಕ್ಕೆ ಹೋಗಿ ಓದಬೇಕು ಎಂದುಕೊಂಡಿರುವವರಿಗೆ ಎಲ್ಲರಿಗೂ ಕೂಡ ಉತ್ತಮವಾದಂತಹ ಫಲ ಕಂಡುಬರುತ್ತದೆ.

ಇನ್ನು ಹೊರದೇಶಗಳಲ್ಲಿ ಕೆಲಸ ಮಾಡುತ್ತಿರುವವರಿಗೆ, ಖಾಸಗಿ ವಲಯದಲ್ಲಿ ಕೆಲಸವನ್ನು ಮಾಡುತ್ತಿರುವವರಿಗೂ ಕೂಡ ಉತ್ತಮವಾದಂತಹ ಫಲಗಳು ಕಂಡುಬರುತ್ತವೆ. ಸರ್ಕಾರಿ ಕ್ಷೇತ್ರದಲ್ಲಿ ಕೆಲಸ ಮಾಡುತ್ತಿರುವವರಿಗೆ ಕೆಲಸದಲ್ಲಿ ಬಡ್ತಿ ದೊರೆಯಬಹುದು.ಇನ್ನು ಕೃಷಿ ವಲಯದಲ್ಲಿ ಕೆಲಸ ಮಾಡುತ್ತಿರುವವರಿಗೆ ಉದ್ಯಮ ಕ್ಷೇತ್ರದಲ್ಲಿ ಕೆಲಸ ಮಾಡುತ್ತಿರುವವರಿಗೆ ಉಪನ್ಯಾಸಕರಿಗೆ ವೈದ್ಯಕೀಯ ಕ್ಷೇತ್ರದಲ್ಲಿ ಪ್ರಾಕ್ಟೀಸ್ ಮಾಡುತ್ತಿರುವವರಿಗೆ ಎಲ್ಲರಿಗೂ ಕೂಡ ಇದು ಒಳ್ಳೆಯ ಸಮಯವಾಗಿದೆ.

ಮೀನ ರಾಶಿಯವರು ಯಾವುದೇ ಕೆಲಸವನ್ನು ಧೈರ್ಯವಹಿಸಿ ಮಾಡುತ್ತಾರೆ. ಗಂಡ-ಹೆಂಡತಿ ನಡುವೆ ಭಿನ್ನಾಭಿಪ್ರಾಯಗಳು ಇದ್ದರೆ ಅದು ಸರಿ ಹೋಗುತ್ತದೆ. ಅಕ್ಕ-ತಂಗಿಯರ ನಡುವೆ ಅಣ್ಣ-ತಮ್ಮಂದಿರ ನಡುವೆ ಬಿರುಸುಗಳು ಆಸ್ತಿ ವಿವಾದಗಳು ಇದ್ದರೆ ಅವು ಬಗೆಹರಿಯುತ್ತವೆ. ಹೋಟೆಲ್ ಉದ್ಯಮ ನಡೆಸುತ್ತಿರುವವರಿಗೆ ಬಟ್ಟೆ ಅಂಗಡಿ ನಡೆಸುತ್ತಿರುವವರಿಗೆ ಪವರ್ಲೂಮ್ ನಡೆಸುತ್ತಿರುವವರಿಗೆ ನೀರಿನ ಉದ್ಯಮವನ್ನು ಮಾಡುತ್ತಿರುವವರಿಗೆ ಬಂಗಾರದ ವ್ಯಾಪಾರವನ್ನು ನಡೆಸಿಕೊಂಡು ಹೋಗುತ್ತಿರುವವರಿಗು ಕೂಡ ಉತ್ತಮವಾದಂತಹ ಫಲಗಳು ಕಂಡುಬರುತ್ತವೆ.

