ಹಿಂದೂ ಧರ್ಮದ ಪ್ರಕಾರ ಮಹಿಳೆಯರಿಗೆ ವಿಶೇಷ ಸ್ಥಾನವನ್ನು ನೀಡಲಾಗಿದೆ. ಮಗಳಾಗಿ, ಹೆಂಡತಿಯಾಗಿ, ತಾಯಿಯಾಗಿ ತನ್ನ ಕಾರ್ಯವನ್ನು ಜೀವನದುದ್ದಕ್ಕೂ ನಿರ್ವಹಿಸುತ್ತಾಳೆ. ಸಾಮುದ್ರಿಕ ಶಾಸ್ತ್ರದ ಪ್ರಕಾರ ಮಹಿಳೆಯರ ಶರೀರದಲ್ಲಿನ ಕೆಲವು ಗುರುತುಗಳಿಂದ ಅವರ ಅದೃಷ್ಟವನ್ನು ನೋಡಬಹುದು. ಹಾಗಿದ್ದರೆ ಯಾವ ಗುರುತುಗಳು ಮಹಿಳೆಯರಿಗೆ ಅದೃಷ್ಟ ತಂದುಕೊಡುತ್ತವೆ ಎಂಬ ಮಾಹಿತಿಯನ್ನು ಈ ಲೇಖನದ ಮೂಲಕ ತಿಳಿಯೋಣ.
ಶರೀರದ ಕೆಲವು ಗುರುತುಗಳು ಮಹಿಳೆಯರಿಗೆ ಅದೃಷ್ಟವನ್ನು ತಂದುಕೊಡುತ್ತವೆ. ಹಿಂದೂ ಧರ್ಮದ ಪ್ರಕಾರ ಮಹಿಳೆಯರಿಗೆ ವಿಶೇಷ ಸ್ಥಾನವನ್ನು ನೀಡಲಾಗಿದೆ. ಹೆಣ್ಣು ಮಗುವಿನ ಜನನವಾದರೆ ಮನೆಗೆ ಲಕ್ಷ್ಮೀ ಬಂದಳು ಎಂದು ಹೇಳುತ್ತಾರೆ. ಅವಳು ಮದುವೆಯಾಗಿ ಇನ್ನೊಂದು ಮನೆಗೆ ಹೋದಾಗ ಅವರ ಮನೆಗೆ ಲಕ್ಷ್ಮೀ ದೇವಿ ಬಂದಳು ಎಂದು ಹೇಳುತ್ತಾರೆ, ಸ್ತ್ರೀಯನ್ನು ದೇವಿಗೆ ಹೋಲಿಸಲಾಗುತ್ತದೆ. ಸಾಮುದ್ರಿಕ ಶಾಸ್ತ್ರ ಯಾವ ಮಹಿಳೆಯರು ಸೌಭಾಗ್ಯಶಾಲಿಗಳು ಎಂದು ತಿಳಿಸುತ್ತದೆ. ಜಗತಿನಲ್ಲಿ ಎಲ್ಲಕ್ಕಿಂತ ದೊಡ್ಡ ಯೋಗಧನವು ಸ್ತ್ರೀಯರದ್ದಾಗಿದೆ. ಯಾವ ಮನೆಯಲ್ಲಿ ಮಹಿಳೆಯರಿಗೆ ಗೌರವ ಸಿಗುತ್ತದೋ ಅವರಿಗೆ ಒಳ್ಳೆಯದಾಗುತ್ತದೆ. ಮಹಿಳೆಯರ ಉಗುರುಗಳು ಗುಲಾಬಿ ಬಣ್ಣದಿಂದ, ಹೊಳಪಾಗಿ, ಸುಂದರವಾಗಿ ಇದ್ದರೆ ಆ ಮಹಿಳೆಯರು ಒಳ್ಳೆಯ ಗುಣಗಳನ್ನು ಹೊಂದಿರುತ್ತಾರೆ, ಇವರು ತಮ್ಮ ಪರಿವಾರವನ್ನು ಕಾಳಜಿಯಿಂದ ನೋಡುತ್ತಾರೆ. ಮಹಿಳೆಯರ ಕಾಲಿನ ಮಧ್ಯದ ಬೆರಳು ಅಪೇಕ್ಷೆಗಿಂತ ದೊಡ್ಡದಾಗಿದ್ದರೆ ಅವರು ದುರ್ಭಾಗ್ಯಶಾಲಿಗಳಾಗಿರುತ್ತಾರೆ.
