ಪ್ರತಿಯೊಬ್ಬರಿಗೂ ಅವರು ಹುಟ್ಟಿದ ಗಳಿಗೆ ಸಮಯ ದಿನಾಂಕದ ಆಧಾರದ ಮೇಲೆ ಜಾತಕವನ್ನು ತಯಾರಿಸಲಾಗುತ್ತದೆ. ಪ್ರತಿಯೊಬ್ಬರಿಗೂ ಅವರದೇ ಆದ ರಾಶಿ ನಕ್ಷತ್ರ ಇರುತ್ತದೆ ರಾಶಿ ನಕ್ಷತ್ರದ ಆಧಾರದ ಮೇಲೆ ಅವರ ಜೀವನ ಯಾವ ರೀತಿ ಇರುತ್ತದೆ ಎಂಬುದನ್ನು ತಿಳಿಯುವುದಕ್ಕೆ ಸಹಾಯವಾಗುತ್ತದೆ. ನಾವು ನಿಮಗೆ ಇಂದು ಮಕರ ರಾಶಿಯವರ ಬಗ್ಗೆ ತಿಳಿಸಿಕೊಡುತ್ತೇವೆ.ಮಕರ ರಾಶಿಯವರಿಗೆ ಪದೇಪದೇ ಸಮಸ್ಯೆಗಳು ಎದುರಾಗುತ್ತಿದೆ ಅದರಲ್ಲಿ ಆರ್ಥಿಕ ಸಮಸ್ಯೆಗಳು ಯಾಕಾಗಿ ಕಾಣಿಸಿಕೊಳ್ಳುತ್ತಿದೆ ಯಾವ ಕ್ಷೇತ್ರದಲ್ಲಿ ಇವರು ಉನ್ನತ ಸ್ಥಾನಕ್ಕೆ ಏರುತ್ತಾರೆ.

ಇವರಿಗೆ ಉದ್ಯೋಗ ಕ್ಷೇತ್ರದಲ್ಲಿ ಯಾವ ರೀತಿಯ ಅನುಕೂಲ ಅನಾನುಕೂಲ ಗಳಿವೆ ಇವರ ಗುಣಸ್ವಭಾವ ಯಾವ ರೀತಿಯಾಗಿ ಇರುತ್ತದೆ ಇವರ ಭವಿಷ್ಯ ಯಾವ ರೀತಿಯಾಗಿರುತ್ತದೆ ಈ ಎಲ್ಲದರ ಬಗ್ಗೆ ಸಂಪೂರ್ಣವಾದ ಮಾಹಿತಿಯನ್ನು ನಾವಿಂದು ನಿಮಗೆ ತಿಳಿಸಿಕೊಡುತ್ತೇವೆ .

ಮೊದಲನೆಯದಾಗಿ ಮಕರ ರಾಶಿಯವರ ಗುಣ ಸ್ವಭಾವ ಯಾವ ರೀತಿಯಾಗಿ ಇರುತ್ತದೆ ಎಂಬುದನ್ನು ತಿಳಿದುಕೊಳ್ಳೋಣ. ಮಕರ ರಾಶಿಯಲ್ಲಿ ಮೂರು ನಕ್ಷತ್ರಗಳು ಒಳಪಟ್ಟಿರುತ್ತದೆ ಅದರಲ್ಲಿ ಪ್ರಮುಖವಾಗಿ ಇರುವಂಥದ್ದು ಎರಡು ಪಾದಗಳು ಸೇರುವಂತಹ ನಕ್ಷತ್ರ ಮತ್ತು ಮೂರು ಪಾದಗಳು ಇರುವಂತದ್ದು. ಉತ್ತರಾಷಾಡ ನಕ್ಷತ್ರದ ಮೂರು ಪಾದಗಳು ಮಕರ ರಾಶಿಗೆ ಬರುವಂತದ್ದು ಮತ್ತು ಶ್ರವಣ ನಕ್ಷತ್ರದ ನಾಲ್ಕು ಪಾದದಲ್ಲಿ ಹುಟ್ಟಿರುವಂತವರು ಮಕರ ರಾಶಿಯಲ್ಲಿ ಬರುತ್ತಾರೆ. ಮತ್ತು ಧನಿಷ್ಠ ನಕ್ಷತ್ರ ಇದು ಕುಂಭ ರಾಶಿಗೆ ಮತ್ತು ಮಕರ ರಾಶಿ ಎರಡು ಪಾದ ಬರುತ್ತದೆ. ಹಾಗಾಗಿ ಈ ಮೂರು ನಕ್ಷತ್ರಗಳು ಮತ್ತು ಮಕರ ರಾಶಿಯಲ್ಲಿ ಬರುತ್ತವೆ.

