ಜಾತ್ರೆ ಎಂದ ತಕ್ಷಣ ಎಲ್ಲರ ಮನಸ್ಸಿನಲ್ಲಿಯೂ ಸಹ ಒಂದು ರೀತಿಯ ಖುಷಿ ಕಂಡು ಬರುತ್ತದೆ ಜಾತ್ರೆ ಬಂತೆಂದರೆ ಎಲ್ಲರೂ ಸಹ ಸಡಗರ ಸಂಭ್ರಮದಿಂದ ಆಚರಣೆ ಮಾಡುತ್ತಾರೆ ಹಾಗೆಯೇ ಜಾತ್ರೆಯಲ್ಲಿ ಯಾವುದೇ ಜಾತಿಗೆ ಮಾತ್ರ ಸೀಮಿತವಾಗಿ ಇರುವುದಿಲ್ಲ ಹಾಗೆಯೇ ಕುಟುಂಬ ಸಮೇತರಾಗಿ ಜಾತ್ರೆಯನ್ನು ಆನಂದಿಸುತ್ತಾರೆ ಉತ್ತರ ಕರ್ನಾಟಕದ ಮೈಲಾರ ಲಿಂಗೇಶ್ವರ ಜಾತ್ರೆಯು ದೊಡ್ಡ ಜಾತ್ರೆಯಾಗಿದೆ ಈ ಜಾತ್ರೆಯಲ್ಲಿ ಸಾವಿರಾರು ಸಂಖ್ಯೆಯಲ್ಲಿ ಭಕ್ತಾದಿಗಳು ಬರುತ್ತದೆ ಸುತ್ತ ಮುತ್ತಲಿನ ಹಳ್ಳಿಯಿಂದ ಹಿಡಿದು ವಿವಿಧ ರಾಜ್ಯಗಳಿಂದ ಸಹ ಭಕ್ತಾದಿಗಳು ಬರುತ್ತಾರೆ

ಇಲ್ಲಿನ ಕಾರ್ಣಿಕ ನುಡಿಗಳು ತುಂಬಾ ಪ್ರಸಿದ್ಧವಾಗಿವೆ ಹಾಗೆಯೇ ಪ್ರತಿಯೊಬ್ಬರೂ ಸಹ ನಂಬುತ್ತಾರೆ ಹಾಗೆಯೇ ಕಾರ್ಣಿಕದ ಗೊರವಪ್ಪ ರಾಮಪ್ಪ ಅವರು 11 ದಿನಗಳ ಕಾಲ ಉಪವಾಸ ಮಾಡುತ್ತಾರೆ. ನಂತರ ಕಾರ್ಣಿಕ ನುಡಿಯುವ ದಿನ ವಿಶೇಷ ಪೂಜೆ ನೆರವೇರಿಸಿ ಕಾರ್ಣಿಕ ಹೇಳುವ ಜಾಗಕ್ಕೆ ಬರುತ್ತಾರೆ ಹಾಗೆಯೇ ಬಿಲ್ಲನ್ನು ಏರಿ ಕಾರ್ಣಿಕ ನುಡಿಯನ್ನು ವಿಧಿ ವಿಧಾನದಂತೆ ನುಡಿಯುತ್ತಾರೆ .ತುಂಬಾ ಪ್ರಸಿದ್ಧ ಜಾತ್ರೆಯಾಗಿದ್ದು ಭವಿಷ್ಯ ನುಡಿಗಳು ಹೇಳಿದ ಹಾಗೆ ಆಗುತ್ತದೆ ಹಾಗಾಗಿ ಪ್ರತಿಯೊಬ್ಬರಿಗೂ ಸಹ ಕಾರ್ಣಿಕ ನುಡಿಯ ಬಗ್ಗೆ ನಂಬಿಕೆ ಇರುತ್ತದೆ ನಾವು ಈ ಲೇಖನದ ಮೂಲಕ ಮೈಲಾರ ಲಿಂಗೇಶ್ವರ ಜಾತ್ರೆಯ ಬಗ್ಗೆ ಹಾಗೂ ಕಾರ್ಣಿಕದ ಗೊರವಪ್ಪ ರಾಮಪ್ಪ ಅವರ ಭವಿಷ್ಯವಾಣಿಯ ಬಗ್ಗೆ ತಿಳಿದುಕೊಳ್ಳೋಣ.

