2020 ರ ಡಿಸೆಂಬರ್ ಮಕರ ರಾಶಿಯವರಿಗೆ ಯಾವ ಫಲ ಪ್ರಾಪ್ತಿ ಆಗುವುದು ಗೊತ್ತೇ?

0 1

ಪ್ರತಿಯೊಂದು ರಾಶಿಯು ತನ್ನದೇ ಆದ ಭವಿಷ್ಯವನ್ನು ಹೊಂದಿರುತ್ತದೆ. ಅದೇ ರೀತಿ 2020 ರ ಡಿಸೆಂಬರ್ ತಿಂಗಳಿನ ಮಕರ ರಾಶಿಯವರ ಉದ್ಯೋಗ, ಆರೋಗ್ಯ, ಹಣಕಾಸು ಮುಂತಾದ ವಿಚಾರಗಳ ಭವಿಷ್ಯ ಹೇಗಿರುತ್ತದೆ ಎಂದು ಈ ಲೇಖನದ ಮೂಲಕ ತಿಳಿಯೋಣ.

ಉದ್ಯೋಗದ ವಿಷಯದಲ್ಲಿ ಮಕರ ರಾಶಿಯವರಿಗೆ ಡಿಸೆಂಬರ್ ತಿಂಗಳಿನಲ್ಲಿ ಜಾಬ್ ರಿಸೈನ್ ಮಾಡಬೇಕೆಂದು ಅನಿಸುತ್ತದೆ. ನಿರ್ಧಾರದ ವಿಷಯದಲ್ಲಿ ಗೊಂದಲ ಉಂಟಾಗುತ್ತದೆ ಹಾಗಾಗಿ ಮಕರ ರಾಶಿಯವರು ಗಮನ ಕೊಡಬೇಕು. ಇದನ್ನು ಹೊರತುಪಡಿಸಿ ಉದ್ಯೋಗದಲ್ಲಿ ಒಳ್ಳೆಯದಾಗುತ್ತದೆ. ಬಿಸಿನೆಸ್ ಮಾಡುವ ಮಕರ ರಾಶಿಯವರು ಕಷ್ಟದಲ್ಲಿರುತ್ತಾರೆ ಆದರೆ ಡಿಸೆಂಬರ್ ತಿಂಗಳಿನಲ್ಲಿ ಅವರಿಗೆ ಒಳ್ಳೆಯದಾಗುತ್ತದೆ. ಸಾಲದ ವಿಷಯದಲ್ಲಿ ಡಿಸೆಂಬರ್ 18ರ ನಂತರ ಸಮಸ್ಯೆ ಆಗುತ್ತದೆ. ಆದ್ದರಿಂದ ಮಕರ ರಾಶಿಯವರು ಲಕ್ಷ್ಮೀನಾರಾಯಣ ಹೃದಯ ಹೋಮ, ಆಶ್ಲೇಷ ಬಲಿ ಪೂಜೆ, ಸರ್ಪ ಶಾಂತಿ ಹೋಮ ಮಾಡುವುದರಿಂದ ಆರ್ಥಿಕ ಬಾಧೆಗಳಿಂದ ಪರಿಹಾರ ಸಿಗುತ್ತದೆ. ಈ ತಿಂಗಳಿನಲ್ಲಿ ಮಕರ ರಾಶಿಯವರು ಕೈಹಾಕಿದ ಕೆಲಸವೂ ಯಶಸ್ವಿಯಾಗುತ್ತದೆ. ಮಕರ ರಾಶಿಯವರಿಗೆ ಡಿಸೆಂಬರ್ ತಿಂಗಳಿನಲ್ಲಿ ಮಕ್ಕಳಿಂದ ಸಂತೋಷ ಅಥವಾ ಅವರಿಂದ ಲಾಭ ಬರುತ್ತದೆ. ಸಂತಾನ ಇಲ್ಲದವರಿಗೆ ಸಂತಾನವೃದ್ಧಿ ಆಗುವ ಸಂಭವವಿದೆ.

