ಹಿಂದಿನ ಕಾಲದ ಜನರು ಔಷಧಿಯ ಸಸ್ಯಗಳನ್ನು ತಮ್ಮ ಹಿತ್ತಲಿನಲ್ಲಿ ಔಷಧಿಯ ಗಿಡವನ್ನು ಹೂವಿನ ಗಿಡದ ಜೊತೆಗೆ ಬೆಳೆಸಿಕೊಳ್ಳುತ್ತಿದ್ದರು ಔಷಧಿಯ ಗುಣವನ್ನು ಹೊಂದಿದ್ದು ಅಲಂಕಾರ ಸಸ್ಯಗಳಾಗಿ ಮತ್ತು ಔಷಧಕ್ಕೆ ಬಳಕೆಯಾಗುತ್ತಿತ್ತು ಕಾಲಾನಂತರ ಔಷಧಿ ಯ ಸಸ್ಯಗಳ ಬಗ್ಗೆ ಜನರಿಗೆ ಅರಿವೇ ಇಲ್ಲದಂತೆ ಆಗಿದೆ ಮನೆಯಲ್ಲೇ ಔಷಧಿಯ ಸಸ್ಯವನ್ನು ಬೆಳೆದರು ಗುರುತಿಸಲಾಗದ ಪರಿಸ್ಥಿತಿ ಇಂದು ಎದುರಾಗಿದೆ ಹಿತ್ತಲಿನಲ್ಲಿದ್ದ ಗಿಡವನ್ನೇ ಜ್ವರ ಶೀತ ಸೇರಿದಂತೆ ಹಲವು ಕಾಯಿಲೆಗಳಿಗೆ ಮದ್ದಾಗಿ ಬಳಸಿಕೊಳ್ಳಬಹುದು ಇಂತಹ ಔಷಧೀಯ ಸಸ್ಯಗಳಲ್ಲಿ ದೊಡ್ಡಪತ್ರೆಗೆ ಮಹತ್ವದ ಸ್ಥಾನ ಪಡೆದಿದೆ
ದೊಡ್ಡಪತ್ರೆ ಎಂದು ಸಾಮಾನ್ಯವಾಗಿ ಕರೆಯಲ್ಪಡುವ ಈ ಸಸ್ಯಕ್ಕೆ ಪಾಷಾಣ ಭೇಧಿ ಕರ್ಪೂರವಳ್ಳಿ ಸಾಂಬಾರು ಬಳ್ಳಿ ಎಂದೂ ಹೆಸರಿದೆ ದೊಡ್ಡಪತ್ರೆಯು ಸುಮಾರು ಮೂವತ್ತರಿಂದ ತೊಂಬತ್ತು ಸೆ.ಮೀ ಎತ್ತರದವರೆಗೆ ಬೆಳೆಯಬಲ್ಲದು ಇದರ ಎಲೆಗಳು ದೊಡ್ಡ ಮತ್ತು ದಪ್ಪವಾಗಿದ್ದು ಕಡು ಸುವಾಸನೆ ಹೊಂದಿವೆ ದೊಡ್ಡಪತ್ರೆಯ ರಂಬೆಗಳು ಮತ್ತು ಹೂ ಗಳು ಚಿಕ್ಕದಾಗಿರುತ್ತದೆ ನಾವು ಈ ಲೇಖನದ ಮೂಲಕ ದೊಡ್ಡಪತ್ರೆ ಬಗ್ಗೆ ತಿಳಿದುಕೊಳ್ಳೋಣ.