ಸಂಕ್ರಾಂತಿಯಿಂದ ಯುಗಾದಿಯವರೆಗೆ ಸಾಕಷ್ಟು ಜಾತ್ರೆಗಳು ನಡೆಯುತ್ತದೆ ಹಾಗೆಯೇ ಯುಗಾದಿಯ ನಂತರವೂ ಸಹ ಕೆಲವೊಂದು ಸ್ಥಳಗಳಲ್ಲಿ ಜಾತ್ರೆಗಳು ನಡೆಯುತ್ತದೆ ಅವಧಿಯಲ್ಲಿ ಉತ್ತರ ಕರ್ನಾಟಕದ ಮೈಲಾರ ಲಿಂಗದ ಕಾರ್ಣಿಕ ಭವಿಷ್ಯವನ್ನು ನುಡಿಯುತ್ತಾರೆ ಕೆಲವು ಭಾಗದಲ್ಲಿ ನಡೆಯುವ ಕಾರ್ಣಿಕದ ಭವಿಷ್ಯವೂ ಮೈ ನವಿರೆಳುವಂತೆ ಮಾಡುತ್ತದೆ ನುಡಿದಂತೆಯೆ ನಡೆಯುತ್ತದೆ ಪ್ರತಿಯೊಂದು ಮಾತಿನಲ್ಲಿ ಸಹ ಸಾವಿರಾರು ಅರ್ಥಗಳು ಇರುತ್ತದೆ ಭವಿಷ್ಯ ನುಡಿಗಳು ಸುಳ್ಳಾಗಿರುವುದಿಲ್ಲ ಇಂದಿಗೂ ಸಹ ಉತ್ತರ ಕರ್ನಾಟಕದಲ್ಲಿ ಕಾರ್ಣಿಕ ನುಡಿಗಳು ಸಾಕಷ್ಟು ಗೂಢಾರ್ಥ ಹಾಗೂ ಸಾಕಷ್ಟು ಅರ್ಥಗಳು ಇರುತ್ತದೆ ಜೊತೆಗೆ ಅದನ್ನು ತಿಳಿದುಕೊಂಡಾಗ ದಿಗ್ಭ್ರಮೆಗೊಳ್ಳುತ್ತದೆ ಅವು ಮುಂದಿನ ದಿನಗಳು ಹೇಗಿರುತ್ತವೆ ಹಾಗೆಯೇ ಎಂತಹ ಸಮಸ್ಯೆಗಳು ಎದುರಾಗಬಹುದು

ಹಾಗೆಯೇ ಸಮಸ್ಯೆಯಿಂದ ಪಾರಗಾಗುವುದು ಹೇಗೆ ಎನ್ನುವುದನ್ನು ಹೀಗೆ ಅನೇಕ ವಿಷಯಗಳ ಬಗ್ಗೆ ಪ್ರಸ್ತಾಪ ಕಂಡು ಬರುತ್ತದೆ. ಇದೆ ರೀತಿ ಉತ್ತರ ಕರ್ನಾಟಕದ ಮೈಲಾರ ಲಿಂಗದ ಜಾತ್ರೆಯಲ್ಲಿ ಈ ಬಾರಿ ಕೂಡ ಬಿಲ್ಲನ್ನು ಹಿಡಿದಿರುವ ಗೊರವಪ್ಪ 2 ನುಡಿಗಳನ್ನು ನುಡಿದು ಬಿಲ್ಲನ್ನು ಕೈ ಬಿಟ್ಟಿದ್ದಾರೆ ಉತ್ತರ ಕರ್ನಾಟದ ಭಾಗದಲ್ಲಿ ನುಡಿಯುವ ಭವಿಷ್ಯವಾಣಿಯನ್ನು ಗೊರಗಪ್ಪನ ಭವಿಷ್ಯವಾಣಿ ಎಂದು ಕರೆಯಲಾಗುತ್ತದೆ ಹಾಗೆಯೇ ಮೈಲಾರ ಲಿಂಗನ ಕಾರ್ಣಿಕ ಎಂದು ಕರೆಯಲಾಗುತ್ತದೆ ತುಂಬಾ ಪ್ರಸಿದ್ಧಿಯನ್ನು ಪಡೆದಿದೆ