ಈ ನಕ್ಷತ್ರಗಳ ಮೂಲಕ ಮಕರ ರಾಶಿಗೆ ಯಾವ ರೀತಿ ಅಭಿವೃದ್ಧಿಯಾಗುತ್ತದೆ ಯಾವ ರೀತಿ ಹಿನ್ನಡೆ ಆಗುತ್ತದೆ ಎಂಬುದನ್ನು ತಿಳಿದುಕೊಳ್ಳಬಹುದು. ಮೊದಲನೆಯದಾಗಿ ಉತ್ತರಾಷಾಡ ನಕ್ಷತ್ರ ಮೊದಲನೆಯ ಪಾದ ಯಾವಾಗಲೂ ಧನುರಾಶಿಗೆ ಬಂದರೆ ಎರಡು ಮೂರು ನಾಲ್ಕನೇ ಪಾದ ಮಕರ ರಾಶಿಗೆ ಬರುತ್ತದೆ. ಮಕರ ರಾಶಿಯಲ್ಲಿ ಉತ್ತರಾಷಾಡ ನಕ್ಷತ್ರದವರ ಜೀವನ ಹೇಗಿರುತ್ತದೆ ಎಂದರೆ ಯಾವಾಗಲೂ ಕುಂಟಿ ಕೊಂಡು ಹೋಗುವ ಪರಿಸ್ಥಿತಿ. ಯಾವೊಂದು ಕೆಲಸವೂ ಸಮರ್ಪಕವಾಗಿ ಆಗುವುದಿಲ್ಲ ತುಂಬಾ ಕಷ್ಟ ಪಡುತ್ತಾರೆ ಆದರೆ ಯಾವುದಾದರೂ ಒಂದು ಸಮಸ್ಯೆ ಅವರನ್ನು ಕಾಡುತ್ತಿರುತ್ತದೆ.

ಆದರೆ ಧನಿಷ್ಠ ನಕ್ಷತ್ರದಲ್ಲಿ ಜನನ ಆಗಿರುವವರು ಹಾಗಲ್ಲ ಧನಿಷ್ಠಾ ನಕ್ಷತ್ರದ ಎರಡು ಪಾದಗಳು ಈಕಡೆ ಇರುತ್ತವೆ ಎರಡು ಪಾದಗಳು ಆಕಡೆ ಇದ್ದರು ಅವರಿಗೆ ತುಂಬಾ ಸುಧಾರಣೆ ಇರುತ್ತದೆ ಅವರಿಗೆ ಕೆಲಸವನ್ನು ಯಾವ ರೀತಿ ಮಾಡಬೇಕು ಎಂಬುದರ ಬಗ್ಗೆ ಬುದ್ಧಿವಂತಿಕೆ ಇರುತ್ತದೆ ಜೊತೆಗೆ ದುಡ್ಡನ್ನು ಹೇಗೆ ಸಂಪಾದಿಸಬೇಕು ಎಂಬುದರ ಬಗ್ಗೆ ಆಲೋಚನೆಯನ್ನು ಮಾಡುತ್ತಿರುತ್ತಾರೆ. ಉತ್ತರಾಷಾಢ ನಕ್ಷತ್ರ ಮತ್ತು ಧನಿಷ್ಠಾ ನಕ್ಷತ್ರದ ಮಕರ ರಾಶಿಯವರು ಈ ರೀತಿ ಇದ್ದರೆ ಇನ್ನೊಂದು ನಕ್ಷತ್ರ ಶ್ರವಣ ನಕ್ಷತ್ರ ದವರು ಈ ಎರಡು ರಾಶಿಗಳಿಗೆ ವಿರುದ್ಧವಾಗಿರುತ್ತಾರೆ. ಶ್ರವಣ ನಕ್ಷತ್ರ ಎನ್ನುವಂಥದ್ದು ಶ್ರೀವಿಷ್ಣುವಿನ ನಕ್ಷತ್ರ ವಾಗಿರುತ್ತದೆ. ನಕ್ಷತ್ರಗಳಿಗೂ ಒಂದೊಂದು ಅಧಿಪತಿ ಇರುತ್ತಾನೆ

