ಮಂಡಿ ನೋವು ಯಾರಿಗೆ ಯಾವಾಗ ಯಾವ ಸಮಯದಲ್ಲಿ ಬರುತ್ತದೆ ಎಂಬ ಅರಿವಿರುವುದಿಲ್ಲ ಚಿಕ್ಕಮಕ್ಕಳಿಂದ ಹಿಡಿದು ವಯಸ್ಸಾದ ಅಜ್ಜ ಅಜ್ಜಿಯರಿಗೂ ಇದು ಕಾಡದೆ ಬಿಡುವುದಿಲ್ಲ ಕೆಲವೊಮ್ಮೆ ಸಣ್ಣದಾಗಿ ನೋಯಲು ಶುರುವಾಗಿ ನಂತರ ದೀರ್ಘ ಕಾಲದ ನೋವಾಗಿ ಬದಲಾಗಿ ವರ್ಷಾನುಗಟ್ಟಲೇ ಕಾಟ ಕೊಡುತ್ತದೆ ಆದರೆ ಇದ್ದಕ್ಕಿದ್ದಂತೆ ಮಂಡಿ ನೋವು ಬರಲು ಕಾರಣ ಏನು ಎಂಬುದು ಮಾತ್ರ ಪತ್ತೆ ಹಚ್ಚುವುದು ಕಷ್ಟ ಮೂಳೆಗಳ ಸಾಂದ್ರತೆ ಕಡಿಮೆಯಾಗಿ ದೇಹದಲ್ಲಿ ಕ್ಯಾಲ್ಸಿಯಂ ಅಥವಾ ಕಬ್ಬಿಣದ ಅಂಶ ಕಡಿಮೆಯಾಗಿ ಮತ್ತು ವಯಸ್ಸಾದವರಲ್ಲಿ ಸಾಮಾನ್ಯವಾಗಿರುವ ಮಾಂಸದ ಹರಿತ ಮೂಳೆಗಳ ಸವೆತದಿಂದ ಮಂಡಿ ನೋವು ಬರುತ್ತದೆ

ಕೆಲವೊಮ್ಮೆ ಎಷ್ಟೋ ದಿನಗಳಿಂದ ಕಾಡುತ್ತಿದ್ದ ನೋವು ಇದ್ದಕ್ಕಿದ್ದಂತೆ ಕಡಿಮೆಯಾಗುತ್ತದೆ ಅತಿಯಾದ ಕೆಲಸದ ನಂತರ ಮೂಳೆಗಳಲ್ಲಿ ನೋವು ಕಾಣಿಸುವುದು ಸಾಮಾನ್ಯವಾಗಿದೆ ವಿಟಮಿನ್ – ಡಿ ಕ್ಯಾಲ್ಸಿಯಂ ಕಬ್ಬಿಣದ ಅಂಶ ಕಡಿಮೆಯಾಗುತ್ತಿದ್ದಂತೆ ದೇಹದಲ್ಲಿ ಮಂಡಿ ನೋವು ಆರಂಭವಾಗುತ್ತದೆ ಇದಕ್ಕೆ ವಯಸ್ಸಿನ ಬೇಧವಿಲ್ಲ ಸಾಮಾನ್ಯವಾಗಿ ವಿಟಮಿನ್-ಡಿ ಅಂಶ ದೇಹದಲ್ಲಿ ಮೂಳೆಗಳ ರಕ್ಷಣೆ ಮಾಡುತ್ತದೆ ಮಂಡಿನೋವಿಗೆ ಗುರಿಯಾದ ವಿಟಮಿನ್ ಡಿ ಕೊರತೆಯುಳ್ಳ ಅನೇಕ ರೋಗಿಗಳು ತಮ್ಮ ದೇಹದ ಇತರ ಭಾಗಗಳಲ್ಲೂ ನೋವು ಕಂಡು ಬರುತ್ತದೆ ನಾವು ಈ ಲೇಖನದ ಮೂಲಕ ಮಂಡಿ ನೋವಿನ ನಿವಾರಣೆಯ ಬಗ್ಗೆ ತಿಳಿದುಕೊಳ್ಳೋಣ.

