ವೃಶ್ಚಿಕ ರಾಶಿಯವರಿಗೆ ಅದೃಷ್ಟ ತರುವ ಕಲರ್ ಹಾಗೂ ಸಂಖ್ಯೆ ಯಾವುದು? ತಿಳಿದುಕೊಳ್ಳಿ

0 16,020

Kannada Astrology Scorpio Lucky color and number: ರಾಶಿಚಕ್ರದಲ್ಲಿ ಹನ್ನೆರಡು ರಾಶಿಗಳು ಇದ್ದರು ಸಹ ಎಲ್ಲ ರಾಶಿಯವರಿಗೆ ಒಂದೇ ತರನಾದ ಶುಭ ದಿನ ದಿಕ್ಕು ಬಣ್ಣ ಹಾಗೂ ಸಂಖ್ಯೆ ಇರುವುದು ಇಲ್ಲ ಪ್ರತಿಯೊಂದು ರಾಶಿಯ ಗುಣ ಸ್ವಭಾವ ಹಾವ ಭಾವ ಭಿನ್ನವಾಗಿ ಇರುತ್ತದೆಯೋ ಹಾಗೆಯೇ ದಿಕ್ಕು ದಿನ ಹಾಗೂ ಶುಭ ಸಂಖ್ಯೆಗಳು ಬೇರೆ ಬೇರೆಯಾಗಿ ಇರುತ್ತದೆ ಅದರಲ್ಲಿ ವೃಶ್ಚಿಕ ರಾಶಿಯವರಿಗೆ ಶುಭ ದಿನ ದಿಕ್ಕು ಬಣ್ಣ ಇವೆಲ್ಲವೂ ಸಹ ವಿಶಿಷ್ಟತೆಯನ್ನು ಹೊಂದಿರುತ್ತದೆ

ಕೆಲವು ಬಣ್ಣದ ಉಡುಪು ವಸ್ತುಗಳನ್ನು ತೆಗೆದುಕೊಳ್ಳುವಾಗ ಗಮನಿಸಬೇಕು ಹಾಗೆಯೇ ಎಲ್ಲ ದಿಕ್ಕು ಎಲ್ಲರಿಗೂ ಸಹ ಒಳ್ಳೆಯದಾಗಿ ಇರುವುದು ಇಲ್ಲ ಪ್ರತಿಯೊಂದು ರಾಶಿಯವರಿಗೆ ಸಹ ಕೆಲವು ದಿಕ್ಕುಗಳು ಶುಭವಾಗಿ ಇರುತ್ತದೆ ಕೆಲವು ದಿಕ್ಕುಗಳು ಅಶುಭ ಫಲವನ್ನು ನೀಡುತ್ತದೆ ಹಾಗಾಗಿ ಹೊಸ ಮನೆ ಹಾಗೂ ಅಂಗಡಿ ಭೂಮಿಯನ್ನು ಖರೀದಿ ಮಾಡುವಾಗ ಬಹಳ ಹಿಂದಿನ ಕಾಲದಿಂದಲೂ ಸಹ ಶುಭದಾಯಕವಾದ ದಿಕ್ಕನ್ನು ನೋಡಿ ಖರೀದಿ ಮಾಡುತಿದ್ದರು. ಎಲ್ಲ ಸಂಖ್ಯೆಗಳು ಸಹ ಎಲ್ಲ ರಾಶಿಯವರಿಗೆ ಶುಭವಾಗಿ ಇರುವುದು ಇಲ್ಲ ನಾವು ಈ ಲೇಖನದ ಮೂಲಕ ವೃಶ್ಚಿಕ ರಾಶಿಯವರಿಗೆ ಸೂಕ್ತವಾದ ದಿಕ್ಕು ಸಂಖ್ಯೆ ಹಾಗೂ ಬಣ್ಣಗಳ ಬಗ್ಗೆ ತಿಳಿದುಕೊಳ್ಳೋಣ.

ವೃಶ್ಚಿಕ ರಾಶಿಯವರಿಗೆ ಒಂದು ಎರಡು ಮೂರು ಮತ್ತು ಒಂಬತ್ತು ಈ ಸಂಖ್ಯೆಗಳು ಶುಭವಾಗಿ ಇರುತ್ತದೆ ಅಂಕಿ ಹಾಗೂ ಸಂಖ್ಯೆಯನ್ನು ನೋಡಿಕೊಂಡು ಬಳಸಬೇಕು ಎರಡು ಸಂಖ್ಯೆ Hotel Business ಹೋಟೆಲ್ ಬಿಸ್ನೆಸ್ ಹಾಗೂ ನೀರಿನ ಬಿಸ್ನೆಸ್ ಮಾಡು ತುಂಬಾ ಸಹಾಯಕವಾಗಿ ಇರುತ್ತದೆ ಅಂಕಿ ಸಂಖ್ಯೆಯನ್ನು ಹೊಸ ಬಿಸ್ನೆಸ್ ಮಾಡುವಾಗ ಮನೆ ಬದಲಾವಣೆ ಮಾಡುವಾಗ ಹಾಗೂ ಒಳ್ಳೆಯ ಕೆಲಸವನ್ನು ಮಾಡುವಾಗ ತುಂಬಾ ಗಮನಿಸಬೇಕು .

