ಅಮಿತಾಬಚ್ಚನ್ ಕನ್ನಡದ ಈ ಸಿನಿಮಾಕ್ಕೆ ಪಡೆದ ಪೇಮೆಂಟ್ ಎಷ್ಟು ಗೊತ್ತೆ.

0 11

ನಾಗತಿಹಳ್ಳಿ ಚಂದ್ರಶೇಖರ್ ಅವರ ನಿರ್ದೇಶನದ ಅಮೃತಧಾರೆ ಸಿನಿಮಾದಲ್ಲಿ ಅಮಿತಾಬಚ್ಚನ್ ಅವರು ಅಭಿನಯಿಸಿ ಚಿತ್ರದ ಯಶಸ್ವಿಗೆ ಕಾರಣರಾಗಿದ್ದಾರೆ. ಅಮಿತಾಬಚ್ಚನ್ ವ್ಯಕ್ತಿತ್ವ, ಅವರೊಂದಿಗೆ ಕಳೆದ ಕ್ಷಣಗಳ ಬಗ್ಗೆ ನಾಗತಿಹಳ್ಳಿ ಚಂದ್ರಶೇಖರ್ ಅವರ ಮಾತುಗಳನ್ನು ಈ ಲೇಖನದ ಮೂಲಕ ನೋಡೋಣ.

ನಾಗತಿಹಳ್ಳಿ ಚಂದ್ರಶೇಖರ್ ಅವರು ಅಮಿತಾಬಚ್ಚನ್ ಅವರ ಮನೆಗೆ ಹೋದಾಗ ಅಲ್ಲಿ ಕನ್ನಡದವರು ಇರುವುದನ್ನು ನೋಡಿ ಬಹಳ ಸಂತೋಷ ಪಡುತ್ತಾರೆ. ಅಪರಿಚಿತ ಜಾಗದಲ್ಲಿ ನಮ್ಮ ಭಾಷೆ ಕನ್ನಡ ಮಾತನಾಡುವವರು ಕಂಡಾಗ ಸಂತೋಷ ಎನಿಸುವುದು ಸಹಜ. ಈ ಸಿನಿಮಾದಲ್ಲಿ ನಾಯಕಿ ಅಮೃತ ಅವಳಿಗೆ ಜೀವನದಲ್ಲಿ ಬಹು ದೊಡ್ಡ ಆಕಾಂಕ್ಷೆಗಳಿರುತ್ತದೆ ಜೊತೆಗೆ ಸಾವು ಸಮೀಪಿಸುತ್ತದೆ.

ನಿರ್ದೇಶಕರಾದ ನಾಗತಿಹಳ್ಳಿ ಚಂದ್ರಶೇಖರ್ ಅವರು ವಚನ ಸಾಹಿತ್ಯದಲ್ಲಿರುವ ವಾಕ್ಯಗಳನ್ನು ಓದಿಕೊಂಡು ಅದರಂತೆ ಸಿನಿಮಾದ ನಿರ್ದೇಶನ ಮಾಡಿದ್ದಾರೆ. ಗಂಡ ಹೆಂಡತಿ ಇಬ್ಬರೂ ವಿಭಿನ್ನ ಸ್ವಭಾವವನ್ನು ಹೊಂದಿರುತ್ತಾರೆ. ನಾಯಕನ ಹೆಸರನ್ನು ಪುರು ಎಂದು ಇಡಲು ಕಾರಣ ಪುರಂದರದಾಸರು ಮಹಾ ಜಿಪುಣರು ಅಮೃತಧಾರೆ ಸಿನಿಮಾದಲ್ಲಿ ನಾಯಕನು ಜಿಪುಣನಾಗಿರುತ್ತಾನೆ ಆದ್ದರಿಂದ ಪುರಂದರ ಎಂಬ ಹೆಸರನ್ನು ಇಡಲಾಯಿತು.

