ನಮ್ಮ ದೇಹದ ಯಾವುದೆ ಅಂಗದಲ್ಲಿ ನೋವು ಕಾಣಿಸಿಕೊಂಡರೆ ನಮ್ಮ ಇಡಿ ದಿನದ ಮೂಡ್ ಹಾಳಾಗುತ್ತದೆ, ಯಾವುದೇ ಕೆಲಸ ಮಾಡಲು ಆಸಕ್ತಿ ಇರುವುದಿಲ್ಲ. ಮಂಡಿ ನೋವು ಸಾಮಾನ್ಯವಾಗಿ ವಯಸ್ಸಾದವರಿಗೆ ಕಾಣಿಸಿಕೊಳ್ಳುತ್ತದೆ. ಮನೆಯಲ್ಲಿರುವ ಸಾಮಗ್ರಿಗಳನ್ನು ಬಳಸಿ ತಯಾರಿಸಿದ ಆಯಿಂಟ್ಮೆಂಟ್ ಅನ್ನು ಮಂಡಿಗೆ ಮಸಾಜ್ ಮಾಡಿಕೊಳ್ಳುವುದರಿಂದ ಮಂಡಿ ನೋವು ನಿವಾರಣೆಯಾಗುತ್ತದೆ. ಹಾಗಾದರೆ ಮಂಡಿ ನೋವು ಬರಲು ಕಾರಣವೇನು, ಮಂಡಿನೋವನ್ನು ನಿವಾರಿಸುವ ಮನೆಮದ್ದು ಮಾಡುವ ವಿಧಾನವನ್ನು ಹಾಗೂ ಅದರ ಉಪಯೋಗವನ್ನು ಈ ಲೇಖನದಲ್ಲಿ ತಿಳಿದುಕೊಳ್ಳೋಣ.
ವಯಸ್ಸಾದವರಿಗೆ ಸಾಮಾನ್ಯವಾಗಿ ಮಂಡಿ ನೋವು ಬರುತ್ತದೆ, ಇತ್ತೀಚಿನ ದಿನಗಳಲ್ಲಿ ವಯಸ್ಸಾಗದೆ ಇದ್ದವರಿಗೂ ಮಂಡಿನೋವು ಕಾಣಿಸಿಕೊಳ್ಳುತ್ತದೆ. ದೇಹದಲ್ಲಿ ಕ್ಯಾಲ್ಷಿಯಂ ಪ್ರಮಾಣ ಕಡಿಮೆಯಾದಾಗ ಮಂಡಿ ನೋವು ಬರುತ್ತದೆ, ಮೂಳೆಗಳ ನಡುವೆ ಕಾರ್ಟಿಲೇಜ್ ಜಲ್ ಎಂಬ ಪ್ರಮಾಣ ಕಡಿಮೆಯಾದಾಗಲೂ ಮಂಡಿ ನೋವು ಕಾಣಿಸಿಕೊಳ್ಳುತ್ತದೆ. ಮೂಳೆಗಳ ಒತ್ತಡ ಅಥವಾ ಆ ಜಾಗದಲ್ಲಿ ಗಾಯವಾದರೆ ಮಂಡಿನೋವು ಬರುತ್ತದೆ. ಸಾಮಾನ್ಯವಾಗಿ ಮಂಡಿನೋವು ಕಾಣಿಸಿಕೊಂಡಾಗ ಪೇನ್ ಕ್ಯೂಲರ್ ತೆಗೆದುಕೊಳ್ಳುತ್ತಾರೆ ಇದರಿಂದ ಸೈಡ್ ಎಫೆಕ್ಟ್ಸ್ ಕಂಡುಬರುತ್ತದೆ. ಈ ಮಂಡಿನೋವಿಗೆ ಆಯಿಂಟ್ಮೆಂಟ್ ಮನೆಯಲ್ಲೆ ತಯಾರಿಸಿಕೊಳ್ಳಬಹುದು. ಮೊದಲು ಒಂದು ಬೌಲ್ ನಲ್ಲಿ 2 ರಿಂದ 3 ಸ್ಪೂನ್ ಸಾಸಿವೆ ಎಣ್ಣೆಯನ್ನು ಹಾಕಿಕೊಳ್ಳಬೇಕು ಅದಕ್ಕೆ 5-6 ಬೆಳ್ಳುಳ್ಳಿ, ಸ್ವಲ್ಪ ದಾಲ್ಚಿನ್ನಿ ಅಥವಾ ಚಕ್ಕೆ ಹಾಕಿ ಸ್ವಲ್ಪ ಬಿಸಿ ಮಾಡಬೇಕು ನಂತರ ಸ್ವಲ್ಪ ಬಿಸಿ ಇರುವಾಗಲೆ ನೋವಿರುವ ಮಂಡಿಗೆ ಈ ಎಣ್ಣೆಯನ್ನು ಮಸಾಜ್ ಮಾಡಬೇಕು.
