ನಾವಿಂದು ಫೆಬ್ರುವರಿ ತಿಂಗಳಿನಲ್ಲಿ ತುಲಾ ರಾಶಿಯವರಿಗೆ ಯಾವ ರೀತಿಯಾದಂತಹ ರಾಶಿಫಲ ಇದೆ ಎಂಬುದರ ಕುರಿತು ಮಾಹಿತಿಯನ್ನು ತಿಳಿಸಿಕೊಡುತ್ತೇವೆ. ತುಲಾ ರಾಶಿಯವರಿಗೆ ಫೆಬ್ರುವರಿ ಹನ್ನೆರಡರಿಂದ ಮಾರ್ಚ್ ಹದಿಮೂರರವರೆಗೆ ಗುರುಬಲ ಇದ್ದರೂ ಕೂಡ ಅದು ಕೆಲಸ ಮಾಡುವುದಿಲ್ಲ. ಏಕೆಂದರೆ ಅಲ್ಲಿ ರವಿ ಆಗಮನ ಆಗುತ್ತಿದೆ ಹಾಗಾಗಿ ನಿಮಗೆ ಗುರುಬಲದ ಬದಲಾಗಿ ರವಿ ಬಲ ಸಿಗುತ್ತದೆ. ರವಿ ನಿಮಗೆ ಲಾಭಾದಿಪತಿಯಾಗಿ ಕೆಲಸ ಮಾಡುತ್ತಾನೆ. ಹಾಗಾದರೆ ಫೆಬ್ರುವರಿ ತಿಂಗಳಿನಲ್ಲಿ ತುಲಾರಾಶಿಗೆ ಅಧಿಪತಿಯಾದ ರವಿಯು ಯಾವೆಲ್ಲಾ ಫಲಗಳನ್ನು ಒಂದು ಮಾಡುತ್ತಾನೆ ಎಂಬುದರ ಬಗ್ಗೆ ತಿಳಿದುಕೊಳ್ಳೋಣ.

ತುಲಾ ರಾಶಿಯವರು ಈಗಾಗಲೇ ಒಂದು ಉದ್ಯಮ ಅಥವಾ ವ್ಯಾಪಾರವನ್ನು ನಡೆಸುತ್ತಿದ್ದು ಬಂಡವಾಳದ ಮೇಲೆ ಬಂಡವಾಳ ಹಾಕಿದರು ಕೂಡ ನೀವು ಅಂದುಕೊಂದಂತಹ ರೀತಿಯಲ್ಲಿ ನಿಮಗೆ ಲಾಭ ಸಿಗುತ್ತಿಲ್ಲ ಎನ್ನುವವರಿಗೆ ಫೆಬ್ರುವರಿ ಹನ್ನೆರಡರ ನಂತರ ಮಾರ್ಚ್ ಹದಿಮೂರರ ಒಳಗೆ ಉತ್ತಮವಾದ ರೀತಿಯಲ್ಲಿ ನಿಮಗೆ ಲಾಭ ಕಂಡುಬರುತ್ತದೆ. ವ್ಯಾಪಾರ ವ್ಯವಹಾರ ಕ್ಷೇತ್ರವನ್ನು ಬಿಟ್ಟು ಕಾರ್ಯ ಸಿದ್ದಿಗಾಗಿ ಕೆಲಸ ಮಾಡುತ್ತಿರುವಂತವರಿಗೂ ಕೂಡ ತಾವು ಮಾಡುವಂತಹ ಕಾರ್ಯದಲ್ಲಿ ಯಶಸ್ಸು ಸಿಗುತ್ತದೆ. ಕಾರ್ಯಸಿದ್ದಿ ಚೆನ್ನಾಗಿ ಆಗಿ ಲಾಭ ಸಿಗುತ್ತದೆ. ರವಿ ಬಲದಿಂದಾಗಿ ನಿಮಗೆ ಫೆಬ್ರುವರಿ ಹನ್ನೆರಡರ ನಂತರ ಔದ್ಯೋಗಿಕ ಕ್ಷೇತ್ರದಲ್ಲೂ ಕೂಡ ಯಶಸ್ಸು ಸಿಗುತ್ತದೆ ಉದ್ಯೋಗ ಇಲ್ಲದೆ ಉದ್ಯೋಗಕ್ಕಾಗಿ ಹುಡುಕುತ್ತಿರುವವರಿಗೆ ಉತ್ತಮವಾದಂತಹ ಉದ್ಯೋಗ ದೊರೆಯುತ್ತದೆ.

