ಹೊಸದಾಗಿ ವಾಹನಗಳು ಮಾರುಕಟ್ಟೆಗೆ ಆಗಾಗ ಬರುತ್ತದೆ, ಕೆಲವು ವಾಹನ ಎಲ್ಲರಿಗೂ ಇಷ್ಟವಾಗುತ್ತದೆ. ಕೆಲವು ವಾಹನಗಳಂತೂ ಮಾರುಕಟ್ಟೆಗೆ ಬರುತ್ತಿದ್ದಂತೆ ಮಾರಾಟವಾಗುತ್ತದೆ. ಅದರಂತೆ ಮಹಿಂದ್ರಾ ಕಂಪನಿಯ ಒಂದು ಗಾಡಿ ಮಾರುಕಟ್ಟೆಗೆ ಬರುತ್ತಿದೆ. ಆ ಗಾಡಿಯ ಬಗ್ಗೆ ಸಂಪೂರ್ಣ ಮಾಹಿತಿಯನ್ನು ಈ ಲೇಖನದ ಮೂಲಕ ತಿಳಿಯೋಣ.

ಮಹಿಂದ್ರಾ ಕಂಪನಿಯ ಒಂದು ಟ್ರ್ಯಾಕ್ಟರ್ ಇದೀಗ ಚರ್ಚೆಯ ವಿಷಯವಾಗಿದೆ. ಜೀಪ್ ನಂತೆ ಮೊಡಿಫೈ ಮಾಡಲಾದ ಟ್ರ್ಯಾಕ್ಟರ್ ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗಿ ಮಹಿಂದ್ರಾ ಕಂಪನಿಯ ಚೇರ್ಮನ್ ಆನಂದ್ ಮಹಿಂದ್ರಾ ಅವರಿಗೂ ತಲುಪಿದೆ. ಅವರು ರಿಯಾಕ್ಷನ್ ಕೊಟ್ಟಿದ್ದಾರೆ, ಅವರ ರಿಯಾಕ್ಷನ್ ಹೇಗಿದೆ ಎಂದರೆ ಟ್ರ್ಯಾಕ್ಟರ್ ಮೊಡಿಫೈ ಮಾಡಿದ ವ್ಯಕ್ತಿ ಖುಷ್ ಆಗುವಂತಿದೆ. ಮೇಘಾಲಯದ ವ್ಯಕ್ತಿ ಮೊಡಿಫೈ ಮಾಡಿರುವ ಈ ಟ್ರ್ಯಾಕ್ಟರ್ ನ ಫೋಟೊ ನೋಡಿ ಆನಂದ್ ಮಹಿಂದ್ರಾ ಅವರು ತಮ್ಮ ಟ್ವಿಟರ್ ಖಾತೆಯಲ್ಲಿ ಶೇರ್ ಮಾಡುತ್ತಾ ಈ ಟ್ರ್ಯಾಕ್ಟರ್ ಡಿಸ್ನಿಯ ಅನಿಮೆಟೆಡ್ ಫಿಲಂನಲ್ಲಿ ಬರುವ ಒಂದು ಪ್ರೀತಿಯ ಪಾತ್ರವನ್ನು ನೆನಪಿಸುವಂತಿದೆ ಎಂದು ಬರೆದುಕೊಂಡಿದ್ದಾರೆ. ಅವರಿಗೆ ನೆನಪಿಗೆ ಬಂದ ಡಿಸ್ನಿ ಕ್ಯಾರೆಕ್ಟರ್ ಕೇಕ್ಟರ್ ನೆನಪಿಗೆ ಬಂದಿರಬಹುದಾ ಎಂಬ ಪ್ರಶ್ನೆ ಮೂಡಿದೆ.