ಒಂದು ವೇಳೆ ಜ್ವರ ಬಂದರೆ ನಾಲ್ಕೈದು ದೊಡ್ಡಪತ್ರೆಯನ್ನ ಕೆಂಡದ ಮೇಲೆ ಬಾಡಿಸಿ ರಸ ತೆಗೆದು ನಾಲ್ಕೈದು ಗಂಟೆಗೊಮ್ಮೆಕುಡಿದರೆ ಜ್ವರ ಕಡಿಮೆಯಾಗುತ್ತದೆ ಹಾಗೂ ಮಕ್ಕಳಿಗೆ ಜ್ವರ ಬಂದರೆ ದೊಡ್ಡಪತ್ರೆಯ ರಸದೊಂದಿಗೆ ಜೇನುತುಪ್ಪ ಸೇರಿಸಿ ಕುಡಿಸಬೇಕು ಹಾಗೂ ಪಿತ್ತ ಆದರೆ ದೊಡ್ಡಪತ್ರೆ ಅರೆದು ಸೇವಿಸಿದರೆ ಕಡಿಮೆಯಾಗುತ್ತದೆ ಹಾಗೂ ಅರಿಶಿನ ಕಾಮಾಲೆ ಇದ್ದವರು ಹತ್ತು ದಿನದವರೆಗೆ ದೊಡ್ಡಪತ್ರೆ ಯನ್ನ ಆಹಾರವಾಗಿ ಸೇವಿಸಿದರೆ ಅರಿಶಿನ ಕಾಮಾಲೆ ಕಡಿಮೆಯಾಗುತ್ತದೆ ಮತ್ತು ದೊಡ್ಡಪತ್ರೆ ಯನ್ನ ಹುಳುಕಡ್ಡಿ ಇರುವ ಜಾಗಕ್ಕೆ ಹಚ್ಚಿದರೆ ಕಡಿಮೆಯಾಗುತ್ತದೆ
ದೊಡ್ಡಪತ್ರೆಯನ್ನ ಉಪ್ಪಿನೊಂದಿಗೆ ತಿಂದರೆ ಜೀರ್ಣ ಕ್ರಿಯೆ ಸುಲಭವಾಗಿ ಆಗುತ್ತದೆ ತುರಿಕೆ ಕಜ್ಜಿ ಅಥವಾ ಬೆವರುಸಾಲೆ ಇದ್ದಾಗ ಆ ಜಾಗಕ್ಕೆ ಹಸಿಯಾಗಿ ಸಾಂಬ್ರಾಣಿ ಎಲೆಗಳನ್ನು ಹಚ್ಚುವುದರಿಂದ ತುರಿಕೆ ಕಡಿಮೆಯಾಗುತ್ತದೆ ಪತ್ರೆಯ ರಸವನ್ನು ಮೊಸರಿನಲ್ಲಿ ಬೆರೆಸಿ ಮುಖ ಕೈಕಾಲುಗಳಿಗೆ ಹಚ್ಚಿಕೊಳ್ಳವುದರಿಂದ ಕಾಂತಿಯುಕ್ತವಾಗುತ್ತದೆ ನಾರಿನಂಶ ಜೀವಸತ್ವ ಹಾಗೂ ಕಬ್ಬಿಣಾಂಶಗಳ ಆಗರವಾಗಿರುವ ಸಾಂಬ್ರಾಣಿ ಸೊಪ್ಪನ್ನು ಹಾಗೆಯೇ ಜಗಿದು ತಿನ್ನಬಹುದು
ಎಲೆಗಳಿಂದ ಕಷಾಯ ಮಾಡಿ ಕುಡಿದರೆ ಕೆಮ್ಮು, ಉಬ್ಬಸ ಕಡಿಮೆಯಾಗುತ್ತದೆ ಎಳ್ಳೆಣ್ಣೆಗೆ ದೊಡ್ಡಪತ್ರೆ ರಸವನ್ನು ಸೇರಿಸಿ ತಲೆಗೆ ಹಚ್ಚುವುದರಿಂದ ತಲೆ ತಂಪಾಗುತ್ತದೆ ಎಲೆಗಳನ್ನು ಚಟ್ನಿ, ತಂಬುಳಿ ಮೊದಲಾದವುಗಳನ್ನು ಸೇವಿಸಿದರೆ ಉತ್ತಮ ಆರೋಗ್ಯ ಪಡೆಯಲು ಸಾಧ್ಯವಾಗುತ್ತದೆ. ಒಟ್ಟಿನಲ್ಲಿ ಆರೋಗ್ಯದ ಗಣಿಯಾಗಿರುವ ದೊಡ್ಡಪತ್ರೆಯನ್ನು ಮನೆಯ ಹಿತ್ತಲಿನಲ್ಲಿ ಬೆಳೆಯುವುದರಿಂದ ಹಲವು ರೀತಿಯ ಉಪಯೋಗ ಪಡೆಯಬಹುದು .