ಮಕರ ರಾಶಿಯವರಿಗೆ ಡಿಸೆಂಬರ್ 15ರ ನಂತರ ಆರೋಗ್ಯದಲ್ಲಿ ಏರುಪೇರಾಗುವ ಸಂಭವವಿದೆ ಆದ್ದರಿಂದ ಈ ರಾಶಿಯವರು ತಣ್ಣೀರು ಸ್ನಾನ ಮಾಡುವುದು, ವೃತ, ಉಪವಾಸ ಮಾಡುವುದು, ಹೊರಗಿನ ಆಹಾರ ತಿನ್ನುವುದು ಒಳ್ಳೆಯದಲ್ಲ. ಧ್ಯಾನ, ಪ್ರಾಣಾಯಾಮ, ಯೋಗಗಳನ್ನು ಮಾಡಬೇಕು. ಚರ್ಮ ಸಂಬಂಧಿತ ಖಾಯಿಲೆಗಳು, ಪಿತ್ತ ಹೆಚ್ಚಾಗುವುದು ಆಗುತ್ತದೆ ಇದಕ್ಕೆ ಗುರು ಶಾಂತಿ, ಶನಿ ಶಾಂತಿ, ರವಿ ಶಾಂತಿ ಹೋಮಗಳನ್ನು ಮಾಡುವುದರಿಂದ ಈ ಸಮಸ್ಯೆ ಪರಿಹಾರವಾಗುತ್ತದೆ. ತಂದೆಯ ಆರೋಗ್ಯದಲ್ಲಿ ಏರುಪೇರು ಕಂಡರೆ ತಕ್ಷಣ ಅದರ ಬಗ್ಗೆ ಗಮನ ಕೊಡಬೇಕು. ಮಕರ ರಾಶಿಯವರಿಗೆ ಪಿತ್ರಾರ್ಜಿತ ಆಸ್ತಿ ಬರುವುದಿದ್ದರೆ ತಾತ್ಸಾರ ಮಾಡದೆ ಅದರ ಬಗ್ಗೆ ಗಮನ ಕೊಡಬೇಕು ಆಡುವ ಮಾತಿನ ಬಗ್ಗೆ ಗಮನ ಇರಬೇಕು. ಮಕರ ರಾಶಿಯ ಸ್ತ್ರೀಯರಿಗೆ ಡಿಸೆಂಬರ್ ತಿಂಗಳಿನಲ್ಲಿ ತವರು ಮನೆಯಿಂದ ಸಹಾಯವಾಗುವ ಸಾಧ್ಯತೆಗಳಿವೆ. ಮಕರ ರಾಶಿಯವರು ಸಹೋದರರೊಂದಿಗೆ ಉತ್ತಮವಾಗಿರಬೇಕು ಜಗಳಗಳಾಗಬಹುದು. ಶುಕ್ರನಿಂದ ಅವಿವಾಹಿತರಿಗೆ ವಿವಾಹ ವಾಗಬಹುದು. ಒಟ್ಟಿನಲ್ಲಿ ಮಕರ ರಾಶಿಯವರು ಲಕ್ಷ್ಮೀ ನಾರಾಯಣ ಹೃದಯ ಹೋಮ, ನಾಗಾರಾಧನೆ, ಶನಿ ಶಾಂತಿ, ರವಿ ಶಾಂತಿ ಹೋಮ ಮಾಡುವುದರಿಂದ ಸಮಸ್ಯೆಗಳಿಗೆ ಪರಿಹಾರ ದೊರೆಯುತ್ತದೆ. ಈ ಮಾಹಿತಿಯನ್ನು ತಪ್ಪದೆ ಮಕರ ರಾಶಿಯವರಿಗೆ ತಿಳಿಸಿ.

Leave A Reply

Your email address will not be published.