ಅಸಲಿಗೆ ಈ ಫೋಟೋವನ್ನು ಟ್ರಾಕ್ಟರ್ ಎಂಬ ಹೆಸರಿನ ಟ್ವಿಟರ್ ಖಾತೆಯಲ್ಲಿ ಹಂಚಿಕೊಳ್ಳಲಾಗಿದ್ದು ಕ್ಯಾಪ್ಶನ್ ನಲ್ಲಿ ಮೇಘಾಲಯದ ಜೋವಾಯಿ ಎಂಬ ಸ್ಥಳದ ನಿವಾಸಿಯಾಗಿರುವ ಮೈಯಾ ರಿಂಬಾಯಿ ಎಂಬ ವ್ಯಕ್ತಿ ಒಂದು ಶಕ್ತಿಶಾಲಿಯಾದ ವಾಹನವನ್ನು ಈ ರೀತಿಯಲ್ಲಿ ಕೂಡ ಮೊಡಿಫೈ ಮಾಡಬಹುದಾಗಿದೆ ಎಂದು ತೋರಿಸಿಕೊಟ್ಟಿದ್ದಾರೆ. ನಮಗೆ 275 ಎನ್.ಬಿ.ಪಿಯ ಈ ಮೊಡಿಫೈಡ್ ವಾಹನ ಬಹಳ ಇಷ್ಟವಾಯಿತು ಎಂದು ಆನಂದ್ ಬರೆದುಕೊಂಡಿದ್ದಾರೆ. ಫೆಬ್ರವರಿ 22 ಮಂಗಳವಾರದಂದು ಆನಂದ್ ಮಹಿಂದ್ರಾ ಅವರು ಈ ಟ್ವೀಟ್ ಅನ್ನು ರಿ ಟ್ವೀಟ್ ಮಾಡುತ್ತ ಇದೊಂದು ಭಯಾನಕ ಮೃಗದಂತಿದೆ ಆದರೆ ಡಿಸ್ನಿಯ ಒಂದು ಪ್ರೀತಿಯ ಪಾತ್ರದಂತೆ ಕಾಣುತ್ತಿದೆ ಎಂದು ಬರೆದುಕೊಂಡಿದ್ದಾರೆ.

ಆನಂದ್ ಮಹಿಂದ್ರಾ ಅವರು ಸೋಶಿಯಲ್ ಮೀಡಿಯಾಗಳಲ್ಲಿ ಸಾಕಷ್ಟು ಆಕ್ಟೀವ್ ಆಗಿರುತ್ತಾರೆ., ಇವರ ಈ ಟ್ವೀಟ್ ಗೆ ಇದುವರೆಗೂ 4,444 ಲೈಕ್ಸ್ ಬಂದಿದ್ದು ಹಲವಾರು ಜನರು ಕಾಮೆಂಟ್ಸ್ ಮಾಡಿದ್ದಾರೆ, ಅವುಗಳಲ್ಲಿ ಟ್ರ್ಯಾಕ್ಟರ್ ಗೆ ಜೀಪ್ ಟ್ರ್ಯಾಕ್ಟರ್ ಎಂದು ಒಬ್ಬ ವ್ಯಕ್ತಿ ಹೆಸರು ಕೊಟ್ಟಿದ್ದಾರೆ ಜೊತೆಗೆ ಮತ್ತೊಬ್ಬರು ಇದೊಂದು ಅದ್ಭುತ ಎಂದಿದ್ದಾರೆ ಅಲ್ಲದೆ ಹಲವಾರು ಜನರು ಇಮೋಜಿಗಳ ಮೂಲಕ ತಮ್ಮ ಭಾವನೆಯನ್ನು ವ್ಯಕ್ತಪಡಿಸಿದ್ದಾರೆ. ಈ ವಾಹನ ನೋಡಲು ಅದ್ಭುತವಾಗಿದ್ದು ಪ್ರಯೋಗವು ಮೆಚ್ಚುವಂಥದ್ದು. ಈ ಮಾಹಿತಿಯನ್ನು ತಪ್ಪದೆ ಎಲ್ಲರಿಗೂ ತಿಳಿಸಿ, ನಮ್ಮ ನಡುವೆ ಇರುವವರ ಪ್ರತಿಭೆ ತಿಳಿಯುತ್ತದೆ.

Leave a Reply

Your email address will not be published. Required fields are marked *