ಮದುವೆ ಪ್ರಮಾಣ ಪತ್ರ, ವಯಸ್ಕ ಯುವಕ ಯುವತಿ ದಂಪತಿಗಳಾಗಿರುವುದಕ್ಕೆ ಸರ್ಕಾರದಿಂದ ಸಿಗುವ ದೃಢೀಕೃತ ಪತ್ರವಾಗಿದೆ. ಭಾರತದಲ್ಲಿ ಹಿಂದೂ ಮದುವೆ ಕಾಯಿದೆ 1955 ಅಥವಾ ವಿಶೇಷ ಮದುವೆ ಕಾಯಿದೆ 1954ರ ಅನ್ವಯ ಮದುವೆಯಾಗಿರುವುದನ್ನು ನೋಂದಾಯಿಸಬಹುದು. ಕಾನೂನಿನ ಪ್ರಕಾರ ಮದುವೆಯಾಗುವುದಕ್ಕೆ ವರನಿಗೆ 21 ವರ್ಷ ಹಾಗೂ ವಧುವಿಗೆ 18 ವರ್ಷ ವಯಸ್ಸಾಗಿರಬೇಕು. ವಿವಾಹ ನಡೆದಿದೆ ಎನ್ನುವುದಕ್ಕೆ ಮದುವೆ ಪ್ರಮಾಣ ಪತ್ರ ಪ್ರಮುಖ ಸಾಕ್ಷಿ ಹಾಗೂ ದಾಖಲೆಯಾಗಿರುತ್ತದೆ. 2006ರಲ್ಲಿ ಮಹಿಳಾ ಸುರಕ್ಷಣೆಯನ್ನು ಮನಗಂಡ ಸುಪ್ರೀಂಕೋರ್ಟ್ ಮದುವೆ ನೊಂದಣಿಯನ್ನು ಕಡ್ಡಾಯಗೊಳಿಸಿದೆ. ಈಗ ಆನ್ ಲೈನ್ ಮೂಲಕ ಕೂಡಾ ಮದುವೆ ನೋಂದಾವಣೆ ಸಾಧ್ಯ. ಹಾಗಿದ್ದರೆ ಈ ಮ್ಯಾರೇಜ್ ಸರ್ಟಿಫಿಕೇಟ್ ಮಾಡಿಸುವುದು ಹೇಗೆ? ಇದರಿಂದ ನಮಗೆ ಏನು ಲಾಭ ಎನ್ನುವುದನ್ನು ನಾವು ಈ ಲೇಖನದ ಮೂಲಕ ತಿಳಿದುಕೊಳ್ಳೋಣ.

ಇವತ್ತಿನ ದಿನಗಳಲ್ಲಿ ಮ್ಯಾರೇಜ್ ಸರ್ಟಿಫಿಕೇಟ್ ಅನ್ನೋದು ಒಂದು ದಾಖಲೆಯೂ ಹೌದೂ ಮತ್ತು ಹಣವನ್ನು ಪಡೆಯಲೂ ಕೂಡಾ ಒಂದು ರೀತಿಯ ಸಹಾಯಕಾರಿ ಇದು. ನಮಗೆಲ್ಲ ತಿಳಿದ ಹಾಗೇ ಮ್ಯಾರೇಜ್ ಸರ್ಟಿಫಿಕೇಟ್ ಅನ್ನೋದು ಗಂಡ ಹೆಂಡತಿ ಇಬ್ಬರೂ ಕಾನೂನು ಬದ್ಧವಾಗಿ ಮದುವೆ ಆಗಿರುವುದಕ್ಕೆ ಇದು ಸಾಕ್ಷಿ ಆಗಿರುವುದು. ಅಷ್ಟೇ ಅಲ್ಲದೆ ಇದು ಮನೇ , ಜಮೀನು, ಸೈಟು, ಪ್ಲಾಟ್ ಇವೆಲ್ಲವನ್ನೂ ಗಂಡನಿಂದ ಹೆಂಡತಿಗೆ ಇಲ್ಲಾ ಹೆಂಡತಿಯಿಂದ ಗಂಡನಿಗೆ ವರ್ಗಾವಣೆ ಮಾಡುವ ಸಮಯದಲ್ಲಿ ಬಹಳಷ್ಟು ಪ್ರಯೋಜನಕಾರಿ. ಇನ್ನು ಹೊಸದಾಗಿ ಮದುವೆ ಆದವರಿಗೆ ಹೆಂಡತಿಯ ಹೆಸರನ್ನು ಬದಲಾಯಿಸಲು ಕೂಡಾ ಈ ಮ್ಯಾರೇಜ್ ಸರ್ಟಿಫಿಕೇಟ್ ಸಹಾಯಕಾರಿ. ಪಾಸ್ಪೋರ್ಟ್ ನಲ್ಲಿ ಗಂಡ ಹೆಂಡತಿ ಇಬ್ಬರ ಹೆಸರನ್ನು ಸೇರಿಸುವಾಗ ಕೂಡಾ ಮ್ಯಾರೇಜ್ ಸರ್ಟಿಫಿಕೇಟ್ ಒಂದಿದ್ದರೆ ಬೇರೆ ದಾಖಲೆಗಳು ಬೇಕಾಗುವುದಿಲ್ಲ. ಗಂಡ ಅಥವಾ ಹೆಂಡತಿ ಅಕಾಲಿಕ ಮರಣ ಹೊಂದಿದಾಗ ಹಣ ವರ್ಗಾವಣೆ ಮಾಡಲು ಇಲ್ಲವೇ ಪೆನ್ಶನ್ ಪಡೆಯಲು ಕೂಡಾ ಇದು ಅಗತ್ಯ.

