ದೊಡ್ಡ ಕನಸು ಕಾಣಿ, ಚಿಕ್ಕದಾಗಿ ಶುರು ಮಾಡಿ. ಇದಕ್ಕೆ ಒಂದು ಅರ್ಥ ನೀಡಿದ ಒಬ್ಬ 22 ವರ್ಷದ ಯುವಕನ ಕಥೆಯನ್ನು ನಾವು ತಿಳಿಯೋಣ. ಪ್ರಫುಲ್ ಬಿಲ್ಲೋರೆ ಇವರು ಮೂಲತಃ ಇಂಧೋರ್ ನವರು.ಹುಟ್ಟಿ ಬೆಳೆದದ್ದು ಇಂಧೋರ್. ಇವರಿಗೆ MBA ಮಾಡಬೇಕೆಂದು ಆಸೆ ಇತ್ತು. ತುಂಬಾ ಓದುತ್ತಿದ್ದರು. ಪರೀಕ್ಷೆಗೆ ತಯಾರಿ ನಡೆಸಿ ನಡೆಸಿ ಬೇಸರ ಹತ್ತಿತು. ನಂತರ ಬೆಂಗಳೂರು, ಹೈದರಾಬಾದ್, ಚೆನ್ನೈ ಎಲ್ಲಾ ಕಡೆ ಸುತ್ತಾಡಿ ಅಹಮದಾಬಾದ್ ನಲ್ಲಿ ನಿಂತು ಯೋಚಿಸುತ್ತಾರೆ. ಏನಾದರೂ ಮಾಡಬೇಕು ಎಂದು. ನಂತರ ವೇಟರ್ ಆಗಿ ಕ್ಯಾಶಿಯರ್ ಆಗಿ ಕೆಲಸ ಮಾಡುತ್ತಾರೆ. ಒಂದು ದಿನ ಹೀಗೆ ಎಷ್ಟು ದಿನ ಎಂದು ಯೋಚಿಸುತ್ತಾರೆ.
ಆಗ ಒಂದು ಟೀ ಅಂಗಡಿಯನ್ನು ತೆರೆದರೆ ಎಂದು ಹೊಳೆಯುತ್ತದೆ. ಎದುರಿಗೆ ಇರುವ ಪಾತ್ರೆ ಅಂಗಡಿಯಲ್ಲಿ ಕೇಳುತ್ತಾರೆ ಟೀ ಅಂಗಡಿಗೆ ಏನೇನು ಬೇಕು ಎಂದು. ಎಲ್ಲಾ ವಿಚಾರಿಸಿ ನಂತರ ತಂದೆಗೆ ಫೋನ್ ಮಾಡಿ 15,000ರೂಗಳನ್ನು ಕೊಡಲು ಹೇಳಿದರು.
ಒಂದು ತಿಂಗಳುಗೂಡಿ ಟೀ ಅಂಗಡಿ ತೆರೆದರು.ಬೆಳಗ್ಗೆ 8ತಾಸು ಮತ್ತು ರಾತ್ರಿ11ಗಂಟೆಯ ತನಕ ಟೀ ಮಾಡಿ ಮಾರುತ್ತಿದ್ದರು.ಗ್ರಾಹಕರು ಒಂದೇ ಬಾರಿ ಬರಲಿಲ್ಲ. ತನ್ನ ಟೀ ಅಂಗಡಿಗೆ ಬರುವಂತೆ ಗಲ್ಲಿ ಗಲ್ಲಿ ತಿರುಗಿದರು. ಸ್ವಲ್ಪ ಸಮಯದ ನಂತರ ತಂದೆಯಿಂದ ಫೋನ್ ಬರುತ್ತದೆ. ಫೋನಿನಲ್ಲಿ ಮಗನೇ MBA ಸೀಟ್ ಸಿಕ್ಕಿತಾ? ಎಂದು ಕೇಳುತ್ತಾರೆ. ಆಗ ಹೂ ಎನ್ನುತ್ತಾರೆ. ಆದರೆ ತಲೆಯಲ್ಲಿ ಬಿಸನೆಸ್ ತುಂಬಿಕೊಂಡಿದ್ದ ಅವರು ಎರಡನ್ನು ಮಾಡುತ್ತಾರೆ. ಆದರೆ ಒಬ್ಬರ ಏಳಿಗೆ ಕಂಡು ಇನ್ನೊಬ್ಬರು ಉರಿದುಕೊಳ್ಳುವವರು ಜಾಸ್ತಿ.ಅವರ ಲಾಭ ನೋಡಿ ಅವರ ಹತ್ತಿರದವರಿಗೆ ಸಹಿಸಲಾಗದೇ ಅಂಗಡಿಯನ್ನು ಹಾಳು ಮಾಡುತ್ತಾರೆ.
