2023 ರಲ್ಲಿ ಈ 6 ರಾಶಿಯವರಿಗೆ ಕೊಡಿ ಬರಲಿದೆ ಕಂಕಣ ಭಾಗ್ಯ

0 100

Marriage about Kannada Astrology 2023: ಮದುವೆ ಎನ್ನುವುದು ಪ್ರತಿಯೊಬ್ಬರ ಜೀವನದಲ್ಲಿ ಇರುವಂತಹ ಪ್ರಮುಖ ಘಟ್ಟ ಎಂಬುದಾಗಿ ಹೇಳುತ್ತೇವೆ. ವೈದಿಕ ಶಾಸ್ತ್ರದಲ್ಲಿ ಹುಟ್ಟಿದ ಪ್ರತಿಯೊಬ್ಬ ಮಾನವ ಕೂಡ ಮದುವೆ ಆಗಲೇಬೇಕು ಆತನಿಗೆ ಸಂಗಾತಿ ಇರಲೇಬೇಕು ಎಂಬುದಾಗಿ ಹೇಳುತ್ತಾರೆ. ಇನ್ನು ಈ ವರ್ಷ ಮುಗಿಯುವುದಕ್ಕೆ ಕೆಲವೇ ದಿನಗಳು ಬಾಕಿ ಉಳಿದಿದ್ದು 2023 ಅಂದರೆ ಹೊಸ ವರ್ಷ ಪ್ರಾರಂಭವಾಗಲಿದೆ. ಈ 2023ರಲ್ಲಿ ಮದುವೆ ಭಾಗ್ಯ ಅಂದರೆ ಕಂಕಣ ಭಾಗ್ಯವನ್ನು ಹೊಂದಲಿರುವ ಅದೃಷ್ಟವಂತ ರಾಶಿಯವರು ಯಾರೆಲ್ಲ ಎಂಬುದನ್ನು ತಿಳಿದುಕೊಳ್ಳೋಣ ಬನ್ನಿ.

ಮೇಷ ರಾಶಿ; ಒಂದು ವೇಳೆ ಮೇಷ ರಾಶಿಯಲ್ಲಿ ಅವಿವಾಹಿತರು ಇದ್ದರೆ ಈ ವರ್ಷ ನಿಮಗೆ ಮದುವೆ ಪ್ರಸ್ತಾಪಗಳು ಹುಡುಕಿಕೊಂಡು ಬರುವ ಸಾಧ್ಯತೆ ಹೆಚ್ಚಾಗಿದೆ. ಏಪ್ರಿಲ್ ನಿಂದ ಆಗಸ್ಟ್ ತಿಂಗಳ ಒಳಗೆ ನಿಮಗೆ ಮದುವೆ ಪ್ರಸ್ತಾಪನೆಗಳು ಹುಡುಕಿಕೊಂಡು ಬರಬಹುದು. ಮದುವೆ ಬಗ್ಗೆ ಚಿಂತೆ ಮಾಡುವ ಅಗತ್ಯ ಇರುವುದಿಲ್ಲ ಕುಟುಂಬದ ಸಂಪೂರ್ಣ ಒಪ್ಪಿಗೆ ಇರುತ್ತದೆ.

ವೃಷಭ ರಾಶಿ; ಒಂದು ವೇಳೆ Marriage ಮದುವೆಗಾಗಿ ಸಂಗಾತಿಯನ್ನು ಹುಡುಕುತ್ತಿದ್ದರೆ ನಿಮಗೆ ಜುಲೈ ತಿಂಗಳ ಒಳಗೆ ಮದುವೆ ಆಗುವ ಅವಕಾಶ ಹೆಚ್ಚಾಗಿದೆ. ಆರಂಭದಲ್ಲಿ ಚೆನ್ನಾಗಿದ್ದರೂ ಕೂಡ ಮದುವೆಯಾದ ವರ್ಷದ ಕೊನೆಗೆ ನಿಮ್ಮಿಬ್ಬರ ನಡುವೆ ವೈಮನಸ್ಸು ಮೂಡಬಹುದು ಆದರೆ ಆ ಸಂದರ್ಭದಲ್ಲಿ ನೀವಿಬ್ಬರು ಜಾಗೃತೆಯಾಗಿ ವ್ಯವಹರಿಸಬೇಕು.