ಇತ್ತೀಚಿನ ದಿನಗಳಲ್ಲಿ ಸಾಮಾನ್ಯವಾಗಿ ಬ್ಯಾಂಕ್ ಅಕೌಂಟ್ ಮತ್ತು ಪೋಸ್ಟ್ ಆಫೀಸ್ ಅಕೌಂಟ್ ಎಲ್ಲರದ್ದೂ ಇದ್ದೆ ಇರುತ್ತದೆ. ಇದರಲ್ಲಿ ಇಟ್ಟಿರುವ ಹಣವನ್ನು ಹಿಂಪಡೆಯಲು ಕೂಡಾ ಮ್ಯಾರೇಜ್ ಸರ್ಟಿಫಿಕೇಟ್ ಪ್ರಯೋಜನಕಾರಿ. ಹಾಗೂ ಸರ್ಕಾರದ ಪ್ರತಿಯೊಂದು ಸೌಲಭ್ಯಗಳನ್ನು ಕೂಡಾ ಇದರ ಮೂಲಕ ಪಡೆದುಕೊಳ್ಳಬಹುದು. ಗಂಡ ಅಥವಾ ಹೆಂಡತಿ ಯಾರಾದರೂ ವಿದೇಶದಲ್ಲಿ ನೆಲೆಸಿದ್ದರೆ ಅವರಿಗೆ ಪಾಸ್ಪೋರ್ಟ್ , ವೀಸಾ ಪಡೆಯಲು ಕೂಡಾ ಇದು ಸಹಾಯಕಾರಿ. ಕಾನೂನು ಬದ್ಧವಾಗಿ ವಿಚ್ಛೇದನ ಪಡೆಯಲು , ಜೀವನಾಂಶ ಪಡೆಯಲು ಕೂಡಾ ಮ್ಯಾರೇಜ್ ಸರ್ಟಿಫಿಕೇಟ್ ಅನ್ನೋದು ಅವಶ್ಯಕ. ಅಷ್ಟೇ ಅಲ್ಲದೆ ಮಹಿಳೆಯರಿಗೆ ಭದ್ರತೆ ಒದಗಿಸುತ್ತದೆ. ಮ್ಯಾರೇಜ್ ಸರ್ಟಿಫಿಕೇಟ್ ಇದ್ದರೆ ನಾವು ಇಷ್ಟೆಲ್ಲಾ ಅನುಕೂಲ / ಸೌಲಭ್ಯಗಳನ್ನು ಪಡೆಯಬಹುದು.

ಇನ್ನು ಒಂದುವೇಳೆ ಮ್ಯಾರೇಜ್ ಸರ್ಟಿಫಿಕೇಟ್ ಇಲ್ಲಾ ಎಂದರೆ ಏನೆಲ್ಲಾ ಆಗಬಹುದು ಅಥವಾ ಏನೆಲ್ಲಾ ಅನಾನುಕೂಲಗಳನ್ನು ಎದುರಿಸಬೇಕಾಗುವುದು ಎನ್ನುವುದನ್ನು ನೋಡುವುದಾದರೆ , ಉದಾಹರಣೆಗೆ ಪತಿ ಅಥವಾ ಪತ್ನಿ ಅಕಾಲಿಕ ಮರಣ ಹೊಂದಿದಾಗ ಬ್ಯಾಂಕ್ , ಪೋಸ್ಟ್ ಆಫೀಸ್ ಗಳಲ್ಲಿ ಇಟ್ಟ ಹಣ LIC ಹಣ , ಸರ್ಕಾರದ ಕಡೆಯಿಂದ ದೊರೆಯುವ ಪೆನ್ಶನ್ ಇವೆಲ್ಲಾ ಸಿಗುವ ಸಮಯದಲ್ಲಿ ಸಾಕಷ್ಟು ತೊಂದರೆ ಅನುಭವಿಸಬೇಕಾಗುವುದು. ಮನೆಯಿಂದ ಕಚೇರಿಗೆ, ಕಚೇರಿಯಿಂದ ಮನೆಗೆ ಅಲೆದಾಡುವ ಪರಿಸ್ಥಿತಿ ಬರುವುದು. ಹಾಗಾಗಿ ಮದುವೆ ಆದ ಮೇಲೆ ಪ್ರತಿಯೊಂದು ಗಂಡ ಹೆಂಡತಿಗೂ ಕೂಡಾ ಮ್ಯಾರೇಜ್ ಸರ್ಟಿಫಿಕೇಟ್ ತುಂಬಾ ಅಗತ್ಯ.

Leave a Reply

Your email address will not be published. Required fields are marked *