ಉನ್ನತ ಹುದ್ದೆಯಲ್ಲಿರುವ ಅಧಿಕಾರಿಗಳು ಅಂದ್ರೆ ಸಾಕು ಸ್ವಾರ್ಥಿಗಳು ಅಹಂಕಾರಿಗಳು ಅನ್ನೋ ಮನೋಭಾವನೆ ಸಾಮಾನ್ಯ ಜನರಲ್ಲಿ ಬಂದು ಬಿಡುತ್ತದೆ, ಆದ್ರೆ ಎಲ್ಲರು ಒಂದೇ ರೀತಿಯಲ್ಲಿ ಇರೋದಿಲ್ಲ ಕೆಲವರು ಮಾನವೀಯತೆ ದೃಷ್ಟಿಯಿಂದ ಬಡವರಿಗೆ ಹಾಗೂ ಆರ್ಥಿಕ ಸಂಕಷ್ಟದಲ್ಲಿರುವವರಿಗೆ ಸಹಾಯ ಮಾಡಲು ಮುಂದಾಗುತ್ತಾರೆ ಅಷ್ಟೇ ಅಲ್ದೆ ಸಮಾಜದ ಏಳಿಗೆಗೆ ಉತ್ತಮ ಕೆಲಸವನ್ನು ಮಾಡಲು ಮುಂದಾಗುತ್ತಾರೆ. ಅದೇ ನಿಟ್ಟಿನಲ್ಲಿ ಇಲ್ಲೊಬ್ಬ ಐಎಎಸ್ ಅಧಿಕಾರಿ ಮಕ್ಕಳಿಗೆ ಪಾಠ ಹೇಳಿ ಕೊಡಲು ಶಿಕ್ಷಕರು ಇಲ್ಲದಂತ ಶಾಲೆಗೆ ತನ್ನ ಪತ್ನಿಯನ್ನೇ ಪಾಠ ಹೇಳಿ ಕಳಿಸಿಕೊಡುತ್ತಾರೆ, ಅಷ್ಟಕ್ಕೂ ಇವರು ಯಾರು ಇದು ಎಲ್ಲಿ ಅನ್ನೋದನ್ನ ಈ ಮೂಲಕ ತಿಳಿದುಕೊಳ್ಳೋಣ.
ಉತ್ತರ ಪ್ರದೇಶದ ರುದ್ರ ಪ್ರಯಾಗ ಜಿಲ್ಲೆಯ ಐಎಎಸ್ ಆಫೀಸರ್ ಹೆಸರು ಮಂಗೇಶ್ ಗಿಲ್ಡಿಯಲ್ ಎಂಬುದಾಗಿ ಇವರು ಈ ಸಾಮಾಜಿಕ ಕಳಕಳಿ ತೋರಿಸಿದ ಮಹಾನ್ ವ್ಯಕ್ತಿಯಾಗಿದ್ದಾರೆ, ಇವರ ಪತ್ನಿ ಉಷಾ ಪೆಥಾಲಜಿಯಲ್ಲಿ ಪಿಎಚ್ ಡಿ ಪದವಿ ಕೂಡ ಪಡೆದುಕೊಂಡಿದ್ದಾರೆ. ಹೀಗೆ ಒಮ್ಮೆ ಈ ಐಎಎಸ್ ಅಧಿಕಾರಿ ರುದ್ರಪ್ರಯಾಗದ ರಾಜ್ ಕಿಯಾ ಮಹಿಳಾ ಕಾಲೇಜಿಗೆ ಭೇಟಿ ನೀಡಿದ್ದರು ಅಲ್ಲಿ ೮ ಹಾಗೂ ೯ ನೇ ತರಗತಿಯವರಿಗೆ ವಿಜ್ಞಾನ ಪಾಠ ಹೇಳಿಕೊಡಲು ಪ್ರಾಧ್ಯಾಪಕರು ಇಲ್ಲದ ಕಾರಣ ತಕ್ಷಣವೇ ತನ್ನ ಪತ್ನಿಗೆ ಪಾಠ ಹೇಳಿಕೊಡಲು ಹೋಗುವಂತೆ ಕೇಳಿಕೊಳ್ಳುತ್ತಾರೆ.
ತನ್ನ ಪತಿಯ ಆಸೆಯನ್ನು ಈ ಪತ್ನಿ ಹಿಡೇರಿಸುತ್ತಾರೆ, ಅಷ್ಟೇ ಅಲ್ಲದೆ ಹತ್ತಾರು ಉತ್ತಮ ಕೆಲಸಗಳನ್ನು ಮಾಡಲು ಈ ಅಧಿಕಾರಿ ಯಾವಾಗಲು ಮುಂದಾಗುತ್ತಾರೆ, ಜನರ ಮನಸ್ಸಿನಲ್ಲಿ ಒಳ್ಳೆಯ ಶ್ರಮ ಜೀವಿ ಒಳ್ಳೆಯ ಅಧಿಕಾರಿ ಅನಿಸಿಕೊಂಡಿದ್ದಾರೆ, 2011ರ ಬ್ಯಾಚ್ ನ ಐಎಎಸ್ ಆಫೀಸರ್ ಆಗಿರುವ ಮಂಗೇಶ್ ಯುಪಿಎಸ್ ಸಿ ಪರೀಕ್ಷೆಯಲ್ಲಿ 4ನೇ ಸ್ಥಾನ ಪಡೆದುಕೊಂಡಿದ್ದರು. ತನ್ನ ಕೆಲಸಗಳಿಂದ ಮಂಗೇಶ್ ಜನರ ಮನಸ್ಸಿನಲ್ಲಿ ಹೀರೋ ಆಗಿ ಬೆಳೆದಿದ್ದಾರೆ. ಅದೇನೇ ಇರಲಿ ಸ್ವಾರ್ಥದಿಂದ ತುಂಬಿರುವಂತ ಅಧಿಕಾರಿಗಳ ನಡುವೆ ಇಂತಹ ಸಾಮಾಜಿಕ ಕಳಕಳಿ ಹೊಂದಿರುವಂತ ಅಧಿಕಾರಿಗಳು ಇನ್ನು ಹೆಚ್ಚಲಿ ಸಮಾಜ ಸುಧಾರಣೆಯಾಗಲಿ ಅನ್ನೋದೇ ನಮ್ಮ ಆಶಯ.