ಸಿಂಹ ರಾಶಿ; ಪ್ರೇಮ ವಿವಾಹದಲ್ಲಿ ಸಿಂಹ ರಾಶಿಯವರು ಯಶಸ್ಸನ್ನು ಸಾಧಿಸುತ್ತಾರೆ. ಒಂದು ವೇಳೆ ಸಿಂಹ ರಾಶಿಯವರು ಅವಿವಾಹಿತರಾಗಿದ್ರೆ ವರ್ಷಾಂತ್ಯದೊಳಗೆ ನೀವು ಮದುವೆಯಾಗಲು ಸಂಗಾತಿಯನ್ನು ಹುಡುಕುತ್ತಿದ್ದರೆ ಈ ವರ್ಷದ ಒಳಗೆ ನೀವು ಯಶಸ್ವಿಯಾಗಲಿದ್ದೀರಿ. ನಿಮ್ಮನ್ನು ಅರಿತುಕೊಂಡು ನಿಮ್ಮ ಜೊತೆಗೆ ಸಾಗುವಂತಹ ಸಂಗಾತಿಯನ್ನು ಪಡೆಯಲಿದ್ದೀರಿ.

ತುಲಾ ರಾಶಿ; ನಿಮ್ಮ ಪ್ರೀತಿಗೆ ಮನೆಯವರ ಬೆಂಬಲ ಇರುವುದಿಲ್ಲ ಹಾಗೂ ಏರಿಳಿತಗಳಿಂದ ಕೂಡಿರುತ್ತದೆ. ಆದರೆ ವರ್ಷದ ಅಂತ್ಯದ ವೇಳೆಗೆ ಪರಿಸ್ಥಿತಿ ಸರಿ ಆಗಲಿದ್ದು ನಿಮ್ಮ ಪರವಾಗಿ ಎಲ್ಲರೂ ನಿಂತು ಎಲ್ಲಾ ಕಾರ್ಯಗಳು ಶುಭವಾಗಿ ನಡೆಯುತ್ತದೆ.

ವೃಶ್ಚಿಕ ರಾಶಿ; ಪ್ರೀತಿಯಲ್ಲಿದ್ದರೆ ಅಥವಾ ಜೀವನ ಸಂಗಾತಿಯ ಹುಡುಕಾಟದಲ್ಲಿದ್ದರೆ 2023ರಲ್ಲಿ ಖಂಡಿತವಾಗಿ ನೀವು ನೀವಂದುಕೊಂಡ ಹಾಗೆ ಮದುವೆಯಾಗಿ ಸುಖವಾಗಿ ಇರಲಿದ್ದೀರಿ. ಮನೆಯಲ್ಲಿ ಕೂಡ ಯಾವುದೇ ಸಮಸ್ಯೆ ಇರಲಿ ಸುಖ ಶಾಂತಿ ನೆಮ್ಮದಿಯಿಂದ ಜೀವನ ಮಾಡಲು ಸಾಧ್ಯವಿದೆ.

ಕುಂಭ ರಾಶಿ; ಪ್ರೇಮಿಗಳ ನಡುವೆ ಒಳ್ಳೆಯ ಬಾಂಧವ್ಯ ಇರಲಿದೆ. ಮನಸ್ತಾಪ ಬಂದರೂ ಕೂಡ ಅದನ್ನು ಬಗೆಹರಿಸಿಕೊಳ್ಳಲು ಬೇಕು. ಆಗಸ್ಟ್ ನಂತರದ ಸಮಯದಲ್ಲಿ ನಿಮ್ಮಿಬ್ಬರ ನಡುವೆ ಸಂಬಂಧಗಳು ಉತ್ತಮವಾಗಿರುತ್ತದೆ. ಇವುಗಳಲ್ಲಿ ನಿಮ್ಮ ರಾಶಿ ಕೂಡ ಇದ್ದರೆ ತಪ್ಪದೆ ಕಾಮೆಂಟ್ ಮೂಲಕ ನಮ್ಮೊಂದಿಗೆ ಹಂಚಿಕೊಳ್ಳಿ.

Leave A Reply

Your email address will not be published.