ರಾಶಿಗಳಿಗೆ ಅಧಿಪತಿ ಇರುವ ಹಾಗೆ ನಕ್ಷತ್ರಗಳಿಗೂ ಅಧಿಪತಿ ಇರುತ್ತಾನೆ ಶ್ರವಣ ನಕ್ಷತ್ರ ಆಗಿರಬಹುದು ಉತ್ತರಾಷಾಡ ನಕ್ಷತ್ರ ಆಗಿರಬಹುದು ಅಥವಾ ಧನಿಷ್ಠ ನಕ್ಷತ್ರ ವಾಗಿರಬಹುದು. ರಾಶಿಗೆ ಅಧಿಪತಿ ಹೇಗೆ ಇರುತ್ತಾನೆ ಅದೇ ರೀತಿಯಾಗಿ ನಕ್ಷತ್ರಗಳಿಗೂ ಅಧಿಪತಿ ಇರುತ್ತಾನೆ ಅದರ ಮೇಲೆ ನಿಮ್ಮ ಬೆಳವಣಿಗೆ ಹೇಗಿರುತ್ತದೆ ಶಿಕ್ಷಣದಲ್ಲಿ ಯಾವುದನ್ನು ಆಯ್ಕೆ ಮಾಡಿಕೊಳ್ಳಬೇಕು ಯಾವ ಉದ್ಯೋಗವನ್ನು ಆಯ್ಕೆ ಮಾಡಿಕೊಳ್ಳಬೇಕು ಎಂಬುದನ್ನು ರಾಶ್ಯಾಧಿಪತಿ ಮತ್ತು ನಕ್ಷತ್ರಾಧಿಪತಿಗಳ ಮೇಲೆ ಲೆಕ್ಕಾಚಾರ ಮಾಡಲಾಗುತ್ತದೆ ಜೊತೆಗೆ ಹುಟ್ಟಿರುವ ದಿನಾಂಕದ ಆಧಾರದ ಮೇಲೆ ಲಗ್ನವನ್ನು ಗಣನೆಗೆ ತೆಗೆದುಕೊಂಡು ಜಾತಕವನ್ನು ಹೇಳಲಾಗುತ್ತದೆ.

ಶ್ರವಣ ನಕ್ಷತ್ರದವರು ತುಂಬಾ ಶ್ರಮಜೀವಿಗಳು ಕಷ್ಟವನ್ನು ಪಡುತ್ತಾರೆ ಋಣಬಾಧೆಯಲ್ಲಿ ಸಿಲುಕಿಕೊಳ್ಳುತ್ತಾರೆ. ಎಲ್ಲರಿಗೂ ಅದೇ ರೀತಿ ಇರುತ್ತದೆ ಎಂದು ಹೇಳುವುದಕ್ಕಾಗುವುದಿಲ್ಲ ಶ್ರವಣ ನಕ್ಷತ್ರದವರಿಗೆ ಶನಿ ರಾಶ್ಯಾಧಿಪತಿ ಆಗಿರುತ್ತಾನೆ ಮತ್ತು ಚಂದ್ರ ನಕ್ಷತ್ರಾಧಿಪತಿಯಾಗಿರುತ್ತಾನೆ ಶನಿ ಮತ್ತು ಚಂದ್ರ ಒಂದೇ ಮನೆಯಲ್ಲಿ ಇದ್ದು ಅಥವಾ ಉಚ್ಚ ಸ್ಥಾನದಲ್ಲಿ ಇದರಲ್ಲಿ ಒಂದು ಗ್ರಹ ಇತ್ತು ಎಂದರು ಅವರಿಗೆ ಹೇಗೆ ಅಭಿವೃದ್ಧಿಯೆಂದರೆ ದಶಮ ಸ್ಥಾನದಲ್ಲಿ ವೃಷಭರಾಶಿಯಾಗಿದ್ದು ಚಂದ್ರ ಶನಿಯ ಜೊತೆ ಇದ್ದಾಗ ಅವರು ಕಲಾಕ್ಷೇತ್ರದಲ್ಲಿ ಬಹಳ ಮುಂದೆ ಹೋಗುತ್ತಾರೆ ಅಂದರೆ ಅವರು ಕಲಾವಿದರು ಆಗಿರಬಹುದು ಅಥವಾ ಸಿನಿಮಾದಲ್ಲಿ ಬಂಡವಾಳ ಹೂಡಿದವರು ಆಗಿರಬಹುದು ಅವರು ಕೋಟ್ಯಾಧಿಪತಿಗಳಾಗುತ್ತಾರೆ