ವೃಶ್ಚಿಕ ರಾಶಿಯವರು ಸಂಖ್ಯೆ ಐದನ್ನು ಪರಿಗಣಿಸಬಾರದು ಮೇಷ ರಾಶಿಯ ಅಧಿಪತಿ ಹಾಗೂ ಕುಜನಿಗೆ ಶತ್ರುತ್ವ ಬರುವುದರಿಂದ ಐದು ಸಂಖ್ಯೆಯನ್ನು ಹೊರತುಪಡಿಸಿಬೇಕು ಹಾಗೆಯೇ ಎರಡನ್ನು ಸಹ ಬಹಳ ಎಚ್ಚರದಿಂದ ಬಳಸಬೇಕು ವಾಹನ ಸಂಖ್ಯೆ ಮೊಬೈಲ್ ನಂಬರ್ ಮನೆ ನಂಬರ್ ಹಾಗೆಯೇ Account Number ಅಕೌಂಟ್ ನಂಬರ್ ಎಲ್ಲವನ್ನೂ ಕುಡಿಸಿದಾಗ ಒಂದು ಮೂರು ಅಂಕೆಗಳು ಬರಬೇಕು ಕೊನೆಯ ಬರುವ ಸಂಖ್ಯೆಯಲ್ಲಿ ಏರಿಕೆ ಕ್ರಮದಲ್ಲಿ ಇರಬೇಕು ಇಳಿಕೆ ಕ್ರಮದಲ್ಲಿ ಇರಬಾರದು ಇಪ್ಪತ್ಮೂರು ಬಂದರೆ ಒಳ್ಳೆಯದು ಹಾಗೆಯೇ ನಕವತ್ಮೂರು ಒಳ್ಳೆಯದಲ್ಲ ಹೀಗೆ ಅಂಕಿ ಹಾಗೂ ಸಂಖ್ಯೆಯನ್ನು ಗಮನಿಸಬೇಕು.

ವೃಶ್ಚಿಕ ರಾಶಿಯವರಿಗೆ ಕೆಂಪು ಹಾಗೂ ಕಿತ್ತಳೆ ಬಣ್ಣ ಹಾಗೂ ಕೇಸರಿ ಬಣ್ಣ ಒಳ್ಳೆಯದು ಕ್ರೀಮ್ ಬಣ್ಣವನ್ನು ಬಹಳ ಎಚ್ಚರಿಕೆಯಿಂದ ಬಳಸಬೇಕು ಹಾಗೆಯೇ (Green) ಹಸಿರು ಬಣ್ಣವನ್ನು ಬಳಸಬಾರದು ಧರಿಸುವ ಬಟ್ಟೆ ಹಾಗೂ ವಾಹನ ಹಾಗೂ ಮನೆಯ ಅಲಂಕಾರಕ್ಕೆ ಬಳಸುವ ಪೇಂಟ್ ಇವೆಲ್ಲವೂ ಸಹ ಶುಭದಾಯಕವಾದ ಬಣ್ಣವನ್ನು ಧರಿಸಬೇಕು ವೃಶ್ಚಿಕ ರಾಶಿಯವರಿಗೆ ಭಾನುವಾರ ಅತ್ಯಂತ ಶುಭವಾದ ದಿನವಾಗಿದೆ ಗುರುವಾರ ಸಹ ಅತ್ಯಂತ ಶುಭವಾದ ದಿನವಾಗಿದೆ ಬುಧವಾರ ಹೆಚ್ಚಾಗಿ ಅಶುಭ ಆಗುವ ಸಾಧ್ಯತೆ ಇರುತ್ತದೆ ಹಾಗೆಯೇ ಸೋಮವಾರ ಸಹ ಅಡೆತಡೆಗಳು ಆಗುವ ಸಾಧ್ಯತೆ ಇರುತ್ತದೆ

ವೃಶ್ಚಿಕ ರಾಶಿಯವರಿಗೆ ಉತ್ತರ ದಿಕ್ಕು ಅತ್ಯಂತ ಶುಭವಾಗಿ ಇರುತ್ತದೆ ಹಾಗೆಯೇ ಪೂರ್ವ ದಿಕ್ಕು ಸಹ ಒಳ್ಳೆಯದು ಉತ್ತರ ದಿಕ್ಕಿನಲ್ಲಿ ಮನೆ ಹಾಗೂ ಅಂಗಡಿ ಮಾಡಿದರೆ ಒಳ್ಳೆಯ ಲಾಭ ಕಂಡು ಬರುತ್ತದೆ. ವೃಶ್ಚಿಕ ರಾಶಿಯವರು ಹವಳವನ್ನು ಧರಿಸುವುದರಿಂದ ಶುಭಫಲಗಳು ಲಭಿಸುತ್ತದೆ ಹವಳವನ್ನು ಗಂಡು ಮಕ್ಕಳು ಎಡ ಗೈ ಹಾಗೂ ಹೆಣ್ಣು ಮಕ್ಕಳು ಬಲಗೈಗೆ ಉಂಗುರದಲ್ಲಿ ಹಾಕಿ ಧರಿಸಬೇಕು ಹೀಗೆ ವೃಶ್ಚಿಕ ರಾಶಿಯವರಿಗೆ ಎಲ್ಲ ಬಣ್ಣ ಎಲ್ಲ ದಿಕ್ಕು ಎಲ್ಲ ನಂಬರ್ ಶುಭದಯಕವಾಗಿ ಇರುವುದು ಇಲ್ಲ ಬದಲಾಗಿ ಕೆಲವು ದಿಕ್ಕು ಬಣ್ಣ ನಂಬರ್ ಗಳು ಮಾತ್ರ ಶುಭಫಲವಾಗಿ ಇರುತ್ತದೆ.

Leave A Reply

Your email address will not be published.