ಅಮೃತಾಳ ಆಸೆಗಳನ್ನು ಪುರು ಈಡೇರಿಸಬೇಕು ಅಮೃತಾಳ ಆಸೆಗಳಲ್ಲಿ ಒಬ್ಬ ಮಹಾನ್ ವ್ಯಕ್ತಿಯನ್ನು ಭೇಟಿಮಾಡುವ ಆಸೆ ಇರುತ್ತದೆ. ಬದುಕಿರುವ ಮಹಾನ್ ವ್ಯಕ್ತಿಗಳಲ್ಲಿ ಸಿನಿಮಾ ತಂಡ ಯಾರನ್ನು ಭೇಟಿ ಮಾಡಲು ಸಾಧ್ಯವಿದೆ ಎಂದು ಲೀಸ್ಟ್ ಮಾಡಲಾಯಿತು. ಅವಮಾನ ಕಷ್ಟದಿಂದ ಮೇಲೆ ಬಂದು ಸಾಧನೆ ಮಾಡಿ ಇಳಿವಯಸ್ಸಿನಲ್ಲಿಯೂ ಪ್ರತಿಭೆಯಿಂದ ಮೆರೆಯುತ್ತಿರುವ ಅಮಿತಾಬಚ್ಚನ್ ಅವರ ಹೆಸರು ನಾಗತಿಹಳ್ಳಿ ಚಂದ್ರಶೇಖರ್ ಅವರಿಗೆ ನೆನಪಾಗುತ್ತದೆ. ಅನೇಕ ಸರ್ಕಸ್ ಮಾಡಿ ನಂತರ ಮಾರ್ಚ್ 16, 2005 ರಂದು ಅಮಿತಾಬಚ್ಚನ್ ಅವರ ಭೇಟಿಮಾಡುವ ದಿನವೆಂದು ಫಿಕ್ಸ್ ಆಯಿತು. ಐದು ಗಂಟೆಗೆ ಬರಲು ಹೇಳಿದ್ದರು ಸಿನಿಮಾ ತಂಡದವರು ಅಮಿತಾಬಚ್ಚನ್ ಅವರ ಮನೆಗೆ ಹೋಗುವ ಮೊದಲೆ ಅಮಿತಾಬಚ್ಚನ್ ಅವರು ತಯಾರಿಯಾಗಿ ಕುಳಿತಿದ್ದರು.

ನಿರ್ದೇಶಕರು, ಸಿನಿಮಾ ತಂಡದವರ ಹತ್ತಿರ ಅಮಿತಾಬಚ್ಚನ್ ಅವರು ಸ್ಕ್ರಿಪ್ಟ್ ಕೇಳಿದರು, ಸ್ಕ್ರಿಪ್ಟ್ ಓದಿದ ನಂತರ ನಾನು ನಟನೆ ಮಾಡುತ್ತೇನೆ ಆದರೆ ಮುಂಬೈನಲ್ಲಿ ಶೂಟಿಂಗ್ ಮಾಡಬೇಕು ಆರೋಗ್ಯ ಮತ್ತು ಚಿತ್ರೀಕರಣ ಕಾರಣದಿಂದ ಬೇರೆ ಕಡೆ ಬರಲು ಆಗುವುದಿಲ್ಲ ಎಂದು ಹೇಳಿದರು. ಮೊದಲು ಈ ಸಿನಿಮಾದಲ್ಲಿ ಅಮಿತಾಬ್ ಬಚ್ಚನ್ ಅವರು ಸಿನಿಮಾದಲ್ಲಿ ನಟಿಸುತ್ತಿರುವುದನ್ನು ಗೌಪ್ಯವಾಗಿಟ್ಟಿದ್ದರು. ಮುಂಬೈನಲ್ಲಿ ಹೊಟೇಲ್ ನಲ್ಲಿ ಚಿತ್ರೀಕರಣ ಮಾಡಲಾಯಿತು.