ಈಗಿನ ದಿನಮಾನಗಳಲ್ಲಿ ಮಂಡಿನೋವು ಸಾಮಾನ್ಯವಾಗಿ ಎಲ್ಲರಲ್ಲೂ ಕಂಡುಬರುತ್ತದೆ ಈ ಖಾಯಿಲೆಗೆ ಮುಖ್ಯ ಕಾರಣ ವಾತ ಮತ್ತು ಪಿತ್ತ ಹಾಗೂ ಮಂಡಿನೋವು ನಿವಾರಣೆಗೆ ಹಸಿಮೆಣಸಿನ ಕಾಯಿಯನ್ನು ತಿನ್ನುವುದು ಬಿಡಬೇಕು ಮತ್ತು ಆಲೂಗಡ್ಡೆ ಬದನೆಕಾಯಿ ಮತ್ತು ಬೇಕರಿ ಪದಾರ್ಥಗಳನ್ನು ತಿನ್ನಿದನ್ನು ಬಿಡಬೇಕು ಮತ್ತು ಪ್ರಿಜ್ ನಲ್ಲಿ ಇಟ್ಟ ಪದಾರ್ಥಗಳು ನಮ್ಮ ದೇಹಕ್ಕೆ ಅಡ್ಡ ಪರಿಣಾಮ ಬೀರುತ್ತದೆ ಅಷ್ಟೇ ಅಲ್ಲದೆ ಹಳಸಿದ ತಿಂಡಿಗಳು ಸಹ ಆರೋಗ್ಯದ ಮೇಲೆ ಪರಿಣಾಮ ಬೀರುತ್ತದೆ ಹಾಗೂ ಅಡುಗೆ ಮಾಡಿ ಐದು ಗಂಟೆಯ ಒಳಗೆ ಆಹಾರ ಸೇವನೆ ಮಾಡಿದರೆ ತುಂಬಾ ಪ್ರಯೋಜನಕಾರಿ ಐದು ಗಂಟೆಯ ನಂತರ ಆಹಾರ ಸೇವಿಸಿದರೆ ಅದು ನಮ್ಮ ದೇಹಕ್ಕೆ ಹಳಸಿದ ಆಹಾರ ವಾಗಿ ಮಾರ್ಪಡಿಸುತ್ತದೆ ಇವೆಲ್ಲ ಕಾರಣದಿಂದಾಗಿ ಮಂಡಿ ನೋವು ಕಂಡಬರುತ್ತದೆ

ನುಗ್ಗೆಸೊಪ್ಪು ಹರಳೇಲೆ ಯಕ್ಕೆ ಎಲೆ ಇವು ಮೂರು ಎಲೆಯನ್ನು ಹರಳೆಣ್ಣೆಯನ್ನು ಬೇಯಿಸಬೇಕು ಹಾಗೆ ಮಂಡಿ ನೋವು ಇದ್ದ ಜಾಗದಲ್ಲಿ ಬೇಯಿಸಿರುವ ಸೊಪ್ಪನ್ನು ಚೆನ್ನಾಗಿ ಉಜ್ಜಬೇಕು ಮೊಣಕಾಲು ಬಿಸಿ ಬರುವವರೆಗೆ ಉಜ್ಜಬೇಕುಹೀಗೆ ಮಾಡುವುದರಿಂದ ರಕ್ತ ಸಂಚಾರ ಸರಿಯಾಗಿ ಆಗುತ್ತದೆ ಹಾಗೆ ಹತ್ತು ಗ್ರಾಂ ಮಗಜ್ ಎಂಬ ಬೀಜ ಹಾಗೂ ಹತ್ತು ಗ್ರಾಂ ಎಳ್ಳು ಮತ್ತು ತುಳಸಿ ಎಲೆಗಳನ್ನು ಚೆನ್ನಾಗಿ ಜಜ್ಜಬೇಕು ಇದನ್ನು ಮೂರು ಭಾಗವಾಗಿ ಮಾಡಬೇಕು ಅದನ್ನು ಊಟಕ್ಕಿಂತ ಮೊದಲು ಒಂದು ಭಾಗವನ್ನು ತಿನ್ನಬೇಕು ಹಾಗೂ ಊಟದ ಜೊತೆಗೆ ಒಂದು ಭಾಗ ತಿನ್ನಬೇಕು.

