ಕಳೆದು ಹೋದ ಮಾರ್ಕ್ಸ್ ಕಾರ್ಡ್ ತಕ್ಷಣ ಪಡೆಯಲು ಏನ್ ಮಾಡಬೇಕು ಇಲ್ಲಿದೆ ಮಾಹಿತಿ

0 3,363

ಕಳೆದುಹೋದ ಎಸ್‌ಎಸ್‌ಎಲ್‌ಸಿ ಪ್ರಮಾಣಪತ್ರಗಳ ನಕಲು ಪ್ರತಿಯನ್ನು ಪಡೆಯುವುದು ಇನ್ನು ಮುಂದೆ ಸುದೀರ್ಘವಾದ ಸಂಗತಿಯಾಗಿರುವುದಿಲ್ಲ. ಎಸ್‌ಎಸ್‌ಎಲ್‌ಸಿ ಪರೀಕ್ಷೆಯನ್ನು ನಡೆಸುವ ಕರ್ನಾಟಕ ಮಾಧ್ಯಮಿಕ ಶಿಕ್ಷಣ ಪರೀಕ್ಷಾ ಮಂಡಳಿ (ಕೆಎಸ್‌ಇಇಬಿ), ಅರ್ಜಿಯ ದಿನಾಂಕದಿಂದ ಕೇವಲ ಐದು ದಿನಗಳಲ್ಲಿ ವಿದ್ಯಾರ್ಥಿಗಳು ತಮ್ಮ ನಕಲಿ ಪ್ರಮಾಣಪತ್ರಗಳನ್ನು ಪಡೆಯಲು ಸಾಧ್ಯವಾಗುವಂತೆ ಪ್ರಕ್ರಿಯೆಯನ್ನು ಡಿಜಿಟಲೀಕರಣಗೊಳಿಸಿದೆ.   

ಎಚ್‌ಎಮ್‌ನಿಂದ ಬಿಇಒ ಮತ್ತು ಡಿಡಿಪಿಐ ಹಂತದವರೆಗೆ ಆನ್‌ಲೈನ್‌ನಲ್ಲಿ ಪರಿಶೀಲನೆ ನಡೆಯುತ್ತದೆ, ಮತ್ತು ತತ್ಕಾಲ್ ಆಯ್ಕೆಯ ಅಡಿಯಲ್ಲಿ ಐದು ದಿನಗಳಲ್ಲಿ ಅಂಕಪಟ್ಟಿಯ ಭೌತಿಕ ನಕಲು ಮುಖ್ಯ ಶಿಕ್ಷಕರ ಕಚೇರಿಯಲ್ಲಿರುತ್ತದೆ. ತುರ್ತು-ಅಲ್ಲದ ಆಧಾರದ ಮೇಲೆ, ಪ್ರಮಾಣಪತ್ರವು ೩೦ದಿನಗಳಲ್ಲಿ ಸಿದ್ಧವಾಗುತ್ತದೆ. ವಿದ್ಯಾರ್ಥಿಗಳು ನಕಲಿ ಅಂಕಪಟ್ಟಿಗಳನ್ನು ನಾಲ್ಕು ಬಾರಿ ಪಡೆಯಬಹುದು.

ಮೊದಲು ಅಂದರೆ ಎಸ್ ಎಸ್ ಎಲ್ ಸಿ ಅಂಕಪಟ್ಟಿ ಪಡೆಯಲು ಗೂಗಲ್ ನಲ್ಲಿ ಸರ್ಚ್ ಗೆ ಹೋಗಿ ಎಸ್ ಎಸ್ ಎಲ್ ಸಿ ಎಂದು ಬರೆದು ಎಂಟರ್ ಮಾಡಿದಾಗ ಕೆಎಸ್ಇಇಬಿ ಎಂಬ ಲಿಂಕ್ ಕಾಣಸಿಗುತ್ತದೆ, ಅದರ ಮೇಲೆ ಕ್ಲಿಕ್ ಮಾಡಿದಾಗ ಕರ್ನಾಟಕ ಪ್ರೌಢಶಿಕ್ಷಣ ಪರೀಕ್ಷಾ ಮಂಡಳಿ ವೆಬ್ ಸೈಟ್ ತೆರೆಯುತ್ತದೆ ಅಲ್ಲಿ ಆನ್ಲೈನ್ ಸೇವೆಗಳು ಎಂಬ ಅಂಶದ ಮೇಲೆ ಕ್ಲಿಕ್ ಮಾಡಬೇಕು.