ಅಲ್ಲಿ ಅಮಿತಾಬ್ ಅವರು ಸಿನಿಮಾ ತಂಡದವರೊಂದಿಗೆ ಆತ್ಮೀಯತೆಯಿಂದ ನಡೆದುಕೊಂಡರು. ನಾಯಕಿ ರಮ್ಯಾ ಅವರೊಂದಿಗೆ ಅಮಿತಾಬ್ ಬಚ್ಚನ್ ಅವರು ತಮಾಷೆಯಾಗಿ ಮಾತನಾಡಿದರು. ಸಿನಿಮಾ ತಂಡದವರಿಗೆ ಇರುವ ಟೆನ್ಷನ ಅಮಿತಾಬ್ ಬಚ್ಚನ್ ಅವರ ತಮಾಷೆ ಮಾತುಗಳಿಂದ ಕಡಿಮೆ ಆಯಿತು. ಶೂಟಿಂಗ್ ಮುಗಿದ ನಂತರ ಚಂದ್ರಶೇಖರ್ ಅವರು ಅಮಿತಾಬಚ್ಚನ್ ಅವರಿಗೆ ನೀವು ಫ್ರೆಂಡ್ಲಿ ಆಗಿರುತ್ತೀರಿ ಎಂದು ಹೇಳಿದಾಗ ಅವರು ನೀವು ಹೊಸಬರು ಚೆನ್ನಾಗಿ ಶೂಟಿಂಗ್ ಆಗಬೇಕು ಸಿನಿಮಾ ಯಶಸ್ವಿಯಾಗಬೇಕು ಎಂದು ಹೇಳಿದರು.

ಅಮಿತಾಬಚ್ಚನ್ ಅವರು ನಾಗತಿಹಳ್ಳಿ ಚಂದ್ರಶೇಖರ್ ಅವರು ನಿರ್ದೇಶಿಸಿದ ಒಂದು ಸಿನಿಮಾದಲ್ಲಿ ನಟನೆ ಮಾಡಿದ್ದರೂ ಬಹಳ ಸಿನಿಮಾಗಳಲ್ಲಿ ನಟಿಸಿದ್ದಾರೆ ಎಂಬ ಅನುಭವ ನನಗಿದೆ ಎಂದು ಚಂದ್ರಶೇಖರ್ ಅವರು ಹೇಳಿದ್ದಾರೆ. ಸಿನಿಮಾ ತಂಡ ಅಮಿತಾಬಚ್ಚನ್ ಅವರಿಗೆ ದುಬಾರಿ ಕೈಗಡಿಯಾರವನ್ನು ಉಡುಗೊರೆಯಾಗಿ ಕೊಟ್ಟಿದ್ದಾರೆ. ಅಮೃತಧಾರೆ ಸಿನಿಮಾದ ಯಶಸ್ಸಿಗೆ ಅಮಿತಾಬಚ್ಚನ್ ಅವರ ಪ್ರವೇಶ ಮುಖ್ಯ ಕಾರಣವಾಗಿದೆ ಎಂದು ನಾಗತಿಹಳ್ಳಿ ಚಂದ್ರಶೇಖರ್ ಅವರು ಹೇಳಿಕೊಂಡಿದ್ದಾರೆ.

ಅಮಿತಾಬಚ್ಚನ್ ಅವರಿಗೆ ತಾನು ಹಿರಿಯ ಕಲಾವಿದ ಎಂಬ ಸ್ವಲ್ಪವೂ ಅಹಂಕಾರವಿಲ್ಲ. ಚಂದ್ರಶೇಖರ್ ಅವರು ಅಮಿತಾಬಚ್ಚನ್ ಅವರೊಂದಿಗೆ ಕೆಲಸ ಮಾಡಲು ಸಂತೋಷ ಎನಿಸುತ್ತದೆ ಎಂದು ಹೇಳಿಕೊಂಡರು. ಅಮಿತಾಬಚ್ಚನ್ ಅವರು ಈ ಸಿನಿಮಾವನ್ನು ಹಿಂದಿಯಲ್ಲಿ ಮಾಡಬಹುದು ಎಂದು ಹೇಳಿದರು.

