ಭಾರಿ ಸದ್ದು ಮಾಡುತ್ತಿರುವ ರಾಬರ್ಟ್ ಸಿನಿಮಾದ ಕಣ್ಣೆ ಅಧಿರಿಟ್ಟೆ ಎಂಬ ತೆಲುಗು ಹಾಡನ್ನು ಹಾಡಿದವರು ತೆಲುಗು ಗಾಯಕಿ ಮಂಗ್ಲಿ. ಅವರು ಕಳೆದ ಶಿವರಾತ್ರಿ ಅಂಗವಾಗಿ ಸದ್ಗುರು ಅವರು ನಡೆಸಿದ ಕಾರ್ಯಕ್ರಮದಲ್ಲಿಯೂ ಸಹ ಹಾಡುವ ಮೂಲಕ ಜನರನ್ನು ಭಕ್ತಿಯಲ್ಲಿ ಮುಳುಗಿಸಿದ್ದಾರೆ. ಅವರ ಬಾಲ್ಯದ ಜೀವನ ಹೇಗಿತ್ತು ಹಾಗೂ ಸಿನಿ ಪಯಣ ಹೇಗಿತ್ತು ಎಂಬ ಮಾಹಿತಿಯನ್ನು ಈ ಲೇಖನದಲ್ಲಿ ನೋಡೋಣ.