ಆದರೆ ಅದೇ ತದ್ವಿರುದ್ಧವಾಗಿ ಪಾತಾಳಕ್ಕೆ ಹೋಗುವಂತಹ ಪರಿಸ್ಥಿತಿ ಗಳು ಬರುತ್ತವೆ. ಯಾಕೆಂದರೆ ಮೊದಲೇ ಹೇಳಿದ ಹಾಗೆ ಜೀವನದಲ್ಲಿ ಸಾಲ ಋಣ ಹೆಚ್ಚಾಗುತ್ತದೆ ಬಹಳಷ್ಟು ಸಮಸ್ಯೆಗಳು ಎದುರಾಗುವಂಥದಿರುತ್ತದೆ. ವೈವಾಹಿಕ ಜೀವನವು ಹಾಗೆ ಯಾವಾಗಲೂ ಬೇಜಾರಾಗುತ್ತದೆ ನೆಮ್ಮದಿ ಇರುವುದಿಲ್ಲ ಅದೇ ಸಪ್ತಮ ಸ್ಥಾನದಲ್ಲಿ ನೀಚನಾಗಿದ್ದರೆ ಗಂಡ ಹೆಂಡತಿ ದೂರ ದೂರ ಇರುವಂತದ್ದು ವಿಚ್ಛೇದನ ವಿಚಾರದಲ್ಲಿ ಬಹಳಷ್ಟು ಸಮಸ್ಯೆಗಳಿಗೆ ಸಿಲುಕಿ ಹಾಕಿ ಕೊಳ್ಳುವಂತಹ, ಎರಡು ಮದುವೆಯಾದರೂ ಸುಖವಾಗಿ ಇರುವುದಿಲ್ಲ ಈ ರೀತಿಯ ಸಮಸ್ಯೆಗಳು ಶ್ರವಣ ನಕ್ಷತ್ರದ ವರೆಗೆ ಇರುತ್ತದೆ.

ಉತ್ತರಾಷಾಡ ನಕ್ಷತ್ರದವರಿಗೆ ಸೂರ್ಯ ನಕ್ಷತ್ರಾಧಿಪತಿಯಾಗಿರುತ್ತಾನೆ ಸೂರ್ಯ ಇವರ ಜಾತಕದಲ್ಲಿ ದಶಮ ಸ್ಥಾನದಲ್ಲಿದ್ದರೆ ಅಥವಾ ಲಗ್ನದಲ್ಲಿ ಸ್ವಕ್ಷೇತ್ರದಲ್ಲಿ ಇದ್ದರೆ ಇವರು ಹೇಗೆ ಸುಧಾರಣೆ ಆಗುತ್ತಾರೆ ಎಂದರೆ ಇವರಿಗೆ ಉದ್ಯಮ ಚೆನ್ನಾಗಿ ಕೈ ಹಿಡಿಯುತ್ತದೆ. ಮಕರ ರಾಶಿಯವರಿಗೆ ಉದ್ಯಮವನ್ನು ಮಾಡುವುದಕ್ಕೆ ತುಂಬಾ ಒಲವು ಇರುತ್ತದೆ ಆದರೆ ಶ್ರವಣ ನಕ್ಷತ್ರದವರು ಇದರಲ್ಲಿ ಬಂಡವಾಳ ತೊಡಗಿಸಿದರೆ ಅವರಿಗೆ ಸಮಸ್ಯೆಗಳು ಉಂಟಾಗುತ್ತವೆ. ಮಕರ ರಾಶಿಯವರು ತುಂಬಾ ಬುದ್ಧಿವಂತರಾಗಿರುತ್ತಾರೆ ಆಲೋಚನೆಗಳನ್ನು ಮಾಡುತ್ತಾರೆ ಆದರೆ ಅಷ್ಟೇ ಸೋಂಬೇರಿ ಗಳಾಗಿರುತ್ತಾರೆ ಮತ್ತು ವಿಪರೀತ ಕೋಪವನ್ನ ಹೊಂದಿರುತ್ತಾರೆ ಆದರೆ ಮಂದ ಜೀವಿಗಳಾಗಿರುತ್ತಾರೆ ಬುದ್ಧಿ ಚುರುಕಾಗಿರುತ್ತದೆ ಆದರೆ ಮುಂದೆ ಹೋಗಿ ಯಾವುದನ್ನೂ ಮಾಡುವುದಿಲ್ಲ.

