ಮಜಾಟಾಕೀಸ್ ಶೋ ನಲ್ಲಿ ಈ ಮೂವರಿಗೆ ಸಿಗುವ ಸಂಭಾವನೆ ಎಷ್ಟು ಗೊತ್ತೇ?

0 0

ಹಿಂದಿಯ ಕಾಮಿಡಿ ನೈಟ್ಸ್ ವಿಥ್ ಕಪಿಲ್ ಶರ್ಮಾ ಶೋವನ್ನು ಕನ್ನಡದಲ್ಲಿ ಮಜಾ ಟಾಕೀಸ್ ಎಂದು ಶೀರ್ಷಿಕೆಯಿಟ್ಟು ಕಾರ್ಯಕ್ರಮ ನಡೆಸಲಾಗುತ್ತಿತ್ತು. ಇದರ ಸಾರಥ್ಯ ವಹಿಸಿದ್ದವರು ನಟ ಸೃಜನ್ ಲೋಕೇಶ್. ಸೆಲೆಬ್ರಿಟಿಗಳನ್ನು ಈ ಕಾರ್ಯಕ್ರಮಕ್ಕೆ ಕರೆಸಲಾಗಿ, ನಗುವಿನ ಓಕಳಿ ಹರಿಯುತ್ತಿತ್ತು. ಅಪರ್ಣಾ, ಮಂಡ್ಯ ರಮೇಶ್, ಶ್ವೇತಾ ಚೆಂಗಪ್ಪ, ಕುರಿ ಪ್ರತಾಪ್, ವಿಶ್ವ, ವಿ ಮನೋಹರ್, ರೂಪಿಕಾ, ರಜನಿ ಮುಂತಾದವರು ಕೂಡ ಇದರಲ್ಲಿ ಭಾಗವಹಿಸಿದ್ದರು. ಅಷ್ಟೇ ಅಲ್ಲದೆ ಎರಡು ಸೀಸನ್‌ನಲ್ಲಿ ಮಜಾ ಟಾಕೀಸ್ ಮೂಡಿ ಬಂದಿತ್ತು. ಪ್ರತಿಯೊಂದು ಎಪಿಸೋಡ್‌ನಲ್ಲೂ ಹೊಸ ಹೊಸ ಕಾನ್ಸೆಪ್ಟ್ ಇಟ್ಟುಕೊಂಡು ವೀಕ್ಷಕರಿಗೆ ಮನರಂಜನೆ ನೀಡಲಾಗುತ್ತಿತ್ತು. ಮಜಾ ಟಾಕೀಸ್​ನಲ್ಲಿ ಸೃಜನ್ ಲೋಕೇಶ್ ರೀತಿಯಲ್ಲೇ ಕುರಿ ಪ್ರತಾಪ್, ಶ್ವೇತಾ ಚಂಗಪ್ಪ ಕೂಡ ಎಲ್ಲರನ್ನೂ ಹೊಟ್ಟೆ ಹುಣ್ಣಾಗಿಸುವಂತೆ ನಗಿಸಿ ಜನ ಮನ್ನಣೆ ಪಡೆದುಕೊಂಡಿದ್ದಾರೆ. ಹಾಗಾದ್ರೆ ಒಂದು ಎಪಿಸೋಡ್​ಗೆ ಇವರ ಸಂಭಾವನೆ ಎಷ್ಟಿರಬಹುದು? ಎನ್ನುವುದನ್ನು ನಾವು ಈ ಲೇಖನದ ಮೂಲಕ ತಿಳಿದುಕೊಳ್ಳೋಣ.