ಇತ್ತೀಚಿನ ದಿನಗಳಲ್ಲಿ ಫೇಸ್ಬುಕ್, ಇನ್ಸ್ಟಾಗ್ರಾಂನಲ್ಲಿ ಮಂಗ್ಲಿ ಅವರ ಫೋಟೊ ವೈರಲ್ ಆಗುತ್ತಿದೆ. ದರ್ಶನ್ ಅವರ ಬಹುನಿರೀಕ್ಷಿತ ಚಿತ್ರ ರಾಬರ್ಟ್ ಸಿನಿಮಾ ಗೆಲುವಿನ ಅಲೆಯಲ್ಲಿ ಇದೆ. ಈ ಸಿನಿಮಾದ ಹಾಡುಗಳು ಹಿಟ್ ಆಗುತ್ತಿದೆ. ರಾಬರ್ಟ್ ಸಿನಿಮಾ ಕನ್ನಡ ಮತ್ತು ತೆಲುಗು ಎರಡೂ ಭಾಷೆಗಳಲ್ಲಿ ತೆರೆಕಂಡಿದೆ. ರಾಬರ್ಟ್ ಸಿನಿಮಾದ ಕಣ್ಣು ಹೊಡೆಯಾಕ ಹಾಡು ತೆಲುಗಿನಲ್ಲಿ ಕಣ್ಣೆ ಅಧಿರಿಟ್ಟೆ ಭಾರಿ ಸದ್ದು ಮಾಡಿದೆ. ಕನ್ನಡದಲ್ಲಿ ಶ್ರೇಯಾ ಘೋಷಾಲ್ ಅವರು ಹಾಡಿದರೆ, ತೆಲುಗಿನಲ್ಲಿ ತೆಲುಗು ಗಾಯಕಿ ಸತ್ಯವತಿ ಮಂಗ್ಲಿ ಅವರು ಹಾಡಿರುವ ಈ ಹಾಡಿಗೆ ಮನಸೋಲದವರೆ ಇಲ್ಲ. 2018ರಿಂದ ಟಾಲಿವುಡ್ ನಲ್ಲಿ ಮಂಗ್ಲಿ ಅವರು ಗಾಯಕಿಯಾಗಿ ಸಿನಿಮಾಗಳಲ್ಲಿ ಹಾಡುತ್ತಿದ್ದಾರೆ. ಇವರು ಮೂಲತಃ ರಾಜಸ್ಥಾನದ ಲಂಬಾಣಿ ಸಮುದಾಯಕ್ಕೆ ಸೇರಿದವರು, ದಕ್ಷಿಣದ ಕರ್ನಾಟಕ್ ಸಂಗೀತದಲ್ಲಿ ಡಿಪ್ಲೋಮಾ ಮುಗಿಸಿ ಆಂಧ್ರ, ತೆಲಂಗಾಣ, ಹೈದರಾಬಾದಿನ ಶೈಲಿಯ ತೆಲುಗು ಹಾಡುಗಳನ್ನು ಪಾಪ್ಯುಲರ್ ಗೊಳಿಸಿದ್ದಾರೆ. ಮಂಗ್ಲಿ ಅವರು ಆಂಧ್ರದ ಅನಂತಪುರ ಜಿಲ್ಲೆಯಲ್ಲಿ ಸಾಧಾರಣ ಕುಟುಂಬದಲ್ಲಿ ಜನಿಸಿದ್ದಾರೆ. ಇವರ ಮೊದಲ ಹೆಸರು ಸತ್ಯವತಿ ನಂತರ ಹೈದರಾಬಾದಿಗೆ ಬಂದ ನಂತರ ಮಂಗ್ಲಿ ಎಂಬ ಹೆಸರಿನಿಂದ ಖ್ಯಾತಿ ಪಡೆದರು. ಇವರ ಪ್ರಾರಂಭಿಕ ಜೀವನ ಕಡು ಕಷ್ಟದಲ್ಲಿ ಇತ್ತು, ಇವರಿಗೆ ಇಬ್ಬರು ತಂಗಿಯಂದಿರು ಮತ್ತು ಒಬ್ಬ ತಮ್ಮನಿದ್ದಾನೆ. ಚಿಕ್ಕವಯಸ್ಸಿನಲ್ಲೆ ತನ್ನ ಕುಟುಂಬದ ಜವಾಬ್ದಾರಿಯನ್ನು ಮಂಗ್ಲಿ ಅವರು ಹೊರಬೇಕಾಯಿತು. ಮಂಗ್ಲಿ ಅವರಿಗೆ ಚಿಕ್ಕಂದಿನಿಂದಲೆ ಹಾಡಿನ ಬಗ್ಗೆ ಆಸಕ್ತಿ ಇತ್ತು. ಲಂಬಾಣಿ ಸಮುದಾಯದವರು ತಮಗೆ ಸಮಯ ಸಿಕ್ಕಾಗಲೆಲ್ಲಾ ಹಾಡುತ್ತಾ ಮನರಂಜನೆ ಪಡೆಯುತ್ತಿದ್ದರು ಇಂತಹ ಸಮುದಾಯದಲ್ಲಿ ಬೆಳೆದ ಮಂಗ್ಲಿಯವರಿಗೆ ಹಾಡಿನ ಬಗ್ಗೆ ಸ್ಪೂರ್ತಿ ಸಿಕ್ಕಂತಾಯಿತು.

