ನಿಮಗೆ ಮಂಡಿ ನೋವು ಕಾಣಿಸಿಕೊಂಡರೆ ನಾವು ಇಂದು ನಿಮಗೆ ತಿಳಿಸುವ ಮನೆಮದ್ದನ್ನು ಬಳಸಿ ತಕ್ಷಣವೇ ಪರಿಹಾರ ಕಂಡುಕೊಳ್ಳಿ. ನಾವು ಹೇಳುವ ಮನೆಮದ್ದನ್ನು ನೀವು ಒಂದು ಸಲ ಮಾಡಿಕೊಂಡರೆ ಎರಡು ಮೂರು ದಿನದವರೆಗೆ ಬಳಸಬಹುದು. ಒಂದು ಸಾರಿ ಹಚ್ಚಿದಾಗಲೇ ನಿಮಗೆ ಮಂಡಿ ನೋವು ಸಂಪೂರ್ಣವಾಗಿ ಕಡಿಮೆ ಆಗುತ್ತದೆ. ಇದನ್ನು ಮಹಿಳೆಯರು ಪುರುಷರು ಮಕ್ಕಳು ವಯಸ್ಸಾದವರು ಎಲ್ಲರೂ ಬಳಸಬಹುದು. ಮಕ್ಕಳು ಆಟವಾಡಿಕೊಂಡು ಬಂದು ಮಂಡಿ ನೋವು ಎಂದರೆ ಈ ಮನೀಮದ್ದನ್ನು ಬಳಸಬಹುದು ಮಂಡಿ ನೋವು ಕಡಿಮೆಯಾಗುತ್ತದೆ.
ಮಂಡಿ ನೋವು ಬಂದರೆ ಕೆಲವರಿಗೆ ತಡೆದುಕೊಳ್ಳಲು ಆಗುವುದಿಲ್ಲ ಕುಳಿತುಕೊಳ್ಳಲು ಆಗುವುದಿಲ್ಲ ರಾತ್ರಿ ಸಹಿತ ಮಲಗಿದರೆ ನಿದ್ರೆ ಬರುವುದಿಲ್ಲ ಅಷ್ಟು ಮಂಡಿ ನೋವು ಬರುತ್ತಿರುತ್ತದೆ. ನೋವು ಅಂತ ಹೇಳಿ ನಾವು ಎಲ್ಲದಕ್ಕೂ ಮಾತ್ರೆಯನ್ನು ತೆಗೆದುಕೊಳ್ಳುತ್ತಿದ್ದರೆ ಅದರಿಂದ ಅಡ್ಡ ಪರಿಣಾಮ ಉಂಟಾಗುತ್ತದೆ.
ನಾವು ಮಾತ್ರೆ ತೆಗೆದುಕೊಂಡ ನಂತರ ಒಂದು ದಿನ ಎರಡು ದಿನ ನೋವು ಕಡಿಮೆ ಆಗುತ್ತದೆ ಯಾವಾಗ ಮಾತ್ರೆಯ ಶಕ್ತಿ ಮುಗಿಯುತ್ತದೆ ಆಗ ಮತ್ತೆ ನೋವು ಕಾಣಿಸಿಕೊಳ್ಳುತ್ತದೆ ಆದ್ದರಿಂದ ಇದು ತಾತ್ಕಾಲಿಕ ಪರಿಹಾರ. ಹಾಗಾಗಿ ನಾವು ಸಾಧ್ಯವಾದಷ್ಟು ನೈಸರ್ಗಿಕ ಪದಾರ್ಥಗಳನ್ನು ಬಳಸಿ ನಮ್ಮ ನೋವುಗಳನ್ನು ಕಡಿಮೆ ಮಾಡಿಕೊಲ್ಲುವಲ್ಲಿ ನಾವು ಯಶಸ್ಸನ್ನು ಕಾಣಬೇಕು. ಈಗ ನಾವು ಮಂಡಿ ನೋವಿಗೆ ಮನಿಮದ್ದನ್ನು ಯಾವ ರೀತಿ ಮಾಡುವುದು ಎಂಬುದನ್ನು ತಿಳಿದುಕೊಳ್ಳೋಣ.
