ಚಿಕ್ಕಪ್ಪನ ಚಿತ್ರ ಪ್ರಮೋಷನ್ ಮಾಡಿದ ಚಿರು ಮಗು ವಿಡಿಯೋ ನೋಡಿ

0 1

ಚಿರಂಜೀವಿ ಸರ್ಜಾ ಅವರು ನಿಧನರಾಗಿರುವುದು ಎಲ್ಲರಿಗೂ ದುಃಖವನ್ನು ನೀಡಿದೆ. ಅವರ ಪ್ರತಿರೂಪವಾದ ಮೇಘನಾ ರಾಜ್ ಅವರ ಮಗನ ವಿಡಿಯೋವನ್ನು ಮೇಘನಾ ಅವರು ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡಿದ್ದಾರೆ ಅದರ ಬಗ್ಗೆ ಕೆಲವು ಮಾಹಿತಿಯನ್ನು ಈ ಲೇಖನದ ಮೂಲಕ ತಿಳಿಯೋಣ.

ಇದೇ ಫೆಬ್ರುವರಿ 14ರಂದು ನಟ ಚಿರಂಜೀವಿ ಸರ್ಜಾ ಹಾಗೂ ಮೇಘನಾ ರಾಜ್ ದಂಪತಿ ಪುತ್ರನ ಮೊದಲ ವಿಡಿಯೋವನ್ನು ಬಿಡುಗಡೆ ಮಾಡಲಾಯಿತು. ಮೇಘನಾ ರಾಜ್ ಅವರು ಮಗು ಹುಟ್ಟಿದ ದಿನ ಕೆಲವು ಫೋಟೋಗಳನ್ನು ಬಿಟ್ಟರೆ ಇದೇ ಮೊದಲ ಬಾರಿಗೆ ತಮ್ಮ ಮಗನ ವಿಡಿಯೋವನ್ನು ಸಾಮಾಜಿಕ ಜಾಲತಾಣದಲ್ಲಿ ಹಂಚಿ ಕೊಂಡಿದ್ದಾರೆ. ಚಿರಂಜೀವಿ ಸರ್ಜಾ ಅವರ ಪತ್ನಿ ಮೇಘನಾ ರಾಜ್ ಅವರು ತಮ್ಮ ಇನ್ಸ್ಟಾಗ್ರಾಂ ಖಾತೆಯಲ್ಲಿ ಜ್ಯೂನಿಯರ್ ಚಿರು ತನ್ನ ಚಿಕ್ಕಪ್ಪನಾದ ಧ್ರುವ ಸರ್ಜಾ ಅವರ ಪೊಗರು ಚಿತ್ರದ ಪ್ರಮೋಷನ್ ಮಾಡುತ್ತಿರುವ ಮುದ್ದಾದ ವಿಡಿಯೋವನ್ನು ಅಪ್ಲೋಡ್ ಮಾಡಿದ್ದಾರೆ. ಮೇಘನಾ ಅವರು ಮಗುವಿನ ಮುಖವು ಚಿರಂಜೀವಿ ಸರ್ಜಾ ಅವರ ನೆನಪು ತರುತ್ತದೆ, ಮಗುವಿನ ನಗು ಮುಖವನ್ನು ನೋಡಿದಾಗ ಚಿರು ಅವರ ಸಾವಿನ ನೋವನ್ನು ಮರೆಯುವುದು ಖಂಡಿತ ಎಂದು ಹೇಳಿಕೊಂಡಿದ್ದಾರೆ.

ಮೇಘನಾ ರಾಜ್ ಅವರು ತಮ್ಮ ಮಗುವಿಗೆ ನಾಮಕರಣ ಆಗದ ಕಾರಣ ಪ್ರೀತಿಯಿಂದ ಜ್ಯೂನಿಯರ್ ಚಿರು, ಜ್ಯೂನಿಯರ್ ಸಿಂಹ ಎಂದು ಕರೆಯುತ್ತಿದ್ದಾರೆ. ಬಹಳ ದಿನಗಳ ನಂತರ ಚಿರಂಜೀವಿ ಸರ್ಜಾ ಹಾಗೂ ಮೇಘನಾ ರಾಜ್ ಅವರ ಮಗನ ವಿಡಿಯೋವನ್ನು ನೋಡಿದ ಅಭಿಮಾನಿಗಳು ಸಾಮಾಜಿಕ ಜಾಲತಾಣದಲ್ಲಿ ಮೆಚ್ಚುಗೆಯನ್ನು ವ್ಯಕ್ತಪಡಿಸಿದ್ದಾರೆ. ಇದೀಗ ದಾವಣಗೆರೆಯಲ್ಲಿ ನಡೆದ ಪೊಗರು ಚಿತ್ರದ ಟೈಟಲ್ ಸಾಂಗ್ ರಿಲೀಸ್ ಕಾರ್ಯಕ್ರಮದಲ್ಲಿ ಧ್ರುವ ಸರ್ಜಾ ಅವರು ನಮ್ಮ ಮೇಲೆ ನೀವು ತೋರಿಸಿದ ಪ್ರೀತಿಯನ್ನು ನಮ್ಮ ಜ್ಯೂನಿಯರ್ ಚಿರು ಮೇಲೂ ತೋರಿಸಿ ಎಂದು ಮನವಿ ಮಾಡಿದ್ದಾರೆ.‌ ವಿಡಿಯೋದಲ್ಲಿ ಜ್ಯೂನಿಯರ್ ಚಿರು ತುಂಬಾ ಮುದ್ದಾಗಿ ಕಾಣಿಸುತ್ತಾನೆ. ಚಿರಂಜೀವಿ ಸರ್ಜಾ ಅವರು ಬದುಕಿದ್ದರೆ ಮಗನನ್ನ ನೋಡಿ ಬಹಳ ಸಂತೋಷ ಪಡುತ್ತಿದ್ದರು. ಜ್ಯೂನಿಯರ್ ಚಿರು ಮೇಘನಾ ರಾಜ್ ಹಾಗೂ ಚಿರಂಜೀವಿ ಸರ್ಜಾ ಅವರ ಕುಟುಂಬದವರಿಗೆ ಹೆಚ್ಚಿನ ಸಂತೋಷ ನೀಡಲಿ ಎಂದು ಆಶಿಸೋಣ.

Leave A Reply

Your email address will not be published.