ಧಾರವಾಡ ಜಿಲ್ಲೆಯ ಗೋಕುಪ್ಪದಲ್ಲಿ ನಡೆದ ಮೈಲಾರ ಲಿಂಗೇಶ್ವರನ ಜಾತ್ರೆಯಲ್ಲಿ ಗೊರವಪ್ಪ ಕಾರಣಿಕ ಭವಿಷ್ಯವನ್ನು ನುಡಿದಿದ್ದಾರೆ ಬಿಲ್ಲನು ಏರಿದ ಗೊರವಪ್ಪನ ಭವಿಷ್ಯ ನುಡಿಯನ್ನು ಕೇಳಿದ ಭಕ್ತ ಸಮುದಾಯ ಒಂದು ರೀತಿಯಲ್ಲಿ ಭಯ ಹಾಗೂ ಸಂತೋಷ ಎರಡು ಇರುತ್ತದೆ ಹಾಗೆಯೇ ಹೆದರಿಕೆ ಸಹ ಕಂಡು ಬರುತ್ತದೆ ಗೊರವಪ್ಪ ನುಡಿದ ಭವಿಷ್ಯವಾಣಿ ಯಿಂದ ಮುಂದೆ ನಡೆಯುತ್ತದೆಯೇ ಎನ್ನುವ ಕುತೂಹಲ ಸಹ ಇರುತ್ತದೆ ಅವರ ಭವಿಷ್ಯವಾಣಿ ಹೀಗಿದೆ ಸಿರಿ ನಾಡಿಗೆ ಬಂಗಾರದ ಗಿಳಿ ಬಂದು ಕೂತು ಪರಾಕ್ ಮುತ್ತಿನ ಗುರಿ ಮುಟ್ಟಿತು ಬೆಳ್ಳಿ ತೊಟ್ಟಿಲು ಕಟ್ಟಿತು ಕಷ್ಟ ಪಟ್ಟ ಮನುಷ್ಯನಿಗೆ ಮುತ್ತಿನ ದಾರಿ ಸಿಕ್ಕಿತು ಪರಾಕ್ ಎಂದು ಭವಿಷ್ಯವನ್ನು ನುಡಿದು ಗೊರವಪ್ಪ ಬಿಲ್ಲನ್ನು ಕೈ ಬಿಟ್ಟಿದ್ದರು. ಈ ಬಾರಿ ಉದ್ದದ ನುಡಿಯನ್ನು ಹೇಳಿದ್ದಾರೆ ಇದನ್ನು ಶುಭ ಸೂಚನೆ ಎಂದು ಹೇಳಲಾಗಿದೆ ನಾಡಿನಲ್ಲಿ ಉತ್ತಮ ಅಥವಾ ಶುಭ ನುಡಿಯನ್ನು ನುಡಿದ್ದಾರೆ ನಾಡಿನಲ್ಲಿ ಉತ್ತಮ ಮಳೆ ಬೆಳೆ ಆಗುವ ಸಂಭವವಿರುತ್ತದೆ ರಾಜ್ಯಕ್ಕೆ ಉತ್ತಮ ಆಡಳಿತ ಸಿಗುತ್ತದೆ ಶ್ರಮವಹಿಸಿ ಕಾರ್ಯ ಮಾಡುವ ಹಾಗೆಯೇ ಕೋಡಿ ಮಠದ ಶ್ರೀಗಳ ನುಡಿಗಳು ಜನರಿಗೆ ಭಯವನ್ನು ಉಂಟು ಮಾಡಿದೆ ಕಾರ್ಣಿಕ ನುಡಿಯ ಬಗ್ಗೆ ಜನರಿಗೆ ನಂಬಿಕೆ ಇದೆ .