ಒಂದು ಈರುಳ್ಳಿಯನ್ನು ತೆಗೆದುಕೊಳ್ಳಿ ಈ ಈರುಳ್ಳಿಯಲ್ಲಿರುವ ಸಲ್ಫರ್ ಅಂಶ ನೋವನ್ನು ಕಡಿಮೆ ಮಾಡುವ ಗುಣವನ್ನು ಹೊಂದಿದೆ ಈರುಳ್ಳಿಯ ರಸವನ್ನು ಬಿಸಿ ಮಾಡಿ ಮಂಡಿ ನೋವಿಗೆ ಹಚ್ಚುವುದರಿಂದ ಎಷ್ಟೆ ಹಳೆಯಕಾಲದ ಆರ್ತೆಡಿಕ್ಸ್ ಇದ್ದರೂ ಕಡಿಮೆಯಾಗುತ್ತದೆ. ಒಂದು ಈರುಳ್ಳಿಯನ್ನು ಸಿಪ್ಪೇತೆಗೆದು ಅದನ್ನು ಸಣ್ಣದಾಗಿ ತುರಿದುಕೊಳ್ಳ ಬೇಕು ಅಥವಾ ಮಿಕ್ಸಿಗೆ ಹಾಕಿ ನುಣ್ಣಗೆ ರುಬ್ಬಿಕೊಳ್ಳಿ ಅದನ್ನು ಒಂದು ಚಿಕ್ಕ ಬಾಣಲೆಗೆ ಹಾಕಿ ನಂತರ ಅದಕ್ಕೆ ಒಂದು ಚಮಚ ಅರಿಶಿಣ ಪುಡಿ ಹಾಕಿ ಕೊಳ್ಳಬೇಕು
ಅರಿಶಿನವನ್ನು ನೋವು ನಿವಾರಕ ಎಂದು ಹೇಳಲಾಗುತ್ತದೆ ಇದರಲ್ಲಿ ಆಂಟಿ ಸೆಪ್ಟಿಕ್ ಗುಣ ಹೊಂದಿದೆ ಅದಲ್ಲದೆ ಕಾಲು ನೋವು ಮಂಡಿ ನೋವು ಜಾಸ್ತಿ ಆದಾಗ ಊತ ಕಾಣಿಸುತ್ತದೆ ಅದನ್ನು ಕಡಿಮೆ ಮಾಡುವ ಗುಣ ಅರಿಷಿನಕ್ಕಿದೆ. ನೀವು ಅರಿಶಿಣ ಮತ್ತು ರುಬ್ಬಿಕೊಂಡ ಈರುಳ್ಳಿಯನ್ನು ಚೆನ್ನಾಗಿ ಮಿಶ್ರಣ ಮಾಡಿ ಚೆನ್ನಾಗಿ ಮಿಶ್ರಣ ಆದ ನಂತರ ಅದನ್ನು ಸ್ವಲ್ಪ ಬಿಸಿ ಮಾಡಬೇಕು ಬಿಸಿ ಮಾಡುವುದರಿಂದ ಈರುಳ್ಳಿ ರಸದಲ್ಲಿ ನೋವನ್ನು ಹೊಡೆಯುವ ಗುಣ ಬರುತ್ತದೆ ಹಸಿ ಈರುಳ್ಳಿ ಬರುವುದಿಲ್ಲ. ಇದನ್ನು ಬಿಸಿ ಮಾಡಲು ಮಿಶ್ರಣಕ್ಕೆ ಎರಡ ರಿಂದ ಮೂರು ಚಮಚ ಸಾಸಿವೆ ಎಣ್ಣೆಯನ್ನು ಹಾಕಬೇಕು.
ನೀವು ಸಾಸಿವೆ ಎಣ್ಣೆಯನ್ನೇ ತೆಗೆದುಕೊಳ್ಳಬೇಕು ಏಕೆ ಎಂದರೆ ಕೆಲವೊಮ್ಮೆ ವಾತ ಕಸದಿಂದ ಮಂಡಿ ನೋವು ಬಂದಿದ್ದರೆ ಅದು ಕಡಿಮೆ ಆಗುತ್ತದೆ. ವಯಸ್ಸಾದ ಮೇಲೆ ಮೂಳೆಗಳ ಸವಕಳಿಯಿಂದ ನೋವು ಉಂಟಾಗಿದ್ದರೆ ಅದನ್ನು ಕಡಿಮೆ ಮಾಡುವ ಗುಣ ಸಾಸಿವೆ ಎಣ್ಣೆಗಿದೆ. ಕೆಲವೊಮ್ಮೆ ಮಹಿಳೆಯರು ತುಂಬಾ ಮನೆಕೆಲಸ ಮಾಡಿದಾಗ ಮಂಡಿನೋವು ಬರುತ್ತಿರುತ್ತದೆ ಅದರಲ್ಲೂ ಚಳಿಗಾಲ ಮತ್ತು ಮಳೆಗಾಲದಲ್ಲಿ ಮಂಡಿ ನೋವು ಬರುವುದು ಹೆಚ್ಚು ತಣ್ಣಗಿರುವ ನೆಲದ ಮೇಲೆ ಓಡಾಡುವುದರಿಂದ ಮಂಡಿ ನೋವು ಬರುತ್ತದೆ.