ಊಟ ಆಗಿ ಅರ್ಧ ಗಂಟೆ ನಂತರ ಒಂದು ಭಾಗ ತಿನ್ನಬೇಕು ಹೀಗೆ ಈ ಮೂರು ಭಾಗವನ್ನು ದಿನಕ್ಕೆ ಒಂದು ಬಾರಿ ಮಾತ್ರ ತಿನ್ನಬೇಕು ಹೀಗೆ ದಿನಾಲೂ ತಿನ್ನುತ್ತಾ ಬಂದರೆ ಮಂಡಿ ನೋವು ಸಂಪೂರ್ಣವಾಗಿ ಕಡಿಮೆಯಾಗುತ್ತದೆ ಯಾರಿಗೆ ಪಿತ್ತ ಜಾಸ್ತಿ ಇದ್ದರೆ ತುಳಸಿ ಐದು ಗ್ರಾಂ ಹಾಕಬೇಕು ಕ್ಯಾಶಿಯಂ ಕೊರತೆಯ ನಿವಾರಣೆಗೆ ಪ್ರತಿದಿನ ನುಗ್ಗೆಸೊಪ್ಪುನ್ನು ತಿನ್ನಬೇಕು ಹಾಗೂ ರಾತ್ರಿ ಮಲಗುವ ಮುನ್ನ ಒಂದು ಗ್ಲಾಸ್ ಹಾಲಿಗೆ ಒಂದು ಚಮಚ ತುಪ್ಪವನ್ನು ಹಾಕಿ ಕುಡಿಯಬೇಕು ಇವೆಲ್ಲ ಮಾಡಿದರೆ ಮಂಡಿ ನೋವು ಎರಡು ತಿಂಗಳಲ್ಲಿ ವಾಸಿಯಾಗುತ್ತದೆ

ಪುರುಷರಿಗೆ ಹೋಲಿಸಿದರೆ ವಿಟಮಿನ್ ಡಿ ಕೊರತೆ ಮಹಿಳೆಯರಲ್ಲಿ ಹೆಚ್ಚಾಗಿ ಕಂಡು ಬರುತ್ತದೆ ವಿಟಮಿನ್ ಡಿ ನೈಸರ್ಗಿಕವಾಗಿ ಸೂರ್ಯನಿಂದ ದೊರೆಯುವುದರಿಂದ ಪ್ರತಿದಿನ 10 ನಿಮಿಷ ಬಿಸಿಲಿನಲ್ಲಿ ನಿಲ್ಲುವ ಮೂಲಕ ಈ ಕೊರತೆ ಬರದಂತೆ ನೋಡಿಕೊಳ್ಳಬಹುದು ಇನ್ನು ಅಣಬೆಯಲ್ಲಿ ವಿಟಮಿನ್ ಡಿ ಇರುತ್ತದೆ ಅಡುಗೆಗೆ ಬಳಸುವ ಅರಿಶಿನ ಕೂಡ ನೋವನ್ನು ಶಮನ ಮಾಡುವ ಗುಣ ಲಕ್ಷಣಗಳನ್ನು ಹೊಂದಿದೆ ಅರಿಶಿನವನ್ನು ಬಿಸಿಯಾದ ಹಾಲಿನೊಂದಿಗೆ ಸೇವಿಸಿದರೆ ಕೀಳು ನೋವು ಸಂಧಿವಾತದಂತಹ ಸಮಸ್ಯೆಗಳು ದೂರಾಗುತ್ತವೆ

ಇನ್ನೊಂದು ವಿಧಾನಗಳೆಂದರೆ ಪ್ರತಿನಿತ್ಯ ಅಡುಗೆಗೆ ಬಳಸುವ ಒಂದೆರಡು ಚಮಚ ಅರಿಶಿನವನ್ನು ನೀರಿನೊಂದಿಗೆ ಬೆರೆಸಿ ಪೇಸ್ಟ್‌ನಂತೆ ತಯಾರಿಸಿಕೊಂಡು ನೋವಿದ್ದ ಕಡೆ ದಿನಕ್ಕೆರಡು ಬಾರಿ ಹಚ್ಚಿ ಹಾಗೂ ಮೆಲ್ಲನೇ ಮಸಾಜ್ ಮಾಡಿಕೊಂಡು ಹಾಗೆಯೇ ಸ್ವಲ್ಪ ಹೊತ್ತು ಒಣಗಲು ಬಿಡಬೇಕು ನಂತರ ಅರ್ಧ ಗಂಟೆ ಬಿಟ್ಟು ಉಗುರುಬೆಚ್ಚನೆಯ ನೀರಿನಿಂದ ತೊಳೆದುಕೊಂಡರೆ ನೋವು ಕಡಿಮೆಯಾಗುತ್ತದೆ.