ಅಲ್ಲಿ ಎಸ್ ಎಸ್ ಎಲ್ ಸಿ ಎಂದು ಕಾಣುವುದರ ಮೇಲೆ ಕ್ಲಿಕ್ ಮಾಡಿದಾಗ ಅಂಕಪಟ್ಟಿ ಎಂಬ ಮತ್ತೊಂದು ತೆರೆ ಮೇಲೆ ಕ್ಲಿಕ್ ಮಾಡಿದಾಗ ಎಸೆಸೆಲ್ಸಿ ಅಂಕಪಟ್ಟಿ ಹಾಗೂ ಅನುತ್ತೀರ್ಣ ಅಂಕಪಟ್ಟಿ ಗಳನ್ನು ಪಡೆಯಲು ಅರ್ಜಿ ಸಲ್ಲಿಸುವ ಸೂಚನೆಗಳು ಎಂಬ ವೆಬ್ ಸೈಟ್ ಓಪನ್ ಆಗುತ್ತದೆ ಅಲ್ಲಿ ನಮಗೆ ಬೇಕಾದ ಅಂಕಪಟ್ಟಿ ಪಡೆಯಲು ಅರ್ಜಿ ಸಲ್ಲಿಸಬಹುದು. ಅರ್ಜಿ ಸಲ್ಲಿಸಲು ಬೇಕಾದ ವೆಬ್ ಸೈಟ್ ಕೇಳುವಂತಹ ಡಾಕ್ಯುಮೆಂಟ್ಸ್ ಗಳನ್ನು ಸಲ್ಲಿಸಬೇಕಾಗುತ್ತದೆ.

ಎಲ್ಲ ದಾಖಲಾತಿಗಳನ್ನು ಭರ್ತಿ ಮಾಡಿದ ನಂತರ ಅದೇ ವೆಬ್ಸೈಟ್ನಲ್ಲಿ ಅಪ್ಲಿಕೇಶನ್ ಎಂಬ ಲಿಂಕ್ ಮೇಲೆ ಕ್ಲಿಕ್ ಮಾಡಿ ಅದರಲ್ಲಿರುವ ಸೂಚನೆಗಳನ್ನು ಓದಿ ಸಣ್ಣ ಬಾಕ್ಸ್ ನಲ್ಲಿ ರೈಟ್ ಮಾರ್ಕ್ ಕ್ಲಿಕ್ ಮಾಡಬೇಕಾಗುತ್ತದೆ. ನಂತರ ಕಾಣಸಿಗುವ ಪರದೆ ಮೇಲೆ ಯಾವ ಹಂತದಲ್ಲಿ ಅಂಕಪಟ್ಟಿಯನ್ನು ಪಡೆಯಲು ಇಚ್ಚಿಸುತ್ತೇವೆ ಎಂಬುದನ್ನು ಆಯ್ಕೆ ಮಾಡಬೇಕಾಗುತ್ತದೆ.

ಹಾಗೂ ಸೇವೆಯ ಮೊತ್ತವನ್ನು ಆಯ್ಕೆಮಾಡಿ, ಅರ್ಜಿದಾರರ ವಿವರಗಳನ್ನು ದಾಖಲಿಸಿ ಓಟಿಪಿ ಪಡೆದು ನಮೂದಿಸಿ ಓಕೆ ಬಟನ್ ಕ್ಲಿಕ್ ಮಾಡಿದರೆ ರೆಫರೆನ್ಸ್ ನಂಬರ್ ಪಡೆದುಕೊಳ್ಳಬೇಕು.ಹಾಗೂ ಕೇಳದಾದಂತಹ ಮಾಹಿತಿಗಳನ್ನು ಒದಗಿಸಿ ಕೊನೆಯಲ್ಲಿ ಪೇಮೇಂಟ್ ಮಾಡಬೇಕಾಗುತ್ತದೆ.

Leave A Reply

Your email address will not be published.