ನಂತರ ತಮ್ಮ ಸಮುದಾಯದಲ್ಲಿ ಮಂಗ್ಲಿ ಜನಪ್ರಿಯ ಗಾಯಕಿಯಾಗಿ ಹೊರಹೊಮ್ಮಿದರು. ಇವರ ಹಾಡನ್ನು ಕೇಳಿದ ಅಲ್ಲಿನ NGO ಇವರಿಗೆ ಶಾಸ್ತ್ರೀಯವಾಗಿ ಕಲಿಸಲು ಮುಂದಾಗುತ್ತದೆ. ಆ ಸಂಸ್ಥೆಯವರು ಸಣ್ಣಪುಟ್ಟ ಸ್ಪರ್ಧೆಗಳನ್ನು ಮಾಡಿ ಮಂಗ್ಲಿ ಅವರ ಹತ್ತಿರ ಹಾಡಿಸುತ್ತಿದ್ದರು ಆದರೆ ಅವರ ಸಮುದಾಯದಲ್ಲಿ ಹೆಣ್ಣು ಮಕ್ಕಳು ನೂರಾರು ಜನರ ಮುಂದೆ ಹಾಡುವಂತೆ ಇರಲಿಲ್ಲ. ಮಂಗ್ಲಿ ಅವರು ಸ್ಟೇಜ್ ಮೇಲೆ ಹಾಡಲು ಬಹಳ ಅವಹೇಳನ ಮಾತುಗಳನ್ನು ಕೇಳಬೇಕಾಯಿತು. ಪಂಜಾಬ್ ನಲ್ಲಿ ನಡೆದ ಸ್ಪರ್ಧೆಯಲ್ಲಿ ಹಾಡಿ ಪ್ರಥಮ ಬಹುಮಾನ ಪಡೆಯುತ್ತಾರೆ. ಮಂಗ್ಲಿ ಅವರ ಪೋಷಕರು ಮಂಗ್ಲಿ ಅವರ ಸಾಮರ್ಥ್ಯವನ್ನು ಗುರುತಿಸಿ, ತಮ್ಮ ಕೈಲಾದಷ್ಟು ಆರ್ಥಿಕ ಸಹಾಯ ಮಾಡಿ ಆಂಧ್ರದಲ್ಲಿ ಡಿಪ್ಲೋಮಾ ಮಾಡಿಸುತ್ತಾರೆ. ಆದರೆ ಮಂಗ್ಲಿ ಅವರ ತಂದೆ-ತಾಯಿ ಬಹಳ ಕಷ್ಟಪಡುತ್ತಿದ್ದರು ಇದನ್ನು ನೋಡಿದ ಮಂಗ್ಲಿ ತಾನು ಕಲಿಯದಿದ್ದರೂ ಪರ್ವಾಗಿಲ್ಲ ತಂದೆ-ತಾಯಿಗೆ ಭಾರ ಆಗಬಾರದು ಎಂದು ಕೋರ್ಸನ್ನು ತೊರೆದು ತಮ್ಮ ಊರಿಗೆ ಬರುತ್ತಾರೆ. ಖಾಸಗಿ ಶಾಲೆಯೊಂದರಲ್ಲಿ ಸಂಗೀತ ಟೀಚರ್ ಆಗಿ ಕೆಲಸ ಮಾಡುತ್ತಾರೆ, ನಂತರ ಹಲವಾರು ಈವೆಂಟ್ ಗಳಲ್ಲಿ ಹಾಡುತ್ತಾರೆ, ನಿರೂಪಕಿಯಾಗಿಯೂ ಕೆಲಸ ಮಾಡುತ್ತಾರೆ. ನಂತರ ಸಿನಿಮಾಗಳಲ್ಲಿ ಹಾಡಲು ಅವಕಾಶ ಸಿಕ್ಕಿತು, ಹಲವು ಸಿನಿಮಾಗಳಲ್ಲಿ ಹಾಡಿದರು ಇದೀಗ ರಾಬರ್ಟ್ ಸಿನಿಮಾದಲ್ಲಿ ಹಾಡುವ ಮೂಲಕ ಅತಿ ಹೆಚ್ಚು ಜನಪ್ರಿಯ ಗಾಯಕಿಯಾದರು. ಮಂಗ್ಲಿ ಅವರು ದಕ್ಷಿಣದ ಬಹುಬೇಡಿಕೆಯ ಟ್ರೆಂಡಿ ಗಾಯಕಿಯಾಗಿ ಹೊರಹೊಮ್ಮಿದ್ದಾರೆ. ಇತ್ತೀಚೆಗೆ ನಡೆದ ಶಿವರಾತ್ರಿ ಸಮಯದಲ್ಲಿ ಸದ್ಗುರು ಅವರ ಶಿವರಾತ್ರಿ ಕಾರ್ಯಕ್ರಮದಲ್ಲಿ ಹಾಡುವ ಮೂಲಕ ಜನರನ್ನು ಮಂತ್ರಮುಗ್ಧರನ್ನಾಗಿ ಮಾಡಿದ್ದಾರೆ.

WhatsApp Group Join Now
Telegram Group Join Now

Leave a Reply

Your email address will not be published. Required fields are marked *

error: Content is protected !!