ಮಜಾ ಟಾಕೀಸ್ ಕನ್ನಡ ಕಿರುತೆರೆಯಲ್ಲಿ ಟಾಪ್‌ ರೇಟೆಡ್ ಪಟ್ಟಿಯಲ್ಲಿ ಸೇರಿತ್ತು. ಐದು ವರ್ಷಗಳ ಕಾಲ ಈ ಶೋ ಪ್ರಸಾರವಾಗಿದ್ದು ಮಾತ್ರ ವಿಶೇಷ. ಗಂಭೀರವಾಗಿ ಸ್ಪಷ್ಟವಾದ ಕನ್ನಡದಲ್ಲಿ ಮಾತನಾಡುವ ನಟಿ, ನಿರೂಪಕಿ ಅಪರ್ಣಾ ಇಲ್ಲಿ ಕಾಮಿಡಿ ಪಾತ್ರ ಮಾಡಿದ್ದು ಮಾತ್ರ ಹಲವರಿಗೆ ನಿಜಕ್ಕೂ ಶಾಕ್ ಉಂಟು ಮಾಡಿತ್ತು. ಹಲವು ಧಾರಾವಾಹಿಗಳಲ್ಲಿ ಲೀಡ್ ಪಾತ್ರದಲ್ಲಿ ಕಾಣಿಸಿಕೊಂಡಿದ್ದ ನಟಿ ಶ್ವೇತಾ ಚೆಂಗಪ್ಪಗೂ ಕೂಡ ಈ ಶೋ ತುಂಬ ವಿಶೇಷವಾದದ್ದು. ಕುರಿಗಳು ಸಾರ್ ಕುರಿಗಳು ನಂತರದಲ್ಲಿ ಮತ್ತೆ ಕುರಿ ಪ್ರತಾಪ್ ಅವರಿಗೆ ಜನಪ್ರಿಯತೆ ತಂದುಕೊಟ್ಟಿದ್ದು, ಕರ್ನಾಟಕದ ಜನರ ಪ್ರೀತಿ ಗಳಿಸುವಂತೆ ಮಾಡಿದ್ದು ಕೂಡ ಇದೇ ಮಜಾ ಟಾಕೀಸ್ ಶೋ. ಕಲರ್ಸ್ ಕನ್ನಡ ವಾಹಿನಿಯಲ್ಲಿ ಲೋಕೇಶ್ ಪ್ರೋಡಕ್ಷನ್​ನಲ್ಲಿ ಮೂಡಿಬರುತ್ತಿರುವ ಮಜಾ ಟಾಕೀಸ್ ಕಾರ್ಯಕ್ರಮ ಮನೆಮಾತಾಗಿಬಿಟ್ಟಿದೆ. ಸೃಜನ್ ಲೋಕೇಶ್ ನಡೆಸಿಕೊಡುತ್ತಿರುವ ಒಂದು ಜನಪ್ರಿಯ ಕನ್ನಡ ಶೋನಲ್ಲಿ ಹಾಸ್ಯ ನಟ ಕುರಿ ಪ್ರತಾಪ್ ಮತ್ತು ಕಾದಂಬರಿ ಧಾರಾವಾಹಿಯ ಚೆಲುವೆ ಶ್ವೇತ ಚೆಂಗಪ್ಪ ಅವರದು ಮುಖ್ಯ ಪಾತ್ರ ವಹಿಸುತ್ತಾ ಇದ್ದಾರೆ.

ಈ ಕಾರ್ಯಕ್ರಮ ಪ್ರತಿ ಶನಿವಾರ ಮತ್ತು ರವಿವಾರ ರಾತ್ರಿ 8 ಗಂಟೆ ಆಗುತ್ತಿದ್ದಂತೆ ಮನೆಯ ಸದಸ್ಯರು ಮಜಾ ಟಾಕೀಸ್ ನೋಡಲು ರೆಡಿ ಆಗಿ ಬಿಡುತ್ತಾರೆ. ಈ ಮೂಲಕ ಮಜಾ ಟಾಕೀಸ್​ನ ಮೂಲಕ ಎಲ್ಲರ ಮನಸ್ಸಿಗೆ ಬಹಳ ಹತ್ತಿರವಾಗಿರುವಂತಹ ನಿರೂಪಕ ಎಂದರೆ ಅದು ಸೃಜನ್ ಲೋಕೇಶ್ ಎಂದರೆ ತಪ್ಪಾಗಲಾರದು. ತಮ್ಮ ಸಮಯ ಪ್ರಜ್ಞೆಯಿಂದ ತಮ್ಮ ಅದ್ಭುತವಾದ ನಿರೂಪಣೆ ಹಾವಭಾವದೊಂದಿಗೆ ಹಾಗೂ ಚಾತುರ್ಯದೊಂದಿಗೆ ಇಡೀ ಕಿರುರೆಯ ಪ್ರೇಕ್ಷಕರನ್ನು ರಂಜಿಸುತ್ತಾ ಬಂದಿರುವ ಸೃಜನ್ ಲೋಕೇಶ್ ಗೆ ತನ್ನದೇ ಆದಂತಹ ಅಭಿಮಾನಿಗಳ ಬಳಗವಿದೆ. ಅಷ್ಟೇ ಅಲ್ಲದೆ ಇವರ ಸಂಭಾವನೆಯೂ ಕೂಡ ಊಹೆಗೆ ಮೀರಿದ್ದು. ಸೃಜನ್ ಲೋಕೇಶ್ ಅವರು ಒಂದು ಎಪಿಸೋಡಿಗೆ ಪಡೆಯುವ ಸಂಭಾವನೆ ಎಷ್ಟು ಅಂತ ನೋಡುವುದಾದರೆ , ಸೃಜನ್ ಲೋಕೇಶ್ ಅವರಿಗೆ ಬರೋಬ್ಬರಿ ಮಜಾ ಟಾಕೀಸ್ ನ ಒಂದು ಎಪೀಸೋಡ್ ಗೆ 70 ಸಾವಿರದಿಂದ ರಿಂದ 1 ಲಕ್ಷ ರೂಪಾಯಿ ವರೆಗೆ ಸಂಭಾವನೆಯನ್ನು ಪಡೆಯುತ್ತಾರೆ ಎಂದು ಹೇಳಲಾಗಿದೆ.

