ಗಾಂಧೀಜಿಯವರನ್ನು ಬಾಪೂಜಿ ಎಂದು ಕರೆಯುತ್ತಾರೆ. ಹಾಗೆಯೇ ಅವರಿಗೆ ಮಹಾತ್ಮಾ ಎಂಬ ಬಿರುದನ್ನು ನೀಡಲಾಗಿದೆ. ಕಾರಣ ಅವರು ನಮ್ಮ ದೇಶದ ಸ್ವಾತಂತ್ರ್ಯಕ್ಕಾಗಿ ಪಟ್ಟ ಪರಿಶ್ರಮ ಆಗಿದೆ. ಹಾಗೆಯೇ ಗೋಪಾಲ ಕೃಷ್ಣ ಗೋಖಲೆ ಅವರು ಮಹಾತ್ಮಾ ಗಾಂಧೀಜಿಯವರ ಗುರುಗಳು ಆಗಿದ್ದಾರೆ. ಗಾಂಧೀಜಿಯವರ ಅಸ್ತ್ರ ಎಂದರೆ ಅದು ಅಹಿಂಸೆ ಆಗಿತ್ತು. ಆದ್ದರಿಂದ ನಾವು ಇಲ್ಲಿ ಗಾಂಧೀಜಿಯವರ ಬಗ್ಗೆ ಹೆಚ್ಚಿನ ಮಾಹಿತಿಯನ್ನು ತಿಳಿದುಕೊಳ್ಳೋಣ.
ಮಹಾತ್ಮಾ ಗಾಂಧೀಜಿ ಅವರು ಬಹಳ ಸರಳತೆಯ ವ್ಯಕ್ತಿತ್ವಕ್ಕೆ ಉದಾಹರಣೆ ಆಗಿದ್ದಾರೆ. ಇವರು ಗುಜರಾತಿನ ಪೋರಬಂದರಿನಲ್ಲಿ ಅಕ್ಟೋಬರ್ 2ರಂದು ಜನಿಸಿದರು. ಆದ್ದರಿಂದ ಪ್ರತಿವರ್ಷ ಅಕ್ಟೋಬರ್ 2ರಂದು ಗಾಂಧಿ ಜಯಂತಿಯನ್ನು ಆಚರಿಸಲಾಗುತ್ತದೆ. ಇದು ಒಂದು ರಾಷ್ಟ್ರೀಯ ಹಬ್ಬವಾಗಿದೆ. ಇವರ ತಂದೆ ಕರಮಚಂದಗಾಂಧಿ ಆಗಿದ್ದಾರೆ. ಹಾಗೆಯೇ ಇವರ ತಾಯಿ ಪುತಲೀಬಾಯಿ ಆಗಿದ್ದಾರೆ. ಇವರ ಪೂರ್ಣ ಹೆಸರು ಮೋಹನ್ ದಾಸ್ ಕರಮಚಂದಗಾಂಧೀ ಆಗಿದೆ.
ತನ್ನ 13ನೇ ವಯಸ್ಸಿನಲ್ಲಿ ಗಾಂಧೀಜಿ ಅವರಿಗೆ ಕಸ್ತೂರಿ ಬಾ ರೊಂದಿಗೆ ವಿವಾಹವಾಯಿತು. ಇವರಿಬ್ಬರಿಗೆ ನಾಲ್ಕು ಮಕ್ಕಳು ಜನಿಸಿದರು. ಹರಿಲಾಲ್ ಗಾಂಧಿ, ಮಣಿಲಾಲ್ ಗಾಂಧಿ , ರಾಮದಾಸ್ ಗಾಂಧಿ ಮತ್ತು ದೇವದಾಸ್ ಗಾಂಧಿ. ತನ್ನ 19 ನೇ ವಯಸ್ಸಿನಲ್ಲಿ ಗಾಂಧೀಜಿ ಲಂಡನ್ ನ ಯೂನಿವರ್ಸಿಟಿ ಕಾಲೇಜಿನಿಂದ ಕಾನೂನು ಪದವಿ ಪಡೆದರು. ಮುಂಬಯಿ ನಗರದಲ್ಲಿ ವಕೀಲಿ ವೃತ್ತಿಯನ್ನು ಆರಂಭಿಸಲು ವಿಫಲರಾದ ಮಹಾತ್ಮಗಾಂಧಿ ಎರಡು ವರ್ಷಗಳ ನಂತರ ದಕ್ಷಿಣ ಆಫ್ರಿಕಾಕ್ಕೆ ತೆರಳಿದರು. ಆದ್ದರಿಂದ ಎಲ್ಲಾ ನಿಯಮಗಳು ಇವರಿಗೆ ತಿಳಿದಿದ್ದವು.
1893ರಲ್ಲಿ ಪ್ರಿಟೋರಿಯಾಕ್ಕೆ ಗಾಂಧೀಜಿ ರೈಲಿನಲ್ಲಿ ಪ್ರಯಾಣಿಸುತ್ತಿದ್ದ ವೇಳೆ ಬಿಳಿಯನೊಬ್ಬನ ದೂರಿನಂತೆ ಕರಿಯನೆಂದು ಗಾಂಧೀಜಿಯನ್ನು ಹೊರಹಾಕಲಾಯಿತು. ಭಾರತೀಯ ನಿವಾಸಿಗಳಿಗೆ ಸಮಾನ ಹಕ್ಕುಗಳನ್ನು ನೀಡದ ಬ್ರಿಟಿಷ್ ಸರ್ಕಾರದ ವರ್ಣಭೇದ ನೀತಿಯನ್ನು ನೋಡಿ ಬೇಸರಗೊಂಡ ಗಾಂಧೀಜಿಯ ಚಳುವಳಿ ಅಲ್ಲಿಂದ ಆರಂಭವಾಯ್ತು. ದಕ್ಷಿಣ ಆಫ್ರಿಕಾದಲ್ಲಿ ಕರಿಯರ ವಿರುದ್ಧ ಬಿಳಿಯರು ಮಾಡುತ್ತಿರುವ ಶೋಷಣೆಯನ್ನು ಖಂಡಿಸಿದ ಮೋದಿ ವರ್ಣಭೇದ ನೀತಿ ವಿರುದ್ಧ ಹೋರಾಡಿ ಸಫಲರಾದರು. ಇವರ ಇಂತಹ ಅನೇಕ ಹೋರಾಟಗಳಲ್ಲಿ ಸಫಲರಾದ್ದರಿಂದ ರಾಷ್ಟ್ರಪಿತ ಎಂಬ ಬಿರುದನ್ನು ಗಾಂಧೀಜಿ ಅವರಿಗೆ ನೀಡಲಾಗಿದೆ.