ಕಾರ್ ಅಂದರೆ ಯಾರಿಗೆ ತಾನೇ ಇಷ್ಟವಿಲ್ಲ ಹೇಳಿ. ಜೀವನದಲ್ಲಿ ಒಮ್ಮೆಯಾದರೂ ಕಾರನ್ನ ಖರೀದಿ ಮಾಡಬೇಕು ಎನ್ನುವ ಬಯಕೆ ಸಾಮಾನ್ಯವಾಗಿ ಎಲರಿಗೂ ಇದ್ದೇ ಇರುತ್ತದೆ. ಇನ್ನು ದೇಶದಲ್ಲಿ ಹಲವು ವಿಧದ ಕಾರುಗಳು ಇದ್ದು ಹಣ ಇರುವ ಜನರು ಜಾಸ್ತಿ ಬೆಲೆಬಾಳುವ ಕಾರನ್ನ ಖರೀದಿ ಮಾಡಿದರೆ ಹಣ ಕಡಿಮೆ ಇರುವ ಜನರು ಕಡಿಮೆ ಬೆಲೆಬಾಳುವ ಕಾರ್ ಗಳನ್ನ ಖರೀದಿ ಮಾಡುತ್ತಿದ್ದಾರೆ.
ಇನ್ನು ಇತ್ತೀಚಿನ ದಿನಗಳಲ್ಲಿ ಪೆಟ್ರೋಲ್ ಮತ್ತು ಡೀಸೆಲ್ ಬೆಲೆ ದಿನದಿಂದ ದಿನಕ್ಕೆ ಗಗನಕ್ಕೆ ಏರುತ್ತಿದ್ದು ಜನರು ಕಾರು ಮತ್ತು ಬೈಕ್ ಗಳನ್ನ ಓಡಿಸುವುದೇ ಕಷ್ಟವಾಗಿದೆ ಎಂದು ಹೇಳಿದರೆ ತಪ್ಪಾಗಲಿಕ್ಕಿಲ್ಲ. ಸದ್ಯ ಮಾರುಕಟ್ಟೆಯಲ್ಲಿ ಎಲೆಕ್ಟ್ರಿಕ್ ಕಾರುಗಳು ಬರುತ್ತಿದ್ದು ಜನರು ಹೆಚ್ಚಾಗಿ ಈ ಕಾರುಗಳ ಮೊರೆ ಹೋಗುತ್ತಿದ್ದಾರೆ. ಇತ್ತೀಚೆಗೆ ಬಿಡುಗಡೆಯಾದ ಈ ಕಾರ್ ಗೆ ಪೆಟ್ರೋಲ್, ಡೀಸೆಲ್ ಹಾಕಿಸಬೇಕಾಗಿಲ್ಲ ಮತ್ತು ಚಾರ್ಜ್ ಕೂಡ ಮಾಡಬೇಕಾಗಿಲ್ಲ, ಇದೊಂದು ಹೊಸ ಮಾದರಿಯ ಕಾರ್ ಆಗಿದ್ದು ಇದರ ವಿಶೇಷತೆ ಹಾಗೂ ಇದರ ಬೆಲೆ ಮುಂತಾದ ವಿವರಗಳ ಬಗ್ಗೆ ನಾವು ಈ ಲೇಖನದ ಮೂಲಕ ತಿಳಿದುಕೊಳ್ಳೋಣ.
ಕಾರ್ ಗಳಲ್ಲಿ ಕೂಡಾ ಆಯಾ ಕಂಪನಿಗಳು ಕಾಲಕ್ಕೆ ತಕ್ಕಂತೆ ಹೊಸ ಹೊಸ ವಿನ್ಯಾಸಗಳನ್ನು, ಬದಲಾವಣೆಗಳನ್ನು ತರುತ್ತಲೇ ಇರುತ್ತವೆ. ಅದೇ ರೀತಿ ಈಗ ಬಂದ ಹೊಸ ವಿನ್ಯಾಸದ ಈ ಕಾರಿಗೆ ನೀವು ಪೆಟ್ರೋಲ್, ಡೀಸೆಲ್ ಮತ್ತು ಚಾರ್ಜ್ ಕೂಡ ಮಾಡುವ ಅಗತ್ಯತೆ ಇಲ್ಲ. ಹಾಗಾದರೆ ಈ ಕಾರ್ ಯಾವುದು? ಮತ್ತು ಈ ಕಾರನ್ನ ಬಿಡುಗಡೆ ಮಾಡುತ್ತಿರುವ ಕಂಪನಿ ಯಾವುದು ಮತ್ತು ಕಾರಿನ ಬೆಲೆ ಎಷ್ಟು ಎನ್ನುವುದರ ಬಗ್ಗೆ ನೋಡೋಣ.