ಅಮಿತಾಬಚ್ಚನ್ ಅವರು ಒಂದು ರೂಪಾಯಿ ಸಂಭಾವನೆ ಪಡೆಯದೆ ಕೋಟಿ ಕೋಟಿ ಬೆಲೆಬಾಳುವ ಸ್ನೇಹ ಸೌಹಾರ್ದ ಕೊಟ್ಟಿದ್ದಾರೆ ಎಂದು ನಿರ್ದೇಶಕರು ಹೇಳಿಕೊಂಡಿದ್ದಾರೆ. ಶೂಟಿಂಗ್ ಮುಗಿಸಿ ಬರುವಾಗ ಚಂದ್ರಶೇಖರ್ ಅವರಿಗೆ ಅಮಿತಾಬಚ್ಚನ್ ತಮ್ಮ ಜೀವನ ಚರಿತ್ರೆ ಪುಸ್ತಕವನ್ನು ಕೊಟ್ಟಿದ್ದಾರೆ. ಪುಸ್ತಕದಲ್ಲಿ ಅಮಿತಾಬಚ್ಚನ್ ಅವರು ಎದುರಿಸಿದ ಅವಮಾನ ಸೋಲು ಅದನ್ನು ದಾಟಿ ಗೆದ್ದ ರೀತಿಯ ಬಗ್ಗೆ ಓದಬಹುದು.

ಶಿರಡಿ ಸಾಯಿಬಾಬಾ ಜ್ಯೋತಿಷ್ಯ ಶಾಸ್ತ್ರಂ ನಂಬಿ ಕರೆ ಮಾಡಿದವರಿಗೆ ವಿಶೇಷ ಸಾಂತ್ವಾನ, ಸಮಸ್ಯೆ ಸಮಸ್ಯೆ ಸಮಸ್ಯೆ ಚಿಂತಿಸಬೇಡಿ, ಅಸಾಧ್ಯವಾದದ್ದು ಇಲ್ಲಿ ಸಾಧ್ಯ ಸಮಸ್ಯೆಗಳಾದ ವಿದ್ಯೆ ಉದ್ಯೋಗ ವ್ಯಾಪಾರ ಆರೋಗ್ಯ ದಾಂಪತ್ಯ ಗಂಡ-ಹೆಂಡತಿಯರ ಕಲಹ ಪ್ರೀತಿಯಲ್ಲಿ ನಂಬಿ ಮೋಸ ಇಷ್ಟಪಟ್ಟವರು ನಿಮ್ಮಂತೆ ಆಗಲು ಕೋರ್ಟ್ ಕೇಸ್ ಜಮೀನು ಸ್ತ್ರೀ ಮತ್ತು ಪುರುಷ ವಶೀಕರಣ ಶತ್ರು ಕಾಟ ಮಾಟ-ಮಂತ್ರ ಇನ್ನು ಮುಂತಾದ ಸಮಸ್ಯೆಗಳಿಗೆ ಅತಿ ಶೀಘ್ರದಲ್ಲಿ ಪರಿಹಾರಅಸಾಧ್ಯ ಆಗುವ ಸಮಸ್ಯೆಗಳಿಗೆ ಸಾಧ್ಯವಾಗಿ ತೋರಿಸುವುದು ಶ್ರೀ ಶಿರಡಿ ಸಾಯಿಬಾಬಾ ಜ್ಯೋತಿಷ್ಯಶಾಸ್ತ್ರನಿಮ್ಮ ನಂಬಿಕೆಗೆ ಇಲ್ಲಿ ಮೋಸವಿಲ್ಲ 9611844430

Leave A Reply

Your email address will not be published.