ಆದರೂ ಎದೆಗುಂದದೆ ಬೇರೇ ಏರಿಯಾದಲ್ಲಿ ಒಂದು ಆಸ್ಪತ್ರೆಯ ಎದುರು ಆಸ್ಪತ್ರೆಯ ವ್ಯೆದ್ಯರ ಒಪ್ಪಿಗೆ ಪಡೆದು ಯಾರೂ ತನಗೆ ಮುಂಚಿನ ಹಾಗೇ ತೊಂದರೆ ಕೊಡದಂತೆ ಹೊಸ ಟೀ ಶಾಪ್ ತೆರೆಯುತ್ತಾರೆ. ಬಹಳ ಜನ ಬರುತ್ತಾರೆ.ಲಾಭ ಪಡೆಯುತ್ತಾರೆ. ನಂತರ ಕೆಲವು ತಂತ್ರಗಾರಿಕೆ ಹೂಡುತ್ತಾರೆ.
ಯಾರಿಗೆ ಏನಾದರೂ ಬೇಕಿದ್ದಲ್ಲಿ ಬರೆಯಿರಿ ಎಂದು ಒಂದು ಬೋರ್ಡ್ ಹಾಕುತ್ತಾರೆ.ಜನರು ತಮ್ಮ ಅಗತ್ಯತೆಗಳನ್ನು ಬರೆಯುತ್ತಾರೆ. ಇದರಿಂದ ಇವರು ತುಂಬಾ ಫೇಮಸ್ ಆಗುತ್ತಾರೆ. ಯಾರೂ ಮುಟ್ಟಲೂ ಸಾಧ್ಯವಿಲ್ಲ. ನಂತರ ಎಲ್ಲೆಲ್ಲಿ ಕಾರ್ಯಕ್ರಮ,ರಕ್ತದಾನ ಶಿಬಿರ ನಡೆಯುತ್ತದೆಯೋ ಅಲ್ಲೆಲ್ಲ ಹೋಗಿ ಟೀ ಮಾರಿ ಬಂದ ದುಡ್ಡನ್ನು ಅಲ್ಲಿಗೆ ಕೊಟ್ಟು ಬರುತ್ತಿದ್ದರು.
ಆದ್ದರಿಂದ ಈಗ ಅವರು MBA ಛಾಯ್ವಾಲಾ ಎಂದೇ ಪ್ರಸಿದ್ಧರಾಗಿದ್ದಾರೆ. ಮೋದಿಯವರ ನಂತರ ಎರಡನೇ ಛಾಯ್ವಾಲಾ ಆಗಿದ್ದಾರೆ. MBA ಛಾಯ್ವಾಲಾ ಎಂಬ ದೊಡ್ಡ ಕಂಪನಿಯನ್ನು ಶುರು ಮಾಡಿದ್ದಾರೆ. ಎಷ್ಟೋ NGO ಗಳು ಇವರ ಹತ್ತಿರ ಬರುತ್ತದೆ. ಕೋಟಿ ಕೋಟಿ ಸಂಪಾದನೆ ಮಾಡುತ್ತಿದ್ದಾರೆ.