ಪ್ರತಿ ದೇವಾಲಯಗಳು ತನ್ನದೆಯಾದ ವಿಶೇಷತೆ ಹಾಗೂ ಮಹತ್ವ ಹಿನ್ನಲೆಯನ್ನು ಹೊಂದಿರುತ್ತವೆ ಅದೇ ನಿಟ್ಟಿನಲ್ಲಿ ಈ ಹಿಂದೂ ದೇವಾಲಯ ಕೂಡ ತನ್ನದೆಯಾದ ವಿಶೇಷತೆಯನ್ನು ಹೊಂದಿದ್ದು, ಇಲ್ಲಿರುವಂತ ಸುಬ್ರಮಣ್ಯ ಮೂರ್ತಿ ಜಗತ್ತಿನಲ್ಲೇ ಅತಿ ಎತ್ತರದ ಮೂರ್ತಿ ಎನಿಸಿಕೊಂಡಿದ್ದೆ ಅಷ್ಟಕ್ಕೂ ಇದು ಇರೋದಾದ್ರೂ ಎಲ್ಲಿ ಅನ್ನೋದನ್ನ ತಿಳಿಯುವುದಾದರೆ ಈ ದೇವಾಲಯ ಇರೋದು ಮಲೇಷಿಯಾದಲ್ಲಿ. ಹೌದು ಮಲೇಷ್ಯಾದಲ್ಲಿ ಇರುವಂತ ಈ ಹಿಂದೂ ದೇವಾಲಯ ಹಲವು ಭಕ್ತರನ್ನು ಹೊಂದಿದೆ. ಸುಮಾರು 141 ಅಡಿ ಎತ್ತದ ಪ್ರತಿಮೆ ಮೂರ್ತಿಯನ್ನು ಹೊಂದಿದೆ.

ಈ 141 ಅಡಿಯ ಸುಬ್ರಹ್ಮಣ್ಯ ಮೂರ್ತಿ ಇರೋದು ಮಲೆಷ್ಯಾದಲ್ಲಿರುವ ಬಟು ಗುಹೆಯ ಸುಬ್ರಹ್ಮಣ್ಯ ದೇವಾಲಯದಲ್ಲಿ, ಇಲ್ಲಿ ಕಾರ್ತಿಕೇಯ ದೇವರು ಎಂಬುದಾಗಿ ಕರೆಯಲಾಗುತ್ತದೆ. ಅಷ್ಟಕ್ಕೂ ಈ ಕಾರ್ತಿಕೇಯಯಾರು ಗೊತ್ತಾ, ಈತನನ್ನು ಹಲವು ಹೆಸರುಗಳಿಂದ ಕರೆಯಲಾಗುತ್ತದೆ. ಕಾರ್ತಿಕೇಯ ಶಿವ ಮತ್ತು ಪಾರ್ವತಿ ಪುತ್ರ ಗಣೇಶನ ಅಣ್ಣ ಎಂಬುದಾಗಿ ಹೇಳಲಾಗುತ್ತದೆ. ಈತನನ್ನು ದಕ್ಷಿಣ ಭಾರತದಲ್ಲಿ ಷಣ್ಮುಖ, ಮುರುಗ, ಸುಬ್ರಹ್ಮಣ್ಯ ಎಂಬುದಾಗಿ ಹೇಳುತ್ತಾರೆ, ನಮ್ಮ ದೇಹದಲ್ಲಿ ಅಷ್ಟೇ ಅಲಲ್ದೆ ವಿದೇಶದಲ್ಲೂ ಕೂಡ ಈತನನ್ನು ಆರಾಧಿಸುವ ದೇವಾಲಯವಿದೆ.

ಈ ದೇವಾಲಯದ ವಿಶೇಷತೆ ಏನು ಅನ್ನೋದನ್ನ ಹೇಳುವುದಾದರೆ ಸುಮಾರು 400 ವರ್ಷಗಳ ಇತಿಹಾಸವನ್ನು ಹೊಂದಿದ್ದು,ಸುಬ್ರಹ್ಮಣ್ಯನ ಜನ್ಮ ದಿವಸದ ರೂಪದಲ್ಲಿ ಇಲ್ಲಿ ಥೈಪೂಸಮ್ ಹೆಸರಿನ ಉತ್ಸವ ನಡೆಯುತ್ತದೆ. ಹತ್ತು ತಿಂಗಳಿಗೆ ಒಂದು ಬಾರಿ ಈ ಹಬ್ಬ ನಡೆಯುತ್ತದೆ. ಇನ್ನು ಇಲ್ಲಿನ ದೇವಾಲಯ ಹಾಗೂ ಗುಹೆಗಳ ಸೌಂದರ್ಯ ಭಕ್ತ ಸಮೂಹವನ್ನು ಆಕರ್ಷಿಸುತ್ತದೆ. ಹಾಗೂ ಈ ದೇವಾಲಯದ 272 ಮೆಟ್ಟಿಲುಗಳನ್ನು ಹತ್ತಿ ಹೋದರೆ ಸುಂದರವಾದ ರಮಣೀಯ ಗುಹೆಗಳು ಕಾಣುತ್ತವೆ. ಅಂದಿನ ಬ್ರಿಟಿಷರ ಅಧಿಕಾರಾವಧಿಯಲ್ಲಿ ಈ ಗುಹೆ ತುಂಬಾನೇ ಪ್ರಾಮುಖ್ಯತೆಹೊಂದಿದ್ದು ಒಟ್ಟಿನಲ್ಲಿ ಹೇಳುವುದಾದರೆ ದೈವೀಕರ ಪರಿಸರವನ್ನು ಹೊಂದಿರುವಂತ ಸುಂದರವಾದ ತಾಣವಾಗಿದೆ.

Leave a Reply

Your email address will not be published. Required fields are marked *

error: Content is protected !!