ಹಾಗೆಯೇ ಗೋರವಪ್ಪ 16 ಅಡಿಯ ಬಿಲ್ಲನ್ನು ಏರಲು ನಿಯಮವನ್ನು ಪಾಲಿಸುತ್ತಾರೆ ಮೈಲಾರ ಲಿಂಗನ ಶಕ್ತಿ ಇಲ್ಲದೆ ಬಿಲ್ಲನ್ನು ಏರಲು ಸಾಧ್ಯವಿಲ್ಲ ದೇವರಿಗೆ ಸರಿಯಾಗಿ ಪ್ರತಿಯೊಂದು ಹಂತದಲ್ಲಿ ಕೂಡ ನಡೆದುಕೊಳ್ಳಬೇಕು ಈ ರೀತಿಯಾಗಿ ಇದ್ದು ಬಿಲ್ಲನ್ನು ಏರಿ ಭವಿಷ್ಯವನ್ನು ನುಡಿಯುತ್ತಾರೆ ಧಾರವಾಡ ಜಿಲ್ಲೆಯಲ್ಲಿ18 ಅಡಿಯ ಬಿಲ್ಲನ್ನು ಏರಿದ್ದಾರೆ ತುತ್ತ ತುದಿಯಲ್ಲಿ ಹೋಗಿ ಭವಿಷ್ಯವನ್ನು ನುಡಿಯುತ್ತಾರೆ ಮೈಲಾರ ಲಿಂಗನ ಜಾತ್ರೆಯು ಅತಿ ದೊಡ್ಡ ಜಾತ್ರೆಯಾಗಿದೆ ಭರತ ಹುಣ್ಣಿಮೆ ಸಂಭವಿಸುತ್ತಿದಂತೆ ಜಾತ್ರೆ ಸಿದ್ಧತೆ ಮಾಡುತ್ತಾರೆ ಪ್ರತಿಯೊಬ್ಬರಲ್ಲೂ ಸಹ ಸಂಭ್ರಮ ಸಂಭವಿಸುತ್ತದೆ ರಥೋತ್ಸವ ಸಹ ನಡೆಯುತ್ತದೆ ಯಾವುದೇ ಜಾತಿಗೆ ಸೀಮಿತವಾಗಿಲ್ಲ ಹಿಂದೂ ಧರ್ಮ ಮಾತ್ರವಲ್ಲದೆ ಮುಸ್ಲಿಂ ಧರ್ಮದವರು ಸಹ ಮೈಲಾರ ಲಿಂಗನಿಗೆ ಭಕ್ತಿಯನ್ನು ಸಲ್ಲಿಸಿದ್ದಾರೆ ಜಾತ್ರೆ ಬಂದರೆ ಎಲ್ಲೆಡೆ ಸಂಭ್ರಮ ಸಡಗರ ಮನೆ ಮಾತಾಗಿರುತ್ತದೆ

ರಾಜ್ಯ ಹಾಗೂ ವಿವಿಧ ರಾಜ್ಯದ ಜನರು ಸಹ ಬರುತ್ತಾರೆ ಜಾತ್ರೆ ಆರಂಭವಾಗುವ ಒಂದು ತಿಂಗಳ ಮೊದಲೇ ಸಿದ್ಧತೆ ಆರಂಭವಾಗುತ್ತದೆ ರೈತರು ಹಾಗೂ ಭಕ್ತಾದಿಗಳು ಸವಾರಿ ಬಂಡಿಗಾಗಿ ಹೊಸ ವಸ್ತುಗಳನ್ನು ಮುಂಗಡವಾಗಿ ಖರೀದಿಸಿ ಇಟ್ಟುಕೊಳುವುದು ಮುಂತಾದವುಗಳನ್ನು ಮಾಡುತ್ತಾರೆ. ಎತ್ತುಗಳನ್ನುಸಿಂಗರಿಸಿಕೊಂಡು ಬಂಡಿ ಕಟ್ಟಿಕೊಂಡು ಜಾತ್ರೆಗೆ ತೆರಳುವುದನ್ನು ನೋಡುವುದೇ ಸಡಗರ-ಸಂಭ್ರಮ ಮನೆಯಲ್ಲಿ ರೊಟ್ಟಿ ಹಲವು ಬಗೆಯ ಕಾಳುಗಳ ಪಲ್ಯ ಸಿಹಿ ಪದಾರ್ಥವನ್ನು ತಯಾರಿಸಿಕೊಂಡು ಬುತ್ತಿಯನ್ನು ಜಾತ್ರೆಗೆ ಸುತ್ತಮುತ್ತಲಿನ ಗ್ರಾಮಸ್ಥರು ಆಗಮಿಸುತ್ತಾರೆ ದೂರದ ಊರಿನಿಂದಲು ಸಹ ಬಂಡಿಯನ್ನು ಕಟ್ಟಿಕೊಂಡು ಕುಟುಂಬ ಸಮೇತ ಬರುತ್ತಾರೆ ಅದರಲ್ಲಿ ಸಹ ಒಬ್ಬರು ಕಾಲು ನಡಿಗೆಯಲ್ಲಿ ಬರುತ್ತಾರೆ ಹೀಗೆ ಈ ಜಾತ್ರೆಯು ಉತ್ತರ ಕರ್ನಾಟಕದ ದೊಡ್ಡ ಜಾತ್ರೆಯಗಿದೆ ಈ ಜಾತ್ರೆಯಲ್ಲಿ ಯಾವುದೇ ಜಾತಿ ಧರ್ಮ ಎನ್ನುವ ಭೇಧ ಭಾವ ಇಲ್ಲದೆ ಎಲ್ಲರೂ ಸಮಾನರು ಎಂದು ಸಡಗರ ಸಂಭ್ರಮದಿಂದ ಜಾತ್ರೆಯನ್ನು ಆಚರಿಸುತ್ತಾರೆ.