ಇನ್ನು ಮಕರ ರಾಶಿಯವರು ಯಾವ ಕ್ಷೇತ್ರದಲ್ಲಿ ಉದ್ಯೋಗವನ್ನು ಮಾಡಿದರೆ ಚೆನ್ನಾಗಿರುತ್ತಾರೆ ಎಂಬುದನ್ನು ತಿಳಿಯುವುದಾದರೆ ಮಕರ ರಾಶಿಯವರಿಗೆ ಬಿಸಿನೆಸ್ ಒಳ್ಳೆಯ ರೀತಿಯಲ್ಲಿ ಆಗಿಬರುತ್ತದೆ ಯಾಕೆಂದರೆ ಉದ್ಯಮ ನಡೆಸುವವರು ಒಳ್ಳೆಯ ಮಾತುಗಾರರಾಗಿ ಬೇಕು ತೆಗೆದುಕೊಳ್ಳಲು ಬಂದವರು ತೆಗೆದುಕೊಳ್ಳದಿದ್ದರೂ ತಮ್ಮ ಮಾತಿನ ಮೂಲಕ ಅದನ್ನು ತೆಗೆದುಕೊಳ್ಳುವಂತೆ ಮಾಡುತ್ತಾರೆ. ಸಂಪಾದನೆಯನ್ನು ಚೆನ್ನಾಗಿ ಮಾಡುತ್ತಾರೆ ಆದರೆ ಅಷ್ಟೇ ಖರ್ಚು ಕೂಡ ಅವರಿಗೆ ಬರುತ್ತದೆ. ಆದ್ದರಿಂದ ದೊಡ್ಡಮಟ್ಟದಲ್ಲಿ ಬಂಡವಾಳ ಹೂಡುವುದು ಇವರಿಗೆ ಕಂಟಕವಾಗುತ್ತದೆ ಎಷ್ಟು ಬೇಕು ಅಷ್ಟು ಬಂಡವಾಳ ಹೂಡಿದರೆ ಮಾತ್ರ ಇವರಿಗೆ ಲಾಭವಾಗುತ್ತದೆ.

ಈ ರಾಶಿಯವರು ಕಲಾಕ್ಷೇತ್ರದ ಕಡೆಗೆ ಹೆಚ್ಚು ಒಲವನ್ನು ಕೊಡುತ್ತಾರೆ ಯಾಕೆಂದರೆ ಅಲ್ಲಿ ವಿಷ್ಣು ನಕ್ಷತ್ರ ಇರುತ್ತದೆ ವಿಷ್ಣುವು ಸೌಂದರ್ಯಪ್ರಿಯ ಮತ್ತು ಅಲಂಕಾರ ಪ್ರಿಯ ಹಾಗಾಗಿ ಬಂಡವಾಳವನ್ನು ಹುಡುವುದರಲ್ಲಿ ಹೆಚ್ಚಿನ ಆಸಕ್ತಿ ಇರುತ್ತದೆ. ಮಕರ ರಾಶಿಯವರಿಗೆ ಸಾಮಾನ್ಯವಾಗಿ ಆರ್ಥಿಕ ಸಮಸ್ಯೆ ಉಂಟಾಗುತ್ತಿರುತ್ತದೆ ಯಾಕೆ ಉಂಟಾಗುತ್ತದೆ ಎಂಬುದನ್ನು ತಿಳಿಯುವುದಾದರೆ ಮಕರ ರಾಶಿಯವರು ಹುಟ್ಟಿದಾಗಿನಿಂದ ತನ್ನ ಕೊನೆಯ ಕಾಲದವರೆಗೂ ಎಷ್ಟೇ ಕೋಟ್ಯಾಧಿಪತಿಗಳಾಗಿದ್ದರು ಅವರದ್ದೇ ಆದಂತಹ ಆರ್ಥಿಕ ಸಂಕಷ್ಟಗಳು ಎದುರಾಗುತ್ತಿವೆ.

