ಮಾವಿನಹಣ್ಣು ಒಂದು ಸೀಸನ್ ನಲ್ಲಿ ಅತಿ ಹೆಚ್ಚಾಗಿ ಸಿಗುವಂತ ಹಣ್ಣಾಗಿದೆ, ಈ ಹಣ್ಣು ದೇಹಕ್ಕೆ ಹಲವು ರೀತಿಯ ಉಪಯೋಗಗಳನ್ನು ನೀಡುವುದರ ಜೊತೆಗೆ ಉತ್ತಮವಾದ ಆರೋಗ್ಯವನ್ನು ವೃದ್ಧಿಸುತ್ತದೆ. ಅಷ್ಟಕ್ಕೂ ಮಾವಿನ ಹಣ್ಣು ತಿನ್ನೋದ್ರಿಂದ ಎಷ್ಟೆಲ್ಲ ಲಾಭವಿದೆ ಅನ್ನೋದನ್ನ ಈ ಮೂಲಕ ತಿಳಿಯೋಣ ಬನ್ನಿ.
ಗರ್ಭಿಣಿಯರಿಗೆ ಹುಳಿ ಮಾವು ಅಂದ್ರೆ ತುಂಬಾನೇ ಇಷ್ಟ, ಅಷ್ಟೇ ಅಲ್ಲದೆ ಮಾವಿನಕಾಯಿ ಹಣ್ಣು ಇವುಗಳನ್ನು ಹಲವು ರೀತಿಯ ಅಡುಗೆ ಖ್ಯಾದ್ಯಗಳಲ್ಲಿ ಬಳಸಲಾಗುತ್ತದೆ. ಇದರಲ್ಲಿ ಕ್ಲೋರೈಡ್ ಹಾಗೂ ಕಬ್ಬಿನಾಂಶ ಕಾಪಾಡುವ ಗುಣವಿದೆ. ಇನ್ನು ಇದು ಯಾವೆಲ್ಲ ಉಪಯೋಗಕಾರಿ ಅಂಶಗಳನ್ನು ಹೊಂದಿದೆ ಅನ್ನೋದನ್ನ ತಿಳಿಯುವುದಾದರೆ, ಮೊದಲನೆಯದಾಗಿ ಹೊಟ್ಟೆಗೆ ಸಂಬಂದಿಸಿದ ಸಮಸ್ಯೆಯನ್ನು ಕಡಿಮೆ ಮಾಡುತ್ತದೆ ಹೌದು ಬೇಸಿಗೆಯಲ್ಲಿ ಹೆಚ್ಚಾಗಿ ಕಾಡುವ ಅಜೀರ್ಣ, ಭೇದಿ, ಮಲಬದ್ಧತೆಯಂತಹ ಸಮಸ್ಯೆಗಳಿಗೆ ಮಾವಿನ ಕಾಯಿ ರಾಮಬಾಣವಾಗಿ ಕೆಲಸ ಮಾಡುತ್ತದೆ.
ಇನ್ನು ಮಾವಿನಕಾಯಿಯ ನಿಯಾಸಿನ್ ಅಂಶವಿದ್ದು ಇದು ಹೃದಯದ ಆರೋಗ್ಯವನ್ನು ಕಾಪಾಡುತ್ತದೆ, ಹಾಗೂ ಯಾವುದೇ ಕಾಯಿಲೆಗಳು ಹರಡದಂತೆ ಸಂರಕ್ಷಿಸುತ್ತದೆ, ದೇಹದ ರಕ್ತದಲ್ಲಿನ ಕೆಟ್ಟ ಕೊಲೆಸ್ಟ್ರಾಲ್ ಮಟ್ಟವನ್ನು ಕಡಿಮೆ ಮಾಡಿ ಉತ್ತಮ ಕೊಲೆಸ್ಟ್ರಾಲ್ ಮಟ್ಟ ಹೆಚ್ಚಿಸಲು ಸಹಕಾರಿಯಾಗಿದೆ. ಅಷ್ಟೇ ಅಲ್ದೆ ವಸಡಿನಲ್ಲಿ ರಕ್ತಸ್ರಾವ ಆಗದಂತೆ ತಡೆಯುತ್ತದೆ. ಹಲ್ಲುಗಳು ಹುಳುಕು ಆಗದಂತೆ ನಿಯಂತ್ರಿಸುತ್ತದೆ.
ಮಾವಿನಕಾಯಿಯಲ್ಲಿ ವಿಟಮಿನ್ ಕ್ಯಾಲ್ಶಿಯಂ ಇರೋದ್ರಿಂದ ದೇಹಕ್ಕೆ ರೋಗ ನಿರೋಧಕ ಶಕ್ತಿ ಹೆಚ್ಚಿಸುತ್ತದೆ, ಅಷ್ಟೇ ಅಲ್ಲದೆ ಕರುಳು ಹಾಗೂ ಯಕೃತಿನ ಆರೋಗ್ಯವರ್ಧನೆ
ಮಾವಿನ ಕಾಯಿ ಕರುಳು ಹಾಗೂ ಯಕೃತಿನ ಆರೋಗ್ಯಕ್ಕೂ ಉತ್ತಮ ಅನ್ನೋದನ್ನ ತಿಳಿಯಲಾಗಿದೆ. ದೇಹಕ್ಕೆ ಶಕ್ತಿ ನೀಡುವ ಜೊತೆಗೆ ದೇಹದ ತೂಕ ಇಳಿಕೆಗೆ ಸಹ ಮಾವಿನಕಾಯಿ ಉತ್ತಮ ಔಷಧಿಯಾಗಿ ಕೆಲಸ ಮಾಡುತ್ತದೆ.