ಶ್ರೀ ಕನಿಕಾ ದುರ್ಗಾ ಪರಮೇಶ್ವರಿ ಜ್ಯೋತಿಷ್ಯ ತಾಂತ್ರಿಕಾ ವಿದ್ಯಾಪೀಠಮ್ ವಾಸ್ತು ಜ್ಯೋತಿಷ್ಯ ಸಂಖ್ಯಾಶಾಸ್ತ್ರ ಅಷ್ಟಮಂಗಳ ಪ್ರಶ್ನೆ ದೈವ ಪ್ರಶ್ನೆಯ ಆಧಾರಿತವಾಗಿ ನಿಮ್ಮ ಜೀವನದ ಸಂಪೂರ್ಣ ಭವಿಷ್ಯವನ್ನು ಗುರೂಜಿಯವರು ನಿಖರವಾಗಿ ನುಡಿಯುತ್ತಾರೆ ಹಾಗೂ ನಿಮ್ಮ ಜೀವನದ ಯಾವುದೇ ಸಮಸ್ಯೆಗಳಿದ್ದರೂ ನಿಮ್ಮೆಲ್ಲಾ ಸಮಸ್ಯೆಗಳಿಗೆ ಉತ್ತಮವಾದ ಸಲಹೆ ಶಾಸ್ರೋಕ್ತವಾದ ಪರಿಹಾರ ಮಾಡಿಕೊಡುತ್ತಾರೆ ಗುರೂಜಿಯವರಿಂದ ಇಲ್ಲಿಗೆ ಅನೇಕ ಉದ್ಯಮಿಗಳು ರಾಜಕೀಯ ಮುಖಂಡರು ಜನಸಾಮಾನ್ಯರು ಉತ್ತಮ ಸಲಹೆ ಶಾಸ್ರೋಕ್ತವಾದ ಪರಿಹಾರ ಪಡೆದುಕೊಂಡಿದ್ದಾರೆ ನೀವು ಹೇಳುವ ನಿಮ್ಮ ಎಲ್ಲಾ ವಿಷಯಗಳು ಗುಪ್ತವಾಗಿರುತ್ತದೆ ಚಿಂತಿಸಬೇಡಿ ಇಂದೇ ಗುರೂಜಿಯವರನ್ನು ಭೇಟಿಯಾಗಿ ನಿಮ್ಮ ಎಲ್ಲಾ ಸಮಸ್ಯೆಗಳ ಬಗ್ಗೆ ಮುಕ್ತವಾಗಿ ಮಾತನಾಡಿ ಪರಿಹಾರ ಪಡೆದುಕೊಳ್ಳಿ ಗುರೂಜಿಯವರ ಭೇಟಿಯ ಸಮಯವನ್ನು ದೂರವಾಣಿ ಮೂಲಕ ಖಚಿತ ಪಡಿಸಿಕೊಳ್ಳಿ 9900804442

Leave a Reply

Your email address will not be published. Required fields are marked *