ಅದಕ್ಕೆ ಒಂದು ಉದಾಹರಣೆ ಎಂದರೆ ಶ್ರೀ ಮಹಾಲಕ್ಷ್ಮಿಯನ್ನು ತನ್ನ ವಕ್ಷಸ್ಥಳದಲ್ಲಿ ಇಟ್ಟುಕೊಂಡಿರುವ ಶ್ರೀವಿಷ್ಣು ಇವತ್ತಿನವರೆಗೂ ಸಾಲದಲ್ಲಿ ಇರುವುದನ್ನು ನಾವು ಪುರಾಣದಲ್ಲಿ ಕೇಳಿದ್ದೇವೆ ಹಾಗಾಗಿ ಲಕ್ಷ್ಮೀದೇವಿ ಸದಾಕಾಲ ಜೊತೆಯಲ್ಲಿದ್ದರೂ ವಿಷ್ಣುವಿಗೆ ಸಾಲ ತಪ್ಪಲಿಲ್ಲ ಅದೇ ರೀತಿಯಾಗಿ ಮಕರ ರಾಶಿಯವರು ಕೂಡ ಯಾವಾಗಲೂ ಸಾಲದ ಋಣದಲ್ಲಿ ಇರುತ್ತಾರೆ. ಇವರು ತಮ್ಮ ಚಾಣಾಕ್ಷತನದಿಂದ ಎಷ್ಟೇ ವ್ಯಾಪಾರ ವಹಿವಾಟುಗಳನ್ನು ಮಾಡಿದರು ಸಾಲದ ಸಮಸ್ಯೆ ಇವರನ್ನ ಕಾಡುತ್ತಿರುತ್ತದೆ ಹಾಗಾಗಿ ಅವರು ಯಾವಾಗಲೂ ಮಹಾವಿಷ್ಣುವಿನ ಆರಾಧನೆಯನ್ನು ಮಾಡುವಂತದ್ದು ಮತ್ತೆ ಪೂಜೆ-ಪುನಸ್ಕಾರಗಳನ್ನು ಮಾಡುವಂಥದ್ದು ಒಳ್ಳೆಯದು.

ಇವರಿಗೆ ಇನ್ನೂ ಐದು ವರ್ಷ ಶನಿಮಹಾತ್ಮನ ಪ್ರಭಾವ ಇರುತ್ತದೆ. ಹಾಗಾಗಿ ಕಷ್ಟಗಳು ಬರುತ್ತಿರುತ್ತದೆ ಜೊತೆಗೆ ಕೆಲಸದಲ್ಲಿ ವಿಳಂಬ ಆಗುತ್ತಿರುತ್ತದೆ ಅಂತಹ ಸಂದರ್ಭದಲ್ಲಿ ಹನುಮಂತನ ಆರಾಧನೆ ಮಹಾವಿಷ್ಣುವಿನ ಆರಾಧನೆ ಮಾಡುವುದನ್ನು ರೂಢಿಸಿಕೊಳ್ಳಬೇಕು ಇದರಿಂದ ಕೆಲಸದಲ್ಲಿ ಮತ್ತು ಉದ್ಯೋಗದಲ್ಲಿ ಬಹಳ ಸುಧಾರಣೆಯಾಗುತ್ತದೆ. ಮಕರ ರಾಶಿಯವರಿಗೆ ಎಂಟು ಮತ್ತು ಆರು ಶುಭ ಸಂಖ್ಯೆಯಾಗಿರುತ್ತದೆ ಮತ್ತು ಇವರಿಗೆ ಕಪ್ಪುನೀಲಿ ಮತ್ತು ಬಿಳಿ ಬಣ್ಣ ಆಗಿಬರುತ್ತದೆ. ಮತ್ತು ಇವರು ಯಾವುದೇ ವಾಹನವನ್ನು ಖರೀದಿ ಮಾಡಿದಾಗ ಅದರ ನಾಲ್ಕು ಸಂಖ್ಯೆ ಕುಡಿದಾಗ ಆರು ಅಥವಾ ಎಂಟು ಬಂದರೆ ಒಳ್ಳೆಯದು.