ಜೊತೆಗೆ ಸರ್ಕಾರಿ ಕಚೇರಿಗಳಲ್ಲಿ ನಿಮಗೆ ಆಗ ಬೇಕಾದಂತಹ ಕೆಲಸ ಕಾರ್ಯಗಳು ಅಂದರೆ ಭೂಮಿಗೆ ಸಂಬಂಧಪಟ್ಟಂತೆ ಕೆಲವು ಕಾಗದ ಪತ್ರಗಳ ಕೆಲಸ ಇರಬಹುದು ಕಂದಾಯಕ್ಕೆ ಸಂಬಂಧಿಸಿದಂತೆ ಕಾಗದಪತ್ರಗಳ ಕೆಲಸ ಗಳಿರಬಹುದು ಅವುಗಳನ್ನು ನೀವು ಮಾಡುವುದಕ್ಕೆ ಕೈ ಹಾಕಿದರೆ ಆ ಕೆಲಸ ಸುಸೂತ್ರವಾಗಿ ನೆರವೇರುತ್ತವೆ. ಇನ್ನು ಆರೋಗ್ಯದ ದೃಷ್ಟಿಯಿಂದಲೂ ಕೂಡ ರವಿಬಲ ನಿಮಗೆ ಉತ್ತಮ ರೀತಿಯ ಫಲವನ್ನು ಕೊಡುತ್ತದೆ. ಪಿತ್ತ ವಿಕಾರವಾಗಿ ಸಮಸ್ಯೆ ಕಂಡುಬರುತ್ತಿದ್ದರೆ ಕಣ್ಣುನೋವು ಬರುತ್ತಿದ್ದರೆ ತಲೆನೋವು ಬರುತ್ತಿದ್ದರೆ ಇದೆಲ್ಲವೂ ಕೂಡ ರವಿಯ ಬಲದಿಂದಾಗಿ ಹತೋಟಿಗೆ ಬರುತ್ತದೆ. ನಿಮಗೆ ಅನಿರೀಕ್ಷಿತವಾಗಿ ಧನಲಾಭ ಉಂಟಾಗುತ್ತದೆ ಕುಜನ ಅನುಗ್ರಹದಿಂದ ಪಿತ್ರಾರ್ಜಿತ ಆಸ್ತಿ ನಿಮಗೆ ಬರಬಹುದು ಅಥವಾ ಅದು ಮಾರಾಟವಾಗಿ ಅದರಿಂದ ನಿಮಗೆ ಸ್ವಲ್ಪಮಟ್ಟಿಗೆ ಹಣ ಬರಬಹುದು.

ಇನ್ನು ನಿಮಗೆ ಎದುರಾಗಬಹುದಾದ ಸಮಸ್ಯೆ ಯಾವುದು ಎಂದರೆ ಎಲ್ಲಾ ಗ್ರಹಗಳು ರಾಹು ಕೇತುವಿನ ನಡುವೆ ಸಿಲುಕಿ ಕೊಂಡಿರುವುದರಿಂದ ಸರ್ಪದೋಷ ಉಂಟಾಗಿ ನಿಮಗೆ ಬರತಕ್ಕಂತಹ ಲಾಭಾಂಶ ಕೊನೆಯ ಗಳಿಗೆಯಲ್ಲಿ ಸಿಗದೇ ಹೋಗಬಹುದು. ಹಾಗಾಗಿ ಕಾಳಸರ್ಪ ದೋಷವನ್ನು ಪರಿಹಾರ ಮಾಡಿಕೊಳ್ಳುವುದು ಉತ್ತಮ. ಈ ರೀತಿಯಾಗಿ ತುಲಾ ರಾಶಿಯವರಿಗೆ ಫೆಬ್ರವರಿ ಹನ್ನೆರಡರಿಂದ ಮಾರ್ಚ್ ಹದಿಮೂರರವರೆಗೆ ರವಿಯ ಅನುಗ್ರಹದಿಂದಾಗಿ ಉತ್ತಮವಾದಂತಹ ಲಾಭದಾಯಕ ವಾದಂತಹ ಪರಿಣಾಮಗಳನ್ನು ನೀವು ಕಾಣಬಹುದು. ಈ ರೀತಿಯಾಗಿ ತುಲಾ ರಾಶಿಯವರಿಗೆ ಫೆಬ್ರವರಿ ತಿಂಗಳಿನಲ್ಲಿ ಗುರು ಬಲವಿದ್ದರೂ ಕೂಡ ಅದು ಅಷ್ಟಾಗಿ ಕೆಲಸ ಮಾಡುವುದಿಲ್ಲ ಆದರೆ ಅದರ ಬದಲಾಗಿ ರವಿ ಬಲವಿರುವ ಕಾರಣ ಯಾವುದೇ ಚಿಂತೆ ಮಾಡುವಂತಹ ಅವಶ್ಯಕತೆ ಇರುವುದಿಲ್ಲ. ಇದಿಷ್ಟು ಫೆಬ್ರವರಿ ತಿಂಗಳಿಗೆ ತುಲಾ ರಾಶಿಯವರಿಗೆ ಸಂಬಂಧಿಸಿದ ರಾಶಿಫಲದ ಕುರಿತಾದ ಮಾಹಿತಿ ಆಗಿದೆ.

Leave a Reply

Your email address will not be published. Required fields are marked *