ಇತ್ತೀಚಿನ ದಿನಗಳಲ್ಲಿ ಜನರ ತಲೆಯಲ್ಲಿ ಕಾಡುತ್ತಿರುವ ಪ್ರಶ್ನೆ ಅಂದರೆ, ನಾವು ಎಲೆಕ್ಟ್ರಿಕ್ ವಾಹನವನ್ನ ಖರೀದಿ ಮಾಡಿದರೆ ಅದಕ್ಕೆ ಚಾರ್ಜ್ ಹಾಕಿಸಲು ಫಾಸ್ಟ್ ಚಾರ್ಜಿಂಗ್ ಸ್ಟೇಷನ್ ಗಳು ಎಲ್ಲಾ ಕಡೆ ಇಲ್ಲ ಅನ್ನುವುದಾಗಿದೆ. ಹಾಗಾಗಿ ಇದನ್ನ ಮನಗಂಡ ಮಾರುತಿ ಸುಜುಕಿ ಕಂಪನಿಯು ಹೊಸ ಮಾದರಿಯ ಕಾರನ್ನ ಬಿಡುಗಡೆ ಮಾಡಲು ತೀರ್ಮಾಸಿದೆ. ಮಾರುತಿ ಕಂಪನಿ ಹೊಸ ಮಾದರಿಯ ಹೈಬ್ರಿಡ್ ಎಲೆಕ್ಟ್ರಿಕ್ ಕಾರನ್ನು ನಿರ್ಮಿಸುತ್ತಿದ್ದು ಈ ಕಾರಿನ ವಿಶೇಷತೆಯನ್ನ ಕೇಳಿದರೆ ಆಶ್ಚರ್ಯ ಆಗುವುದು ಖಂಡಿತ. ಈ ಹೈಬ್ರಿಡ್ ಎಲೆಕ್ಟ್ರಿಕ್ ಕಾರಿನ ವಿಶೇಷತೆ ಅಂದರೆ ಇದಕ್ಕೆ ಪೆಟ್ರೋಲ್ ಮತ್ತು ಡೀಸೆಲ್ ಬೇಕಿಲ್ಲ, ಹಾಗೆಯೇ ಚಾರ್ಜ್ ಕೂಡ ಮಾಡಬೇಕಿಲ್ಲ.
ಈ ಕಾರಿನ ಬ್ಯಾಟರಿಗಳು ಸ್ವಯಂ ಚಾಲಿತವಾಗಿ ಚಾರ್ಜ್ ಆಗಲಿದೆ. ವಾಹನವನ್ನು ಓಡಿಸುವಾಗ ಬ್ಯಾಟರಿಗಳು ಆಟೋಮ್ಯಾಟಿಕ್ ಚಾರ್ಜ್ ಆಗಲಿದ್ದು, ಅದರಂತೆ ಇಂಧನ ತುಂಬಿಸದೇ ಅಥವಾ ಚಾರ್ಜ್ ಸ್ಟೇಷನ್ಗೆ ಹೋಗದೇ ಕಾರನ್ನು ಓಡಿಸುತ್ತಲೇ ಇರಬಹುದು ಮತ್ತು ಇದರಿಂದ ಇಂಧನದ ಖರ್ಚು ವೆಚ್ಚ ಕೂಡ ವಾಹನ ಬಳಕೆದಾರರಿಗೆ ಉಳಿತಾಯವಾಗಲಿದೆ. ಇನ್ನು ಈ ಕಾರ್ ಗಳಲ್ಲಿ ಎಲೆಕ್ಟ್ರಿಕ್ ಚಾರ್ಜಿಂಗ್ಗಾಗಿ ರಚಿಸಲಾದ ವಿಶೇಷ ಇಂಟರ್ನಲ್ ಕಂಬುಷ್ಟನ್ ಎಂಜಿನ್ ನೀಡಲಾಗಿದ್ದು ಇದು ಬ್ಯಾಟರಿಗಳಿಗೆ ಪವರ್ ನೀಡುತ್ತದೆ, ಅಂದರೆ ವಾಹನದ ಚಕ್ರದ ತಿರುಗುವಿಕೆಯ ಜೊತೆಗೆ ಕಾರ್ ನಲ್ಲಿ ನೀಡಲಾಗಿರುವ ಬ್ಯಾಟರಿಗಳು ಆಟೋಮ್ಯಾಟಿಕ್ ಆಗಿ ಚಾರ್ಜ್ ಆಗುತ್ತದೆ ಮತ್ತು ಇದರಿಂದ ಬ್ಯಾಟರಿ ಚಾರ್ಜ್ಗಾಗಿ ಬೇರೆ ಪಾವತಿಸಬೇಕಾಗಿಲ್ಲ.