ಮಹಿಳೆಯರ ಎಡ ಕೆನ್ನೆಯ ಮೇಲೆ ಚುಕ್ಕೆ, ಮಚ್ಚೆ ಇದ್ದರೆ ಅವರು ತಿನ್ನುವುದರಲ್ಲಿ ಬಹಳ ಆಸಕ್ತಿ ಹೊಂದಿರುತ್ತಾರೆ, ಚೆನ್ನಾಗಿ ಅಡುಗೆ ಮಾಡುತ್ತಾರೆ. ಇವರು ತಮ್ಮ ಕುಟುಂಬದ ಬಗ್ಗೆ ಕಾಳಜಿ ವಹಿಸುತ್ತಾರೆ. ಮಹಿಳೆಯರು ಉದ್ದವಾದ ಮೂಗನ್ನು ಹೊಂದಿದ್ದರೆ ಅವರು ಯಾವುದೇ ಕಷ್ಟ ಬಂದರು ಸುಧಾರಿಸಿಕೊಂಡು ಹೋಗುತ್ತಾರೆ. ಇವರು ಹಣ ಖರ್ಚು ಮಾಡುತ್ತಾರೆ ಆದರೆ ವ್ಯರ್ಥ ಮಾಡುವುದಿಲ್ಲ. ಮಹಿಳೆಯರ ಕೈಬೆರಳುಗಳು ಉದ್ದವಾಗಿದ್ದರೆ ಅವರು ಬುದ್ಧಿವಂತರಾಗಿರುತ್ತಾರೆ. ಇವರು ಹಣವನ್ನು ಡಬಲ್ ಮಾಡುವ ಸಾಮರ್ಥ್ಯವನ್ನು ಕೂಡ ಹೊಂದಿರುತ್ತಾರೆ. ಇವರ ಕುಟುಂಬದವರನ್ನು ಸಂತೋಷವಾಗಿ ನೋಡಿಕೊಳ್ಳುತ್ತಾರೆ. ಮಹಿಳೆಯರ ಪಾದಗಳು ಗುಲಾಬಿ ಬಣ್ಣದಿಂದ, ಕೋಮಲವಾಗಿ ವಿಕಸಿತವಾಗಿದ್ದರೆ ಇವರು ತಮ್ಮ ಪ್ರಿಯತಮ ಅಥವಾ ಗಂಡನನ್ನು ಸಂತೋಷದಿಂದ ನೋಡಿಕೊಳ್ಳುತ್ತಾರೆ. ಪ್ರೀತಿ ವಿಷಯದಲ್ಲಿ ಇವರು ಪರ್ಫೆಕ್ಟ್ ಆಗಿರುತ್ತಾರೆ. ಮಹಿಳೆಯರ ಅಂಗಾಲಿನ ಕೆಳಗೆ ತ್ರಿಕೋನದ ಗುರುತು ಇದ್ದರೆ ಅವರು ಚತುರರು, ಬುದ್ಧಿವಂತರೂ ಆಗಿರುತ್ತಾರೆ. ಇವರು ಯಾವುದೇ ಕೆಲಸವನ್ನು ನೀಟಾಗಿ ಮುಗಿಸಿಕೊಡುತ್ತಾರೆ. ಇವರನ್ನು ಮದುವೆಯಾಗುವವರು ಬಹಳ ಸಂತೋಷದಿಂದ ಇರುತ್ತಾರೆ. ಮಹಿಳೆಯರ ಕಣ್ಣು ದೊಡ್ಡದಾಗಿದ್ದರೆ ಅವರು ಜೀವನದಲ್ಲಿ ಪ್ರೀತಿ ಹಾಗೂ ಸುಖವನ್ನು ಪಡೆಯುತ್ತಾರೆ. ಇವರಿಗೆ ಜೀವನದಲ್ಲಿ ಕೊರತೆಗಳು ಇರುವುದಿಲ್ಲ. ಮಹಿಳೆಯರ ಮುಖದಲ್ಲಿರುವ ಮಚ್ಚೆಗಳು ಅದೃಷ್ಟವನ್ನು ತರುತ್ತದೆ. ಮೂಗಿನ ಕೆಳಗೆ ಮಚ್ಚೆ ಇರುವ ಮಹಿಳೆಯರು ಬಹಳ ಭಾಗ್ಯಶಾಲಿಗಳಾಗಿರುತ್ತಾರೆ, ಇವರ ಅದೃಷ್ಟ ಬಹಳ ಚೆನ್ನಾಗಿರುತ್ತದೆ. ಈ ವಿಶೇಷ ಮಾಹಿತಿಯನ್ನು ತಪ್ಪದೇ ಎಲ್ಲರಿಗೂ ತಿಳಿಸಿ.