ಅಂತವರಿಗೆ ಈ ಮನೆಮದ್ದು ತುಂಬಾ ಉಪಯುಕ್ತವಾಗಿದೆ. ಈ ಮಿಶ್ರಣವನ್ನು ಅರ್ಧ ಅಥವಾ ಒಂದು ನಿಮಿಷ ಬಿಸಿಮಾಡಬೇಕು. ಮಕ್ಕಳಿಗೆ ಆಟವಾಡಿ ಕೊಂಡು ಬಂದು ಕೈಕಾಲೆಲ್ಲ ನೋಯೂತ್ತಿರುತ್ತದೆ ಆಗ ರಾತ್ರಿ ನೀವು ಇದು ಸ್ವಲ್ಪ ಬಿಸಿ ಬಿಸಿ ಇರುವಾಗಲೇ ಹಚ್ಚುವುದರಿಂದ ಬೇಗ ನೋವು ಕಡಿಮೆಯಾಗುತ್ತದೆ. ಈ ಔಷಧಿಯನ್ನು ಹಚ್ಚಿದ ನಂತರ ಔಷಧಿ ಬೇರೆಕಡೆ ಹರಡದಂತೆ ಬಟ್ಟೆಯನ್ನು ಕಟ್ಟಬೇಕು.
ಗಾಯ ಇರುವ ಜಾಗದಲ್ಲಿ ಇದನ್ನು ಹಚ್ಚಬೇಡಿ. ಗಾಯ ಒಣಗಿದ ಮೇಲೆ ಹಚ್ಚಬಹುದು. ಈ ಮದ್ದನ್ನು ನೀವು ಕೇವಲ ಮಂಡಿ ನೋವಿಗಷ್ಟೆ ಅಲ್ಲ ಸೊಂಟನೋವು ಬುಜನೋವು ಬೆನ್ನುನೋವಿದ್ದರೂ ಇದನ್ನು ಹಚ್ಚಬಹುದು. ತುಂಬಾ ಬೇಗನೆ ನೋವನ್ನು ನಿವಾರಿಸುವ ಗುಣ ಈ ಮನೆಮದ್ದಿಗಿದೆ. ಮಂಡಿನೋವಿಗೆ ಇನ್ನೊಂದು ಮನೆಮದ್ದನ್ನು ತೀಳಿಸುತ್ತೇವೆ ಇದನ್ನು ಮಾಡಿದರೆ ನಿಮಗೆ ಮಂಡಿ ನೋವು ಮತ್ತೆ ಕಾಣಿಸಿಕೊಳ್ಳುವುದಿಲ್ಲ ಜೊತೆಗೆ ಮೂಳೆಗಳು ಬಲವಾಗುತ್ತದೆ.
ಅರ್ಧ ಚಮಚ ತುಪ್ಪಕ್ಕೆ ಗಸಗಸೆಯನ್ನು ಹಾಕಿ ಚೆನ್ನಾಗಿ ಹುರಿದುಕೊಳ್ಳಬೇಕು ನಂತರ ಅದಕ್ಕೆ ಒಂದು ಲೋಟ ಹಾಲನ್ನು ಸೇರಿಸಿ ಈ ಗಸಗಸೆ ಯುಕ್ತ ಹಾಲನ್ನು ನೀವು ಪ್ರತಿದಿನ ಕುಡಿದು ಮಲಗಿದರೆ ಇದರಿಂದ ನಿಮ್ಮ ಮೂಳೆಗಳು ಬಲವಾಗುತ್ತದೆ ಮತ್ತು ಚೆನ್ನಾಗಿ ನಿದ್ದೆ ಬರುತ್ತದೆ ನಿಮ್ಮ ಸಂಪೂರ್ಣ ಆರೋಗ್ಯಕ್ಕೆ ಇದು ತುಂಬಾ ಒಳ್ಳೆಯದು ಗಸಗಸೆಯಲ್ಲಿ ಐರನ್ ಮತ್ತು ಕ್ಯಾಲ್ಸಿಯಂ ತುಂಬಾ ಇರುತ್ತದೆ ಹಾಲಿನಲ್ಲಿಯೂ ಕ್ಯಾಲ್ಸಿಯಂ ಹೆಚ್ಚಿರುತ್ತದೆ
ಪ್ರತಿದಿನ ರಾತ್ರಿ ಇದನ್ನು ಕುಡಿಯುವುದರಿಂದ ನಿಮ್ಮ ಆರೋಗ್ಯ ಉತ್ತಮವಾಗಿರುತ್ತದೆ.ಇದರಿಂದ ಮಂಡಿನೋವು ಸಂದು ನೋವು ಕೀಲುನೋವು ಎಲ್ಲ ಕಡಿಮೆ ಆಗುತ್ತದೆ. ನಿಮಗೆ ಮಂಡಿನೋವು ಕಾಣಿಸಿಕೊಂಡಲ್ಲಿ ಈ ಮದ್ದನ್ನು ಬಳಸಿ ನೋವಿನಿಂದ ಮುಕ್ತಿ ಪಡೆಯಿರಿ.