ಸೃಜನ್ ಲೋಕೇಶ್ ರೀತಿಯಲ್ಲೇ ಕುರಿ ಪ್ರತಾಪ್ ಕೂಡ ಎಲ್ಲರನ್ನೂ ಹೊಟ್ಟೆ ಹುಣ್ಣಾಗಿಸುವಂತೆ ಎಲ್ಲರನ್ನೂ ನಗಿಸಿ ಜನ ಮನ್ನಣೆ ಪಡೆದುಕೊಂಡಿದ್ದಾರೆ. ಬಿಗ್ ಬಾಸ್ ಮನೆಯಿಂದ ಹೊರ ಬಂದ ಮೇಲೆ ಪ್ರತಾಪ್ ಬೇಡಿಕೆ ಮತ್ತಷ್ಟು ಹೆಚ್ಚಾಗಿದೆ. ಸಿನಿಮಾಗಳಲ್ಲೂ ಮೇಲಿಂದ ಮೇಲೆ ಆಫರ್​ಗಳು ಬರುತ್ತಿವೆ. ಈಗಾಗಲೇ 30-40 ಚಿತ್ರಗಳಲ್ಲಿ ನಟಿಸಿರುವ ಕುರಿ ಪ್ರತಾಪ್ ಮಜಾ ಟಾಕೀಸ್ ಮಾಡುವ ಕಾಮಿಡಿಗಳು ಎಲ್ಲರನ್ನೂ ನಗೆಗಡಲ್ಲಿ ತೇಲಿಸುವಂತೆ ಮಾಡುತ್ತಿದೆ. ಏಕೆಂದರೆ ಕುರಿ ಪ್ರತಾಪ್ ಒಂದು ಎಪಿಸೋಡ್ ಗೆ ಬರೋಬ್ಬರಿ 50 ಸಾವಿರ ರೂಪಾಯಿ ಸಂಭವಾನೆ ಪಡೆಯುತ್ತಾರಂತೆ. ಕುರಿ ಪ್ರತಾಪ್ ಸಿನಿಮಾ ಶೂಟಿಂಗ್ ಗೆ ಒಂದು ದಿನದ ಕಾಲ್ ಶೀಟ್ ಗೆ 30-40 ಸಾವಿರ ರೂಪಾಯಿ ಪಡೆಯುತ್ತಾರೆ ಎನ್ನಲಾಗಿದೆ. ಇನ್ನೂ ರಾಣಿ ಪಾತ್ರದ ಮೂಲಕ ಮನೆ ಮಾತಾಗಿರುವ ಶ್ವೇತ ಅವರು ಪ್ರತಿಯೊಂದು ಎಪಿಸೋಡ್ ಗೆ ಬರೋಬ್ಬರಿ 30-35 ಸಾವಿರ ಹಣ ಪಡೆಯುತ್ತಾರಂತೆ. ಇದು ಕೊಂಚ ಮಟ್ಟಿಗೆ ಒಳ್ಳೆಯ ಸಂಬಾವನೆ ಎನ್ನಬಹುದು. ಕನ್ನಡ ಕಿರುತೆರೆ ಪ್ರೇಕ್ಷಕರನ್ನು ಭರಪೂರ ನಕ್ಕು ನಗಿಸಿದ ಶೋ ಎಂದರೆ ಅದು ‘ಮಜಾ ಟಾಕೀಸ್’. ಪ್ರತಿ ಎಪಿಸೋಡ್​ನಲ್ಲಿಯೂ ಭರ್ಜರಿ ಮನರಂಜನೆ ಹೊತ್ತು ತರುತ್ತಿರುವ ಆ ಕಾರ್ಯಕ್ರಮಕ್ಕೆ ಅಪಾರ ವೀಕ್ಷಕರ ವರ್ಗ ಕೂಡ ಇದೆ.

Leave A Reply

Your email address will not be published.