ಮಜಾ ಭಾರತದ ರಾಗಿಣಿ ಎಂದೇ ಪೇಮಸ ಆದ ರಾಘವೇಂದ್ರ ಅವರ ಪಾತ್ರದ ಬಗ್ಗೆ ಅವರ ಅಭಿಪ್ರಾಯವನ್ನು ಈ ಲೇಖನದ ಮೂಲಕ ತಿಳಿಯೋಣ
ರಾಘವೇಂದ್ರ ಅವರು ಕಾಮಿಡಿ ಶೋ ಮಜಾಭಾರತದಲ್ಲಿ ಸೆಲೆಕ್ಟ್ ಆದ ನಂತರ ಮೊದಲವಾರ ಹುಡುಗಿ ಪಾತ್ರ ಕೊಟ್ಟರು ಹೀಗೆ ಮೂರು ವಾರವು ಹುಡುಗಿ ಪಾತ್ರದಲ್ಲಿ ಕಾಣಿಸಿಕೊಂಡ ನಂತರ ರಾಘವೇಂದ್ರ ಅವರು ನಿರ್ದೇಶಕರನ್ನು ಕೇಳಿದಾಗ ಹುಡುಗಿಯ ಪಾತ್ರ ಚೆನ್ನಾಗಿ ಮಾಡ್ತೀದಿಯ ಎಂದು ಹೇಳಿದರಂತೆ. ಹೀಗೆ ಹುಡುಗಿ ಪಾತ್ರದಲ್ಲಿ ಕಾಣಿಸಿಕೊಂಡು ಅವರ ಹೆಸರು ರಾಗಿಣಿ ಆಯಿತು. ನಂತರ ಅವರು ಊರಿಗೆ ಹೋದರೆ ಅಲ್ಲಿರುವವರು ಇವರನ್ನು ರಾಘವೇಂದ್ರನಾಗಿ ಒಪ್ಪುವುದೆ ಇಲ್ಲ. ಅವರು ಮೊದಲು ಡ್ರಾಯಿಂಗ್ ಮಾಡುತ್ತಿದ್ದರು ಹೈಸ್ಕೂಲ್ ನಲ್ಲಿ ಪ್ರತಿಭಾ ಕಾರಂಜಿಯಲ್ಲಿ ಇವರೇ ಒಂದು ನಾಟಕ ಬರೆದು ಅಜ್ಜಿ ಪಾತ್ರ ಮಾಡಿದ್ದರು. ರಾಘವೇಂದ್ರ ಅವರ ಮನೆಯಲ್ಲಿ ಹುಡುಗಿ ಪಾತ್ರ ಹಾಕುತ್ತಿರುವುದರಿಂದ ಯಾವುದೇ ಅಭ್ಯಂತರವಿಲ್ಲ. ಅವರ ಅಮ್ಮ ಟೇಲರ್ ಆಗಿರುವುದರಿಂದ ಅವರೆ ಬ್ಲೌಸ್ ಹೊಲಿದುಕೊಡುತ್ತಾರೆ ಮನೆಯಲ್ಲಿ ಏನೆ ಮಾಡಿದರು 100% ಮಾಡು ಎಂದು ಹೇಳುತ್ತಾರೆ. ಒಮ್ಮೆ ಸ್ಕಿಟ್ ಆದ ನಂತರ ಅಪ್ಪ ಫೋನ್ ಮಾಡಿ ನೀನು ಹಾಕಿರುವ ಪಾತ್ರ ಚೆನ್ನಾಗಿ ಮಾಡಿರುವೆ ಆದರೆ ಧ್ವನಿ ಹುಡುಗನ ತರ ಇತ್ತು ಧ್ವನಿ ಹುಡುಗಿತರ ಟ್ರೈ ಮಾಡು ಎಂದರು ಇದರಿಂದ ರಾಘವೇಂದ್ರ ಅವರ ಆತ್ಮವಿಶ್ವಾಸ ಹೆಚ್ಚಾಯಿತು ಫ್ಯಾಮಿಲಿ ಸಪೋರ್ಟ್ ಮುಖ್ಯ. ರಾಘವೇಂದ್ರ ಅವರು ಉಮಾಶ್ರೀ ಅಭಿಮಾನಿ ಅವರ ಸಿನಿಮಾವನ್ನು ತಪ್ಪದೆ ನೋಡುತ್ತಾರೆ. ಒಂದು ಸಲ ಉಮಾಶ್ರೀ ಶೋಕ್ಕೆ ಅತಿಥಿಯಾಗಿ ಬಂದಿದ್ದಾಗ ಅವರ ಮುಂದೆ ರಾಘವೇಂದ್ರ ಅವರಿಗೆ ಉಮಾಶ್ರೀ ಮಾಡಿರುವ ಪಾತ್ರ ಮಾಡುವ ಅವಕಾಶ ಸಿಕ್ಕಿತು ಆಗ ನಟನೆ ನೋಡಿದ ನಂತರ ಉಮಾಶ್ರೀ ಕಣ್ಣಲ್ಲಿ ನೀರು ಬಂತು ರಾಘವೇಂದ್ರ ಅವರನ್ನು ಅಪ್ಪಿಕೊಂಡರು ಅಲ್ಲದೇ ಕೆಲವು ಟಿಪ್ಸ್ ಕೊಟ್ಟರು ಹೇಗೆ ನಡೀಬೇಕು ಎನ್ನುವುದನ್ನು ತೋರಿಸಿಕೊಟ್ಟರು.