ಮೀನ ರಾಶಿಯವರಿಗೆ ಆರೋಗ್ಯದ ವಿಷಯಕ್ಕೆ ಸಂಬಂಧಿಸಿದಂತೆ ಕೆಲವು ಸಮಸ್ಯೆಗಳು ಕಂಡು ಬರಬಹುದು. ಪಾದಗಳ ಸಂಬಂಧವಾಗಿ ಮಂಡಿ ನೋವು ಕಾಲು ನೋವು ಕಾಣಿಸಿಕೊಳ್ಳಬಹುದು ಪಾದಗಳು ಮೂಳೆಗಳ ಸಂದುಗಳ ನೋವು ವಯಸ್ಸಾದವರಿಗೆ ಸ್ವಲ್ಪ ಹೆಚ್ಚಾಗಿ ಕಾಣಿಸಿಕೊಳ್ಳುತ್ತವೆ. ಚರ್ಮಕ್ಕೆ ಸಂಬಂಧಿಸಿದಂತೆ ಅಲರ್ಜಿಗಳು ಕಾಣಿಸಿಕೊಳ್ಳಬಹುದು ಹಾಗಾಗಿ ಆರೋಗ್ಯಕ್ಕೆ ಸಂಬಂಧಿಸಿದಂತೆ ಸ್ವಲ್ಪ ಕಾಳಜಿಯನ್ನ ತೆಗೆದುಕೊಳ್ಳುವುದು ಒಳ್ಳೆಯದು.

ತಂದೆ ತಾಯಿಗಳೊಂದಿಗೆ ಬಾಂಧವ್ಯ ಚೆನ್ನಾಗಿರುತ್ತದೆ ಫೆಬ್ರುವರಿ ತಿಂಗಳಿನಲ್ಲಿ ಮೀನ ರಾಶಿಯವರಿಗೆ ಶೇಕಡಾ ಎಪ್ಪತ್ತರಷ್ಟು ಯೋಗ ರಾಜಯೋಗ ಸಿಗುತ್ತದೆ. ಮೀನ ರಾಶಿಯವರು ಗುರುಗ್ರಹಕ್ಕೆ ಸಂಬಂಧಿಸಿದಂತೆ ಕೆಲವು ಪರಿಹಾರಗಳನ್ನು ಮಾಡಿಕೊಂಡರೆ ಇನ್ನು ಉತ್ತಮವಾದಂತಹ ಫಲಗಳನ್ನು ಪಡೆಯಬಹುದಾಗಿದೆ ಹಾಗಾಗಿ ನಿಮ್ಮ ಅಕ್ಕಪಕ್ಕದಲ್ಲಿರುವ ವೃತ್ತಿಯಿಂದ ನಿವೃತ್ತರಾಗಿರುವಂತಹ ಶಿಕ್ಷಕರು ಉಪನ್ಯಾಸಕರಿಂದ ಆಶೀರ್ವಾದವನ್ನು ಪಡೆದುಕೊಳ್ಳುವುದು ಒಳ್ಳೆಯದು.

ನಿಮ್ಮ ಅಕ್ಕಪಕ್ಕದಲ್ಲಿ ಗುರುಗಳ ಗದ್ದುಗೆ ಅಥವಾ ಸಮಾಧಿ ಇದ್ದರೆ ಹೋಗಿ ದರ್ಶನವನ್ನು ಮಾಡಿಕೊಂಡು ಬರುವುದರಿಂದ ನಿಮಗೆ ಒಳ್ಳೆಯದಾಗುತ್ತದೆ. ಗುರು ದಕ್ಷಿಣಾಮೂರ್ತಿಗೆ ಪೂಜೆಯನ್ನು ಮಾಡಿಸುವುದು ಅರ್ಚನೆಯನ್ನು ಮಾಡಿಸುವುದು ಅಭಿಷೇಕವನ್ನು ಮಾಡಿಸುವುದು ಕೂಡ ತುಂಬಾ ಒಳ್ಳೆಯದು. ಹಳದಿ ಬಣ್ಣದ ವಸ್ತ್ರವನ್ನು ದೇವರಿಗೆ ಒಪ್ಪಿಸಿ ಅರ್ಚನೆ ಪೂಜೆ ಮಾಡಿಸುವುದು ಒಳ್ಳೆಯದು. ಈ ರೀತಿಯ ಪರಿಹಾರಗಳನ್ನು ಮಾಡಿಕೊಳ್ಳುವ ಮೂಲಕ ಮೀನ ರಾಶಿಯವರು ಫೆಬ್ರವರಿ ತಿಂಗಳಿನಲ್ಲಿ ಉತ್ತಮ ಫಲಗಳನ್ನು ಕಂಡುಕೊಳ್ಳಬಹುದಾಗಿದೆ. ಈ ಮಾಹಿತಿಯನ್ನು ನೀವು ತಿಳಿದುಕೊಳ್ಳುವುದರೊಂದಿಗೆ ನಿಮ್ಮ ಪರಿಚಿತರು ಹಾಗೂ ಸ್ನೇಹಿತರೊಂದಿಗೆ ಹಂಚಿಕೊಳ್ಳಿ.

Leave A Reply

Your email address will not be published.