ಇವರಿಗೆ ಪೂರ್ವ ಆಗಿಬರುವುದಿಲ್ಲ ಪಶ್ಚಿಮ ಮತ್ತು ಉತ್ತರ ಆಗಿಬರುತ್ತದೆ. ಕಬ್ಬಿಣದ ಉದ್ಯಮ ಇವರಿಗೆ ತುಂಬಾ ಒಳ್ಳೆಯದು. ಇವರು ಮಧ್ಯದ ಬೆರಳಿಗೆ ಇಂದ್ರನೀಲ ವನ್ನು ಹಾಕಿಕೊಳ್ಳುವುದು ಬಹಳ ಸೂಕ್ತ. ಈ ರೀತಿಯಾಗಿ ಮಕರ ರಾಶಿಯವರಿಗೆ ಅನುಕೂಲ ಅನಾನುಕೂಲ ಎರಡು ಮಿಶ್ರಿತ ಫಲಗಳು ಇರುವುದರಿಂದ ನಾವು ನಿಮಗೆ ತಿಳಿಸಿರುವ ಪರಿಹಾರಗಳನ್ನು ಮಾಡಿಕೊಳ್ಳುತ್ತಾ ಬಂದಲ್ಲಿ ನಿಮಗಿರುವ ಸಮಸ್ಯೆಗಳು ದೂರವಾಗುತ್ತದೆ. ಮತ್ತು ಈ ಪರಿಹಾರಗಳನ್ನು ಮಾಡಿಕೊಂಡು ನೆಮ್ಮದಿಯ ಜೀವನವನ್ನು ನಿಮ್ಮದಾಗಿಸಿಕೊಳ್ಳಿ.

ಶ್ರೀ ಕಾಳಿಕಾ ದುರ್ಗಾ ಜೋತಿಷ್ಯ ಪೀಠ ಪ್ರಧಾನ್ ತಾಂತ್ರಿಕ ಶ್ರೀ ಶ್ರೀನಿವಾಸ್ ರಾಘವನ್ ಆಚಾರ್ಯರು ಇವರು ನಿಮ್ಮ ಎಲ್ಲಾ ಗುಪ್ತ ಕಠಿಣ ಸಮಸ್ಯೆಗಳಿಗೆ ಕೇವಲ 2 ದಿನದಲ್ಲಿ ಶಾಶ್ವತ ಪರಿಹಾರ ಸೂಚಿಸುತ್ತಾರೆ 9741422232 ಅಮಾವಾಸ್ಯೆಯ (ಅಮಾವಾಸ್ಯೆಯ ದಿನ) ರಾತ್ರಿಯ ಈ ಯಾಗವು ಸಂಪೂರ್ಣವಾಗಿ ಪ್ರಯೋಜನಕಾರಿಯಾಗಿದೆ ಮತ್ತು ಋಣಭಾರದ ಸಮಸ್ಯೆಗಳನ್ನು ನಾಶಪಡಿಸುತ್ತದೆ; ಶತ್ರು ಸಂಹಾರ, ಮಾಟ-ಮಂತ್ರ ಸೇರಿದಂತೆ ಶತ್ರುಗಳಿಂದ ಉಂಟಾಗುವ ದೋಷಗಳನ್ನು ಓಡಿಸಿ; ಕಾನೂನು ವಿಷಯಗಳಲ್ಲಿ ವಿಜಯವನ್ನು ಖಚಿತಪಡಿಸಿಕೊಳ್ಳಿ; ಹಿಂದಿನ ಜನ್ಮದ ಪಾಪಗಳನ್ನು ಕೊನೆಗೊಳಿಸಿ (ಪೂರ್ವ ಜನ್ಮ ಪಾಪ ನಿವಾರ್ಥಿ), ಪೂರ್ವಜರ ಶಾಪ (ಪಿತೃ ದೋಷ), ರೋಗಗಳನ್ನು ಕೊನೆಗೊಳಿಸಿ; ರಘು ದೋಷ ಶಾಂತಿ ಮತ್ತು ನಿಮಗೆ ಜೀವನದಲ್ಲಿ ಬಹಳಷ್ಟು ಸಂತೋಷ, ಶಾಂತಿ, ಸೌಕರ್ಯ ಮತ್ತು ಸಮೃದ್ಧಿಯನ್ನು ಒದಗಿಸುತ್ತದೆ.

WhatsApp Group Join Now
Telegram Group Join Now

Leave a Reply

Your email address will not be published. Required fields are marked *

error: Content is protected !!