ಹಳ್ಳಿಗಳಲ್ಲಿ ನಾಟಕ ಮಾಡುವಾಗ ಓವರ್ ಮೇಕಪ್ ಹಾಕಲು ಕಾರಣ ಅವರು ಕೊನೆಯ ಸಾಲಲ್ಲಿ ಇದ್ದವರಿಗೂ ಕಾಣಲಿ ಎಂದು. ರಾಘವೇಂದ್ರ ಅವರು ಹುಡುಗಿ ಪಾತ್ರ ಹಾಕುತ್ತಾರೆ ಎಂದು ಕೆಲವರು ಹೀಯಾಳಿಸುತ್ತಿದ್ದರು ಆಗ ಚಿಕ್ಕಮ್ಮನಿಗೆ ಫೋನ್ ಮಾಡಿ ನಾನು ಇಲ್ಲಿಂದ ಬರುತ್ತೇನೆ ಎಂದು ಹೇಳಿದ್ದರು. ರೈಟರ್ ಹತ್ತಿರ ಹೋಗಿ ಜನ ನನಗೆ ನೆಗೆಟೀವ್ ಕಮೆಂಟ್ ಮಾಡುತ್ತಾರೆ ಎಂದಾಗ ಅವರು ಜನ ನಿನ್ನ ಬಗ್ಗೆ ಮಾತನಾಡುತ್ತಿದ್ದಾರೆ ಎಂದರೆ ಅವರು ನಿನ್ನನ್ನು ನೋಡುತ್ತಿದ್ದಾರೆ ಅಂತ ಹೇಳಿದರು. ರಾಘವೇಂದ್ರ ಅವರು ನಂತರ ಸ್ಟ್ರಾಂಗ್ ಆದರೂ ಕಮೆಂಟ್ಸ್ ಗಳಿಗೆ ತಲೆ ಕೆಡಿಸಿಕೊಳ್ಳುತ್ತಿರಲಿಲ್ಲ. ನಮ್ಮ ಬಗ್ಗೆ ನಾವು ನೆಗೆಟೀವ್ ಹೇಳಿಕೊಂಡಾಗ ಜನ ನೆಗಟೀವ್ ಮಾತಾಡುವುದಿಲ್ಲ. ಹುಡುಗಿ ಎಂದು ತಿಳಿದುಕೊಂಡು ಕೆಲವು ಕಡೆ ರೇಗಿಸಿದ್ದಾರೆ ಅಲ್ಲದೇ ಕೆಟ್ಟದಾದ ಅನುಭವ ಆಗಿದೆ. ಹೆಣ್ಣು ಮಕ್ಕಳು ಬಟ್ಟೆ ಹಾಕುವುದರ ಮೇಲೆ ಗಂಡಸರು ಕೆಟ್ಟದಾಗಿ ನೋಡುತ್ತಾರೆ ಎಂದು ಸಾಮಾನ್ಯವಾಗಿ ಮಾತನಾಡುತ್ತಾರೆ ರಾಘವೇಂದ್ರ ಅವರು ಹಾಗೆ ಅಂದುಕೊಂಡಿದ್ದರು ಆದರೆ ಅವರೆ ಹುಡುಗಿ ಪಾತ್ರ ಹಾಕಿದ ನಂತರ ಅವರಿಗೂ ತಿಳಿಯಿತು ಎಲ್ಲ ಹೆಣ್ಣುಮಕ್ಕಳನ್ನು ಕೆಟ್ಟ ದೃಷ್ಟಿಯಿದ ನೋಡುತ್ತಾರೆ ಎನ್ನುವುದು. ಮಾಯಾಬಜಾರ್ ಎನ್ನುವ ಸಿನಿಮಾದಲ್ಲಿ ಚಿಕ್ಕ ಪಾತ್ರ ಮಾಡಿದ್ದಾರೆ. ರಾಘವೇಂದ್ರ ಅವರು ಯಾವುದೇ ಪಾತ್ರವಾದರೂ ಮಾಡುತ್ತಾರೆ ಕಲಾವಿದನಿಗೆ ಯಾವ ಪಾತ್ರವಾದರೇನು ಎನ್ನುವುದು ಅವರ ಅಭಿಪ್ರಾಯ. ಹುಡುಗಿ ಪಾತ್ರ ಹಾಕುವ ಮೊದಲು ಆ ಪಾತ್ರಕ್ಕಾಗಿ ರಸ್ತೆಯ ಮೇಲೆ ಹೋಗುವ ಹುಡುಗಿಯರನ್ನು ನೋಡುತ್ತಿದ್ದರು ಅವರು ಹೇಗೆ ನಡೆಯುತ್ತಾರೆ, ಹೇಗೆ ಮಾತನಾಡುತ್ತಾರೆ ಒಬ್ಸರ್ವ್ ಮಾಡುತ್ತಿದ್ದರು. ಅವರು ಯಾವುದೇ ಪಾತ್ರ ಹಾಕಿದರು ಮೊದಲು ಕಾಸ್ಟ್ಯೂಮ್ ಬಗ್ಗೆ ಗಮನ ಕೊಡುತ್ತಾರೆ. ಅವರಿಗೆ ಹೊಸ ಹೊಸ ಪಾತ್ರ ಮಾಡುವ ಆಸೆಯಿದೆ. ಅವರು ಇನ್ನೂ ಹೆಚ್ಚು ಜನಪ್ರಿಯತೆ ಗಳಿಸಲಿ ಎಂದು ಹಾರೈಸೋಣ.