ಸಾಮಾನ್ಯವಾಗಿ ಜ್ವರ ಎಲ್ಲರಿಗೂ ಬರುತ್ತದೆ ಈಗಿನ ದಿನಗಳಲ್ಲಿ ಸಾಮಾನ್ಯ ಜ್ವರ ಯಾವುದು ಕೊರೋನ ಜ್ವರ ಯಾವುದು ಎಂದು ತಿಳಿಯುವುದಿಲ್ಲ. ಯಾವುದೇ ಜ್ವರ ಬಂದರೂ ಮನೆಯಲ್ಲೇ ಸುಲಭವಾಗಿ ತಯಾರಿಸಬಹುದಾದ 3 ಪ್ರಮುಖ ಮನೆ ಮದ್ದಿನ ಬಗ್ಗೆ ಈ ಲೇಖನದಲ್ಲಿ ತಿಳಿದುಕೊಳ್ಳೋಣ.
ಜ್ವರ ಸಾಮಾನ್ಯವಾಗಿ ಎಲ್ಲರಿಗೂ ಬರುತ್ತದೆ. ಜ್ವರ ಬಂದ ತಕ್ಷಣ ವೈದ್ಯರ ಬಳಿ ಹೋಗುತ್ತೇವೆ ಸಣ್ಣ ಪ್ರಮಾಣದ ಜ್ವರಕ್ಕೆ ಮನೆಯಲ್ಲೇ ಸಿಗುವ ಸಾಮಗ್ರಿಗಳನ್ನು ಬಳಸಿ ಮನೆ ಮದ್ದನ್ನು ತಯಾರಿಸಿ ಸೇವಿಸಿದರೆ ಬೇಗ ಜ್ವರ ಉಪಶಮನವಾಗುತ್ತದೆ. ಮೊದಲನೇ ಮನೆ ಮದ್ದು ಅಮೃತಬಳ್ಳಿ ಕಷಾಯ 8-10 ಅಮೃತಬಳ್ಳಿ ಎಲೆ, ಬಳ್ಳಿ ಸಿಕ್ಕಿದರೆ ಒಂದು ಗೇಣು ಬಳ್ಳಿ ಇವೆರಡನ್ನು ಬಳಸಬಹುದು ಅಥವಾ ಇವೆರಡರಲ್ಲಿ ಒಂದನ್ನು ಬಳಸಬಹುದು. ಮೊದಲು 2 ಕಪ್ ನೀರನ್ನು ಕುದಿಸಿ 5 ಎಲೆ ಹಾಕಿ ಬಳ್ಳಿ ಇದ್ದರೆ ಅದನ್ನು ಜಜ್ಜಿ ಹಾಕಬೇಕು. ಬಳ್ಳಿ ಇಲ್ಲದೆ ಕೇವಲ ಎಲೆ ಹಾಕುವುದಾದರೆ 10 ಎಲೆಯನ್ನು ಹಾಕಬೇಕು. ಚೆನ್ನಾಗಿ ಕುದಿದ ನಂತರ ಒಂದು ಲೋಟಕ್ಕೆ ಸೋಸಿಕೊಳ್ಳಬೇಕು. ಒಂದು ಲೋಟ ಕಷಾಯವನ್ನು ಮೂರು ಭಾಗ ಮಾಡಿಕೊಂಡು ದಿನಕ್ಕೆ 3 ಬಾರಿ ಕುಡಿಯಬೇಕು. ಅಮೃತಬಳ್ಳಿ ಎಲೆಯನ್ನು ದಿನಕ್ಕೆ ಮೂರು ಬಾರಿ ತಿನ್ನುವುದು ಕೂಡ ಆರೋಗ್ಯಕ್ಕೂ ಒಳ್ಳೆಯದು ಜ್ವರ ಸಹ ಬರದಂತೆ ತಡೆಯುತ್ತದೆ. ಅಮೃತಬಳ್ಳಿ ಕಷಾಯ ಕುಡಿಯಲು ಆಗದೇ ಇದ್ದವರು ಬೆಲ್ಲವನ್ನು ಹಾಕಿಕೊಂಡು ಕುಡಿಯಬಹುದು.
ಹಿಪ್ಲಿಯನ್ನು ಕುಟ್ಟಿ ಪುಡಿ ಮಾಡಬೇಕು ಅರ್ಧ ಸ್ಪೂನ್ ಹಿಪ್ಲಿ ಪುಡಿಗೆ 1 ಸ್ಪೂನ್ ಬೆಲ್ಲ ಹಾಕಿ ಚೆನ್ನಾಗಿ ಮಿಕ್ಸ್ ಮಾಡಿ ದಿನಕ್ಕೆ 3 ಬಾರಿ, ಮೂರು ಭಾಗ ಮಾಡಿಕೊಂಡು ಸೇವಿಸಬೇಕು. ಇದು ಆರೋಗ್ಯಕ್ಕೂ ಒಳ್ಳೆಯದು ಹಾಗೂ ಜ್ವರ ಬರದಂತೆ ನಮ್ಮ ದೇಹವನ್ನು ರಕ್ಷಿಸುತ್ತದೆ. ಮೂರು ತುಳಸಿ ಕುಡಿ ಹಾಗೂ ಆರು ಕಾಳುಮೆಣಸನ್ನು ಬೆಳಗ್ಗೆ ಖಾಲಿ ಹೊಟ್ಟೆಯಲ್ಲಿ ಹಾಗೂ ರಾತ್ರಿ ಊಟದ 4-5 ಗಂಟೆ ನಂತರ ತಿನ್ನಬೇಕು. ಈ ಮೂರು ಮನೆಮದ್ದಿನಲ್ಲಿ ಯಾವುದಾದರೂ ಒಂದನ್ನು ಅನುಸರಿಸುವುದು ಒಳ್ಳೆಯದು. ಯಾವುದೇ ಮನೆಮದ್ದನ್ನು ಅನುಸರಿಸಿದರೂ ಯಾವುದೇ ಅಡ್ಡಪರಿಣಾಮ ಆಗುವುದಿಲ್ಲ. ಮನೆಯ ಸಾಮಗ್ರಿಗಳನ್ನು ಬಳಸಿ ತಯಾರಿಸಿದ ಮನೆಮದ್ದು ಆಗಿರುವುದರಿಂದ ಜ್ವರದಿಂದ ರಕ್ಷಿಸುವುದಲ್ಲದೆ ನಮ್ಮ ಆರೋಗ್ಯಕ್ಕೂ ಒಳ್ಳೆಯದು. ಈ ಮಾಹಿತಿಯನ್ನು ಎಲ್ಲರಿಗೂ ತಪ್ಪದೆ ತಿಳಿಸಿ.