ಇದು ಮೊದಲನೆ ಮನೆಮದ್ದು ಆದರೆ ಇನ್ನೊಂದು ಪ್ರಮುಖವಾದ ಮನೆಮದ್ದು ಇದೆ ಅದನ್ನು ಮಾಡುವುದು ಹೇಗೆಂದರೆ ಮೊದಲು ಒಂದು ಪ್ಯಾನ್ ನಲ್ಲಿ ಸ್ವಲ್ಪ ಚಕ್ಕೆ ಅಥವಾ ದಾಲ್ಚಿನ್ನಿಯನ್ನು ಪ್ರೈ ಮಾಡಬೇಕು ನಂತರ ಅದನ್ನು ಮಿಕ್ಸಿ ಜಾರ್ ನಲ್ಲಿ ಹಾಕಿ ಪೌಡರ್ ಮಾಡಿಕೊಳ್ಳಬೇಕು. ಪೌಡರ್ ಅನ್ನು ಒಂದು ಬೌಲ್ ನಲ್ಲಿ ಹಾಕಿ ಅದಕ್ಕೆ ಸ್ವಲ್ಪ ಅರಿಶಿಣ, ಸ್ವಲ್ಪ ಬಿಸಿ ನೀರನ್ನು ಹಾಕಿ ಚೆನ್ನಾಗಿ ಮಿಕ್ಸ್ ಮಾಡಬೇಕು. ನಂತರ ಈ ಪೇಸ್ಟ್ ಅನ್ನು ನೋವಿರುವ ಮಂಡಿಗೆ ಮಸಾಜ್ ಮಾಡಿಕೊಂಡು ಅರ್ಧ ಗಂಟೆ ಹಾಗೆಯೆ ಬಿಡಬೇಕು. ಈ ಎರಡು ಮನೆಮದ್ದಿನಲ್ಲಿ ಯಾವ ಮನೆಮದ್ದನ್ನು ಬೇಕಾದರೂ ಬಳಸಬಹುದು. ಪ್ರತಿದಿನ ಎರಡು ಸಲ ಈ ಮನೆಮದ್ದನ್ನು ಅಪ್ಲೈ ಮಾಡುತ್ತಾ ಬಂದರೆ ಮಂಡಿ ನೋವು ಕಡಿಮೆಯಾಗುತ್ತಾ ಬರುತ್ತದೆ. ಯಾವ ಟೈಮ್ ನಲ್ಲಿ ಸಹ ಮನೆಮದ್ದುಗಳನ್ನು ಬಳಸಬಹುದು. ಈ ಮನೆಮದ್ದಿಗೆ ಯಾವುದೇ ರೀತಿ ಕೆಮಿಕಲ್ಸ್ ಹಾಕದೆ ಇರುವುದರಿಂದ ಯಾವುದೇ ರೀತಿಯ ಸೈಡ್ ಎಫೆಕ್ಟ್ಸ್ ಆಗುವುದಿಲ್ಲ. ಮಂಡಿ ನೋವು ಇರುವವರು ಕ್ಯಾಲ್ಶಿಯಂ ಅಂಶ ಇರುವ ಆಹಾರವನ್ನು ಹೆಚ್ಚು ಸೇವಿಸಬೇಕು. ಈ ಮಾಹಿತಿಯನ್ನು ತಪ್ಪದೆ ಎಲ್ಲರಿಗೂ ತಿಳಿಸಿ.