ಸಾಮಾನ್ಯವಾಗಿ ಮಕ್ಕಳಲ್ಲಿ ಕಂಡು ಬರುವ ಕಫ ಉಬ್ಬಸ ನಿವಾರಣೆಗೆ ಬಳಸಬಹುದು ಗಿಡದಿಂದ ಎಲೆಗಳನ್ನು ತೆಗೆದು ಚೆನ್ನಾಗಿ ತೊಳೆದು ಬೆಂಕಿಯಲ್ಲಿ ಬಾಡಿಸಿಕೊಂಡು ಮಕ್ಕಳ ಎದೆಗೆ ಶಾಖ ಕೊಡಬೇಕು ಅಥವಾ ದೊಡ್ಡಪತ್ರೆ ಎಲೆಯೊಂದಿಗೆ ತುಳಸಿ ಎಲೆಯನ್ನು ಅರೆದು ಅದರ ರಸ ತೆಗೆದು ಜೇನುತುಪ್ಪದೊಂದಿಗೆ ಬೆರೆಸಿ ಕುಡಿದರೆ ನೆಗಡಿ ಕೆಮ್ಮು ದೂರವಾಗುತ್ತದೆ ದೊಡ್ಡಪತ್ರೆ ಎಲೆಯನ್ನು ಜಜ್ಜಿ ಆದರ ವಾಸನೆ ಸೇವಿಸಿದರೆ ಕಟ್ಟಿದ ಮೂಗಿನಿಂದ ನಿವಾರಣೆಯನ್ನು ಹೊಂದಬಹುದು ಗ್ಯಾಸ್ಟ್ರಿಕ್ ತಡೆಯುತ್ತದೆ ದೇಹದಿಂದ ವಿಷವನ್ನು ಹೊರ ಹಾಕುತ್ತದೆ ರಕ್ತವನ್ನು ಶುದ್ಧೀಕರಿಸುತ್ತದೆ
ಎಲೆಗಳ ಚಟ್ನಿ ತಂಬುಳಿ ಮೊದಲಾದವುಗಳು ಸೇವಿಸಿದರೆ ಉತ್ತಮ ಆರೋಗ್ಯ ಕಾಪಾಡಿಕೊಳ್ಳಲು ಸಾಧ್ಯವಾಗುತ್ತದೆ ಒಟ್ಟಿನಲ್ಲಿ ಆರೋಗ್ಯದ ಗಣಿಯಾಗಿರುವ ದೊಡ್ಡಪತ್ರೆಯನ್ನು ಮನೆಯ ಹಿತ್ತಲಿನಲ್ಲಿ ಹಲವು ರೀತಿಯ ಉಪಯೋಗ ಪಡೆಯಬಹುದು ಎಂಬುದರಲ್ಲಿ ಎರಡು ಮಾತಿಲ್ಲ ದೊಡ್ಡಪತ್ರೆ ಎಲೆಯನ್ನು ಕಿವುಚಿ ರಸ ತೆಗೆದು, ಚರ್ಮದ ಸೋಂಕು ಅಥವಾ ಕೀಟ ಕಡಿತದ ಜಾಗಕ್ಕೆ ಲೇಪಿಸಿ ಇದರಿಂದ ಉರಿ,ಬಾವು ಮತ್ತು ತುರಿಕೆ ಕೂಡಲೇ ಕಡಿಮೆಯಾಗುವುದು
ತೇವವಿರುವ ಮತ್ತು ಜವಳು ಮಣ್ಣಿನಲ್ಲಿ ಚೆನ್ನಾಗಿ ಬೆಳೆಯುತ್ತದೆ ಮನೆಗಳಲ್ಲಿ ಹೂವಿನ ಕುಂಡದಲ್ಲಿಯೂ ಇದನ್ನು ಬೆಳೆಸಬಹುದು ಮತ್ತು ಜಂತು ಇದ್ದವರಿಗೆ ಎಲೆಗಳು ಹಸಿರಾಗಿ ದಪ್ಪವಾಗಿರುತ್ತದೆ ಎಲೆಯಲ್ಲಿ ನೀರಿನ ಅಂಶ ಹೆಚ್ಚಿನ ಪ್ರಮಾಣದಲ್ಲಿರುವುದರಿಂದ ಔಷಧೀಯ ಗುಣವಿದೆ.
ದೊಡ್ಡಪತ್ರೆಯ ಎಲೆಯನ್ನು ನೀರಿಗೆ ಹಾಕಿ ಕುದಿಸಬೇಕು ನಂತರ ಅದಕ್ಕೆ ಸ್ವಲ್ಪ ಕೆಂಪು ಕಲ್ಲುಸಕ್ಕರೆ ಹಾಕಿ ಕಷಾಯ ತಯಾರಾದ ನಂತರ ಒಂದು ಚಿಟಿಕೆ ಏಲಕ್ಕಿ ಪುಡಿ ಹಾಕಿ ನಂತರ ಸೋಸಿಕೊಂಡು ಉಗುರು ಬೆಚ್ಚಗಿರುವಾಗ ಕುಡಿಯಬೇಕು ಆಹಾರದಿಂದ ಚರ್ಮದ ಮೇಲೆ ಉರಿ ಉಂಟಾಗುತ್ತಿದ್ದರೆ ಆ ಉರಿಯು ಕಡಿಮೆಯಾಗುತ್ತದೆ.