ಸ್ವಲ್ಪ ಮೆಂತೆ ಬೀಜವನ್ನು ನೀರಿನಲ್ಲಿ ರಾತ್ರಿ ನೆನೆ ಹಾಕಿ ಬೆಳಗ್ಗೆ ಅದರ ನೀರು ಬಸಿದು ಆ ಬೀಜವನ್ನು ಅಗೆದು ತಿನ್ನಬೇಕು ಹೀಗೆ ಮಾಡುತ್ತಾ ಬಂದರೆ ಮಂಡಿ ನೋವು ಕಡಿಮೆಯಾಗುವುದು ತುಂಬಾ ನೋವಿದ್ದರೆ ಅದೇ ಬೀಜದಲ್ಲಿ ಸ್ವಲ್ಪ ಬೀಜವನ್ನು ತೆಗೆದು ರುಬ್ಬಿ ಪೇಸ್ಟ್‌ನಂತೆ ಮಾಡಿಕೊಂಡು ಮಂಡಿಗೆ ಹಚ್ಚುವುದರಿಂದ ಮಂಡಿ ನೋವು ಕಡಿಮೆಯಾಗುತ್ತದೆ ಪುದೀನ ಎಣ್ಣೆಯನ್ನು ನೋವಿರುವ ಜಾಗಕ್ಕೆ ಹಚ್ಚಿ ಚೆನ್ನಾಗಿ ಮಸಾಜ್ ಮಾಡಿ ಸ್ವಲ್ಪ ಹೊತ್ತು ಬಿಟ್ಟು ಬಿಸಿ ನೀರಿನ ಶಾಖ ಕೊಟ್ಟು ನಂತರ ಬಿಸಿ ನೀರಿನಲ್ಲಿ ತೊಳೆಯಬೇಕು ಇದರಿಂದ ನೋವು ಕಡಿಮೆಯಾಗುತ್ತದೆ

ಮಂಡಿ ನೋವು ಕಡಿಮೆ ಮಾಡುವಲ್ಲಿ ಕರ್ಪೂರದ ಎಣ್ಣೆಯ ಮಸಾಜ್ ಕೂಡ ಪರಿಣಾಮಕಾರಿಯಾಗಿದೆ ಈ ಮಸಾಜ್‌ನಿಂದ ರಕ್ತಸಂಚಾರ ಸರಾಗವಾಗಿ ನಡೆಯುವುದು ಹಾಗೂ ಇದರಿಂದಾಗಿ ಸ್ನಾಯು ಸೆಳೆತ ಹಾಗೂ ನೋವು ಕಡಿಮೆಯಾಗುವುದು ಸ್ವಲ್ಪ ಓಮದ ಕಾಳುಗಳನ್ನು ನೀರಿನೊಂದಿಗೆ ಬೆರೆಸಿ ಕಲ್ಲಿನಲ್ಲಿ ಚೆನ್ನಾಗಿ ಅರೆದು ಪೇಸ್ಟ್‌ನಂತೆ ಮಾಡಿ ಈ ಮಿಶ್ರಣವನ್ನು ನೋವಿದ್ದ ಮಂಡಿಗಳ ಮೇಲೆ ಹಚ್ಚಿದರೆ ಶೀಘ್ರವಾಗಿ ಗುಣವಾಗುತ್ತದೆ ಅಷ್ಟೇ ಅಲ್ಲದೇ ಒಂದರಿಂದ ಎರಡು ಎಸಳು ಬೆಳ್ಳುಳ್ಳಿಯನ್ನು ಜಜ್ಜಿ ಜೇನುತುಪ್ಪದ ಜತೆ ರಾತ್ರಿ ಸೇವಿಸಿದರೆ ಮಂಡಿ ಊತ ನೋವು ಕಡಿಮೆಯಾಗುತ್ತದೆ.

WhatsApp Group Join Now
Telegram Group Join Now

Leave a Reply

Your email address will not be published. Required fields are marked *

error: Content is protected !!