ಜಪಾನಿನ ಟೊಯೋಟಾ ಕಂಪೆನಿಯ ಜೊತೆಗೂಡಿ ಮಾರುತಿ ಸುಜುಕಿ ಈ ಹೈಬ್ರಿಡ್ ಎಲೆಕ್ಟ್ರಿಕ್ ಕಾರನ್ನು ನಿರ್ಮಿಸುತ್ತಿದ್ದು ಮುಂದಿನ ತಿಂಗಳು ಕೆಲವು ಎಲೆಕ್ಟ್ರಿಕ್ ವಾಹನಗಳ ಜಂಟಿ ಪರೀಕ್ಷೆ ನಡೆಸಲಿದ್ದೇವೆ ಎಂದು ಮಾರುತಿ ಸುಜುಕಿ ಕಂಪೆನಿಯ ಕಾರ್ಪೊರೇಟ್ ಕಾರ್ಯನಿರ್ವಾಹಕ ನಿರ್ದೇಶಕ ರಾಹುಲ್ ಭಾರತಿ ತಿಳಿಸಿದ್ದಾರೆ. ಇನ್ನು ಈ ಕಾರಿನ ಬೆಲೆ ಎಷ್ಟು ಅನುವುದು ಇನ್ನು ಕೂಡ ಸರಿಯಾಗಿ ನಿರ್ಧಾರವಾಗಿಲ್ಲ.
ಶ್ರೀ ಶಿರಡಿ ಸಾಯಿಬಾಬಾ ಜ್ಯೋತಿಷ್ಯ ಶಾಸ್ತ್ರಂ ನಂಬಿ ಕರೆ ಮಾಡಿದವರಿಗೆ ವಿಶೇಷ ಸಾಂತ್ವಾನ, ಸಮಸ್ಯೆ ಸಮಸ್ಯೆ ಸಮಸ್ಯೆ ಚಿಂತಿಸಬೇಡಿ, ಅಸಾಧ್ಯವಾದದ್ದು ಇಲ್ಲಿ ಸಾಧ್ಯ ಸಮಸ್ಯೆಗಳಾದ ವಿದ್ಯೆ ಉದ್ಯೋಗ ವ್ಯಾಪಾರ ಆರೋಗ್ಯ ದಾಂಪತ್ಯ ಗಂಡ-ಹೆಂಡತಿಯರ ಕಲಹ ಪ್ರೀತಿಯಲ್ಲಿ ನಂಬಿ ಮೋಸ ಇಷ್ಟಪಟ್ಟವರು ನಿಮ್ಮಂತೆ ಆಗಲು ಕೋರ್ಟ್ ಕೇಸ್ ಜಮೀನು ಸ್ತ್ರೀ ಮತ್ತು ಪುರುಷ ವಶೀಕರಣ ಶತ್ರು ಕಾಟ ಮಾಟ-ಮಂತ್ರ ಇನ್ನು ಮುಂತಾದ ಸಮಸ್ಯೆಗಳಿಗೆ ಅತಿ ಶೀಘ್ರದಲ್ಲಿ ಪರಿಹಾರಅಸಾಧ್ಯ ಆಗುವ ಸಮಸ್ಯೆಗಳಿಗೆ ಸಾಧ್ಯವಾಗಿ ತೋರಿಸುವುದು ಶ್ರೀ ಶಿರಡಿ ಸಾಯಿಬಾಬಾ ಜ್ಯೋತಿಷ್ಯಶಾಸ್ತ್ರನಿಮ್ಮ ನಂಬಿಕೆಗೆ ಇಲ್ಲಿ ಮೋಸವಿಲ್ಲ 9611844430