ಶವಯಾತ್ರೆ ಎಂದಮೇಲೆ ಬಹಳಷ್ಟು ಜನರು ಸೇರಿರುತ್ತಾರೆ ಆದರೆ ಮಂಗಳಮುಖಿಯರಲ್ಲಿ ಯಾರಾದರೂ ಸತ್ತರೆ ಅವರ ಶವಯಾತ್ರೆಯನ್ನು ರಾತ್ರಿಹೊತ್ತಿನಲ್ಲಿ ಯಾರೂ ನೋಡದಂತೆ ಮಾಡುತ್ತಾರೆ ಇದಕ್ಕೆ ಕಾರಣ ಹಾಗೂ ಮಂಗಳಮುಖಿಯರ ಸಮುದಾಯದಲ್ಲಿ ಹಲವು ಪದ್ದತಿಗಳಿವೆ ಅವುಗಳ ಬಗ್ಗೆ ಈ ಲೇಖನದಲ್ಲಿ ನೋಡೋಣ.

ಮಂಗಳಮುಖಿಯರು ಸತ್ತರೆ ಅವರ ಶವಯಾತ್ರೆಯನ್ನು ರಾತ್ರಿಹೊತ್ತಿನಲ್ಲಿ ಮಾಡುತ್ತಾರೆ. ಮತ್ತು ಮಂಗಳಮುಖಿ ಶವದ ಮುಖವನ್ನು ಯಾರಿಗೂ ತೋರಿಸುವುದಿಲ್ಲ. ಮಂಗಳಮುಖಿ ಸಮುದಾಯದಲ್ಲಿ ಯಾರಾದರೂ ಸತ್ತರೆ ಶವವನ್ನು ಮುಚ್ಚಿಡುತ್ತಾರೆ ಯಾರಿಗೂ ಹೇಳುವುದಿಲ್ಲ. ಮಂಗಳಮುಖಿಯರಲ್ಲಿ ಬೇರೆ ಬೇರೆ ಸಮುದಾಯಗಳಿವೆ. ಮಂಗಳಮುಖಿಯರಲ್ಲಿ ಯಾರಾದರೂ ಸತ್ತರೆ ಅವರ ಸಮುದಾಯದವರು ಮಾತ್ರ ಭಾಗವಹಿಸುತ್ತಾರೆ. ಬೇರೆ ಸಮುದಾಯದ ಮಂಗಳಮುಖಿಯರು ಈ ಸಮುದಾಯದವರನ್ನು ನೋಡಬಾರದು ಇದು ಅವರ ಒಂದು ಪ್ರಮುಖ ಪದ್ಧತಿಯಾಗಿದೆ.

ಸತ್ತ ಮಂಗಳಮುಖಿಯ ಮುಖವನ್ನು ಬೇರೆ ಮಂಗಳಮುಖಿ ಸಮುದಾಯದವರು ಹಾಗೂ ಇತರೆ ಗಂಡಸರು, ಹೆಂಗಸರು ನೋಡಬಾರದು ಎಂಬ ಉದ್ದೇಶಕ್ಕಾಗಿ ಅವರ ಶವಯಾತ್ರೆಯನ್ನು ರಾತ್ರಿ ಹೊತ್ತಿನಲ್ಲಿ ಮಾಡುತ್ತಾರೆ. ಒಂದು ವೇಳೆ ಶವದ ಮುಖವನ್ನು ಗಂಡಸರು ಅಥವಾ ಹೆಂಗಸರು ನೋಡಿದರೆ ಶವವಾದವರು ಮತ್ತೆ ಮುಂದಿನ ಜನ್ಮದಲ್ಲೂ ಮಂಗಳಮುಖಿಯಾಗಿ ಹುಟ್ಟುತ್ತಾರೆ ಎಂಬ ನಂಬಿಕೆಯಿದೆ ಹಾಗಾಗಬಾರದು ಎಂಬ ಉದ್ದೇಶದಿಂದ ಅವರು ರಾತ್ರಿ ಹೊತ್ತಿನಲ್ಲಿ ಶವಯಾತ್ರೆ ಮಾಡುತ್ತಾರೆ ಅಲ್ಲದೆ ಮಂಗಳಮುಖಿಯರ ಸಮುದಾಯದಲ್ಲಿ ಯಾರಾದರೂ ಸತ್ತರೆ ಅವರು ಕಣ್ಣೀರು ಹಾಕುವುದಿಲ್ಲ, ಎಷ್ಟೇ ದುಃಖವಾದರೂ ತೋರಿಸುವುದಿಲ್ಲ, ಕೆಲವರು ಹಣ ಕೂಡ ಹಂಚುತ್ತಾರೆ ಏಕೆಂದರೆ ಈ ಕೆಟ್ಟ ಪ್ರಪಂಚದಿಂದ ಅವರಿಗೆ ಮುಕ್ತಿ ಸಿಗುವುದೇ ದೊಡ್ಡ ಸಂತೋಷ, ಅವರು ಬದುಕಿದ್ದಾಗ ಈ ಸಮಾಜದಲ್ಲಿ ಬಹಳಷ್ಟು ನೋವು, ಅವಮಾನಗಳನ್ನು ಎದುರಿಸಿರುತ್ತಾರೆ ಆದ್ದರಿಂದ ಮಂಗಳಮುಖಿಯರು ಶವಯಾತ್ರೆಯಲ್ಲಿ ಅಳುವುದಿಲ್ಲ. ಹಿಂದೂ ಧರ್ಮದ ಮಂಗಳಮುಖಿಯರು ಶವಯಾತ್ರೆಯಲ್ಲಿ ಮುಂದಿನ ಜನ್ಮದಲ್ಲಿ ಮಂಗಳಮುಖಿಯಾಗಿ ಹುಟ್ಟಬೇಡ ಎನ್ನುತ್ತಾ ಚಪ್ಪಲಿಯಿಂದ ಹೊಡೆಯುತ್ತಾರೆ ಈ ರೀತಿ ಮಾಡುವುದರಿಂದ ಈ ಜನ್ಮದಲ್ಲಿ ಅವರು ಮಾಡಿದ ಪಾಪಗಳು ಕಳೆಯುತ್ತವೆ ಎಂಬ ನಂಬಿಕೆ ಮಂಗಳಮುಖಿ ಸಮುದಾಯದಲ್ಲಿ ಇದೆ. ಮಂಗಳಮುಖಿಯರು ಸತ್ತಾಗ ಅವರನ್ನು ಯಾವುದೇ ಕಾರಣಕ್ಕೂ ಸುಡುವುದಿಲ್ಲ ಮಣ್ಣು ಮಾಡಿ ಸಮಾಧಿ ಮಾಡುತ್ತಾರೆ ಇದು ಅವರ ಪದ್ಧತಿಯಾಗಿದೆ.

WhatsApp Group Join Now
Telegram Group Join Now

Leave a Reply

Your email address will not be published. Required fields are marked *

error: Content is protected !!